Gauthami Jadav: ಸ್ಪೆಷಲ್ ಫೋಟೋ ಶೇರ್‌ ಮಾಡಿ ಎಲ್ಲರ ಬಾಯಿ ಮುಚ್ಚಿಸಿದ ಗೌತಮಿ

ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರಲ್ಲಿ ಸ್ಪರ್ಧಿಗಳ ನಡುವೆ ಲವ್‌ ಸ್ಟೋರಿ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದು ಸುಂದರವಾದ ಗೆಳೆತನ ಇದ್ದಿದ್ದಂತೂ ಹೌದು. ಗೌತಮಿ ಜಾದವ್‌ ಹಾಗೂ ಉಗ್ರಂ ಮಂಜು ನಡುವೆ ಬಿಗ್‌ ಬಾಸ್‌ ಮನೆಯೊಳಗೆ ಉತ್ತಮವಾದ ಸ್ನೇಹ ಬೆಸೆದುಕೊಂಡಿತ್ತು. ಇದೀಗ ಆ ಸ್ನೇಹ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಮೇಲೂ ಮುಂದುವರಿದಿದ್ದು, ನಟಿ ಗೌತಮಿ ಜಾದವ್ ಪತಿ ಅಭಿಷೇಕ್‌ವೊಂದಿಗೆ ಉಗ್ರಂ ಮಂಜು ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೇ ಒಂದೇ ಫೋಟೋ ಮೂಲಕ ತಮ್ಮ ಬಗ್ಗೆ ಟ್ರೋಲ್‌, ಗಾಸಿಪ್‌ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.

ಬಿಗ್‌ ಬಾಸ್‌ ಮನೆಯೊಳಗೆ ಗೌತಮಿ ಜಾದವ್‌, ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ನಡುವೆ ಕಾರ್ಯಕ್ರಮ ಆರಂಭದಲ್ಲೇ ಒಂದೊಳ್ಳೆ ಸ್ನೇಹ ಬಾಂಧವ್ಯ ಬೆಳೆದುಕೊಂಡಿತ್ತು. ಅದೇನಾಯ್ತೋ ಗೊತ್ತಿಲ್ಲ ಮೋಕ್ಷಿತಾ ಕೆಲ ದಿನಗಳ ನಂತರ ಇವರಿಬ್ಬರ ಸ್ನೇಹದಿಂದ ಅಂತರ ಕಾಯ್ದುಕೊಂಡರು. ಆದರೆ ಗೌತಮಿ ಜಾದವ್‌ ಮತ್ತು ಉಗ್ರಂ ಮಂಜು, ಗೌತಮಿ ಮನೆಯಿಂದ ಹೊರ ಹೋಗುವ ಕೊನೆ ದಿನದ ವರೆಗೂ ಉತ್ತಮ ಸ್ನೇಹಿತರಾಗಿದ್ದರು. ಇವರಿಬ್ಬರ ಸ್ನೇಹದ ಬಗ್ಗೆ ಹೊರಗಡೆ ಕೆಲವು ನೆಗೆಟಿವ್‌ ಟ್ರೋಲ್‌ಗಳು ಹರಿದಾಡುತ್ತಿದ್ದವು. ಅದರಲ್ಲೂ ಅಂಕಲ್-ಆಂಟಿ ಲವ್‌ ಸ್ಟೋರಿ ಎನ್ನುವ ಮಟ್ಟಿಗೆ ಕೆಲ ಟ್ರೋಲ್‌ಗಳು ವೈರಲ್‌ ಆಗಿದ್ದವು.

Bigg Boss Kannada 11 Contestants Gouthami Jadav and Ugram Manju Shared Photo together

ಬಿಗ್‌ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ ಇಂತಹ ಟ್ರೋಲ್‌ಗಳಿಗೆ ಉತ್ತರಿಸಿದ್ದ ಗೌತಮಿ' ಈ ರೀತಿಯಲ್ಲಿ ಟ್ರೋಲ್‌ ಮಾಡುತ್ತಿರುವವರಿಗೆ ನಾನು ಹೇಗೆ ಏನು ಎನ್ನುವುದು ಗೊತ್ತಿಲ್ಲ. ಅಲ್ಲಿ ಆಟದಲ್ಲಿ ನೋಡಿದ್ದಾರೆ ಅಷ್ಟೇ. ನನ್ನ ಬಗ್ಗೆ ಅವರಿಗೆ ಗೊತ್ತಿದ್ದರೆ ಖಂಡಿತಾ ಮಾಡುತ್ತಿರಲಿಲ್ಲ. ಈಗ ನಾನೇನು ಹೇಳಬಹುದು ಎಂದರೆ ಈ ಅಂಕಲ್-ಆಂಟಿ ಲವ್‌ ಸ್ಟೋರಿ ಎನ್ನುವಂತಹದೆನೆಲ್ಲಾ ಇರಲಿಲ್ಲ. ಅಂಕಲ್-ಆಂಟಿ ಲವ್‌ ಸ್ಟೋರಿಯಲ್ಲಿ ಈ ಲವ್‌ ಸ್ಟೋರಿ ಎನ್ನುವುದೇ ಇರಲಿಲ್ಲ'

'ನನ್ನ ಜೀವನದಲ್ಲಿ ಅಭಿಷೇಕ್‌ ಅವರ ಜೊತೆಗೆ ಮಾತ್ರ ಒಂದು ಸುಂದರವಾದ ಲವ್‌ ಸ್ಟೋರಿ ಇರುವುದು. ಅದನ್ನೇ ನಾನು ಏಳೇಳು ಜನ್ಮಕ್ಕೂ ಬೇಕು ಅಂತಾ ಬಯಸುವವಳು. ನನ್ನ ಜೀವನದಲ್ಲಿ ಪ್ರೀತಿಗೆ ಕೊರತೆ ಅಂತೂ ಆಗಿಲ್ಲ. ಹೀಗಾಗಿ ಹೊಸ ಲವ್‌ ಸ್ಟೋರಿ ಇಲ್ಲ. ನಮ್ಮ ನಡುವೆ ಲವ್‌ ಸ್ಟೋರಿ ಇಲ್ಲ ಒಂದೊಳ್ಳೆ ಫ್ರೆಂಡ್‌ಶಿಪ್‌ ಸ್ಟೋರಿ ಅಂತೂ ಇದೆ' ಎಂದಿದ್ದರು.

ಅಲ್ಲದೇ 'ನಾನು ಅಭಿಷೇಕ್‌ ಹಾಗೂ ಮಂಜು ಅವರು ಭೇಟಿಯಾಗುತ್ತಿದ್ದೇವೆ. ಮೂರು ಜನ ಫೋನ್‌ನಲ್ಲಿ ಮಾತನಾಡುತ್ತೇವೆ. ನಾವು ಆರಾಮಾಗಿದ್ದೇವೆ' ಎಂದು ಸಹ ಗೌತಮಿ ಜಾದವ್‌ ಹೇಳಿದ್ದರು. ಇಷ್ಟು ಸ್ಪಷ್ಟನೆ ಬಳಿಕವೂ ಗೌತಮಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಮಂಜು- ಗೌತಮಿ ನಡುವೆ ಭಿನ್ನಾಭಿಪ್ರಾಯ ಎನ್ನುವವರಿಗೆ ಫೋಟೋ ಮೂಲಕ ಸ್ಪಷ್ಟ ಉತ್ತರ ನೀಡಿದ್ದಾರೆ.

ಉಗ್ರಂ ಮಂಜು, ಗೌತಮಿ ಜಾಧವ್ ಹಾಗೂ ಅವರ ಪತಿ ಅಭಿಷೇಕ್ ಮೂವರು ನಿನ್ನೆ ಭೇಟಿಯಾಗಿದ್ದಾರೆ. ಅಲ್ಲದೇ ಮೂವರು ಒಟ್ಟಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅಭಿಷೇಕ್ ಹೆಗಲ ಮೇಲೆ ಮಂಜು ಕೈ ಹಾಕಿ ನಿಂತಿದ್ದಾರೆ. ಎಲ್ಲರ ಮುಖದಲ್ಲೂ ಖುಷಿಯಿದ್ದು, ಮೂರು ಜನರ ಮೊದಲ ಫೋಟೋ ಎಂದು ಕ್ಯಾಪ್ಷನ್‌ ಕೊಟ್ಟು ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+