Bigg Boss Hindi 18: ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಕತ್ತೆ!
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಆರಂಭವಾಗಿದೆ. ಬಿಗ್‌ಬಾಸ್ ಮನೆಗೆ ನಾಯಿ (ಚಾರ್ಲಿ) ಸ್ಪರ್ಧಿಯಾಗಿ ಆಗಮಿಸಲಿದೆ ಎನ್ನುವ ಮಾತು ಈ ಹಿಂದೆ ಕೇಳಿ ಬಂದಿತ್ತು. ಆದರೆ ಚಾರ್ಲಿ ಆಗಮಿಸಲೇ ಇಲ್ಲ. ಆದರೀಗ ಹಿಂದಿ ಬಿಗ್‌ಬಾಸ್ ಮನೆಗೆ ಪ್ರಾಣಿಯೊಂದು ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದೆ. ಅದರೆ ಅದು ನಾಯಿ ಅಲ್ಲ, ಬದಲಿಗೆ ಕತ್ತೆ.
ಹೌದು... ಬಿಗ್‌ಬಾಸ್ ಹಿಂದಿ 18 ಆರಂಭವಾಗಿದೆ. ನಟ ಸಲ್ಮಾನ್ ಖಾನ್ ನಡೆಸಿಕೊಡುವ ಈ ಶೋಗೆ ಸ್ಪರ್ಧಿಯಾಗಿ ಕತ್ತೆ ಎಂಟ್ರಿ ಕೊಟ್ಟಿದೆ. ಇದನ್ನು ಕಂಡು ಪ್ರೇಕ್ಷಕರು ಅಚ್ಚರಿಗೊಂಡಿದ್ದಾರೆ. ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಾಣಿಯೊಂದು ಸ್ಪರ್ಧಿಯಾಗಿ ಮನೆ ಪ್ರವೇಶಿಸಿದೆ. ಈ ಕತ್ತೆ 19 ಕಂಟೆಸ್ಟೆಂಟ್‌ಗಳ ಪೈಕಿ ಒಂದಾಗಿದೆ.

ಬಿಗ್‌ಬಾಸ್ ಕನ್ನಡದಲ್ಲಿ ಚಾರ್ಲಿ (ನಾಯಿ) ಬರಲಿದೆ ಎನ್ನುವ ಸುದ್ದಿ ಪ್ರೇಕ್ಷಕರಲ್ಲಿ ಭಾರೀ ಕೂತೂಹಲ ಮೂಡಿಸಿತ್ತು. ಇದಕ್ಕಾಗಿ ಬಿಗ್‌ಬಾಸ್ ತಂಡ 'ಅನಿಮಲ್ ಬೋರ್ಡ್'ಗೆ ಮನವಿ ಸಲ್ಲಿಸಿತ್ತು. ಆದರೆ 'ಅನಿಮಲ್ ಬೋರ್ಡ್' ಇದಕ್ಕೆ ಅನುಮತಿ ನೀಡಲಿಲ್ಲ. ಇದರಿಂದಾಗಿ ಚಾರ್ಲಿ ಬಿಗ್‌ಬಾಸ್ ಕನ್ನಡದಲ್ಲಿ ಕಾಣಿಸಿಕೊಳ್ಳಲಿಲ್ಲ.
ಆದರೆ ಬಿಗ್‌ಬಾಸ್ ಹಿಂದಿ ಸೀಸನ್ 18ರಲ್ಲಿ ಪ್ರಾಣಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಸಲ್ಮಾನ್ ಖಾನ್ ಅವರು ಅದ್ದೂರಿಯಾಗಿ ಗಧರಾಜ್ (ಕತ್ತೆ ಹೆಸರು)ನನ್ನು ಸ್ವಾಗತಿಸಿ, ಮನೆ ಒಳಗೆ ಕಳುಹಿಸಿದ್ದಾರೆ. ಬಿಗ್‌ಬಾಸ್ ಹಿಂದಿ 18ರ 19 ಸ್ಪರ್ಧಿಗಳ ಪೈಕಿ ಕತ್ತೆ ಕೂಡ ಸ್ಪರ್ಧಿಸಲಿದೆ. ಈ ಕತ್ತೆ ರ್ಧಿ ವಕೀಲ ಗುಣರತ್ನ ಸದಾವರ್ತೆ ಅವರ ಸಾಕುಪ್ರಾಣಿಯಾಗಿದೆ.
ಬಿಗ್‌ಬಾಸ್ ಹೊಸ ಪ್ರೋಮೋ ಬಿಡುಗಡೆಯಾದಾಗ, ಎಲ್ಲರೂ ಅದರಲ್ಲಿ ಸಲ್ಮಾನ್ ಖಾನ್ ಪ್ರವೇಶಕ್ಕಾಗಿ ಕಾಯುತ್ತಿದ್ದರು. ಆದರೆ ಸಲ್ಮಾನ್‌ಖಾನ್ ಬದಲಿಗೆ ಕತ್ತೆಯೊಂದು ವೇದಿಕೆಯನ್ನು ಪ್ರವೇಶಿಸಿತು. ಬಿಗ್‌ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಅವರಿಗಿಂತಲೂ ಮೊದಲು ಕತ್ತೆ ಕಾಣಿಸಿಕೊಂಡಿತ್ತು. ಆದರೆ ಕತ್ತೆಯ ಎಂಟ್ರಿ ಯಾಕೆ ಎನ್ನುವುದು ಮಾತ್ರ ನಿಗೂಢವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ಆದರೆ ಈ ಕತ್ತೆಯನ್ನು ಆಟದಲ್ಲಿ ಹೇಗೆ ತೊಡಗಿಸಿಕೊಳ್ಳಲಾಗುತ್ತದೆ? ಕತ್ತೆಯನ್ನು ನೋಡಿಕೊಳ್ಳುವವರು ಯಾರು? ಇದೆಲ್ಲವೂ ಭಾರೀ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಕತ್ತೆಯನ್ನು ನಾಯಿಯಂತೆ ಪಳಗಿಸುವುದು ಸ್ವಲ್ಪ ಕಷ್ಟ. ಒಂದು ಪಕ್ಷ ನಾಯಿಯಿಂದ ಕೆಲ ಆಟಗಳನ್ನು ಆಡಿಸಬಹುದು. ಆದರೆ ಕತ್ತೆಯಿಂದ ಸ್ವಲ್ಪ ಕಷ್ಟವೇ... ಹೀಗಿದ್ದರೂ ಕತ್ತೆಯನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿ, ಶೋ ನಡೆಸುವುದು ಒಂದು ಸವಾಲಿನ ಕೆಲಸ.
ಸದ್ಯಕ್ಕೆ ಬಿಗ್‌ಬಾಸ್ ಮನೆಗೆ ಕತ್ತೆ ಎಂಟ್ರಿ ಕೊಟ್ಟಿದೆ. ಅದರೊಂದಿಗೆ ಇತರ ಸ್ಪರ್ಧಿಗಳು ಹೇಗೆ ಹೊಂದಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಕತ್ತೆ ಕಥೆ ಸಲ್ಮಾನ್ ಖಾನ್ ಜೊತೆ ನೋಡಲು ತುಂಬಾನೇ ಚೆನ್ನಾಗಿತ್ತು. ಮುಂದಿನ ದಿನಗಳಲ್ಲಿ ಕತ್ತೆ ಯಾರೊಂದಿಗೆ ಹೊಂದಿಕೊಳ್ಳುತ್ತೆ? ಯಾರೊಂದಿಗೆ ಇಲ್ಲ. ಯಾರಿಗೆ ಕತ್ತೆಯೊಂದಿಗೆ ಹೊಂದಿಕೊಳ್ಳುವುದು ಕಷ್ಟವಾಗಲಿದೆ ಎಂದು ಕಾದು ನೋಡಬೇಕಿದೆ.












Click it and Unblock the Notifications