Gauthami Jadav: ಮೋಕ್ಷಿತಾ ಬಗ್ಗೆ ಗೌತಮಿ ಶಾಕಿಂಗ್ ಹೇಳಿಕೆ
ಬಿಗ್‌ಬಾಸ್ ಮನೆಯಿಂದ ಹೊರ ಬಂದ ಗೌತಮಿ ಜಾದವ್ ಅವರು ಮೋಕ್ಷಿತಾ ಪೈ ಅವರ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಮೋಕ್ಷಿತಾ ಪೈ ಅವರು ಫಿನಾಲೆಯಲ್ಲಿ ಇರಬಾರದಾಗಿತ್ತು ಎಂದಿದ್ದಾರೆ. ಜೊತೆಗೆ ಮೋಕ್ಷಿತಾ ಪ್ರಕರಣದ ಬಗ್ಗೆ ಕೂಡ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಾಗಾದರೆ ಗೌತಮಿ ಮೋಕ್ಷಿತಾ ಬಗ್ಗೆ ಹೇಳಿದ್ದೇನು?
ಬಿಗ್‌ಬಾಸ್ ಕನ್ನಡ ಸೀಸನ್ 11ರಿಂದ ಕಳೆದ ವಾರ ಗೌತಮಿ ಹಾಗೂ ಧನ್‌ರಾಜ್ ಅವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಹೊರಗಡೆ ಅಭಿಮಾನಿಗಳಿಂದ ಗೌತಮಿ ಹಾಗೂ ಧನ್‌ರಾಜ್ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇಬ್ಬರಿಗೂ ಉತ್ತಮ ಆಟ ಆಡಿರುವುದಾಗಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಗೌತಮಿ ಜಾದವ್ ಅವರು ಮೋಕ್ಷಿತಾ ಫಿನಾಲೆಯಲ್ಲಿ ಇರಬಾರದಿತ್ತು ಎಂದಿದ್ದಾರೆ.

ಮೋಕ್ಷಿತಾ ಹೀಗೆ ಅಂತ ನನಗೆ ಗೊತ್ತೇ ಇಲ್ಲ- ಗೌತಮಿ
ಗೌತಮಿ ಅವರು 'ಮೋಕ್ಷಿತಾ ಪ್ರಕರಣದ (ಮಕ್ಕಳ ಕಿಡ್ನ್ಯಾಪ್ ಕೇಸ್) ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಮೋಕ್ಷಿತಾ ಅವರ ಬಗ್ಗೆ ಕೇಳಿದಾಗ ನನಗೆ ಗೊತ್ತು ಅಂತ ನಾನು ಯಾವಾಗಲೂ ಹೇಳುತ್ತಿದ್ದೆ. ಆದರೆ ಬಿಗ್‌ಬಾಸ್ ಮನೆಯಲ್ಲಿ ಇರುವ ಮೋಕ್ಷಿತಾ ಬಗ್ಗೆ ಮಾತ್ರ ನನಗೆ ಗೊತ್ತು. ಹೊರಗಿದ್ದ ಮೋಕ್ಷಿತಾ ಬಗ್ಗೆ ನನಗೆ ಏನೂ ಕೂಡ ಗೊತ್ತಿಲ್ಲ. ಮೋಕ್ಷಿತಾ ಅವರ ಹೆಸರು ಬೇರೆ ಇತ್ತು ಅನ್ನೋದು ಕೂಡ ನನಗೆ ಗೊತ್ತಿರಲಿಲ್ಲ. ಇದು ನನಗೆ ಅಚ್ಚರಿಯ ವಿಷಯ' ಎಂದು ಗೌತಮಿ ಹೇಳಿದ್ದಾರೆ.
ಟಾಪ್ 6ರಲ್ಲಿ ಮೋಕ್ಷಿತಾ ಇರಲು ಅರ್ಹಳಲ್ಲ
ಪ್ರಸ್ತುತ ಬಿಗ್‌ಬಾಸ್ ಮನೆಯಲ್ಲಿ ಇರುವ ಟಾಪ್ 6ರಲ್ಲಿ ಯಾವ ಸ್ಪರ್ಧಿ ಫಿನಾಲೆಗೆ ಅರ್ಹರಲ್ಲ ಎನ್ನುವ ಪ್ರಶ್ನೆಗೆ ಗೌತಮಿ ಮೋಕ್ಷಿತಾ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಮೋಕ್ಷಿತಾ ಅವರು ಕಳೆದ ವಾರ ಆಡಿದಂತೆ ಮುಂಚೆಯಿಂದ ಆಡಿಕೊಂಡು ಬಂದಿದ್ದರೆ ಅವರು ಫಿನಾಲೆ ತಲುಪಲು ಅರ್ಹರು ಎಂದು ನನಗೆ ಅನಿಸುತ್ತಿತ್ತು. ಆದರೆ ಅವರು ಮುಂಚೆಯಿಂದ ಈ ಎಫರ್ಟ್ ಹಾಕಿಲ್ಲ. ಕೇವಲ ಆಟ ಮಾತ್ರವಲ್ಲ ಅವರ ವ್ಯಕ್ತಿತ್ವದಲ್ಲಿ ಸಾಕಷ್ಟು ಬದಲಾವಣೆಯನ್ನು ನಾನು ನೋಡಿದ್ದೇನೆ. ಧ್ವನಿ ಎತ್ತಬೇಕಾದ ವಿಷಯಗಳಲ್ಲಿ ಅವರು ಸೈಲೆಂಟ್ ಆಗಿರೋದು ಇದೆ. ಮಂಜು ಹಾಗೂ ನನ್ನ ಜೊತೆ ಆಗಿರುವ ಕೆಲ ಘಟನೆಗಳಿಂದಾಗಿ ಅವರು ಫಿನಾಲೆ ಹೋಗಲು ಡಿಸರ್ವ ಅಲ್ಲ ಎಂದು ನನಗೆ ಅನಿಸುತ್ತದೆ' ಎಂದು ಗೌತಮಿ ಹೇಳಿದ್ದಾರೆ.

ಗೌತಮಿ ಜಾದವ್, ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ಬಿಗ್‌ಬಾಸ್ ಮನೆಯಲ್ಲಿ ತುಂಬಾ ಒಳ್ಲೆಯ ಫ್ರೆಂಡ್ಸ್. ಆದರೆ ಈ ಸೇಫ್ ಗೇಮ್ ಫಿನಾಲೆ ತಲುಪಲು ಅಡ್ಡಿಯಾಗುವ ಕಾರಣ ಮೋಕ್ಷಿತಾ ಈ ತಂಡದಿಂದ ಹೊರಬಂದರು. ಕಳೆದ ವಾರ ತುಂಬಾ ಚೆನ್ನಾಗಿ ಆಡಿದರು. ಆದರೆ ಇದೇ ಆಟವನ್ನು ಮೊದಲಿನಿಂದ ಆಡಿಕೊಂಡು ಬಂದಿದ್ದರೆ ಮೋಕ್ಷಿತಾ ವಿನ್ನರ್ ಅಥವಾ ರನ್ನರ್ ಸ್ಥಾನದಲ್ಲಿ ಇರುತ್ತಿದ್ದರು.
ಮೋಕ್ಷಿತಾ ಅವರ ಹಿಂದಿನ ವಾರದ ಪಫಾರ್ಮೆನ್ಸ್ ನೋಡಿದರೆ ಮೋಕ್ಷಿತಾ ಟಾಪ್ 6ರಲ್ಲಿ ಇದ್ದಾರೆ ಅನ್ನೋದೇ ಅಚ್ಚರಿಯ ವಿಷಯ. ಬಿಗ್‌ಬಾಸ್ ವೀಕ್ಷಕರೂ ಕೂಡ ಇದನ್ನು ಪ್ರಶ್ನೆ ಮಾಡುವ ಮೂಲಕ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಮೋಕ್ಷಿತಾ ಅವರು ವಿನ್ನರ್ ಅಥವಾ ರನ್ನರ್ ಅಪ್ ಆಗುವುದು ಕೂಡ ಅನುಮಾನವಿದೆ.












Click it and Unblock the Notifications