Bigg Boss: ನೀವು ಬಿಗ್ ಬಾಸ್‌ಗೆ ಹೋಗಬೇಕಾ?; ಸರಳ ವಿಧಾನ ಇಲ್ಲಿದೆ
Bigg Boss: ಅತೀ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದಾಗಿದೆ. ಈ ಕಾರ್ಯಕ್ರಮವನ್ನು ಕೋಟಿಗಟ್ಟಲೇ ಜನ ವೀಕ್ಷಣೆ ಮಾಡುತ್ತಾರೆ. ಈಗಾಗಲೇ ಈ ಸೀಸನ್ ಆರಂಭದ ಬಗ್ಗೆ ಅಧಿಕೃತವಾಗಿ ಹೊರಬಿದ್ದಿದ್ದು, ವೀಕ್ಷಕರಿಗೆ ಆಯೋಜಕರು ಭರ್ಜರಿ ಸರ್ಪ್ರೈಸ್‌ವೊಂದನ್ನು ನೀಡಿದ್ದಾರೆ.
ಐಪಿಎಲ್‌ನಷ್ಟೇ ಕ್ರೇಜ್ ಬಿಗ್ ಬಾಸ್ ಶೋಗಿದೆ. ಅಷ್ಟರ ಮಟ್ಟಿಗೆ ಇಡೀ ರಾಜ್ಯ ಅಷ್ಟೇ ಅಲ್ಲದೆ, ದೇಶಾದ್ಯಂತ ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಾರೆ. ಇದೀಗ ಈ ಸೀಸನ್ ಆರಂಭದ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದ್ದು, ಇದರ ಬೆನ್ನಲ್ಲೇ ಬಿಗ್ ಬಾಸ್ ಮನೆಗೆ ಬರೀ ಸೆಲೆಬ್ರೆಟಿಗಳು ಅಷ್ಟೇ ಅಲ್ಲದೆ, ಸಾಮಾನ್ಯ ಜನರಿಗೂ ಎಂಟ್ರಿಯಾಗುವ ಅವಕಾಶವನ್ನು ಕಲ್ಪಿಸಿಕೊಡಲಾಗ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಬಿಗ್ ಬಾಸ್ ತೆಲುಗು 9 ಆರಂಭದ ಬಗ್ಗೆ ಆಯೋಜಕರು ಪ್ರೋಮೊ ಬಿಡುಗಡೆ ಮಾಡಿ ವೀಕ್ಷಕರಲ್ಲಿ ಕೂತೂಹಕ ಸೃಷ್ಟಿಸಿದ್ದಾರೆ. ಕಳೆದ ಆರು ಸೀಸನ್‌ಗಳಿಂದ ನಟ ನಾಗಾರ್ಜುನ್ ಅವರೆ ಬಿಗ್ ಬಾಸ್ ಹೋಸ್ಟ್ ಮಾಡಿದ್ದಾರೆ. ಈ ಬಾರಿಯೂ ಅವರೇ ನಡೆಸಿಕೊಡಲಿದ್ದಾರೆ. ವಿಶೇಷ ಅಂದ್ರೆ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಲು ಬರೀ ಸೆಲೆಬ್ರಿಟಿಗಳು ಅಷ್ಟೇ ಅಲ್ಲದೆ, ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದೆ. ಮೊದಲೆಲ್ಲ ಬರೀ ಸೆಲೆಬ್ರೆಟಿಗಳಿಗೆ ಮಾತ್ರ ಪರ್ಮಿಷನ್ ನೀಡಲಾಗುತ್ತಿತ್ತು.
ನೋಂದಣಿ ವಿಧಾನ: ತೆಲುಗು ಬಿಗ್ ಬಾಸ್ ಸೀಸನ್ 9ಕ್ಕೆ ಸಾಮಾನ್ಯ ಜನರು ಸ್ಪರ್ಧಿಗಳಾಗಬೇಕೆಂದ್ರೆ, ಮೊದಲು www.bb9.jiostar.com ವೆಬ್‌ಸೈಟ್‌ಗೆ ಲಾಗಿನ್ ಆಗಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಬಂತರ ಯಾಕೆ ಬಿಗ್ ಬಾಸ್‌ನಲ್ಲಿ ಭಾಗಿ ಆಗಬೇಕೆಂದು ಕಾರಣ ಹೇಳುವ ವಿಡಿಯೋ ಅಪ್‌ಲೋಡ್ ಮಾಡಬೇಕು. ಸಾಮಾನ್ಯ ಜನರು ಕಳುಹಿಸಿದ ವಿಡಿಯೋದಲ್ಲಿ ಆಯ್ದವರನ್ನು ಬಿಗ್‌ಬಾಸ್ ಮನೆಗೆ ಕಳುಹಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹೆಸರು ನೋಂದಣಿ ಮಾಡಿಕೊಳ್ಳಲು ಜುಲೈ 8ರ ವರೆಗೆ ಅವಕಾಶವಿದೆ. ಬಿಗ್ ಬಾಸ್ ತೆಲುಗು -9ನ ಸ್ಪರ್ಧಿಯಾಗಿ ಭಾಗಿ ಆಗುವ ನಿಟ್ಟಿನಲ್ಲಿ ನೋಂದಣಿ ಮಾಡಿಕೊಳ್ಳುವ ಅವಕಾಶ ಇದೆ. ಈಗಾಗಲೇ 1,00,000ಕ್ಕೂ ಹೆಚ್ಚು ಜನರ ನೋದಾಯಿಸಿಕೊಂಡಿದ್ದಾರೆ ಎಂದು ಮುಳಗಳಿಂದ ತಿಳಿದುಬಂದಿದೆ.
ಆಯ್ಕೆ ಪ್ರಕ್ರಿಯೆ ವಿಧಾಗಳು
* ಬಂದಿರುವ ಅರ್ಜಿಗಳಲ್ಲಿ ಸುಮಾರು 200 ಜನರನ್ನು ಅವರ ವಿಡಿಯೋಗಳು, ವ್ಯಕ್ತಿತ್ವ ಮತ್ತು ಸ್ಕ್ರೀನ್ ಪ್ರೆಸೆನ್ಸ್ ನೋಡಿ ಆಯ್ಕೆ ಮಾಡಲಾಗುತ್ತದೆ.
* ಬಳಿಕ ಅದರಲ್ಲಿ 100 ಮಂದಿಯನ್ನು ಫೋನ್ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
* ನಂತರ 40 ಮಂದಿಯನ್ನು ಗುಂಪು ಸಂವಹನ ನಡೆಸಿ ಆಯ್ಕೆ ಮಾಡಲಾಗುತ್ತದೆ.
* ಜಡ್ಜ್ ಮತ್ತು ಮಾಜಿ ಸ್ಪರ್ಧಿಗಳ ನೇತೃತ್ವದಲ್ಲಿ 40 ಜನರನ್ನು ಸಂದರ್ಶನ ಮಾಡಿ, ಅಗ್ರ 15 ಜನರನ್ನು ಆಯ್ಕೆ ಮಾಡಲಾಗುತ್ತದೆ.
* ಕೊನೆಯದಾಗಿ ಸಾರ್ವಜನಿಕರಿಗೆ ಅಧಿಕೃತವಾಗಿ ಮನೆಗೆ ಪ್ರವೇಶಿಸುವ ಟಾಪ್ 3 ಸಾಮಾನ್ಯ ಜನರನ್ನು ಆಯ್ಕೆ ಮಾಡಲು ಮತ ಚಲಾಯಿಸುವ ಅವಕಾಶ ನೀಡಲಾಗುತ್ತದೆ.
ಸಾಮಾನ್ಯವಾಗಿ ಇಷ್ಟು ದಿನ ಬರೀ ಸೆಲೆಬ್ರೆಟಿಗಳನ್ನೇ ಬಿಗ್ ಬಾಸ್‌ಗೆ ಕಳುಹಿಸಲಾಗುತ್ತಿತ್ತು ಎನ್ನುವ ಕೂಗುಗಳು ಜೋರಾಗಿ ಕೇಳಿಬಂದಿದ್ದವು. ಇದನ್ನು ಗಮನಿಸಿದ ಆಯೋಜಕರು ಈ ಬಾರಿ ಸಾಮಾನ್ಯ ಜನರು ಕೂಡ ಬಿಬಿ ಮನೆಗೆ ಎಂಟ್ರಿಯಾಗಲು ಅವಕಾಶ ಮಾಡಿಕೊಟ್ಟಿರುವುದು ವಿಶೇಷವಾಗಿದೆ. ಈಗಾಗಲೇ ತೆಲುಗಿನಲ್ಲಿ 8 ಸೀಸನ್ ಮುಕ್ತಾಯವಾಗಿದ್ದು, 9ಕ್ಕೆ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಕಾರ್ಯ ನಡೆಯುತ್ತಿದೆ. ಕಳೆದ ಬಾರಿ ಕನ್ನಡಿಗ ನಿಖಿಲ್ ಮಲಿಯಕ್ಕಲ್ ಅವರು ವಿಜಯಶಾಲಿ ಆಗಿ ಹೊರಹೊಮ್ಮಿದ್ದರು. ಇನ್ನು ಬಿಗ್ ಬಾಸ್ ತೆಲುಗು ಸೀಸನ್ 9 ಇದೇ ಸೆಪ್ಟೆಂಬರ್ 7ರಿಂದ ಸ್ಟಾರ್ ಮಾ ದಲ್ಲಿ ಪ್ರಸಾರ ಆಗಲಿದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications