Bigg Boss: ಫಸ್ಟ್ ನೈಟ್ ಬೆಡ್ ಸೀನ್ ಸೌಂಡ್ ಮಾಡಿ ಹಿರೋ ಆದ ಕುರಿಗಾಯಿ ಹನುಮಂತು
Bigg Boss: ಬಿಗ್ ಬಾಸ್ ಕನ್ನಡ 11 ಸೀಸನ್‌ನ ಸ್ಪರ್ಧಿಗಳು ಹಲವು ಗೇಮ್‌ಗಳನ್ನು ಹಾಡುವ ಮೂಲಕ ಪ್ರಕ್ಷಕರನ್ನು ರಂಜಿಸುವಂತಹ ಕೆಲಸವನ್ನು ಪ್ರತಿನದಿನವೂ ಮಾಡುತ್ತಿದ್ದಾರೆ. ಇನ್ನು ನಿನ್ನೆ (ಡಿಸೆಂಬರ್ 02) ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಸುದೀಪ್ ಅವರು ಸ್ಪರ್ಧಿಗಳ ಬಳಿ ಹಾಸ್ಯ ಗೇಮ್‌ಗಳನ್ನು ಹಾಡಿಸಿದ್ದು, ಈ ವೇಳೆ ಹನುಮಂತು ಮಾಡಿದ ಫಸ್ಟ್ ನೈಟ್ ಬೆಡ್ ಸೀನ್ ಸೌಂಡ್ ಭಾರೀ ವೈರಲ್ ಆಗುತ್ತಿದೆ.
ಕಿಚ್ಚ ಸುದೀಪ್ ಅವರು ಭಾನುವಾರದ ಎಪಿಸೋಡ್ ಅನ್ನು ಹಾಸ್ಯಮಯವಾಗಿ ನಡೆಸಿಕೊಟ್ಟಿದ್ದು, ಈ ವೇಳೆ ಬಿಗ್ ಬಾಸ್ ಮನೆ ಸ್ಪರ್ಧಿಗಳ ಬಳಿ ಕೆಲವು ಹಾಸ್ಯ ಆಟಗಳನ್ನು ಆಡಿಸಿದ್ದಾರೆ. ಮೊದಲಿಗೆ ಗೊಂಬೆಯನ್ನು ಕರೆಸಿ ಅದರ ಜೊತೆ ಡ್ಯಾನ್ಸ್ ಮಾಡುವಂತೆ ಸ್ಪರ್ಧಿಗಳಿಗೆಲ್ಲ ಹೇಳುತ್ತಾರೆ.

ಮೊದಲಿಗೆ ಗೊಂಬೆ ಜೊತೆ ತ್ರಿವಿಕ್ರಮ್ ಡ್ಯಾನ್ ಮಾಡಿದ್ದು, ಬಳಿಕ ಧನರಾಜ್, ಉಗ್ರಂ ಮಂಜು, ಶಿಶರ್ ಸಹ ನೃತ್ಯ ಮಾಡಿದ್ದಾರೆ. ಅದೇ ವೇಳೆಗೆ ಗೊಂಬೆಯ ತಲೆ ಬಿದ್ದಿದ್ದು, ಇದನ್ನು ಕಂಡ ಪ್ರೇಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ. ಅಲ್ಲದೆ, ಬಳಿಕ ಬಂದ ಹನುಮಂತು ಮಂಜು ಹಾಗೂ ಗೊಂಬೆಗೆ ಒಂದಾಣಿಕೆಯಾಗುವಂತೆ ಹಾಡೊಂದನ್ನು ಹಾಡಿ ಗಮನ ಸೆಳೆಯುತ್ತಾರೆ. ನಂತರ ಬಂದ ರಜತ್, ವಿಕ್ರಮ್ ಗೊಂಬೆಯ ಭಾಗಗಳನ್ನೇ ಮುರಿದುಬಿಡುತ್ತಾರೆ. ಇದು ಕೂಡ ಭಾರೀ ಹಾಸ್ಯಮಯವಾಗಿಬಿಡುತ್ತದೆ.
ಇನ್ನು ಟಿವಿಯಲ್ಲಿ ಬರುವ ಚಿತ್ರವನ್ನು ನೋಡಿ ಇವರು ಅದೇ ರೀತಿ ಮಾತನಾಡದೇ ಬರೀ ಸೌಂಡ್ ಮಾಡಬೇಕು, ಬಳಿಕ ಕಣ್ಪಟ್ಟಿ ಕಟ್ಟಿಕೊಂಡವರು ಅದನ್ನು ಗುರುತಿಸಬೇಕು. ಅದೇ ರೀತಿ ಹನುಮಂತು ಹಾಗೂ ಮೋಕ್ಷಿತಾ ಗೇಮ್‌ವೊಂದನ್ನು ಆಡಿದ್ದು, ಅದರಲ್ಲಿ ಹನುಮಂತ ಹೆಲಿಕಾಪ್ಟರ್ ಶಬ್ದ ಬಾಯಿಂದ ಮಾಡಬೇಕು. ಶಬ್ದ ಕೇಳಿಸಿಕೊಂಡು ಮೋಕ್ಷಿತಾ ಅದನ್ನು ಗುರುತಿಸಬೇಕು. ಹನುಮಂತು ಮಾಡಿದ ಹೆಲಿಕಾಪ್ಟರ್ ಶಬ್ದ ಕೇಳಿ ಸುದೀಪ್ ಸೇರಿ ಮನೆ ಸ್ಪರ್ಧಿಗಳೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ.
ಈ ಟಾಸ್ಕ್ ವೇಳೆ ಶೀಶಿರ್ ಹಾಗೂ ಚೈತ್ರಾ ಸೋತಿದ್ದು, ಮೊದಲಿಗೆ ಗೌತಮಿ ಹಾಗೂ ಮಂಜು ಗೆದ್ದರು. ಬಳಿಕ ಐಶ್ವರ್ಯಾ ಹಾಗೂ ಧನರಾಜ್ ಬಂದರು.ಇನ್ನು ಫಸ್ಟ್ ನೈಟ್ ಬೆಡ್ ರೂಮ್ ಫೋಟೋವನ್ನು ಟಿವಿ ಪರದೆ ಮೇಲೆ ತೋರಿಸಿದ್ದು, ಈ ವೇಳೆ ಶೋಭಾ ಶೆಟ್ಟಿ ಅವರು ಕಣ್ಪಟ್ಟಿ ಕಟ್ಟಿಕೊಂಡಿದ್ದರು. ಇದನ್ನು ಯಾರಿಗೂ ಸೌಂಡ್ ಮೂಲಕ ಉತ್ತರಿಸಲು ಆಗಲಿಲ್ಲ. ಬಳಿಕ ಬಂದ ಹನುಮಂತ ಆ ಸೌಂಡನ್ನು ಸರಿಯಾಗಿ ಮಾಡಿ ತೋರಿಸಿ ವೀಕ್ಷಕರನ್ನು ರಂಜಿಸಿದರು. ಅಲ್ಲದೆ, ಹನುಮಂತು ಮಾಡಿದ ಸೌಂಡ್ ಫೀಲ್‌ಗೆ ಸುದೀಪ್ ಸೇರಿ ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಗಾಡಿದ್ದಾರೆ.
ಇನ್ನು ಈ ಗೇಮ್ ವಿನ್ ಆದರೆ ಮಾತ್ರ ಲಕ್ಷುರಿ ಬಜೆಟ್ ನೀಡುವುದಾಗಿ ಸುದೀಪ್ ತಿಳಿಸಿದ್ದರು. ಈ ಆಟದಲ್ಲಿ ಹನುಮಂತು ಉತ್ತಮ ಪ್ರದರ್ಶನ ಮಾಡುವ ಮೂಲಕ ಮನೆಗೆ ಮಗೆ ಲಕ್ಷುರಿ ಬಜೆಟ್ ಬರುವಿಕೆಗೆ ಪ್ರಮುಖ ಕಾರಣರಾದರು. ಅಲ್ಲದೆ, ಹನುಮಂತುನನ್ನು ಹಿರೋ ಎಂದು ಸುದೀಪ್ ಅವರು ಹೊಗಳಿದರು.












Click it and Unblock the Notifications