ಬಿಗ್ ಬಾಸ್ ಶಿಶಿರ್, ಐಶ್ವರ್ಯ ಸಿಂಧೋಗಿಯಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್
ಬಿಗ್ ಬಾಸ್ ಕನ್ನಡ 11ರ ಸೀಸನ್‌ನಲ್ಲಿ ಗೆಲುವಿನ ಸರದಾರರ ಹಾವಳಿ ಒಂದಡೆಯಾದರೆ, ಮತ್ತೊಂದೆಡೆ ಜೋಡಿಗಳ ದರ್ಬಾರ್ ಜೋರಾಗಿತ್ತು. ಬಹುತೇಕ ಮಂದಿ ಇಲ್ಲಿನ ಕೆಲವರನ್ನು ಪ್ರೇಮಿಗಳು ಅಂದುಕೊಂಡಿದ್ದರು, ಅಲ್ಲದೆ, ಫ್ಯಾನ್ಸ್ ಪೇಜ್‌ಗಳು ಸಹ ಕ್ರಿಯೇಟ್ ಆಗಿದ್ದವು. ಆದರೆ ಜೋಡಿಯಂತಿದ್ದ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ್ಮೇಲೆ ನಾವು ಪ್ರೀತಿ ಮಾಡುತ್ತಿಲ್ಲ, ಸ್ನೇಹಿತರಷ್ಟೇ ಎಂಬ ಸ್ಪಷ್ಟನೆಗಳನ್ನು ಸಹ ಕೊಟ್ಟಿದ್ದರು. ಆದರೆ, ಇದೀಗ ಒಂದು ಜೋಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್‌ವೊಂದನ್ನು ಕೊಟ್ಟಿದೆ.
ಬಿಗ್ ಬಾಸ್ ಮನೆಯಲ್ಲಿದಾಗ ಮೂರು ಜೋಡಿಗಳು ಪ್ರೇಮಿಗಳಂತಿದ್ದರು. ಅದರಲ್ಲೂ ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಅವರು ಪ್ರೇಮಿಗಳು ಎಂದು ಬಹುತೇಕ ಮಂದಿ ಅಂದುಕೊಂಡಿದ್ದರು. ಅಲ್ಲದೆ, ಫ್ಯಾನ್ಸ್ ಪೇಜ್‌ಗಳನ್ನು ಕ್ರಿಯೇಟ್ ಮಾಡಿ ಇವರಿಗೆ ಶುಭ ಹಾರೈಸುವ ಕೆಲಸವನ್ನು ಮಾಡಿದ್ದರು. ಆದರೆ ಇವರಿಬ್ಬರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಮೇಲೆ ಈ ಬಗ್ಗೆ ಪ್ರಶ್ನೆ ಕೇಳಿದಾಗ ನಾವಿಬ್ಬರು ಸ್ನೇಹಿತರಷ್ಟೇ, ಪ್ರೇಮಿಗಳಲ್ಲ ಎಂದು ಶಿಶಿರ್ ಅವರು ಹೇಳಿದ್ದರು.

ಆದರೆ ಇದೀಗ ಇವರಿಬ್ಬರು ಹೆಚ್ಚಾಗಿ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ರೊಮ್ಯಾಂಟಿಕ್ ಹಾಡುಗಳಿಗೆ ಒಟ್ಟಿಗೆ ಹೆಜ್ಜೆ ಹಾಕುವ ಮೂಲಕ ರೀಲ್ಸ್ ಮಾಡುತ್ತಿದ್ದಾರೆ. ಅಲ್ಲದೆ, ಜಾಲಿ ಟ್ರಿಪ್ ಸಹ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇವರಿಬ್ಬರ ಪ್ರೀತಿ ವಿಚಾರ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದು, ಇದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನಿಮ್ಮಿರದು ಹೇಳಿ ಮಾಡಿಸಿದ ಜೋಡಿ ಅಂತಾ ಹೇಳುತ್ತಿದ್ದಾರೆ.
ಇದರ ಬೆನ್ನಲ್ಲೇ ಒಳ್ಳೆಯ ಸ್ನೇಹಿತರಂತಿದ್ದ ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರೀ ಅವರು ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಒಳ್ಳೆಯ ಪಾರ್ಟ್ನರ್ಸ್ ಆಗಬೇಕೆಂದು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಐಶ್ವರ್ಯಾ ಮತ್ತು ಶಿಶಿರ್, ನಾವು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಆ ಬಗ್ಗೆ ಸ್ಪಾಷ್ಟನೆಯನದನೂ ನೀಡಿದ್ದೇವೆ. ನಮ್ಮ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಆ ವಿಚಾರದಿಂದ ಬೇಸರವೂ ಆಗಿದೆ ಎಂದು ಹೇಳಿದ್ಧಾರೆ.
ಅಲ್ಲದೆ, ನಾವಿಬ್ಬರೂ ಉತ್ತಮ ಸ್ನೇಹಿತರು ಅಷ್ಟೇ. ಬಿಗ್ ಬಾಸ್ ಮನೆಯಲ್ಲೂ ನಮ್ಮಿಬ್ಬರ ನಡುವೆ ಉತ್ತಮ ಬಾಂದವ್ಯವಿತ್ತು, ಈಗಲೂ ಅದೇ ಅದೇ ರೀತಿಯಲ್ಲಿ ಇದ್ದೇವೆ. ನಾವು ಪಾರ್ಟ್ನರ್ಸ್ ಆಗಬಹುದು. ಆದರೆ, ಬ್ಯುಸಿನೆಸ್ ಪಾರ್ಟ್ನರ್ಸ್‌ಗಳು ಆಗಬಹುದು ಎಂದು ಐಶ್ವರ್ಯಾ ಮತ್ತು ಶಿಶಿರ್ ಗುಡ್ ನ್ಯೂಸ್ ರಿವೀಲ್ ಮಾಡಿ ಗಮನ ಸೆಳೆದಿದ್ಧಾರೆ.
ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಒಂದು ಸಂದರ್ಶನದಲ್ಲಿ ಶಿಶಿರ್ ಮತ್ತು ಐಶ್ವರ್ಯಾಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಈ ವೇಳೆ ಶಿಶಿರ್‌ಗೆ ಎಷ್ಟು ಪ್ರಪೋಸಲ್ ಬಂದಿದೆ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ, ತುಂಬಾ ಬಂದಿದೆ ಎನ್ನುತ್ತಿದ್ದಂತೆ ಐಶ್ವರ್ಯಾ ಅವರ ರಿಯಾಕ್ಷನ್ ಆಶ್ಚರ್ಯ ಮೂಡಿಸುವಂತಿತ್ತು. ಇನ್ನು ಐಶ್ವರ್ಯಾ ಅವರು, ಶಿಶಿರ್ ನನಗೆ ಉತ್ತಮ ಸ್ನೇಹಿತ. ಅವರು ಪ್ರೀತಿ ಮಾಡುತ್ತಿದ್ಧಾರೆ ಎಂದು ಹೇಳಿದಾಗ ಆ ಹುಡುಗಿ ಯಾರು ಎನ್ನುವುದನ್ನು ನಾನು ತಿಳಿದುಕೊಳ್ಳಬೇಕು ಎಂದು ಉತ್ಸಾಹದಿಂದ ಕೇಳಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications