Bigg Boss: ಬಿಗ್‌ಬಾಸ್ ಸ್ಪರ್ಧಿಗೆ ಹಾರ್ಟ್ ಅಟ್ಯಾಕ್ ಆಸ್ಪತ್ರೆಗೆ ದಾಖಲು ?!
ಬಿಗ್‌ಬಾಸ್ ಕೋಟ್ಯಾಂತರ ಜನರು ನಿತ್ಯವೂ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಬೆಳವಣಿಗೆಗಳು ಆಗುವುದಿದೆ. ಕಳೆದ ಬಾರಿ ಕನ್ನಡದ ಬಿಗ್ ಬಾಸ್ ಶೋವೊಂದರಲ್ಲಿ ಗೇಮ್‌ವೇಳೆ ಇಬ್ಬರು ಕಂಟೆಸ್ಟೆಂಟ್‌ಗಳಿಗೆ ಕಣ್ಣಿಗೆ ತೊಂದರೆಯಾಗಿತ್ತು. ಇದೀಗ ಬಿಗ್‌ಬಾಸ್ 8ನೇ ಸೀಸನ್‌ನಲ್ಲಿನ ಸ್ಪರ್ಧಿಯೊಬ್ಬರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಬಿಗ್‌ಬಾಸ್ ಕಾರ್ಯಕ್ರಮವು ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಇದೀಗ ತೆಲುಗು ಬಿಗ್‌ಬಾಸ್ 8ನೇ ಸೀಸನ್‌ನಲ್ಲಿ ಅನಿರೀಕ್ಷಿತ ಘಟನೆ ನಡೆದಿರುವುದು ವರದಿಯಾಗಿದೆ. ತೆಲುಗು ಬಿಗ್‌ಬಾಸ್‌ನ ಸ್ಪರ್ಧಿಯಾಗಿರುವ ಗಂಗವ್ವ ಎನ್ನುವವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಗಂಗವ್ವ ಅವರಿಗೆ 58 ವರ್ಷವಾಗಿದೆ. ಆದರೆ, ಇಳಿ ವಯಸ್ಸಿನಲ್ಲೂ ಅವರದ್ದು ಜೀವನುತ್ಸಾಹದ ಜೀವ.

ಗಂಗವ್ವ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರೀ ಅಭಿಮಾನಿಗಳು ಇದ್ದಾರೆ. ಎರಡೂ ರಾಜ್ಯಗಳಿಂದಲೂ ಅವರಿಗೆ ಅಪಾರ ಪ್ರಮಾಣದ ಅಭಿಮಾನಿಗಳು ಪ್ರತಿವಾರವೂ ಮತ ಹಾಕುತ್ತಿದ್ದರು. ಇದೇ ಕಾರಣಕ್ಕೆ ಅವರು ನಾಮಿನೇಟ್ ಆಗುತ್ತಿರಲಿಲ್ಲ ಸಹ. ಅಪಾರ ಪ್ರಮಾಣದ ಅಭಿಮಾನಿಗಳು ಇದ್ದಾರೆ ಎನ್ನುವ ಕಾರಣಕ್ಕೆ ಹಾಗೂ ಅವರು ಹೆಚ್ಚು ಸೇಫ್ ಆಗುತ್ತಿದ್ದರು. ಅಲ್ಲದೇ ಪ್ರೇಕ್ಷಕರನ್ನು ಮನರಂಜಿಸುತ್ತಿದ್ದರು. ಹಳ್ಳಿಯ ಹಿನ್ನೆಲೆಯಿಂದಲೇ ಗಂಗವ್ವ ಅವರು ಬಂದಿದ್ದರೂ, ಮನರಂಜನೆಗೆ ಕಡಿಮೆ ಇರಲಿಲ್ಲ.
ಗಂಗವ್ವ ಅವರಿಗೆ ಅನಾರೋಗ್ಯ: ಇನ್ನು ಗಂಗವ್ವ ಅವರಿಗೆ ವಯಸ್ಸಾಗಿದೆ. ಅವರು ಹಳ್ಳಿಯಲ್ಲೇ ಬೆಳೆದವರು. ಸಹಜವಾಗಿಯೇ ಅವರಿಗೆ ಬಿಗ್‌ಬಾಸ್ ಮನೆಯಲ್ಲಿನ ವಾತಾವರಣ ಹೊಂದಾಣಿಕೆಯಾಗುತ್ತಿರಲಿಲ್ಲ ಎನ್ನಲಾಗಿದೆ. ಬಿಗ್‌ಬಾಸ್‌ನಲ್ಲಿ ಇರುತ್ತಿದ್ದ ಎಸಿಯಿಂದ ಸಮಸ್ಯೆ ಆಗುತ್ತಿತ್ತು. ಅಲ್ಲದೇ ಬಿಗ್‌ಬಾಸ್‌ನಲ್ಲಿನ ಗೇಮ್‌ಗಳು ಹಾಗೂ ಟಾಸ್‌ಗಳಿಂದಲೂ ಅವರು ಆಯಾಸಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ನಿದ್ದೆ ಹೊಂದಾಣಿಕೆಯಾಗದೆಯೂ ಆರೋಗ್ಯ ಏರುಪೇರಾಗುತ್ತಿತ್ತು. ಈಚೆಗೆ ಅವರಿಗೆ ಆಗ್ಗಾಗ್ಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದವು ಎಂದೂ ಹೇಳಲಾಗುತ್ತಿದೆ.
ಬಿಗ್‌ಬಾಸ್ ಪ್ರಾರಂಭವಾದ 7ನೇ ವಾರದಲ್ಲಿ ಅವರ ಆರೋಗ್ಯ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ವೈದ್ಯರ ಸೂಚನೆಯಂತೆ ಅವರನ್ನು ಬಿಗ್‌ಬಾಸ್ ಮನೆಯಿಂದ ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು. ಇನ್ನು ಬಿಗ್‌ಬಾಸ್ ಸೀಸನ್ 8ಕ್ಕೆ ವೈಲ್ಡ್ ಕಾರ್ಡ್ ಮೂಲಕ ಗಂಗವ್ವ ಅವರು ಬರಲಿದ್ದಾರೆ ಎಂದಾಗಲೇ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇನ್ನು ಗಂಗವ್ವ ಅವರಿಗೆ ತಡರಾತ್ರಿ ಹಾರ್ಟ್ ಅಟ್ಯಾಕ್ ಆಗಿದೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಮನೆಗೆ ಬಂದಿರುವ ವೈದ್ಯರ ತಂಡವು ಗಂಗವ್ವ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ನಿಜವಾಗಿಯೂ ಆಗಿದೆಯೇ ಇಲ್ಲವೇ ಎನ್ನುವ ಬಗ್ಗೆ ಕೆಲವು ಪ್ರೇಕ್ಷಕರು ಸಹ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಬಿಗ್ ಬಾಸ್ ಟಾಸ್ಕ್ ಆಗಿರಬಹುದು. ಇದು ಕೇವಲ ಗಿಮಿಕ್ ಎಂದೂ ಕೆಲವರು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ ಎಂದು ಹೇಳಲಾಗಿದೆ.
ಯಾರು ಈ ಗಂಗವ್ವ: ಗಂಗವ್ವ ಅವರು ಗ್ರಾಮೀಣ ಪ್ರದೇಶದಿಂದ ಬಂದಿದ್ದಾರೆ. ತೆಲಂಗಾಣದ ಮೂಲದವರಾಗಿದ್ದಾರೆ. ಇವರ ಭಾಷೆಯ ಕಾರಣಕ್ಕೆ ಅಪಾರ ಅಭಿಮಾನ ಬಳಗ ಇದೆ. ಇಸ್ಮಾರ್ಟ್ ಶಂಕರ ಮೂವಿಯಲ್ಲೂ ಇವರ ನಟಿಸಿದ್ದಾರೆ. ಯೂಟ್ಯೂಬ್‌ಮೂಲಕ ಇವರು ಫೇಮಸ್ ಆಗಿದ್ದರು.












Click it and Unblock the Notifications