Bigg Boss: ಅಕ್ಕಾ ನಿನ್‌ ಗಂಡ ಹೆಂಗಿರಬೇಕು? ಉತ್ತರ ಕೊಟ್ಟ ಐಶ್ವರ್ಯ ಸಿಂಧೋಗಿ

ಬಿಗ್‌ಬಾಸ್‌ ಮನೆ ಮಗಳು ಐಶ್ವರ್ಯ ಸಿಂಧೋಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ಐಶ್ವರ್ಯ ಅವರ ವೈಯಕ್ತಿಕ ಜೀವನ, ಅವರ ಮದುವೆ ವಿಚಾರಗಳು ಹೆಚ್ಚು ಚರ್ಚೆಯಾಗುತ್ತಿವೆ. ಸಾಕಷ್ಟು ಸಂದರ್ಶನಗಳಲ್ಲಿ ಐಶ್ವರ್ಯ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಐಶ್ ಮದುವೆಯಾಗುವ ಹುಡುಗ ಹೇಗಿರಬೇಕು ಅನ್ನೋ ಬಗ್ಗೆ ಸಂದರ್ಶನವೊಂದರಲ್ಲಿ ಹೇಳುವ ಮೂಲಕ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದ್ದಾರೆ. ಹಾಗಾದರೆ ತಮ್ಮನ್ನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಐಶ್ವರ್ಯ ಹೇಳಿದ್ದಾರೆ ಎಂದು ತಿಳಿಯೋಣ.

ಬಿಗ್‌ಬಾಸ್‌ ಇತಿಹಾಸದಲ್ಲಿ ಒಬ್ಬ ಸ್ಪರ್ಧಿಯನ್ನು ಅತ್ಯಂತ ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದು ಅಂದರೆ ಅದು ಐಶ್ವರ್ಯ ಸಿಂಧೋಗಿ ಅವರನ್ನ. 'ಹೋಗಿ ಬಾ ಮಗಳೆ' ಎಂದು ಹೇಳುವ ಮೂಲಕ ಐಶ್ವರ್ಯ ಅವರನ್ನು ಬಿಗ್‌ಬಾಸ್‌ ಮನೆಯಿಂದ ಕಳುಹಿಸಿಕೊಟ್ಟಿದ್ದಾರೆ. ಹೀಗಾಗಿ ಐಶ್ವರ್ಯ ಅವರು ಬಿಗ್‌ಬಾಸ್‌ ಮನೆ ಮಗಳು ಆಗಿದ್ದಾರೆ. ಅವರನ್ನು ಬಿಗ್‌ಬಾಸ್‌ ಮನೆ ಮಗಳು ಎಂದೇ ಎಲ್ಲಾರು ಕರೆಯಲು ಶುರು ಮಾಡಿದ್ದಾರೆ.

bigg boss aishwarya sindhogi said her dream boy qualities

ಇನ್ನೂ ಬಿಗ್‌ಬಾಸ್‌ ತುಂಬಾ ಪ್ರೀತಿಯಿಂದ ತಮ್ಮನ್ನು ಬಿಳ್ಕೊಟ್ಟಿದ್ದಕ್ಕೆ ಐಶ್ವರ್ಯ ಕೂಡ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಬಿಗ್‌ಬಾಸ್‌ನಲ್ಲಿ ತಾವು ಗೆಲುವು ಸಾಧಿಸಿದಷ್ಟೇ ಸಂತೋಷ ವ್ಯಕ್ತಪಡಿಸಿದ್ದಾರೆ. ಹೀಗೆ ಬಿಗ್‌ಬಾಸ್‌ ಮನೆ ಮಗಳಾದ ಐಶ್ವರ್ಯ ಅವರಿಗೆ ತುಂಬಾ ಜನ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ? ಹುಡುಗ ಯಾರು? ಹೇಗಿರಬೇಕು ಎಂದು ಕೇಳಲು ಶುರು ಮಾಡಿದ್ದಾರೆ.

ಐಶ್ವರ್ಯ ಅವರಿಗೆ ತಂದೆ-ತಾಯಿ ಇಬ್ಬರೂ ಕೂಡ ಇಲ್ಲ. ಈ ಸ್ಥಾನವನ್ನು ಬಿಗ್‌ಬಾಸ್‌ ಮನೆ ಹೊತ್ತುಕೊಂಡು ಐಶ್ವರ್ಯ ಅವರನ್ನು ಬಿಳ್ಕೊಟ್ಟಿದೆ. ಅಲ್ಲದೆ ಐಶ್ವರ್ಯ ಅವರಿಗೆ ಬಿಗ್‌ಬಾಸ್‌ ಮನೆಯಲ್ಲಿ ಕುಟುಂಬ ಸದಸ್ಯರು ಕೂಡ ಸಿಕ್ಕಿದ್ದಾರೆ. ಇದೇ ಸಂತೋಷದಲ್ಲಿ ಹೊರ ಬಂದ ಐಶ್ವರ್ಯ ಅವರು ಸಂದರ್ಶನವೊಂದರಲ್ಲಿ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಹೇಳಿಕೊಂಡಿದ್ದಾರೆ. ಫಿಲ್ಮಿಬೀಟ್ ಕನ್ನಡ ನಡೆಸಿದ ಸಂದರ್ಶನವೊಂದರಲ್ಲಿ ಐಶ್ವರ್ಯ ಅವರು ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಹೇಳಿಕೊಂಡಿದ್ದಾರೆ.

ನನ್ನ ಮದುವೆ ಆಗೋ ಹುಡುಗ ಹೇಗಿರಬೇಕು ಅಂದರೆ...

ನೀವು ಇಷ್ಟಪಡುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಗೆ ಬಿಗ್‌ಬಾಸ್‌ ಸ್ಪರ್ಧಿ ಐಶ್ವರ್ಯ ಸಿಂಧೋಗಿ ಉತ್ತರ ಕೊಟ್ಟಿದ್ದು ಹೀಗೆ- 'ನನಗೆ ತುಂಬಾ ನಿರೀಕ್ಷೆಗಳು ಇಲ್ಲ. ನಾನು ಯಾವ ಥರ ಇದಿನೋ ಅದೇ ರೀತಿ ನನ್ನನ್ನು ಸ್ವೀಕಾರ ಮಾಡಿದರೆ ಸಾಕು. ನನ್ನನ್ನು ಅಪ್ಪ-ಅಮ್ಮ ತುಂಬಾ ಮುದ್ದು ಮಾಡಿ ಬೆಳೆಸಿದ್ದಾರೆ. ಅದೇ ಥರ ನನ್ನ ಹುಡುಗ ನನ್ನ ಅಷ್ಟೇ ಕೇರ್ ತಗೊಂಡು, ಮುದ್ದು ಮಾಡಿ ನೋಡಿಕೊಳ್ಳಬೇಕು. ನಾನು ಹೇಳೋಕ್ಕಿಂತ ಮುಂಚೆ ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಇಷ್ಟೇ ನಿರೀಕ್ಷೆ ನನ್ನ ಹುಡುಗನಲ್ಲಿ ನನಗೆ ಇರೋದು' ಎಂದು ಐಶ್ವರ್ಯ ಹೇಳಿದರು.

ಹುಡುಗನಲ್ಲಿ ಇದೆಲ್ಲಾ ಗುಣ ಇದೆ ಅಂತ ಹೇಗೆ ಗೊತ್ತಾಗುತ್ತೆ ಅನ್ನೋ ಪ್ರಶ್ನೆಗೆ ಐಶ್ವರ್ಯ, 'ಆ ಹುಡುಗನ ಪರಿಚಯ ಆದಾಗ, ಆ ಹುಡುಗನ ಜೊತೆ ಓಡಾಡಿದಾಗ ಎಲ್ಲವೂ ಗೊತ್ತಾಗುತ್ತೆ. ಸಿಕ್ಸ್ ಸೆನ್ಸ್ ಅಂತ ಇರುತ್ತೆ. ಆ ವ್ಯಕ್ತಿಯನ್ನು ಅರ್ಥ ಮಾಡಿಕೊಂಡಾಗ ಗೊತ್ತಾಗುತ್ತದೆ. ಆ ವ್ಯಕ್ತಿಯನ್ನು ನೋಡಿದಾಗ ಆ ವೈಬ್ ಆಗುತ್ತದೆ' ಎಂದು ಐಶ್ವರ್ಯ ಹೇಳಿದರು.

ಒಟ್ಟಿನಲ್ಲಿ ಬಿಗ್‌ಬಾಸ್‌ ಮನೆ ಮಗಳು ಐಶ್ವರ್ಯ ಅವರು ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಹೇಳಿಕೊಂಡಿದ್ದು ಸದ್ಯಕ್ಕೆ ಮದುವೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಇದರಿಂದ ಐಶ್ವರ್ಯ ಅವರಿಗೆ ಯಾವಾಗ? ಯಾರನ್ನ ನೋಡಿದರೆ ವೈಬ್ ಆಗುತ್ತೆ? ಅವರ ಕನಸಿನ ಹುಡುಗ ಯಾರು ಅಂತ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+