Shivanna: ಥಿಯೇಟರ್‌ ಮುಂದೆ ಡಾಲಿ ಮಾಸ್‌ ಡಾನ್ಸ್... ಲಾಂಗು & ಮಚ್ಚು ಭರಾಟೆ, ಇಲ್ಲಿದೆ ಭೈರತಿ ರಣಗಲ್‌ ಸೆಲೆಬ್ರೇಷನ್!‌

ಕನ್ನಡ ನಾಡಿನ ಸಿನಿಮಾ ಲೋಕದ ಲೆಜೆಂಡ್ & ವರನಟ ಡಾ. ರಾಜ್‌ಕುಮಾರ್ ಮಗನಾದ ಡಾ. ಶಿವರಾಜ್‌ಕುಮಾರ್ ಮತ್ತೊಮ್ಮೆ ತಮ್ಮ ಖದರ್ ತೋರಿಸಿದ್ದಾರೆ. ಅಲ್ಲದೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ತಾವು ಯಾಕೆ ಬಾಸ್? ಅನ್ನೋದನ್ನ ಮತ್ತೊಮ್ಮೆ ತೋರಿಸಿದ್ದಾರೆ ನಟ ಶಿವಣ್ಣ. ಇದನ್ನ ನೋಡಿ ಅಭಿಮಾನಿಗಳು ಸುಮ್ಮನೆ ಇರ್ತಾರಾ? ಇಲ್ಲ ಇಲ್ಲ, ಸಾಧ್ಯವೇ ಇಲ್ಲ. ಆ ಕಾಲದಿಂದ ಹಿಡಿದು ಈ ಕಾಲದ ತನಕ... ಎಲ್ಲಾ ಕಾಲದಲ್ಲೂ ಶಿವಣ್ಣನೇ ಗ್ರೇಟ್ ಅಂತಾ ನೇರ, ನೇರ ಲಾಂಗ್ ಹಿಡಿದು ಥಿಯೇಟರ್ ಅಂಗಳಕ್ಕೆ ನುಗ್ಗಿಯೇ ಬಿಟ್ಟಿದ್ದಾರೆ...

ಡಾ... ಡಾ... ಡಾ... ಡಾ. ರಾಜ್‌ಕುಮಾರ್ ಅಂತಾ ಅಭಿಮಾನಿಗಳು ಆನಂದ ತುಂಬಿದ ಕಣ್ಣುಗಳಿಂದ ವರನಟ ಡಾ. ರಾಜ್‌ಕುಮಾರ್ ಅವರ ಬಗ್ಗೆ ಘೋಷಣೆ ಕೂಗುತ್ತಿದ್ದರು. ಅದು ಈಗ ಡಾ. ಶಿವರಾಜ್‌ಕುಮಾರ್ ಅವರ ಪಾಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಇಲ್ಲದ ನೋವಿನ ನಡುವೆ ಕೂಡ 'ಭೈರತಿ ರಣಗಲ್‌' ಸಿನಿಮಾ ನೋಡಿದ ಫ್ಯಾನ್ಸ್ ಇದೀಗ ಸಿಕ್ಕಾಪಟ್ಟೆ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದ್ರೆ ಥಿಯೇಟರ್ ಒಳಗೆ & ಹೊರಗೆ ಹೇಗಿತ್ತು ಸೆಲೆಬ್ರೇಷನ್? ವಿಡಿಯೋ ನೋಡೋಣ ಬನ್ನಿ.

Bhairathi Ranagal Movie Is Celebrated By The Shivarajkumar Fans In Their Own Way

'ಭೈರತಿ ರಣಗಲ್‌' ಅಬ್ಬರಕ್ಕೆ ಥಿಯೇಟರ್...

ವಯಸ್ಸು 61, ಆದ್ರೂ ನೋಡೋಕೆ ಯಂಗ್ & ಎನೆರ್ಜೆಟಿಕ್. ಮಾಡಿರೋ ಸಿನಿಮಾ ನೂರಾರು ಹೀಗಿದ್ರೂ ಶಿವಣ್ಣನ ಖದರ್ ಬದಲಾಗಿಲ್ಲ. ಹೀಗೆ, ದೊಡ್ಮನೆ ಹಿರಿಯ ಮಗ ಶಿವರಾಜ್‌ಕುಮಾರ್ ಹಲವು ದಶಕದಿಂದಲು ಕನ್ನಡ ಸಿನಿ ಪ್ರಿಯರನ್ನ ರಂಜಿಸಿ ಮನಸ್ಸನ್ನ ಗೆದ್ದಿದ್ದಾರೆ. ಆಕ್ಷನ್ ಆದ್ರೂ ಸೈ, ಪಕ್ಕಾ ಆಕ್ಟಿಂಗ್‌ಗೂ ಜೈ ಅಂತಿದ್ದಾರೆ ಶಿವಣ್ಣ. ಹೀಗಿದ್ದಾಗಲೇ 'ಮಫ್ತಿ' ಪ್ರಿಕ್ವೆಲ್ 'ಭೈರತಿ ರಣಗಲ್' ಸಿನಿಮಾ ಇಂದು ಅದ್ಧೂರಿಯಾಗಿ ರಿಲೀಸ್‌ ಆಗಿದ್ದು, ದಾಖಲೆಗಳು ಧೂಳ್ ಧೂಳ್ ಆಗಿವೆ!

ಥಿಯೇಟರ್‌ಗೆ ಮಚ್ಚು & ಲಾಂಗ್ ಎಂಟ್ರಿ!

ಡಾ. ಶಿವರಾಜ್‌ಕುಮಾರ್ ಅನ್ನೋದು ಅಫೀಷಿಯಲ್ ಹೆಸರು ಅಷ್ಟೇ, ಆದರೆ ಶಿವಣ್ಣ ಅಂತಾ ಕರೆದಾಗ ಮಾತ್ರ ಅಭಿಮಾನಿಗಳಿಗೆ ತೃಪ್ತಿ ಅನಿಸೋದು. ಹುಸಿ ಮುನಿಸು, ಬೈಗುಳ, ಕೆಲವು ಬಾರಿ ಸಣ್ಣ ಏಟು ಹೀಗೆ ಅಭಿಮಾನಿಗಳ ಜೊತೆಗೆ ಶಿವಣ್ಣ ಎಲ್ಲಾ ರೀತಿಯಲ್ಲೂ ಇರುತ್ತಾರೆ.

ಯಾವುದೇ ಮುಚ್ಚುಮರೆ ಇಲ್ಲದೆ ನೇರವಾಗಿ ಮಾತನಾಡುವ ಇವರನ್ನ ಕಂಡರೆ ಕೋಟಿ, ಕೋಟಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ. ಹೀಗಿದ್ದಾಗ ಇಂದು ಶಿವಣ್ಣ ಅಭಿನಯದ ಬಹು ನಿರೀಕ್ಷಿತ 'ಭೈರತಿ ರಣಗಲ್‌' ಸಿನಿಮಾ ರಿಲೀಸ್ ಆಗಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿ ಅಭಿಮಾನಿಗಳು ಅಬ್ಬರಿಸಿದ್ದಾರೆ.

ಜಗತ್ತಿನಾದ್ಯಂತ 'ಭೈರತಿ ರಣಗಲ್‌' ಅಬ್ಬರ

ಹ್ಯಾಟ್ರಿಕ್ ಹೀರೋ ಮತ್ತು ದೊಡ್ಮನೆ ದೊಡ್ಮಗ ನಟ ಶಿವರಾಜ್‌ ಕುಮಾರ್ ಸಾಲು, ಸಾಲು ಹಿಟ್ ಸಿನಿಮಾಗಳನ್ನ ಕನ್ನಡಿಗರ ಎದುರು ಇಡುತ್ತಿದ್ದಾರೆ. ಇದೇ ರೀತಿ ಮೊನ್ನೆ ಮೊನ್ನೆ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ರು ಶಿವರಾಜ್‌ ಕುಮಾರ್. ನಟ ಶಿವಣ್ಣ ಈಗಲೂ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೇಡಿಕೆ ಇರುವ ನಟ. ಯಾವ ಪಾತ್ರ ಕೊಟ್ಟರೂ ನೀರು ಕುಡಿದಷ್ಟು ಸುಲಭವಾಗಿ ಮುಗಿಸಿ, ಸೂಪರ್ ಹಿಟ್ ಮಾಡಿಸುತ್ತಾರೆ ನಟ ಶಿವಣ್ಣ ಅಂತಾರೆ ಅವರ ಅಭಿಮಾನಿಗಳು.

ಅಲ್ಲದೆ ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಗೆ ಕೂಡ ಕನ್ನಡದ ನಟ ಶಿವಣ್ಣ ಬೇಕೆ ಬೇಕು ಎನ್ನುವ ವಾತಾವರಣ ನಿರ್ಮಾಣ ಆಗಿದೆ. ಅದರಲ್ಲೂ ಹೊರ ರಾಜ್ಯದ ಫ್ಯಾನ್ಸ್ ಕೂಡ ಡಾ. ಶಿವರಾಜ್‌ಕುಮಾರ್ ಅವರನ್ನ ಶಿವಣ್ಣ ಅಂತಾ ಬಾಯಿತುಂಬ ಕರೆಯುತ್ತಾರೆ. ಹೀಗಿದ್ದಾಗಲೇ 'ಭೈರತಿ ರಣಗಲ್‌' ಸಿನಿಮಾಗೆ ಜಗತ್ತಿನಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಅಲ್ಲದೆ ಹೀಗೆ ಶಿವಣ್ಣನ ಸಿನಿಮಾವನ್ನ ಎಲ್ಲರೂ ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+