Bhairathi Ranagal Review: ಕಿತ್ತೊದ್ವು ಸ್ಕ್ರೀನ್, ಥಿಯೇಟರ್‌ಗಳಲ್ಲಿ ದೀಪಾವಳಿ, ಶಿವಣ್ಣನ ಎಂಟ್ರಿಗೆ ಬೆಚ್ಚಿಬಿದ್ದ ಇಂಡಿಯಾ
ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಬೈರತಿ ರಣಗಲ್' ಸಿನಿಮಾ ಇಂದು ಅದ್ದೂರಿಯಾಗಿ ತೆರೆಕಂಡಿದೆ. ಮೊದಲ ಶೋನದಲ್ಲೇ ಶಿವರಾಜಕುಮಾರ್ ಅಭಿಮಾನಿಗಳಿಗೆ ಸಿನಿಮಾ ಖುಷಿ ತಂದಿದೆ. ಶಿವಣ್ಣ ಅಭಿನಯವನ್ನು ಜನ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಥಿಯೇಟರ್ ಬಳಿ ಅಭಿಮಾನಿಗಳ ಹಿಂಡೆ ಜಮಾಯಿಸಿದ್ದು ಶಿವಣ್ಣ ಬಿಗ್ ಬ್ಯಾನರ್‌ಗಳಿಗೆ ಹೂವು ಹಾಗೂ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸುತ್ತಿದ್ದಾರೆ.
ಇಂದು ಬೆಳಿಗ್ಗೆ ಮೊದಲ ಶೋನಲ್ಲಿ ಸಿನಿಮಾ ವೀಕ್ಷಣೆ ಮಾಡಿದ ಅಭಿಮಾನಿಗಳು, ಶಿವಣ್ಣ ಚಿತ್ರ ಇರುವ ಬಾವುಟ ಹಾಗೂ ಫೋಟೋ ಹಿಡಿದು ಶಿಳ್ಳೆ ಹೊಡೆದು, ಕುಣಿದು ಕುಪ್ಪಳಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿರುವುದು ಕಂಡು ಬಂದಿದೆ. ಸದ್ಯ ಅಭಿಮಾನಿಗಳು ಸಿನಿಮಾ ಮಂದಿರಗಳಲ್ಲಿ ಸಿನಿಮಾ ನೋಡಿ ಸಂಭ್ರಮಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ.

ಸಿನಿಮಾ ನೋಡಿದ ಜನ ಚಿತ್ರಕಥೆ ಹಾಗೂ ಶಿವಣ್ಣ ಅಭಿನಯ ತಮಗೆ ಖುಷಿ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಶಿವಣ್ಣನಿಗೆ ಜೈಕಾರ ಹಾಕುತ್ತಿರುವ ದೃಶ್ಯಗಳು ಕಂಡು ಬಂದಿವೆ. ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಮೆಚ್ಚಿಕೊಂಡ ಫ್ಯಾನ್ಸ್ ಸಿನಿಮಾದ ಕ್ಲಿಪ್‌ಗಳನ್ನು ಹಂಚಿಕೊಂಡಿದ್ದಾರೆ.
1st half done emotional, perfect mass mass 💥💥 Paisa vasool💥🔥🔥 En guru movie 🥵🥵
— Jackiee❤️ ᵇʰᵃⁱʳᵃᵗʰⁱ ʳᵃⁿᵃᵍᵃˡ (@IamAbhi_dvg) November 15, 2024
1st half 5star ge 10star aste.. double rating🔥💥
Shivanna screen presence>>>>>🥵🔥#BhairatiRanagalFdfs #BhairatiRanagal #DrShivaRajkumar #Shivanna pic.twitter.com/owa93rufUk
ಸಿನಿಮಾ ಬಗ್ಗೆ ನೆಟ್ಟಿಗರೊಬ್ಬರು ಹೀಗೆ ಬರೆದಿದ್ದಾರೆ.
ಚೆನ್ನೈನಲ್ಲಿ ಇದ್ದಾಗ ಸಿಂಬು ನಟನೆಯ "ಪಾತು ತಲಾ" ಅನ್ನೋ ತಮಿಳು ಸಿನಿಮಾ ಬಿಡುಗಡೆ ಆಗಿತ್ತು. ಇದು "ಮಫ್ತಿ" ಸಿನಿಮಾದ ರಿಮೇಕ್. ತೀರಾ ಅಷ್ಟಾಗಿ ಸದ್ದು ಮಾಡದ ಆ ತಮಿಳು ಸಿನಿಮಾ ಬಗ್ಗೆ ನನ್ನ ಸಹೋದ್ಯೋಗಿಗಳು ಮಾತಾಡುತ್ತಿದ್ದಾಗ ಮೂಲ ಚಿತ್ರ "ಮಫ್ತಿ" ನೋಡಿ ಅಂತ ನಾನೇ ಖುದ್ದು ಸಲಹೆ ಕೊಟ್ಟಿದ್ದೆ. ಮಫ್ತಿ ಸಿನಿಮಾ ನೋಡಿ ಆ ನನ್ನ ತಮಿಳು ಗೆಳೆಯರು ತೀರಾ ತಲೆಕೆಡಿಸಿಕೊಂಡಿದ್ದರು. ಆದರೆ ದುರಾದೃಷ್ಟಕ್ಕೆ ಶಿವಣ್ಣ ಅಭಿನಯದ ಯಾವುದೇ ಸಿನಿಮಾಗಳನ್ನು ನಮ್ಮ ಕನ್ನಡದ ಮಹಾನ್ ನಿರ್ಮಾಪಕರು ಹಾಗು ವಿತರಕರು ಹೊಸೂರು ಬಾರ್ಡರ್ ದಾಟಿಸುವ ಪ್ರಯತ್ನ ಮಾಡಲಿಲ್ಲ.
Barii Andre Barii Shivanna💙
— Hitesh VeSa ᴮʰᵃᶦʳᵃᵗʰᶦ ᴿᵃⁿᵃᵍᵃˡ (@Vesahitesh) November 14, 2024
Team Dr.ShivuBrigades ❤️🔥#BhairathiRanagal Mania 🔥#kingShivanna 👑 #Shivanna #ShivarajKumar #DrShivarajKumar pic.twitter.com/uRrl9NEZnk
ಒಳ್ಳೆ ಸಮಯದಲ್ಲಿ "ಜೈಲರ್" ಸಿನಿಮಾ ಬಿಡುಗಡೆ ಆಯ್ತು. ಚೆನ್ನೈನ ಹ್ರದಯಭಾಗದಲ್ಲಿರುವ "ಕಾಶಿ" ಅನ್ನೋ ಥಿಯೇಟರ್ ನಲ್ಲಿ ರಜನಿಕಾಂತ್ ಅಭಿನಯದ "ಜೈಲರ್" ಸಿನಿಮಾ ಬಿಡುಗಡೆ ಆಗಿತ್ತು. ರಜನಿ ಸಿನಿಮಾ ಅಂದ್ರೆನೇ ಹಬ್ಬದ ವಾತಾವರಣ. ಆದರೆ ಮೊದಲೇ ದಿನದ ಮೊದಲನೇಯ ಪ್ರದರ್ಶನ ಮುಗಿಸುವಾಗ ಶಿವಣ್ಣ ರಜನಿಕಾಂತ್ ಅಂತ ಸೂಪರ್ ಸ್ಟಾರ್ ಅನ್ನೇ ಸೈಡ್ ಹೊಡೆದಾಗಿತ್ತು.ಕುತೂಹಲ ಜಾಸ್ತಿ ಆಗಿ "ಕ್ರೋಮ್ ಪೇಟ್" ಕಡೆ ಇರುವ "ವೆಟ್ರಿ" ಥಿಯೇಟರ್ ನಲ್ಲಿ ನೈಟ್ ಶೋ ನೋಡಿದಾಗ ತಮಿಳರು ಶಿವಣ್ಣನನ್ನು ಸೆಲೆಬ್ರೇಟ್ ಮಾಡೋಕೆ ಶುರು ಮಾಡಿದ್ರು. ಕ್ಲೈಮ್ಯಾಕ್ಸ್ ಸೀನಲ್ಲಿ ಶಿವಣ್ಣ ಲಾಂಗ್ ಹಿಡ್ಕೊಂಡ್ ಬರುವಾಗ ಅನೇಕರು ಹುಚ್ಚೆದ್ದು ಕುಣೀತಾ ಇದ್ರು. ವೆಟ್ರಿ ಥಿಯೇಟರ್ ಅತೀ ದೊಡ್ಡ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಗಿತ್ತು... ಆದರೆ ಶಿವಣ್ಣನಿಗೆ potential ಇದ್ರು ನಮ್ಮವರು ಬಳಸಿಕೊಳ್ತಾ ಇಲ್ಲ ಅನ್ನೋ ಅತೀ ದೊಡ್ಡ ಕೊರಗು ಈಗಲೂ ಕಾಡ್ತಾ ಇದೆ...
ಶಿವಣ್ಣನ potential ಅರ್ಥ ಮಾಡಿಕೊಂಡ ಕೆಲವೇ ಕೆಲವು ನಿರ್ದೇಶಕರುಗಳಲ್ಲಿ "ನರ್ತನ್" ಕೂಡ ಒಬ್ಬರು. ಅದಕ್ಕೆ "ಮಫ್ತಿ" ಸಿನಿಮಾವೇ ಸಾಕ್ಷಿ. ನನ್ನಂತಹ ಕೋಟ್ಯಂತರ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದಂತಹ ಮಹಾತ್ವಾಕಾಂಕ್ಷಿಯ ಸಿನಿಮಾ "ಭೈರತಿ ರಣಗಲ್" ಇವತ್ತು ತೆರೆ ಕಾಣುತ್ತಿದೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಗೆಳೆಯರು ಹೇಳುವ ಪ್ರಕಾರ ಇದು ಶಿವಣ್ಣನ ಕೆರಿಯರಲ್ಲೇ ಅತೀ ದೊಡ್ಡ ಸಿನಿಮಾ ಆಗಲಿದೆ ಅಂತೆ. ಶಿವಣ್ಣನ potential ಕಂಡು ಭಾರತೀಯ ಚಿತ್ರರಂಗವೇ ಬೆರಗಾಗಲಿ. ಆ ಕನಸನ್ನು "ಭೈರತಿ ರಣಗಲ್" ಪೂರೈಸುತ್ತಾನೆ ಅನ್ನೋ ನಂಬಿಕೆ ಬಲವಾಗುತ್ತಾ ಇದೆ. ಹಾಗಾಗಿ ಇವತ್ತು ನಮಗೆ "ರಣಗಲ್ ಡೇ"...
ಮೊದಲ ದಿನವೇ ಭರ್ಜರಿ ಗಳಿಕೆ
ವರದಿ ಪ್ರಕಾರ ಬೈರತಿ ರಣಗಲ್ ಸಿನಿಮಾ ಮೊದಲ ದಿನವೇ ಎರಡರಿಂದ ಐದು ಕೋಟಿ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಶುಕ್ರವಾರ ತೆರೆ ಕಂಡ ಸಿನಿಮಾ ಭರ್ಜರಿ ಗಳಿಕೆ ಕಂಡಿದೆ. ಇನ್ನೂ ವಾರಾಂತ್ಯದಲ್ಲಿ ಸಿನಿಮಾ ಇನ್ನಷ್ಟು ಗಳಿಸಲಿದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಸಿನಿಮಾಗಳು ಶುಕ್ರವಾರ ತೆರೆಕಾಣುತ್ತವೆ. ಇದಕ್ಕೆ ಕಾರಣ ವಾರಾಂತ್ಯದಲ್ಲಿ ಬಿಡುವಿನ ಸಮಯ ಹೆಚ್ಚಾಗಿರುತ್ತದೆ. ಹೀಗಾಗಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬಂದು ಸಿನಿಮಾ ನೋಡ್ತಾರೆ. ಹೀಗಾಗಿ ಶುಕ್ರವಾರ ತೆರೆಕಂಡ ಬೈರತಿ ರಣಗಲ್ ಸಿನಿಮಾ ಶನಿವಾರ ಹಾಗೂ ಭಾನುವಾರವೂ ಹೆಚ್ಚಿನ ಆದಾಯ ಗಳಿಸುವ ನಿರೀಕ್ಷೆ ಇದೆ. ಇನ್ನೂ ಸಿನಿಮಾಕ್ಕೆ 9.6 ರೇಟಿಂಗ್ ಸಿಕ್ಕಿದೆ. ಇದರಿಂದಾಗಿ ಜನರಿಗೆ ಸಿನಿಮಾ ಇಷ್ಟವಾಗಿರುವುದು ಸ್ಪಷ್ಟವಾಗಿದೆ.
ಸಿನಿಮಾದಲ್ಲಿ ಯಾರೆಲ್ಲಾ ನಟಿಸಿದ್ದಾರೆ?
ಅಂದಹಾಗೆ ಬೈರತಿ ರಣಗಲ್ ಸಿನಿಮಾದಲ್ಲಿ ರುಕ್ಮಿಣ ವಸಂತ್, ಛಾಯಾ ಸಿಂಗ್, ಮಧು ಗುರುಸ್ವಾಮಿ, ರಾಹುಲ್ ಬೋಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುವೆಚ್ಚದ ಈ ಸಿನಿಮಾ ಕನ್ನಡದ ಮೊದಲ ಪ್ರೀಕ್ವೆಲ್ ಸಚಿತ್ರವಾಗಿದೆ. ಭೈರತಿ ರಣಗಲ್ ಚಿತ್ರದಲ್ಲಿ ಮಫ್ತಿ ಚಿತ್ರದ ಪ್ರೀಕ್ವೆಲ್ ಕಥೆ ಇದೆ.
1996 ನವೆಂಬರ್ 15ರಂದು ಶಿವಣ್ಣ ಅಭಿನಯದ ಹಿಟ್ ಸಿನಿಮಾ 'ಜನುಮದ ಜೋಡಿ' ಸಿನಿಮಾ ತೆರೆ ಕಂಡಿತ್ತು. ಇದೇ ದಿನಾಂಕದಂದು ಬೈರತಿ ರಣಗಲ್ ಸಿನಿಮಾ ಕೂಡ ರಿಲೀಸ್ ಮಾಡಲಾಗಿದೆ. ನರ್ತನ್ ನಿರ್ದೇಶನದ ಈ ಸಿನಿಮಾ ನೋಡಿದ ಜನ ಹಿಟ್ ಆಗೋದು ಗ್ರಾರಂಟಿ ಎನ್ನುತ್ತಿದ್ದಾರೆ.
-
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ -
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Dhurandhar 2: ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು











Click it and Unblock the Notifications