BBK 12: ಗಂಡ ಮನೆ ಕೆಲಸ ಮಾಡಿದ್ರೆ ಹೆಂಡತಿ ಗುಲಾಮ ಅಂತಾರೆ: ಮಾಳು ಮಾತಿಗೆ ಸಿಟ್ಟಾದ ಸುದೀಪ್
Bigg Boss Kannada 12: ಬಿಗ್‌ಬಾಸ್ ಮನೆಯಲ್ಲಿ ಮೊದಲ ವಾರದ ಎಲಿಮಿನೇಷನ್ ನಡೆದಿದೆ. ಇದಕ್ಕೂ ಮುನ್ನ ಕಿಚ್ಚ ಸುದೀಪ್ ಮನೆಮಂದಿಯನ್ನು ತಮ್ಮದೇ ಸ್ಟೈಲಲ್ಲಿ ಮಾತನಾಡಿಸಿದ್ದಾರೆ. ಚರ್ಚೆ ನಡುವೆ "ಮನೆ ಕೆಲಸ ಮಾಡುವ ಗಂಡಸು ಹೆಂಡತಿಯ ಗುಲಾಮ ಅಂತ ಕರೀತಾರೆ" ಎಂದು ಮಾಳು ನಿಪನಾಳ ತಮ್ಮ ಹಳ್ಳಿಯ ಪದ್ಧತಿಯ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ವಿರೋಧ ವ್ಯಕ್ತಪಡಿಸಿದ್ದು, ಮಾಳುಗೆ ಬುದ್ಧಿವಾದ ಹೇಳಿದ್ದಾರೆ.
́́'ನಮ್ಮ ಹಳ್ಳಿ ಕಡೆ ಗಂಡಸು ಮನೆ ಕೆಲಸವನ್ನ ಮಾಡಿದ್ರೆ ಹೆಂಡತಿಯ ಗುಲಾಮ ಅಂತಾರೆ ಎಂದು ಮಾಳು ನಿಪನಾಳ ಅಭಿಪ್ರಾಯ ತಿಳಿಸಿದ್ದಾರೆ. ಇದಕ್ಕೆ ಮಲ್ಲಮ್ಮ ಕೂಡ ಹೌದು ಎಂದಿದ್ದಾರೆ. ನಮ್ ಕಡೆ ಹಂಡ್ತಿ ಗುಲಾಮ ಅಂತಾರೆ ಎಂದಿದ್ದಾರೆ. ಆದರೆ ಮಾಳು ಮಾತನ್ನು ಮಂಜು ಭಾಷಿಣಿ ಅವರು ಕೂಡ ವಿರೋಧಿಸಿದ್ದಾರೆ. ಹಾಗಾದ್ರೆ ಗಂಡನ ಕೆಲಸ ಮಾಡುವ ಹೆಂಡತಿಯನ್ನೂ ಗುಲಾಮಳು ಅಂತ ಕರೆಯಲು ಸಾಧ್ಯವೇ?' ಎಂದು ಕೇಳಿದ್ದಾರೆ.

ಮಾಳು ಅವರಿಗೆ ತಮ್ಮದೇ ದಾಟಿಯಲ್ಲಿ ಬುದ್ದಿ ಹೇಳಿದ ಕಿಚ್ಚ ಸುದೀಪ್, 'ಇಂದಿನ ಪೀಳಿಗೆಯವರಾದ ನಿಮಗೂ ಅದೇ ರೀತಿ ಅನಿಸುತ್ತಾ? ಎಂದು ಮಾಳುಗೆ ಕೇಳಿದ್ದಾರೆ. ನಮ್ ಹಳ್ಳಿ ಕಡೆಗಿನ ಪದ್ಧತಿ ನೋಡಿದ್ರೆ ನಮಗೆ ಹೌದು ಅನಿಸುತ್ತೆ ಸರ್ ಎಂದು ಮಾಳು ಹೇಳಿದ್ದಾರೆ. ನಿಮ್ಮ ಹಳ್ಳಿಯ ಪದ್ಧತಿಗೆ ನಾವು ಅಡ್ಡ ಬರೋಕೆ ಆಗಲ್ಲ' ಎಂದು ಸುದೀಪ್ ಹೇಳಿದ್ದಾರೆ.
'ಎಲ್ಲ ಚೇಂಜ್ ಆಗ್ತಿದೆ, ಇದು ಯಾಕಿಲ್ಲ?'
'ಈಗ ಹಳ್ಳಿಯವರಾದ ನೀವು ಯುಟ್ಯೂಬ್ ಅಂತೆಲ್ಲ ಮಾಡ್ತಿದ್ದೀರಿ. ಹಳ್ಳಿಯಲ್ಲಿ ಎಲ್ಲವೂ ಚೇಂಜ್ ಆಗ್ತಿದೆ ಅಂದಾಗ ಈ ಪದ್ಧತಿ ಯಾಕೆ ಬದಲಾಗುತ್ತಿಲ್ಲ? ಎಂದು ಸುದೀಪ್ ಕೇಳಿದ್ದಾರೆ. ಆಗ ಮಾಳು ಕೆಲವೊಂದು ಕಡೆ ಆಗುತ್ತೆ, ಕೆಲವು ಕಡೆ ಆಗಲ್ಲ ಸರ್ ಎಂದಿದ್ದಾರೆ. ಯಾವುದು ನಿಮಗೆ ಬದಲಾವಣೆ ಇಷ್ಟ ಇಲ್ಲವೋ ಅದು ಮಾತ್ರವೇ ಚೇಂಜ್ ಆಗಲ್ಲ. ಬಾಕಿ ಎಲ್ಲವೂ ಬದಲಾಗುತ್ತೆ' ಎಂದು ಸುದೀಪ್ ಮಾತಿನಲ್ಲೇ ತಿವಿದಿದ್ದಾರೆ.
'ನಮ್ಮಲ್ಲಿ ನಾವು ಹಳ್ಳಿಗೆ ಬಿಟ್ಟು ಪ್ಯಾಟೆಗೆ ಹೋಗಬಾರದು, ಕರೆಂಟ್, ಬಸ್ ಬರಬಾರದು ಅಂತ ಅನ್ನೋದಾದ್ರೆ ನಾನು ಒಪ್ಪಿಕೊಳ್ತೀನಿ. ಆದರೆ ಬಾಕಿ ಎಲ್ಲ ಬದಲಾವಣೆಗೆ ನೀವು ಓಕೆ ಅನ್ನುವುದಾದರೆ, ಈ ಪೀಳಿಗೆಯವರಾದ ನೀವು ಈ ಪದ್ಧತಿಯನ್ನ ಬದಲಾಯಿಸಬೇಕು. ಅದನ್ನು ಬಿಟ್ಟು ಇದು ನಮ್ಮ ಹಳ್ಳಿಯ ಪದ್ಧತಿ ಅಂದ್ರೆ ಹೇಗೆ ಸರ್?' ಎಂದು ಸುದೀಪ್ ಕಿವಿಮಾತು ಹೇಳಿದ್ದಾರೆ.
'ಇದರ ವಿರುದ್ಧ ಧ್ವನಿ ಎತ್ತಿ'
'ಇದೇನು ಸಂಸ್ಕೃತಿನಾ? ನಂಬಿಕೆನಾ? ನನ್ನ ಪ್ರಕಾರ ಇದು ಬಹಳ ಕೇವಲವಾದಂತಹ ನಂಬಿಕೆ. ನೀವು ಅಂತಹ ವಾತಾವರಣದಲ್ಲಿ ಬೆಳೆದಿರುವುದರಿಂದ ಆ ರೀತಿ ಇರಬಹುದು. ಆದರೆ ನಿಮ್ಮಂತವರು ಇಂತಹ ಪದ್ಧತಿಗಳ ವಿರುದ್ಧ ಬಲವಾದ ಧ್ವನಿ ಎತ್ತಬೇಕು. ಒಂದು ಜನರೇಷನ್‌ನಿಂದ ಮತ್ತೊಂದು ಜನರೇಷನ್‌ಗೆ ಬರುವಾಗ ಇಂತಹ ಮೂಢನಂಬಿಕೆಗಳು ಬದಲಾಗಬೇಕು. ನಿಮ್ಮಂತವರು ಬದಲಾದಾಗಲೇ ಊರು, ದೇಶ ಬದಲಾಗುತ್ತೆ. ಇದೇ ಸರಿ ಅಂತ ಮಾಡ್ತಿರೋ ತಪ್ಪನ್ನ ಬದಲಾಯಿಸುವುದೇ ನಿಜವಾದ ಬದಲಾವಣೆ' ಎಂದು ಸುದೀಪ್ ಹೇಳಿದ್ದಾರೆ.












Click it and Unblock the Notifications