Bagheera Movie: ಸಲಾರ್ ಬಿಡುಗಡೆಗೂ ಮುನ್ನವೇ ಪ್ರಶಾಂತ್ ನೀಲ್-ಮುರಳಿ ಸಿನಿಮಾ ಟೀಸರ್

ಹೊಂಬಾಳೆ ಸಿನಿಮಾ ಸದ್ಯ ಸಾಲು ಸಾಲು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಡಿಸೆಂಬರ್ 22ರಂದು ಭಾರಿ ನಿರೀಕ್ಷೆ ಮೂಡಿಸಿರುವ ಸಲಾರ್ ವಿಶ್ವದಾದ್ಯಂತ ತೆರೆ ಕಾಣಲು ಸಜ್ಜಾಗಿದೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ ಚಿತ್ರ ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆ ಬರೆಯಲಿದೆ ಎಂದು ಹೇಳಲಾಗಿದೆ.

ಇನ್ನು ಈ ಚಿತ್ರ ಬಿಡುಗಡೆಗೆ ಮುನ್ನವೇ ಹೊಂಬಾಳೆ ಸಂಸ್ಥೆಯಿಂದ ಮತ್ತೊಂದು ನಿರೀಕ್ಷಿತ ಸಿನಿಮಾ ಟೀಸರ್ ಬಿಡುಗಡೆಯಾಗಲಿದೆ. ಶ್ರೀಮುರಳಿ ಅಭಿನಯದ ಬಘೀರ ಚಿತ್ರದ ಟೀಸರ್ ಡಿಸೆಂಬರ್ 17ರಂದು ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂಸ್ ಮಾಹಿತಿ ನೀಡಿದೆ.

Bagheera Teaser to Be Released on December 17th: Hombale Films

ಗಮನಾರ್ಹವಾಗಿ ಬಘೀರ ಚಿತ್ರಕ್ಕೆ ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಅವರೆ ಕತೆ ಬರೆದಿದ್ದಾರೆ. ಡಾ. ಸೂರಿ ನಿರ್ದೇಶನ ಚಿತ್ರಕ್ಕಿದೆ. ವಿಜಯ ಕಿರಗಂದೂರು ಹೊಂಬಾಳೆ ಫಿಲಂಸ್ ಮೂಲಕ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದಿಂದ ಖ್ಯಾತಿ ಪಡೆದ ರುಕ್ಮಿಣಿ ವಸಂತ್ ಚಿತ್ರದ ನಾಯಕಿಯಾಗಿದ್ದಾರೆ.

ಕಳೆದ ವರ್ಷ ಶುರುವಾಗಿದ್ದ ಸಿನಿಮಾ

ಬಘೀರ ಚಿತ್ರದ ಮುಹೂರ್ತ ಮೇ 20, 2022ರಂದೇ ನೆರವೇರಿತ್ತು, ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಾಯಕ ಶ್ರೀಮುರಳಿ ಕಾಲಿಗೆ ಗಾಯವಾಗಿದ್ದರಿಂದ ಚಿತ್ರೀಕರಣ ತಡವಾಗಿತ್ತು. 2024ರಲ್ಲಿ ಚಿತ್ರ ತೆರೆಗೆ ಬರಲಿದೆ. ಡಿಸೆಂಬರ್ 17ರಂದು ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.

ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶ್ರೀಮುರಳಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಡಿಸೆಂಬರ್ 20ರಂದು ಶ್ರೀಮುರಳಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು ಅವರ ಹುಟ್ಟುಹಬ್ಬಕ್ಕೆ ಕೊಡುಗೆಯಾಗಿ ಬಘೀರ ಟೀಸರ್ ಬಿಡುಗಡೆಯಾಗಲಿದೆ.

ಪ್ರಶಾಂತ್ ನೀಲ್ - ಶ್ರೀಮುರಳಿ ಕಾಂಬಿನೇಷನ್‌ನಲ್ಲಿ ಬಂದಿದ್ದ ಉಗ್ರಂ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಿತ್ತು. ನಂತರ ಪ್ರಶಾಂತ್ ನೀಲ್ ಕೆಜಿಎಫ್ ಸರಣಿ ಚಿತ್ರಗಳ ಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದರು. ಈಗ ಸಲಾರ್ ಚಿತ್ರದಲ್ಲಿ ನಿರತರಾಗಿದ್ದು, ಅದಾದ ಬಳಿಕ ಎನ್‌ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ.

ಸಲಾರ್ ಬಿಡುಗಡೆಗೆ ದಿನಗಣನೆ

ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಕೆಜಿಎಫ್‌ ಬಳಿಕ ಈ ಪ್ರಶಾಂತ್ ನೀಲ್ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಬಾಹುಬಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಅದಾದ ಬಳಿಕ ಬಂದ ಯಾವ ಸಿನಿಮಾಗಳೂ ಕೂಡ ನಿರೀಕ್ಷೆಯಂತೆ ಹಿಟ್ ಆಗಲಿಲ್ಲ, ಅಭಿಮಾನಿಗಳು ಕೂಡ ಈ ವಿಚಾರದಲ್ಲಿ ಬೇಸರಗೊಂಡಿದ್ದು, ಸಲಾರ್ ಮೂಲಕ ಮತ್ತೆ ಸಕ್ಸಸ್ ಹಾದಿಗೆ ಮರಳುತ್ತಾರೆ ಎಂದು ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+