Bachelor Party: ಬ್ಯಾಚುಲರ್ ಪಾರ್ಟಿ ಟ್ರೈಲರ್ ನೋಡಿ ಸೂಪರ್ ಹಿಟ್ ಎಂದ ಪ್ರೇಕ್ಷಕ

ದಿಗಂತ್, ಯೋಗಿ, ಅಚ್ಯುತ್ ಕುಮಾರ್ ಅಭಿನಯದ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಟ್ರೈಲರ್ ನೋಡಿ ಪ್ರೇಕ್ಷಕ ಮೆಚ್ಚಿಕೊಂಡಿದ್ದು ಈ ವರ್ಷದ ಮೊದಲ ಕನ್ನಡ ಸೂಪರ್ ಹಿಟ್ ಸಿನಿಮಾ ಎಂದು ಭವಿಷ್ಯ ನುಡಿದಿದ್ದಾರೆ.

ಜನವರಿ 26ರಂದು ಬಿಡುಗಡೆಯಾಗಲಿರುವ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ನಿರೀಕ್ಷೆ ಹೆಚ್ಚಾಗಿದೆ. ಟ್ರೈಲರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Bachelor Party Movie Trailer Receives Positive Response

ಟ್ರೈಲರ್ ನಲ್ಲೇ ಸಿನಿಮಾದಲ್ಲಿ ಏನೆಲ್ಲಾ ಇರಲಿದೆ ಎನ್ನುವ ಸಣ್ಣ ಝಲಕ್ ಸಿಕ್ಕಿದೆ. ಇಡೀ ಸಿನಿಮಾದಲ್ಲಿ ಭರ್ಜರಿ ಕಾಮಿಡಿ ಇರಲಿದ್ದು, ನೋಡುಗರಿಗೆ ಪಕ್ಕಾ ಮನರಂಜನೆ ಸಿಗಲಿದೆ ಎನ್ನುವ ಸಂದೇಶ ಸಿಕ್ಕಿದೆ.

ರಿಷಬ್ ಶೆಟ್ಟಿ ಬಿಟ್ಟ ಪಾತ್ರದಲ್ಲಿ ಯೋಗಿ ಮಿಂಚು

ಸಿನಿಮಾ ಅನೌನ್ಸ್ ಆದಾಗ ರಿಷಬ್ ಶೆಟ್ಟಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಕಾಂತಾರ ಚಾಪ್ಟರ್ 1 ಸಿನಿಮಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ರಿಷಬ್ ಶೆಟ್ಟಿ, ಅನಿವಾರ್ಯವಾಗಿ ಚಿತ್ರದಿಂದ ಹೊರನಡೆದರು. ಆ ಜಾಗಕ್ಕೆ ಯೋಗಿ ಆಯ್ಕೆಯಾದರು. ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಯೋಗಿ ಮಿಂಚಿದ್ದಾರೆ.

ದಿಗಂತ್, ಅಚ್ಯುತ್‌ ಕುಮಾರ್ ಜೋಡಿ ಕೂಡ ಮೋಡಿ ಮಾಡಿದೆ. ಸಿನಿಮಾದಲ್ಲಿ ನಗು ತರಿಸುವ ಹಲವು ಅಂಶಗಳಿವೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಟ್ರೈಲರ್ 6 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನಂಬರ್ 1 ಟ್ರೆಂಡಿಂಗ್‌ನಲ್ಲಿದೆ.

ಸಂಕ್ರಾಂತಿ ಸಂದರ್ಭದಲ್ಲಿ ಪರಭಾಷಾ ಚಿತ್ರಗಳೇ ಬಿಡುಗಡೆಯಾಗಿದ್ದು, ಕನ್ನಡ ಸಿನಿಮಾಗಳು ಬಿಡುಗಡೆಯಾಗಿಲ್ಲ. ಕಾಟೇರ ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬ್ಯಾಚುಲರ್ ಪಾರ್ಟಿ ಟ್ರೈಲರ್ ನೋಡಿದ ಪ್ರೇಕ್ಷಕ 2024ರ ಮೊದಲ ಕನ್ನಡ ಹಿಟ್‌ ಸಿನಿಮಾ ಇದೇ ಆಗಲಿದೆ ಎಂದು ಹೇಳಿದ್ದಾರೆ.

ಪರಂವಾ ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ಜಿ.ಎಸ್. ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಭಿಜಿತ್ ಮಹೇಶ್ ಕತೆ, ಚಿತ್ರಕಥೆ ಬರೆದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದೆ. ಅರವಿಂದ್ ಎಸ್ ಕಶ್ಯಪ್ ಚಿತ್ರಕ್ಕೆ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಅರ್ಜುನ್ ರಾಮು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ದಿಗಂತ್ ಮಂಚಾಲೆ, ಯೋಗಿ, ಅಚ್ಯುತ್ ಕುಮಾರ್, ಸಿರಿ ರವಿಕುಮಾರ್, ಬಾಲಾಜಿ ಮನೋಹರ್, ಆಚಾರ ಕಿರ್ಕ್, ಪ್ರಕಾಶ್ ತುಂಬಿನಾಡು, ಪವನ್ ಕುಮಾರ್, ಶೈನ್ ಶೆಟ್ಟಿ, ಶೋಭರಾಜ್, ಸೌಮ್ಯ ಜಗನ್ಮೂರ್ತಿ, ವಿಕಿಪೀಡಿಯಾ, ಮಾತಾ ಗುರುಪ್ರಸಾದ್, ಎನ್ ಸೋಮೇಶ್ವರ, ಶ್ವೇತಾ ಶ್ರೀನಿವಾಸ್, ಸುಧಾ ಬೆಳವಾಡಿ, ಜಯಲಕ್ಷ್ಮಿ ಪಾಟೀಲ್ ಸೇರಿದಂತೆ ಅದ್ದೂರಿ ತಾರಾಗಣವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+