Prabhas: ದಕ್ಷಿಣದ ನಟರ ಮೇಲೆ ಕೋಪ! ಪ್ರಭಾಸ್‌ರನ್ನು ಜೋಕರ್ ಎಂದ ಅರ್ಷದ್ ವಾರ್ಸಿ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತೆ ಗೆಲುವಿನ ಹಳಿಗೆ ಮರಳಿದ್ದಾರೆ. ಬಾಹುಬಲಿ-2 ಬಳಿಕ ದೊಡ್ಡ ಮಟ್ಟದ ಹಿಟ್ ಕೊಡುವಲ್ಲಿ ವಿಫಲವಾಗಿದ್ದ ಅವರು, ಸಲಾರ್, ಕಲ್ಕಿ 2898 AD ಸಿನಿಮಾದ ಮೂಲಕ ಗೆಲುವಿನ ಹಳಿಗೆ ಮರಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕಲ್ಕಿ ಸಿನಿಮಾ 1100 ಕೋಟಿ ರೂಪಾಯಿ ಗಳಿಕೆ ಮಾಡುವ ಬ್ಲಾಕ್‌ಬಸ್ಟರ್ ಆಗಿದೆ. ಸಿನಿಮಾ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು, ಆದರೆ ಬಾಲಿವುಡ್ ನಟ ಅರ್ಷದ್ ವಾರ್ಸಿ ಕಲ್ಕಿ ಸಿನಿಮಾವನ್ನು ಟೀಕಿಸಿದ್ದು, ಪ್ರಭಾಸ್‌ರನ್ನು ಜೋಕರ್ ಎಂದು ಕರೆದಿದ್ದಾರೆ.

ಸಮ್ದೀಶ್ ಭಾಟಿಯಾ ಅವರೊಂದಿಗಿನ ಹೊಸ ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ ಮಾತನಾಡಿರುವ ಅರ್ಷದ್ ವಾರ್ಸಿಯಾ, ತಮ್ಮ ಜೀವನ, ವೃತ್ತಿ ಮತ್ತು ಅವರು ವೀಕ್ಷಿಸಿದ ಇತ್ತೀಚಿನ ಚಲನಚಿತ್ರಗಳ ಬಗ್ಗೆ ಮಾತನಾಡಿದ್ದು, ಕಲ್ಕಿ 2898 AD ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಿನಿಮಾ ನನಗೆ ಇಷ್ಟವಾಗಲಿಲ್ಲ ಎಂದು ಹೇಳಿದ್ದಾರೆ.

Arshad Warsi Criticizes Prabhas Role in Kalki 2898 AD calling him Joker

ಸಿನಿಮಾ ಬಗ್ಗೆ ಮಾತನಾಡುತ್ತಾ, ಕಲ್ಕಿ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಅವರು ಸ್ಟಾರ್ ಪವರ್ ಅನ್ನು ಹೊಗಳಿದ್ದಾರೆ. ನಾನು ಕಲ್ಕಿ ಸಿನಿಮಾವನ್ನು ನೋಡಿದೆ ನನಗೆ ಅದು ಇಷ್ಟವಾಗಲಿಲ್ಲ, ಅಮಿತಾಬ್‌ ಬಚ್ಚನ್‌ರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಆತನಿಗಿರುವ ಅಧಿಕಾರ ನಮಗೆ ಸಿಕ್ಕರೆ ನಮ್ಮ ಜೀವನ ಸೆಟ್ಟೇರುತ್ತದೆ ಎಂದು ಹೇಳಿದ್ದಾರೆ.

ಪ್ರಭಾಸ್ ಜೋಕರ್‌ನಂತೆ ಕಾಣುತ್ತಾರೆ

ಪ್ರಭಾಸ್ ನಟನೆಯ ಬಗ್ಗೆ ಟೀಕಿಸಿದ್ದು, ನನಗೆ ನಿಜಕ್ಕೂ ದುಃಖವಾಗುತ್ತಿದೆ. ಆತ ಜೋಕರ್‌ನಂತೆ ಕಾಣುತ್ತಾನೆ. ನಾನು ಮ್ಯಾಡ್ ಮ್ಯಾಕ್ಸ್ ರೀತಿಯ ಸಿನಿಮಾವನ್ನು ನೋಡಲು ಬಯಸಿದ್ದೇನೆ, ನಾನು ಅಲ್ಲಿ ಮೆಲ್ ಗಿಬ್ಸನ್‌ನನ್ನು ನೋಡಲು ಬಯಸುತ್ತೇನೆ. ನೀವು ಯಾಕೆ ಈ ರೀತಿ ಮಾಡಿದಿರಿ, ಅಂತಹ ಕೆಲಸಗಳನ್ನು ಮಾಡುತ್ತಾರೆ ನನಗೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

ವ್ಯಾಪಕ ಆಕ್ರೋಶ

ಅರ್ಷದ್ ವಾರ್ಸಿ ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಪ್ರಭಾಸ್ ಅಭಿಮಾನಿಗಳು ಅರ್ಷದ್ ವಾರ್ಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಜೀವನದ ಎಲ್ಲಾ ಸಿನಿಮಾಗಳ ಕಲೆಕ್ಷನ್ ಒಟ್ಟು ಮಾಡಿದರೂ, ಪ್ರಭಾಸ್ ಸಿನಿಮಾದ ಫ್ಲಾಫ್ ಆದ ಸಿನಿಮಾದ ಕಲೆಕ್ಷನ್‌ ಅನ್ನು ಮೀರಿಸಲು ಆಗಲ್ಲ ಎಂದು ಜರಿದಿದ್ದಾರೆ. ಇನ್ನೂ ಕೆಲವರು ದಕ್ಷಿಣದ ನಟ, ನಿರ್ದೇಶಕರ ಸಿನಿಮಾಗಳು ಯಶಸ್ವಿಯಾಗುತ್ತಿರುವುದು ಬಾಲಿವುಡ್‌ನ ಕೆಲವರಿಗೆ ಹೊಟ್ಟೆ ಉರಿ ತರಿಸಿದೆ ಎಂದು ಟೀಕಿಸಿದ್ದಾರೆ.

ಒಟಿಟಿಗೆ ಬರಲು ಸಜ್ಜಾದ ಕಲ್ಕಿ

ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ ಸಿನಿಮಾ ಬಾಕ್ಸ್‌ಆಫಿಸ್‌ನಲ್ಲಿ ಯಶಸ್ವಿಯಾದ ಬಳಿಕ ಒಟಿಟಿಗೆ ಬರಲು ಸಜ್ಜಾಗಿದೆ. ಆಗಸ್ಟ್ 22ರಂದು ಅಮೇಜಾನ್ ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಕಲ್ಕಿ ಬಿಡುಗಡೆಯಾಗಲಿದೆ. ಹಿಂದಿ ಆವೃತ್ತಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಆವೃತ್ತಿಗಳು ಅಮೇಜಾನ್ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+