ಇಂಟಿಮೇಟ್ ದೃಶ್ಯ ಮಾಡೋ ಮೊದಲು ಭಾವನಾ ಶೂನ್ಯಳಾಗುತ್ತೇನೆ: ನಟಿ ಅರ್ಚನಾ ಶಾಸ್ತ್ರಿ
Archana Shastry: ಸಿನಿಮಾಗಳಲ್ಲಿ ಇಂಟಿಮೇಟ್ ದೃಶ್ಯಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಅಯ್ಯೋ ಇವರಿಗೇನು ಮರ್ಯಾದೆ ಇಲ್ಲ ಅಂತ ಸುಲಭವಾಗಿ ಮಾತನಾಡಬಹುದು. ಆದರೆ, ಆ ನಟಿ ಅಥವಾ ನಟರಿಗೆ ಅದೊಂದು ಉದ್ಯೋಗ. ಅವರಿಗೂ ಭಾವನೆಗಳಿರುತ್ತವೆ. ಅವನ್ನೆಲ್ಲ ಮೀರಿ ಇಷ್ಟವಿದ್ದೋ, ಇಲ್ಲದೆಯೋ ಸಹ ನಟರೊಂದಿಗೆ ನಟಿಸಬೇಕಾದಾಗ ಆಗುವ ಸಂಕಟಗಳ ಬಗ್ಗೆ ನಟಿಯೊಬ್ಬರು ಮನಬಿಚ್ಚು ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಅರ್ಚನಾ ಶಾಸ್ತ್ರಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಹಾಗೂ ಇಂಟಿಮೇಟ್ ದೃಶ್ಯಗಳನ್ನು ನಟ, ನಟಿಯರ ಮನಸ್ಥಿತಿ ಹೇಗಿರುತ್ತೆ ಎಂಬ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪ್ರೇಕ್ಷಕರು ಪರದೆ ಮೇಲೆ ಕಾಣುವ ಪ್ರೀತಿ ಮತ್ತು ಆತ್ಮೀಯತೆಯನ್ನು ನಿಜ ಜೀವನದ ಭಾವನೆಗಳೊಂದಿಗೆ ಸಂಪರ್ಕಿಸುತ್ತಾರೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಏನು ನೋಡುತ್ತಾರೋ ಅದಕ್ಕೆ ವಿರುದ್ಧವಾಗಿ ಅಲ್ಲಿನ ಪರಿಸ್ಥಿತಿ ಹಾಗೂ ನಟಿಸುತ್ತಿರುವವರ ಮನಸ್ಥಿತಿ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಕ್ಯಾಮೆರಾ ಮುಂದೆ ಕೇವಲ ಪಾತ್ರಗಳಷ್ಟೇ
ಅರ್ಚನಾ ಅವರ ಪ್ರಕಾರ, ರೊಮ್ಯಾಂಟಿಕ್ ಅಥವಾ ಬೋಲ್ಡ್ ದೃಶ್ಯಗಳನ್ನು ಚಿತ್ರೀಕರಿಸುವಾಗ ನಟ-ನಟಿಯರ ಗಮನ ಸಂಪೂರ್ಣವಾಗಿ ತಮ್ಮ ಪಾತ್ರ ಮತ್ತು ಅಭಿನಯದ ಮೇಲೆಯೇ ಇರುತ್ತದೆ. ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ, ಕ್ಯಾಮೆರಾ ಸಿಬ್ಬಂದಿ, ಲೈಟಿಂಗ್ ತಂಡ ಮತ್ತು ಇತರ ಅನೇಕರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇಂತಹ ವಾತಾವರಣದಲ್ಲಿ ವೈಯಕ್ತಿಕ ಭಾವನೆಗಳಿಗೆ ಅವಕಾಶವೇ ಇರುವುದಿಲ್ಲ. ಅವರು ಹೇಳಿದಂತೆ ಕೇಳಬೇಕಾಗುತ್ತದೆ. ನಮಗೆ ಮನಸ್ಸು ಇದೆಯೋ, ಇಲ್ಲವೋ ಎಂಬುದನ್ನು ಯಾರೂ ಗಮನಿಸುವುದಿಲ್ಲ, ಎಂದಿದ್ದಾರೆ.
ಅವರು ಹೇಳುವಂತೆ, ನಾನು ರೊಮ್ಯಾಂಟಿಕ್ ಅಥವಾ ಇಂಟಿಮೇಟ್ ದೃಶ್ಯದಲ್ಲಿ ಅಭಿನಯಿಸುವ ಮೊದಲು ಭಾವನೆಗಳನ್ನು ಬದಿಗಿಟ್ಟು, ಸಂಪೂರ್ಣ ವೃತ್ತಿಪರವಾಗಿ ಕೆಲಸ ಮಾಡುತ್ತೇನೆ. ಮನಸ್ಸಿನಲ್ಲಿ ಯಾವುದೇ ತೊಳಲಾಟವೂ ಇರೋಲ್ಲ. ಯೋಚನೆಗಳೂ ಇರೋಲ್ಲ. ಕೆಲಸದ ದೃಷ್ಟಿಯಿಂದ ಮಾತ್ರ ಅಂಥ ದೃಶ್ಯಗಳನ್ನು ಶೂಟ್ ಮಾಡಲಾಗುತ್ತದೆ, ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಒಂದು ಸಣ್ಣ ದೃಶ್ಯದ ಹಿಂದೆ ದೊಡ್ಡ ತಂಡದ ಶ್ರಮ
ಪರದೆ ಮೇಲೆ ಕೆಲವೇ ನಿಮಿಷಗಳ ಕಾಲ ಕಾಣುವ ರೊಮ್ಯಾಂಟಿಕ್ ದೃಶ್ಯದ ಹಿಂದೆ ಸಂಪೂರ್ಣ ತಂಡದ ಶ್ರಮ ಇರುತ್ತದೆ. ನಿರ್ದೇಶಕರ ಸೂಚನೆಗಳಂತೆ ಅನೇಕ ಬಾರಿ ಟೇಕ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಲಾವಿದರು ತಮ್ಮ ಅಭಿನಯವನ್ನು ನೈಜವಾಗಿ ಮತ್ತು ಪರಿಣಾಮಕಾರಿಯಾಗಿ ತೋರಿಸುವುದರಲ್ಲೇ ತೊಡಗಿರುತ್ತಾರೆ. ನಮ್ಮ ಸುತ್ತ ಹಲವು ಸಿಬ್ಬಂದಿ ಇದ್ದಾಗ ನಿಜವಾದ ರೊಮ್ಯಾಂಟಿಕ್ ಭಾವನೆಗಳು ಮೂಡುವುದೇ ಸಾಧ್ಯವಿಲ್ಲ. ಅದು ಕೇವಲ ಒಂದು ದೃಶ್ಯ. ಅಲ್ಲಿ ನಾವು ನಮ್ಮ ಕೆಲಸವನ್ನು ಮಾತ್ರ ಮಾಡುತ್ತೇವೆ, ಮತ್ಯಾವ ಒತ್ತಡವೂ ಇರುವುದಿಲ್ಲವೆಂದಿದ್ದಾರೆ.
ರೊಮ್ಯಾಂಟಿಕ್ ದೃಶ್ಯಗಳ ಶೂಟಿಂಗಲ್ಲಿ ದೊಡ್ಡ ಒತ್ತಡ ಯಾವುದು?
ಅರ್ಚನಾ ಅವರ ಪ್ರಕಾರ, ಇಂತಹ ದೃಶ್ಯಗಳಲ್ಲಿ ನಟರಿಗೆ ಇರುವ ದೊಡ್ಡ ಒತ್ತಡವೆಂದರೆ ಅಭಿನಯವನ್ನು ಸಹಜವಾಗಿ ತೋರಿಸುವುದು. ಪ್ರೇಕ್ಷಕರು ಇಂತಹ ದೃಶ್ಯಗಳನ್ನು ತುಂಬಾ ಗಮನದಿಂದ ನೋಡುತ್ತಾರೆ. ಆದ್ದರಿಂದ ದೃಶ್ಯ ನೈಜವಾಗಿ ಕಾಣಬೇಕು ಎಂಬುದೇ ಕಲಾವಿದರ ಪ್ರಮುಖ ಚಿಂತೆಯಾಗಿರುತ್ತದೆ.
ಬೋಲ್ಡ್ ಸೀನ್‌ಗಳಲ್ಲಿ ಹೇಗಿರುತ್ತದೆ ಅನುಭವ?
ಬೋಲ್ಡ್ ಅಥವಾ ಸವಾಲಿನ ದೃಶ್ಯಗಳ ವೇಳೆ ರೊಮ್ಯಾಂಟಿಕ್ ಭಾವನೆಗಳು ಮೂಡುತ್ತವೆಯೇ ಎಂದು ಕೇಳಿದಾಗ, ಅರ್ಚನಾ ಸ್ಪಷ್ಟವಾಗಿ "ಇಲ್ಲ" ಎಂದು ಉತ್ತರಿಸಿದ್ದಾರೆ. ಅಂಥ ಸಂದರ್ಭಗಳಲ್ಲಿ ಹೆಚ್ಚಾಗಿ ಅನುಭವವಾಗುವುದು ಅಗತ್ಯಗಳು ಪೂರೈಕೆಯಾಗಿಲ್ಲವೆಂದರೆ ಮಾತ್ರ. ಮತ್ತು ದೃಶ್ಯ ಅದ್ಭುತವಾಗಿ ಮತ್ತೊಂದು ಟೇಕ್ ಇಲ್ಲದೇ ಪ್ರಭಾವಯುತವಾಗಿ ಬರಬೇಕೆಂಬ ಹೊಣೆ ಇರುತ್ತದೆ. ದೊಡ್ಡ ಸಂಖ್ಯೆಯ ಸಿಬ್ಬಂದಿಯ ಮುಂದೆ ಅಭಿನಯಿಸುವುದು ಸುಲಭದ ಕೆಲಸವಲ್ಲ, ಆದ್ದರಿಂದ ಕಲಾವಿದರ ಗಮನ ಸಂಪೂರ್ಣವಾಗಿ ತಮ್ಮ ಕೆಲಸದ ಮೇಲೆಯೇ ಇರುತ್ತದೆ, ಎಂದು ಅವರು ತಿಳಿಸಿದ್ದಾರೆ.
ಪರದೆ ಮತ್ತು ವಾಸ್ತವದ ನಡುವೆ ದೊಡ್ಡ ವ್ಯತ್ಯಾಸ
ಅರ್ಚನಾ ಶಾಸ್ತ್ರಿಯವರ ಈ ಹೇಳಿಕೆಗಳಿಂದ ಸಿನಿಮಾಗಳಲ್ಲಿ ಕಾಣುವ ರೊಮ್ಯಾಂಟಿಕ್ ಹಾಗೂ ಇಂಟಿಮೇಟ್ ದೃಶ್ಯಗಳು ಸಂಪೂರ್ಣವಾಗಿ ವೃತ್ತಿಪರ ಪ್ರಕ್ರಿಯೆಯ ಭಾಗವೆಂಬುದು ಸ್ಪಷ್ಟವಾಗುತ್ತದೆ. ಪ್ರೇಕ್ಷಕರು ಪರದೆಯ ಮೇಲೆ ಕಾಣುವ ಭಾವನಾತ್ಮಕ ಸಂಪರ್ಕವು ನಟರ ಅಭಿನಯ ಸಾಮರ್ಥ್ಯ ಮತ್ತು ನಿರ್ದೇಶಕರ ನಿರೂಪಣೆಯ ಫಲಿತಾಂಶವಾಗಿದ್ದು, ಅದು ನಿಜ ಜೀವನದ ಭಾವನೆಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.














Click it and Unblock the Notifications