ನಾನು ಮ್ಯೂಸಿಕ್‌ ರಚಿಸಲು ChatGPT ಬಳಸಿದ್ದೇನೆ: ಅನಿರುದ್ಧ್‌ ವಿಡಿಯೋ ವೈರಲ್‌

ತಮಿಳಿನ ಖ್ಯಾತ ಮ್ಯೂಸಿಕ್‌ ಕಂಪೋಸರ್‌ ಆಗಿರುವ ಅನಿರುದ್ಧ್‌ ರವಿಚಂದರ್ (Anirudh Ravichander) ಅವರ ಹಾಡುಗಳೆಂದರೆ ಈಗಿನ ಯುವಕರೆಲ್ಲ ಹುಚ್ಚೆದ್ದು ಕುಣಿಯುತ್ತಾರೆ. ಅಂತಹ ಅಬ್ಬರದ ಹಾಡುಗಳನ್ನ ಕೊಟ್ಟಿದ್ದಾರೆ ಅನಿರುದ್ಧ್‌. ತಮಿಳಿನ ಸ್ಟಾರ್‌ ನಟರ ಸಿನಿಮಾಗಳಿಗೆ ಅನಿರುದ್ಧ್‌ ಸಂಗೀತವೇ ಬೇಕು ಅಂತಾ ಡಿಮ್ಯಾಂಡ್‌ ಕೂಡ ಮಾಡುತ್ತಾರೆ. ತಮಿಳು ಮಾತ್ರವಲ್ಲ, ತೆಲುಗು, ಬಾಲಿವುಡ್‌ವರೆಗೂ ಈ ಯುವಕನಿಗೆ ಬೇಡಿಕೆ ಇದೆ. ಹೀಗಿರುವಾಗ ಅನಿರುದ್ಧ್‌ ಹಾಡು ರಚಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವಾದ ChatGPT ಸಹಾಯ ಪಡೆದ ವಿಚಾರವನ್ನು ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್, ಕೆಲವೇ ಕೆಲವು ಹೈ-ಬಜೆಟ್ ಮತ್ತು ಸ್ಟಾರ್ ನಟರ ಸಿನಿಮಾಗಳೊಂದಿಗೆ ಹವಾ ಸೃಷ್ಟಿಸಿದ್ದಾರೆ. ತಮಿಳಿನ ಬಹುತೇಕ ಸ್ಟಾರ್‌ ನಟರ ಸಿನಿಮಾಗಳಿಗೆ ಅನಿರುದ್ಧ್‌ ಸಂಗೀತ ಫಿಕ್ಸ್‌. ಇತ್ತೀಚೆಗೆ ರಿಲೀಸ್‌ ಆದ ವಿಜಯ್ ದೇವರಕೊಂಡ ನಟನೆಯ 'ಕಿಂಗ್‌ಡಮ್' ಸಿನಿಮಾದಲ್ಲೂ ಇವರ ಸಂಗೀತವೇ ಹೈಲೈಟ್‌. ಇನ್ನು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಕೂಲಿ'ಗೂ ಕೂಡ ಇವರ ಕೈಚಳಕವಿದೆ. ಎಐನಿಂದ ಕೆಲಸ ಸುಲಭವಾಗುತ್ತಿದೆ ಎನ್ನುವ ಮಾತಿಗೆ ಅನಿರುದ್ಧ್‌ ಕೂಡ ಸಾಕ್ಷಿಯಾಗಿದ್ದಾರೆ.

anirudh-ravichander-says-he-used-chatgpt-for-music-video-goes-viral

ಎಐ ನನ್ನ ಹಾಡನ್ನು ಬೇಗ ಮುಗಿಸಿತು

ನಾನು ಸಂಗೀತ ರಚಿಸಲು ಚಾಟ್‌ಜಿಪಿಟಿ (ChatGPT) ಬಳಸಿದ್ದೇನೆ ಎಂಬ ಅನಿರುದ್ಧ್ ಅವರ ಪ್ರಾಮಾಣಿಕ ತಪ್ಪೊಪ್ಪಿಗೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಅವರ ಫ್ಯಾನ್ಸ್‌ ಕೂಡ ಫಿದಾ ಆಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅನಿರುದ್ಧ್ ಅವರು ಇತ್ತೀಚೆಗೆ ತಾವು ಕಂಪೋಸ್‌ ಮಾಡುತ್ತಿದ್ದ ಹಾಡಿನ ಒಂದೆರಡು ಸಾಲುಗಳು ಬೇಕಿತ್ತು. ಆಗ ನಾನು ChatGPTಗೆ ಹೋಗಿ ಚಂದಾದಾರಿಕೆಯನ್ನು ಖರೀದಿಸಿದೆ. ಹಾಡು ಪೂರ್ಣಗೊಳಿಸಲು AIನಿಂದ ಸಹಾಯ ಕೇಳಿದೆ. ಆಗ ಅದು ನನಗೆ ಸುಮಾರು ಹತ್ತು ಆಯ್ಕೆಗಳನ್ನು ನೀಡಿತು. ನಾನು ಅದರಲ್ಲಿ ಒಂದನ್ನು ಆರಿಸಿಕೊಂಡು, ನನ್ನ ಹಾಡು ಮುಗಿಸಿದೆ ಎಂದು ಹೇಳಿದ್ದಾರೆ.

ಸಂಗೀತ ರಚನೆಯಲ್ಲಿ ಎಐ ಬಳಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. AI ಅನ್ನು ಬಳಸುವುದು ಈಗ ಸೃಜನಶೀಲ ಪ್ರಕ್ರಿಯೆಯ ಭಾಗವಾಗಿದೆ ಮತ್ತು ಹಿಂದಿನ ಸೃಜನಶೀಲತೆಗೆ ಇದ್ದ ಅಡೆತಡೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಅನಿರುದ್ಧ್ ಅಭಿಪ್ರಾಯಪಟ್ಟಿದ್ದಾರೆ. ನಾವು ಸೃಜನಶೀಲ ಬ್ಲಾಕ್‌ಗಳಲ್ಲಿ ಸಿಲುಕಿಕೊಂಡಾಗ ಎಐ ಸಹಾಯ ಪಡೆಯುವುದರಲ್ಲಿ ಯಾವುದೇ ನಾಚಿಕೆಗೇಡಿನ ಸಂಗತಿ ಇಲ್ಲ ಎಂದು ಅನಿರುದ್ಧ್ ಹೇಳಿದ್ದಾರೆ.

ಆದರೆ ChatGPTಯ ಸಹಾಯವನ್ನು ಪಡೆಯಲು ಬಯಸಿದ್ದ ನಿಖರವಾದ ಹಾಡನ್ನು ಅನಿರುದ್ಧ್ ಬಹಿರಂಗಪಡಿಸಲಿಲ್ಲ. ಎಲ್ಲರೂ ಬರಹಗಾರರ ನಿರ್ಬಂಧವನ್ನು ಎದುರಿಸುತ್ತಾರೆ. ಅದನ್ನು ದಾಟಲು AI ಬಳಸುವುದು ಸಂಪೂರ್ಣವಾಗಿ ಸಾಮಾನ್ಯ. ಇದು ಸಮಯವನ್ನು ಉಳಿಸುತ್ತದೆ ಮತ್ತು ಕೆಲಸವನ್ನು ಮುಂದುವರಿಸುತ್ತದೆ ಎಂದೂ ಹೇಳಿದ್ದಾರೆ. ಇತ್ತೀಚೆಗೆ ಅವರು ಕೂಲಿ ಸಿನಿಮಾಗೆ ಹಾಡು ಕಂಪೋಸ್‌ ಮಾಡಿರುವುದರಿಂದ, ಈ ಹಾಡಿಗೆ ಎಐ ಬಳಸಿದ್ದಾರೆ ಎನ್ನುವ ಚರ್ಚೆಗಳು ಶುರುವಾಗಿವೆ. ಈಗ ಕೂಲಿ ಸಿನಿಮಾ ಬೆನ್ನಲ್ಲೇ ಮಧರಾಸಿ, ಮ್ಯಾಜಿಕ್, ಲವ್ ಇನ್ಶುರೆನ್ಸ್ ಕಂಪನಿ, ಜೈಲರ್ 2, ಜನ ನಾಯಗನ್, ದಿ ಪ್ಯಾರಡೈಸ್, ಟಾಕ್ಸಿಕ್ ಮತ್ತು ಕಿಂಗ್ ಸೇರಿದಂತೆ ಹೈ ಬಜೆಟ್‌ ಸಿನಿಮಾಗಳು ಅನಿರುದ್ಧ್‌ ಕೈಯಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+