Anchor Anushree: ಆಂಕರ್ ಅನುಶ್ರೀ ಮದುವೆ ಭರ್ಜರಿ ಸಿದ್ಧತೆ: ಹುಡುಗ ಯಾರು ಗೊತ್ತಾಯ್ತಾ?
ಕರಾವಳಿ ಚೆಲುವೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಮಾತಿನಲ್ಲೇ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಸದ್ಯ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ಸುದ್ದಿ ವೈರಲ್ ಆಗುತ್ತಿದ್ದು, ಹಲವು ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಅನುಶ್ರೀ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಆದರೆ, ಈ ಮಾತಿನ ಮಲ್ಲಿಯನ್ನ ಕೈ ಹಿಡಿಯುವ ಹುಡುಗ ಯಾರು ಅಂತ ಗೊತ್ತಾಯ್ತಾ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಹೌದು, ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ವರ್ಷಾಂತ್ಯದಲ್ಲಿ ಮದುವೆ ಕುರಿತು ಗುಡ್ ನ್ಯೂಸ್ ನೀಡಿದ್ದಾರೆ. ಅನುಶ್ರೀ ಅವರು ಇಷ್ಟು ವರ್ಷ ಯಾಕೆ ಮದುವೆಯಾಗಿಲ್ಲ ಎಂಬುದು ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಏಕೆಂದರೆ ಅನುಶ್ರೀ ಅವರಿಗೆ ಮದುವೆ ವಯಸ್ಸು ದಾಟುತ್ತಿದೆ. ಅನುಶ್ರೀ ಅವರಿಗೆ ಈಗಾಗಲೇ ಮೂವತ್ತೈದರ ಹರೆಯವನ್ನು ದಾಟಿದ್ದು ಇನ್ನೇನು ಕೆಲವೇ ಸಮಯದಲ್ಲಿ ಮೂವತ್ತೇಳನೇ ವರ್ಷಕ್ಕೆ ಅಡಿ ಇಡಲಿದ್ದಾರೆ.

ಇನ್ನೂ ಈ ಕಾಲದಲ್ಲಿ ಲೇಟ್ ಆಗಿ ಮದುವೆಯಾಗುವುದೇ ಟ್ರೆಂಡ್ ಆಗಿಬಿಟ್ಟಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯಿಂದ ಹಿಡಿದು ಸಾಮಾನ್ಯರವರೆಗೆ ಲೈಫ್ ಏಂಜಾಯ್ ಮಾಡಿ, ಚನ್ನಾಗಿ ಸುತ್ತಾಡಿ, ಜೀವನಕ್ಕೆ ಒಂದಿಷ್ಟು ದುಡ್ಡು, ಮನೆ ಅಂತೆಲ್ಲ ಮಾಡಿಕೊಂಡ ಮೇಲೆಯೇ ಮದುವೆ ಆಗೋದಕ್ಕೆ ಹೊರಡ್ತಾರೆ. ಇದಕ್ಕೆ ಅನುಶ್ರೀ ಅವರೂ ಹೊರತಾಗಿಲ್ಲ. ಬಹಳ ಚಿಕ್ಕ ವಯಸ್ಸಲ್ಲೇ ಒಂದು ತುತ್ತು ಅನ್ನಕ್ಕೂ ಕಷ್ಟ ಪಟ್ಟ ಅನುಶ್ರೀ ಅವರು, ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಇದೀಗ 2025 ಮಾರ್ಚ್ 17 ರಂದು ಮದುವೆಯಾಗಲು ರೆಡಿಯಾಗಿದ್ದಾರೆ.
ಸಹಜವಾಗಿಯೇ ಅಭಿಮಾನಿಗಳಲ್ಲಿ ಮಾರ್ಚ್ ಯಾಕೆ ಅಂತ ಪ್ರಶ್ನೆ ಮೂಡಬಹುದು. ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಬರ್ತ್ ಡೇ ಆಗಿದೆ. ಹೀಗಾಗಿ ಆ ದಿನವೇ ಆಂಕರ್ ಅನುಶ್ರೀ ಹಸೆಮಣೆ ಏರ್ತಾರೆ ಅನ್ನೋ ಸುದ್ದಿ ಓಡಾಡ್ತಿದೆ. ಆದರೆ ಆಮೇಲೆ ಅನುಶ್ರೀ ಅವರೇ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಆದರೆ ಈಗ ಹರಿದಾಡ್ತಿರೋ ಲೇಟೆಸ್ಟ್ ಸುದ್ದಿ ಅಂದರೆ ಅನುಶ್ರೀ ಮದುವೆ ದಿನ ಶೀಘ್ರದಲ್ಲೇ ಇದೆ.
ಅನುಶ್ರೀ ಅವರು ಈಗಾಗಲೇ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹೊಸವರ್ಷ ಸಂಭ್ರಮಾಚರಣೆ ಒಂದು ಕಡೆಯಾದ್ರೆ, ನಿರೂಪಣೆ ಮಾಡೋದರ ಜೊತೆಗೆ ಮದುವೆ ತಯಾರಿಯಲ್ಲೂ ಅನುಶ್ರಿ ಅವರು ಬ್ಯುಸಿ ಆಗಿದ್ದಾರೆ. ಶೀಘ್ರ ಮದುವೆ ಜವಳಿ ಖರೀದಿಗೆ ವಿದೇಶಕ್ಕೆ ಹೋಗುವ ಪ್ಲಾನ್ ಇದ್ದ ಹಾಗಿದೆ ಅನ್ನೋ ಮಾತು ಹೇಳಿ ಕೂಡ ಕೇಳಿ ಬರ್ತಿದೆ. ಜೊತೆಗೆ ಅನುಶ್ರೀ ಅವರು ಹೊಸ ವರ್ಷದಲ್ಲಿ ತನ್ನ ಮದುವೆ ಆಗೋ ಹುಡುಗನ ಬಗ್ಗೆ ಮಾಹಿತಿ ಹಂಚಿಕೊಳ್ಳೋ ಸಾಧ್ಯತೆ ಇದೆ. ಸದ್ಯ ಅನುಶ್ರೀ ಅವರ ಫ್ಯಾನ್ಸ್ ಅವರ ಹುಡುಗನನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ಇನ್ನೂ ಶೋ ಒಂದರಲ್ಲಿ ಸೂರಜ್ ಅನುಶ್ರೀ ಅವ್ರು ಫೆಬ್ರವರಿಯಲ್ಲಿ ಮದುವೆ ಆಗ್ತಾರೆ ಅಂತ ಕಾಲ್ ಎಳಿತಾರೆ. ಆಗ ಆಂಕರ್ ಅನುಶ್ರೀ ಅವರು ಇಲ್ಲ ಕಣ್ರೋ ನಾನು ಅಪ್ಪು ಫ್ಯಾನ್ ಆಗಿರೋದ್ರಿಂದ ಮಾರ್ಚ್ ನಲ್ಲಿ ಮದುವೆ ಆಗಬಹುದು ಅಂತ ಹೇಳಿದ್ರು. ಹೀಗಾಗಿಅನುಶ್ರೀ ಮದುವೆ ವಿಚಾರ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.












Click it and Unblock the Notifications