Anchor Anushree: ಆಂಕರ್ ಅನುಶ್ರೀ ಮದುವೆ ಫೋಟೋಶೂಟ್ ಫುಲ್ ವೈರಲ್...
ಆಂಕರ್ ಅನುಶ್ರೀ ಅಂದ್ರೆ ಮಾಸ್.. ಆಂಕರ್ ಅನುಶ್ರೀ ಅಂದ್ರೆ ಕ್ಲಾಸ್.. ಆಂಕರ್ ಅನುಶ್ರೀ ಅಂದ್ರೆ ಕನ್ನಡ ಕಿರುತೆರೆಯ ಸೂಪರ್ ಸ್ಟಾರ್ ಅಂತಾ ಕಣ್ಣುಮುಚ್ಚಿಕೊಂಡು ಹೇಳಬಹುದು. ಆಂಕರ್ ಅನುಶ್ರೀ ಹೆಸರು ಕೇಳಿದ್ರೆ ಸಾಕು ಟಿಆರ್‌ಪಿ ತಾನಾಗಿ ತಾನೇ ಓಡೋಡಿ ಬಂದು ಬಿಡುತ್ತೆ ಅನ್ನೋ ಕಾಮಿಡಿ ಟಿವಿ ಚಾನೆಲ್‌ಗಳ ಆಫಿಸ್‌ನಲ್ಲಿ ಕಾಮನ್. ಯಾಕಂದ್ರೆ ಆಂಕರ್ ಅನುಶ್ರೀ ಒಂದು ಬಾರಿ ಸ್ಟೇಜ್ ಹತ್ತಿ ಆಂಕರಿಂಗ್ ಮಾಡಲು ನಿಂತರೆ, ಆಡ್ ಬಂದರೂ ಜನ ಚಾನಲ್ ಚೇಂಜ್ ಮಾಡದೇ ಆಂಕರ್ ಅನುಶ್ರೀ ಅವರ ಮಾತಿಗಾಗಿ ಕಾಯುತ್ತಾರೆ.
ಆದರೆ ಇಷ್ಟೆಲ್ಲಾ ಫೇಮಸ್ ಆಗಿರುವ ಆಂಕರ್ ಅನುಶ್ರೀ ಅವರು ಮದುವೆ ಆಗಿಲ್ಲ ಎಂಬ ಕೊರಗು ಅವರ ಕೋಟಿ ಕೋಟಿ ಅಭಿಮಾನಿಗಳನ್ನ ಕಾಡುತ್ತಿತ್ತು. ಅದರಲ್ಲೂ ಹಲವು ಬಾರಿ ಆಂಕರ್ ಅನುಶ್ರೀ ಅವರು ಮದುವೆ ಆಗದ ವಿಚಾರವನ್ನೇ ಮುಂದೆ ಇಟ್ಟುಕೊಂಡು ಹಲವರು ಕಾಮಿಡಿ ಕೂಡ ಮಾಡಿದ್ರು. ಹೀಗಿದ್ದಾಗ ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಅನುಶ್ರೀ ಅವರು ಮದುವೆ ಆಗೋದಿಲ್ವಾ? ಎಂಬ ಪ್ರಶ್ನೆಗಳನ್ನ ಅಭಿಮಾನಿಗಳು ಕೇಳುತ್ತಿದ್ದರು. ಆದ್ರೆ ಇದೀಗ, ಆಂಕರ್ ಅನುಶ್ರೀ ಮದುವೆ ಫೋಟೋಶೂಟ್ ಫುಲ್ ವೈರಲ್...

ಆಂಕರ್ ಅನುಶ್ರೀ ಮದುವೆ ಫೋಟೋ...
ಆಂಕರ್ ಅನುಶ್ರೀ ಮದುವೆ ಆಗಬೇಕು ಎಂಬ ಬೇಡಿಕೆಯನ್ನ ಅವರ ಅಭಿಮಾನಿಗಳು ಇಡ್ತಿದ್ದು, ಆದಷ್ಟು ಬೇಗ ಮದುವೆ ಊಟ ಹಾಕಿಸಿ ಮೇಡಂ ಅಂತಾ ಒತ್ತಾಯ ಮಾಡುತ್ತಿದ್ದಾರೆ. ಹೀಗೆ ಆಂಕರ್ ಅನುಶ್ರೀ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿ, ಆಂಕರ್ ಅನುಶ್ರೀ ಅವರ ಮದುವೆ ವಿಚಾರ ಪ್ರಸ್ತಾಪ ಆಗುತ್ತಿದೆ. ಇಂತಹ ಸಮಯದಲ್ಲೇ, ಆಂಕರ್ ಅನುಶ್ರೀ ಮದುವೆ ಫೋಟೋ & ವಿಡಿಯೋ ಅಂತಾ ಕೆಲವರು ವಿಡಿಯೋ ವೈರಲ್ ಮಾಡುತ್ತಿದ್ದಾರೆ!
ಅಸಲಿಗೆ ಇದು ಆಂಕರ್ ಅನುಶ್ರೀ ಅವರ ಮದುವೆ ಫೋಟೋಶೂಟ್ ಅಲ್ಲ, ಬದಲಾಗಿ ಅಕುಲ್ ಬಾಲಾಜಿ & ಆಂಕರ್ ಅನುಶ್ರೀ ಒಟ್ಟಾಗಿರುವ ಮಾಡಿರುವ ರೀಲ್ಸ್. ಈ ರೀಲ್ಸ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋ ಶೇರ್ ಮಾಡಿಕೊಂಡು ಕೆಲವರು ಆಂಕರ್ ಅನುಶ್ರೀ ಅವರ ಮದುವೆ ಅಂತಿದ್ದಾರೆ. ಅಲ್ಲದೆ ಅಕುಲ್ ಬಾಲಾಜಿ ಅವರು & ಅನುಶ್ರೀ ಜೋಡಿಯೂ ಸೂಪರ್ ಅಂತಿದ್ದಾರೆ. ಆದರೆ ಇದು ಸುಳ್ಳು ಸುದ್ದಿ ಅನ್ನೋದು ವಿಡಿಯೋ ಪೂರ್ತಿ ನೋಡಿದ ನಂತರ ಗೊತ್ತಾಗುತ್ತದೆ!
36 ವರ್ಷ ವಯಸ್ಸಿನ ಆಂಕರ್ ಅನುಶ್ರೀ...
ಆಂಕರ್ ಅನುಶ್ರೀ ಅವರ ಜನಪ್ರಿಯತೆ & ಜನರ ಪ್ರೀತಿ ಬಗ್ಗೆ ಬಿಡಿಸಿ ಹೇಳಬೇಕಿಲ್ಲ ಬಿಡಿ. ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿ ವಾರ ಟಿವಿ ಮುಂದೆ ಬಂದು & ಇಡೀ ಕನ್ನಡ ನಾಡಿನ ಜನರನ್ನ ರಂಜಿಸುವ ಆಂಕರ್ ಅನುಶ್ರೀ ಯಾವ ಸಿನಿಮಾ ಸ್ಟಾರ್‌ಗೆ ಕೂಡ ಕಮ್ಮಿ ಇಲ್ಲ.
1988ರ ಜನವರಿ 25 ರಂದು ಜನಿಸಿದ್ದ ಆಂಕರ್ ಅನುಶ್ರೀ ಅವರಿಗೆ ಈಗ 36 ವರ್ಷ. ಹೀಗಾಗಿ, 36 ವರ್ಷ ಕಳೆದರೂ ಆಂಕರ್ ಅನುಶ್ರೀ ಅವರಿಗೆ ಮದುವೆ ಯಾಕೆ ಆಗಿಲ್ಲ? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ ಅವರ ಅಭಿಮಾನಿಗಳು. ಅಲ್ಲದೆ ಆದಷ್ಟು ಬೇಗ ಮದುವೆ ಆಗಿ ಮೇಡಂ... ಎಂಬ ಒತ್ತಾಯವನ್ನೂ ಮಾಡಲಾಗುತ್ತಿದೆ.
ಸಮಾಜದಲ್ಲಿ ಆಂಕರ್ ಅನುಶ್ರೀ ಮಾದರಿ!
ಹೌದು, ಆಂಕರ್ ಅನುಶ್ರೀ ಜೀವನದಲ್ಲಿ ನೂರಾರು ಸಮಸ್ಯೆ ಎದುರಿಸಿ ಎಲ್ಲವನ್ನ ಮೆಟ್ಟಿ ನಿಂತು ಇಂದು ಇಡೀ ದೇಶದಲ್ಲಿ ಹೆಸರು ಮಾಡಿದ್ದರೆ. ಒಂದು ಕಾಲದಲ್ಲಿ ಬಾಡಿಕೆ ಹಣಕ್ಕೆ ಮತ್ತು ಪಿಜಿಗೆ ಕಟ್ಟಲು ದುಡ್ಡು ಇಲ್ಲದೆ ಪರದಾಡಿದ್ದವರ ಬಾಳಲ್ಲಿ ದೊಡ್ಡ ಯಶಸ್ಸು ಈಗ ಸಿಕ್ಕಂತಾಗಿದೆ. ಹೀಗೆ ಆಂಕರ್ ಅನುಶ್ರೀ ಅವರ ಸಾಧನೆ ಸಮಾಜದಲ್ಲಿ ಏನಾದ್ರೂ ಸಾಧಿಸಲು ಬೇರೆಯವರಿಗು ಮಾದರಿ ಎನ್ನಬಹುದು.
ನಿಜವಾಗೂ ಆಂಕರ್ ಅನುಶ್ರೀ ಮದುವೆ?
ಸೋಷಿಯಲ್ ಮೀಡಿಯಾದಲ್ಲಿ ಇದೀಗ ಒಂದು ಫೋಟೋ ವೈರಲ್ ಮಾಡುತ್ತಿರುವ ಕೆಲವು ಕಿಡಿಗೇಡಿಗಳು, ಆಂಕರ್ ಅನುಶ್ರೀ ಮದುವೆ ಗುಟ್ಟಾಗಿ ನಡೆದೇ ಹೋಗಿದೆ ಅಂತಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ! ಆದರೆ ಈ ಬಗ್ಗೆ ಇನ್ನೂ ಆಂಕರ್ ಅನುಶ್ರೀ ಅವರೇ ಆಗಲಿ ಅಥವಾ ಸಂಬಂಧಪಟ್ಟ ಯಾರೇ ಆಗಲಿ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಇದು ಸುಳ್ಳು ಫೋಟೋ & ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಹಬ್ಬಿರುವ ಸುದ್ದಿ ಸುಳ್ಳೆಂದು ಹೇಳಲಾಗುತ್ತಿದೆ. ಹಾಗೇ ಶೀಘ್ರದಲ್ಲೇ ಆಂಕರ್ ಅನುಶ್ರೀ ಅವರ ಮದುವೆ ನಡೆಯಲಿದ್ದು, ಇದಕ್ಕಾಗಿ ಅಭಿಮಾನಿಗಳು ಕೂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ.












Click it and Unblock the Notifications