ಆಂಕರ್‌ ಅನುಶ್ರೀ ಮದುವೆ ಫಿಕ್ಸ್, ಮಹತ್ವದ ಸುಳಿವು ನೀಡಿದ... Anchor Anushree

ಆಂಕರ್‌ ಅನುಶ್ರೀ ಜೀವನದಲ್ಲಿ ಸೆಟಲ್ ಆಗಿದ್ದಾರೆ, ಬಡತನ ಎದುರಿಸಿ ಬಂದು ಈಗ ಇಡೀ ಕನ್ನಡ ನಾಡಿನ ಮನೆಮಾತಾಗಿದ್ದಾರೆ. ಹೀಗಿದ್ದಾಗ ಆಂಕರ್‌ ಅನುಶ್ರೀ ಮದುವೆ ಆಗಲಿದ್ದಾರೆ ಅಂತಾ ಅವರ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಆಂಕರ್‌ ಅನುಶ್ರೀ ತಮ್ಮ ಮದುವೆ ಬಗ್ಗೆ ಇದುವರೆಗೂ ಸುಮ್ಮನೆ ಇದ್ದರು, ಹೀಗಿದ್ದಾಗಲೇ ಅಭಿಮಾನಿಗಳು ಕೂಡ ಆಂಕರ್‌ ಅನುಶ್ರೀ ಮದುವೆ ವಿಚಾರದಲ್ಲಿ ಬೇಸರ ಮಾಡಿಕೊಂಡಿದ್ದರು. ಆದರೆ ಇದೀಗ ಆಂಕರ್‌ ಅನುಶ್ರೀ ಮದುವೆ ಫಿಕ್ಸ್ ಅನ್ನೋ ಸುದ್ದಿ ಸಿಗುತ್ತಿದೆ!

ಆಂಕರ್‌ ಅನುಶ್ರೀ ಮದುವೆ ಯಾವಾಗ? ಅನ್ನೋದೆ ಬಿಲಿಯನ್ ಡಾಲರ್ ಪ್ರಶ್ನೆಗೆ ಸಮ ಆಗಿದೆ. ಅದರಲ್ಲೂ ಕಳೆದ 2 ಅಥವಾ 3 ವರ್ಷಗಳಿಂದ ಆಂಕರ್‌ ಅನುಶ್ರೀ ಮದುವೆ ಬಗ್ಗೆ ಕುತೂಹಲ ಡಬಲ್ ಆಗಿದೆ. ಈಗಾಗಲೇ 35 ವರ್ಷ ದಾಟಿರುವ ಆಂಕರ್‌ ಅನುಶ್ರೀ ಮದುವೆ ಬೇಗ ಆಗಲಿ ದೇವರೆ ಅನ್ನೋದು ಅಭಿಮಾನಿಗಳ ಆಶಯ ಆಗಿತ್ತು. ಇನ್ನೊಂದು ಕಡೆ ಅರ್ಜುನ್ ಜನ್ಯ ಜೊತೆ ಆಂಕರ್‌ ಅನುಶ್ರೀ ಮದುವೆ ಫಿಕ್ಸ್ ಅನ್ನೋ ಸುದ್ದಿ ಕೂಡ ಹಬ್ಬಿದೆ. ಹೀಗಿದ್ದಾಗಲೇ ಆಂಕರ್‌ ಅನುಶ್ರೀ ಅವರು ತಮ್ಮ ಮದುವೆ ಬಗ್ಗೆ ದೊಡ್ಡ ಸುದ್ದಿ ನೀಡಿದ್ದಾರೆ.

Anchor Anushree Marriage News On Trend After She Sharing New Photos

ಆಂಕರ್‌ ಅನುಶ್ರೀ ಮದುವೆ ಫಿಕ್ಸ್...

ಕರ್ನಾಟಕದ ಪ್ರತಿ ಮನೆ ಮನೆಯಲ್ಲೂ ಫೇಮಸ್ ಆಗಿರುವ ಆಂಕರ್ ಅನುಶ್ರೀ ಅವರು ಮದುವೆ ಆಗಿಲ್ಲ ಎಂಬ ಕೊರಗು ಅವರ ಕೋಟಿ ಕೋಟಿ ಅಭಿಮಾನಿಗಳನ್ನು ಕಾಡುತ್ತಿತ್ತು. ಅದರಲ್ಲೂ ಹಲವು ಬಾರಿ ಆಂಕರ್ ಅನುಶ್ರೀ ಅವರು ಮದುವೆ ಆಗದ ವಿಚಾರವನ್ನೇ ಮುಂದೆ ಇಟ್ಟುಕೊಂಡು ಹಲವರು ಕಾಮಿಡಿ ಕೂಡ ಮಾಡಿದ್ರು. ಹೀಗಿದ್ದಾಗ ಆಂಕರ್ ಅನುಶ್ರೀ ಮದುವೆ ಯಾವಾಗಪ್ಪಾ?

ಅನುಶ್ರೀ ಅವರು ಮದುವೆ ಆಗೋದಿಲ್ವಾ? ಎಂಬ ಪ್ರಶ್ನೆಗಳನ್ನ ಅಭಿಮಾನಿಗಳು ಕೇಳುತ್ತಿದ್ದರು. ಇಷ್ಟದೆಲ್ಲದರ ನಡುವೆ ಸೀರೆ ಉಟ್ಟು, ಭರ್ಜರಿ ಫೋಟೋ ಶೂಟ್ ಮಾಡಿಸಿ ಮದುವೆ ಬಗ್ಗೆ ಮುನ್ಸೂಚನೆ ನೀಡಿದ್ರಾ ಅನುಶ್ರೀ?

ಅನುಶ್ರೀ ಅವರ ಹುಡುಗ ಯಾರು?

ಆಂಕರ್‌ ಅನುಶ್ರೀ ಅವರು ಇದೀಗ ಭರ್ಜರಿಯಾಗಿ ಸೀರೆ ಉಟ್ಟಿರುವ ಫೋಟೋ ಶೇರ್ ಮಾಡಿ, ಅದರ ಜೊತೆಗೆ ಮೆಸೇಜ್ ಕೂಡ ನೀಡಿ ತಮ್ಮ ಮದುವೆ ಬಗ್ಗೆ ಭರ್ಜರಿ ಹಿಂಟ್ ಕೊಟ್ಟಿದ್ದಾರೆ. ಅಂದಹಾಗೆ ಹೊಸ ಸೀರೆ ಉಟ್ಟು ಫೋಟೋ ಹಾಕಿರುವ ಅವರು, 'ಆಧುನಿಕತೆ ಬಂದರು ... ಹಣೆ ಮೇಲೆ ಬೊಟ್ಟು... ಮಲ್ಲಿಗೆ ಹೂ ತೊಟ್ಟು... ಸೀರೆ ಉಟ್ಟು !!! ನಗುವ ನಗು ಎಂದಿಗೂ ಮಾಸದು !!!!' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಆಂಕರ್‌ ಅನುಶ್ರೀ ಅವರು ಅತೀ ಶೀಘ್ರದಲ್ಲೇ ಮದುವೆ ಆಗುತ್ತಾರಾ? ಎಂಬ ಚರ್ಚೆ ಮತ್ತೆ ಶುರುವಾಗಿದೆ. ಮತ್ತೊಂದು ಕಡೆ, ಹುಡುಗ ಯಾರು ಇರಬಹುದು? ಎಂಬ ಕುತೂಹಲದ ಪ್ರಶ್ನೆಯನ್ನೂ ನೆಟ್ಟಿಗರು ಕೇಳ್ತಿದ್ದಾರೆ.

ಮದುವೆ ಬಗ್ಗೆ ಹೆಚ್ಚಾಯ್ತು ಕುತೂಹಲ!

ಆಂಕರ್ ಅನುಶ್ರೀ ಅವರು ತುಂಬಾನೇ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ಅವರ ಮುಗ್ಧತೆಯೇ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತಿದೆ. ಇಷ್ಟೆಲ್ಲದರ ನಡುವೆ ಇದೀಗ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಭಾರಿ ದೊಡ್ಡ ಚರ್ಚೆ ನಡೆಯುತ್ತಿದ್ದು, ಎಲ್ಲಾ ಪ್ರಶ್ನೆಗೂ ಶೀಘ್ರದಲ್ಲೇ ಉತ್ತರ ಸಿಗುತ್ತಾ? ಅಂತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+