ಆಂಕರ್ ಅನುಶ್ರೀ ಮದುವೆ ಫಿಕ್ಸ್, ಅರ್ಜುನ್ ಜನ್ಯ ಒಪ್ಪಿಗೆ ಬಾಕಿ! Anchor Anushree

ಆಂಕರ್ ಅನುಶ್ರೀ ಮದುವೆ ಯಾವಾಗ ಆಗೋದು? ಈ ಜನ್ಮದಲ್ಲಿ ಆಂಕರ್ ಅನುಶ್ರೀ ಅವರು ಮದುವೆ ಆಗದೇ ಸನ್ಯಾಸಿ ಆಗ್ತಾರಾ? ಆಂಕರ್ ಅನುಶ್ರೀ ಮದುವೆ ಯಾಕೆ ಲೇಟ್ ಆಗುತ್ತಿದೆ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನ ಜನ ಕೇಳುತ್ತಿದ್ದರು. ಇನ್ನು ಅಭಿಮಾನಿಗಳಂತೂ ಆಂಕರ್ ಅನುಶ್ರೀ ಮದುವೆ ಆಗಲಿ ಅಂತಾ ದೇವರಿಗೆ ವಿಶೇಷ ಪೂಜೆ & ಹರಕೆ ಕೂಡ ಹೊತ್ತಿದ್ದಾರೆ. ಈ ರೀತಿ ಆಂಕರ್ ಅನುಶ್ರೀ ಮದುವೆಗೆ ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರಿ ಭರ್ಜರಿ ಸುದ್ದಿ ಇದೀಗ ಸಿಕ್ಕಿದೆ. ಆಂಕರ್ ಅನುಶ್ರೀ ಮದುವೆ ಫಿಕ್ಸ್, ಅರ್ಜುನ್ ಜನ್ಯ ಒಪ್ಪಿಗೆ ಬಾಕಿ!

ಆಂಕರ್ ಅನುಶ್ರೀ ಅವರು ತುಂಬಾನೇ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ಅವರ ಮುಗ್ಧತೆಯೇ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತಿದೆ. ಇಷ್ಟೆಲ್ಲದರ ನಡುವೆ ಇದೀಗ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಆಂಕರ್ ಅನುಶ್ರೀ ಮದುವೆ ಫಿಕ್ಸ್ ಆಗಲು ಅರ್ಜುನ್ ಜನ್ಯ ಒಪ್ಪಿಗೆ ಬಾಕಿಯಂತೆ!

Anchor Anushree Marriage News Creating Storm On Social Media

ಆಂಕರ್ ಅನುಶ್ರೀ ಮದುವೆಗೆ ಅರ್ಜುನ್ ಜನ್ಯ...

ಅರ್ಜುನ್ ಜನ್ಯ ಅವರು ಮದುವೆ ಆಗಿದ್ದು, ಈಗಾಗಲೇ ಅವರಿಗೂ ಒಂದು ಸಂಸಾರ ಇದೆ. ಆದರೆ ಪದೇ ಪದೇ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಮ್ಯಾಟರ್ ಬರುತ್ತಿದ್ದು, ಸಂಚಲನ ಸೃಷ್ಟಿ ಮಾಡುತ್ತಿದೆ. ಹಾಗೆ ನೋಡಿದರೆ ಆಂಕರ್ ಅನುಶ್ರೀ ಅವರು ಪದೇ ಪದೇ ರಿಯಾಲಿಟಿ ಶೋಗಳಲ್ಲಿ ಅರ್ಜುನ್ ಜನ್ಯ ಅವರನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳ್ತಾರೆ. ಹೀಗಿದ್ದಾಗ ಅರ್ಜುನ್ ಜನ್ಯ ಕೂಡ ಆಂಕರ್ ಅನುಶ್ರೀ ಅವರ ಮಾತಿಗೆ ಏನೂ ಹೇಳಲ್ಲ. ಈ ಮೂಲಕ ಇಬ್ಬರೂ ಪಸ್ಪರ ಪ್ರೀತಿ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್ ಆಗಲು ಅರ್ಜುನ್ ಜನ್ಯ ಒಪ್ಪಿಗೆ ಬಾಕಿಯಂತೆ!

ಸರಿಗಮಪ ವೇದಿಕೆಯಲ್ಲಿ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಭರ್ಜರಿಯಾಗಿ ಸೈಕಲ್‌ನ ಹಿಡಿದು ಸುತ್ತಾಡಿದರು. ಈ ವಿಡಿಯೋ ನೋಡಿದ ಪ್ರೇಕ್ಷಕರು ಇಬ್ಬರು ಮದುವೆ ಆಗೋದು ಗ್ಯಾರಂಟಿ ಅಂತಾ ಮಾತನಾಡುತ್ತಿದ್ದಾರೆ. ಆಂಕರ್ ಅನುಶ್ರೀ ಅವರಿಂದ ಈಗಾಗಲೇ ಮದುವೆ ಆಗಲು ಸಂಪೂರ್ಣ ಒಪ್ಪಿಗೆ ಸಿಕ್ಕಿದ್ದು, ಅರ್ಜುನ್ ಜನ್ಯ ಒಪ್ಪಿಕೊಂಡರೆ ಮದುವೆ ಗ್ಯಾರಂಟಿ ಅಂತಾ ಹೇಳುತ್ತಿದ್ದಾರೆ ನೆಟ್ಟಿಗರು. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೂಡ ಭಾರಿ ಹಲ್‌ಚಲ್ ಎಬ್ಬಿಸಿದೆ.

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು...

ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಸದಾ ತುಂಟಾಟ ಮಾಡುತ್ತಲೇ ಇರ್ತಾರೆ. ಅರ್ಜುನ್ ಜನ್ಯ & ಆಂಕರ್ ಅನುಶ್ರೀ ಸರಿಗಮಪ ವೇದಿಕೆಯ ಮೇಲೆ ಸಖತ್ ಸ್ಟೆಪ್ ಹಾಕಿ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಆದರೆ ಈ ಬಾರಿ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಸೈಕಲ್ ಏರಿ ಸಖತ್ ರೊಮ್ಯಾಂಟಿಕ್ ಆಗಿ ಗಮನ ಸೆಳೆದಿದ್ದಾರೆ. ಜೀ ಕನ್ನಡ ಸರಿಗಮಪ ವೇದಿಕೆಯ ಮೇಲೆ, ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು... ಎಂಬ ಹಾಡಿಗೆ ಪೃಥ್ವಿ ಭಟ್ ಮತ್ತು ದ್ಯಾಮೇಶ್ ಹಾಡು ಹಾಡಿದರು. ಇದೇ ಹಾಡಿಗೆ ಹೆಜ್ಜೆ ಹಾಕುವಾಗ ಇಬ್ಬರು ಸಖತ್ ರೊಮ್ಯಾಂಟಿಕ್ ಆಗಿ ಆಕ್ಟಿಂಗ್ ಮಾಡಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+