ಆಂಕರ್ ಅನುಶ್ರೀ ಮದುವೆಗೆ ಮುಹೂರ್ತ ಫಿಕ್ಸ್ ಅಂತಾ... Anchor Anushree

ಆಂಕರ್ ಅನುಶ್ರೀ ಮದುವೆ ಆಗುವ ಕ್ಷಣ ಹತ್ತಿರವೇ ಬಂದಿದೆ, ಕನ್ನಡ ಕಿರುತೆರೆ ಲೋಕದ ನಂಬರ್ 1 ಆಂಕರ್ ಎಂಬ ಪಟ್ಟವನ್ನು ಪಡೆದಿರುವ ಇದೇ ಆಂಕರ್ ಅನುಶ್ರೀ ಅವರ ಮದುವೆ ಯಾವಾಗ ಆಗುತ್ತೆ? ಅಂತಾ ಆಂಕರ್ ಅನುಶ್ರೀ ಅವರ ಕೋಟ್ಯಂತರ ಅಭಿಮಾನಿಗಳು ಕಾಯ್ತಾ ಇದ್ದರು. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆಗೆ ಮುಹೂರ್ತ ಫಿಕ್ಸ್ ಅಂತಾ...

ಆಂಕರ್ ಅನುಶ್ರೀ ಅವರಿಗೆ 36 ವರ್ಷ ವಯಸ್ಸು ಕಳೆದರೂ ಯಾಕೆ ಮದುವೆ ಆಗಿಲ್ಲ? ಅನ್ನೋ ಪ್ರಶ್ನೆಯನ್ನ ಅಭಿಮಾನಿಗಳು ಕೇಳ್ತಾನೆ ಇದ್ದರು. ಯಾಕಂದ್ರೆ ಕನ್ನಡ ನಾಡಿನ ಜನರು ಆಂಕರ್ ಅನುಶ್ರೀ ಅವರ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ & ಗೌರವ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕಾಗಿ, ಪದೇ ಪದೇ ಆಂಕರ್ ಅನುಶ್ರೀ ಅವರ ಮದುವೆಗಾಗಿ ಕಾಯುತ್ತಿದ್ದಾರೆ ಜನ. 1988ರ ಜನವರಿ 25 ರಂದು ಜನಿಸಿದ್ದ ಆಂಕರ್ ಅನುಶ್ರೀ ಅವರು, ಕಡುಬಡ ಕುಟುಂಬದಿಂದ ಬೆಳೆದು ಬಂದು ಈಗ ದೊಡ್ಡ ಸಾಧನೆ ಮಾಡಿ ಮನೆ ಮನೆಯಲ್ಲೂ ಮಾತಾಗಿದ್ದಾರೆ.

Anchor Anushree Marriage Matter Creating Trend Again For This Reason

ಆಂಕರ್ ಅನುಶ್ರೀ ಮದುವೆಗೆ ಮುಹೂರ್ತ ಫಿಕ್ಸ್....

ಕನ್ನಡ ರಿಯಾಲಿಟಿ ಕಾರ್ಯಕ್ರಮಗಳ ಪೈಕಿ ನಂಬರ್ 1 ಶೋಗಳನ್ನು ನಡೆಸಿಕೊಡುವುದು ಇದೇ ಆಂಕರ್ ಅನುಶ್ರೀ ಅವರು. ಜೀ ಕನ್ನಡ ಚಾನೆಲ್‌ಗೆ ಆಂಕರ್ ಅನುಶ್ರೀ ಅವರು ದತ್ತು ಪುತ್ರಿ ಆಗಿ ಹೋಗಿದ್ದಾರೆ ಅಂತಾ ಜನರು ಪ್ರೀತಿಯಿಂದ ಮಾತನಾಡುತ್ತಾರೆ. ಯಾಕಂದ್ರೆ ಜೀ ಕನ್ನಡ ಚಾನೆಲ್‌ನ ದೊಡ್ಡ, ದೊಡ್ಡ ಕಾರ್ಯಕ್ರಮಗಳಿಗೆ ಅನುಶ್ರೀ ಅವರ ನಿರೂಪಣೆ ಬೇಕೆ ಬೇಕು. ಹೀಗಿದ್ದಾಗಲೇ, ಒಂದು ಫೋಟೋ ಈಗ ವೈರಲ್ ಆಗುತ್ತಿದ್ದು, ಆಂಕರ್ ಅನುಶ್ರೀ ಮದುವೆಗೆ ಮುಹೂರ್ತ ಫಿಕ್ಸ್ ಅಂತಾ...

ಹೌದು, ಆಂಕರ್ ಅನುಶ್ರೀ ಅವರ ಇನ್‌ಸ್ಟಾಗ್ರಾಂ ಪೋಸ್ಟ್ ಒಂದನ್ನ ವೈರಲ್ ಮಾಡಲಾಗ್ತಿದೆ. ಈ ಮೂಲಕ ಆಂಕರ್ ಅನುಶ್ರೀ ಅವರ ಮದುವೆ ಶೀಘ್ರದಲ್ಲೇ ಅಂತಾ ಸುದ್ದಿ ಹಬ್ಬಿಸಲಾಗ್ತಿದೆ. ಹಾಗಾದ್ರೆ ಯಾವುದು ಆ ಫೋಸ್ಟ್? ಆ ಫೋಟೋದಲ್ಲಿ ಇರೋದು ಯಾರು? ಮುಂದೆ ಓದಿ.

ಆಂಕರ್ ಅನುಶ್ರೀ ಮದುವೆಯ ಬಗ್ಗೆ...

ಅಂದಹಾಗೆ ಇತ್ತೀಚಿಗೆ ಆಂಕರ್ ಅನುಶ್ರೀ ಅವರು ಖಾಸಗಿ ಸ್ವೀಟ್ ಅಂಗಡಿ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ನಟ ನವೀನ್ ಶಂಕರ್ ಅವರ ಜೊತೆಗೆ ಆಂಕರ್ ಅನುಶ್ರೀ ಅವರು ಫೋಟೋ ತೆಗೆಸಿಕೊಂಡು, ಆ ಫೋಟೋನ ಶೇರ್ ಮಾಡಿದ್ದಾರೆ. ಇದೇ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೆಲವರು ನವೀನ್ ಶಂಕರ್ ಫೋಟೋ ಫೇಸ್ ಹೈಡ್ ಮಾಡಿ ಆಂಕರ್ ಅನುಶ್ರೀ ಅವರು ಮದುವೆ ಆಗುತ್ತಿರುವ ಹುಡುಗ ಅಂತಾ ಸುದ್ದಿ ಹಬ್ಬಿಸುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆಂಕರ್ ಅನುಶ್ರೀ ಮದುವೆಗೆ ಮುಹೂರ್ತ ಫಿಕ್ಸ್ ಅಂತಾ ಹೇಳುತ್ತಿದ್ದಾರೆ! ಆದರೆ ಇದು ಕೇವಲ ವದಂತಿ ಎಂಬ ಸ್ಪಷ್ಟನೆ ಸೋಷಿಯಲ್ ಮೀಡಿಯಾದಲ್ಲೇ ಸಿಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+