ಪುನೀತ್ ರಾಜ್‌ಕುಮಾರ್ ಬರ್ತ್ ಡೇ: ಆಂಕರ್ ಅನುಶ್ರೀ ಹಸೆಮಣೆ ಏರುವ ಶುಭ ಸಂಗತಿ ರಿವೀಲ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಮ್ಮೊಂದಿಗೆ ಇದ್ದಿದ್ದರೆ ಇಂದು (ಮಾರ್ಚ್ 17) ಅದ್ದೂರಿಯಾಗಿ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಆದರೆ, ಈಗ ಅವರಿಲ್ಲದೇ ಅವರ ಜನ್ಮದಿನ ಆಚರಿಸುವಂತಾಗಿದೆ. ಪ್ರತಿ ವರ್ಷ ಮಾರ್ಚ್ 17 ಬಂತೆಂದರೆ ಅಭಿಮಾನಿಗಳಿಗೆ ಅದೆನೋ ಸಂಭ್ರಮ. ಪುನೀತ್ ರಾಜ್ಕುಮಾರ್ ಬರ್ತ್ಡೇ ಪ್ರಯುಕ್ತ ಹಲವಾರು ಬಗೆಯ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತದೆ. ಈ ಬಾರಿ ಕೂಡ ಅದು ಮುಂದುವರಿದಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳು ಅನ್ನದಾನ, ರಕ್ತದಾನ, ನೇತ್ರದಾನ ನೋಂದಣಿ ಸೇರಿದಂತೆ ಅನೇಕ ಬಗೆಯ ಸಮಾಜಮುಖಿಯ ಕಾರ್ಯಗಳನ್ನು ಕೈಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಪುನೀತ್ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಮೂಲಕ ಸ್ಮರಿಸಲಾಗುತ್ತಿದೆ. ಇತ್ತ ಅಪ್ಪು ಅವರ ದೊಡ್ಡ ಅಭಿಮಾನಿಯಾಗಿರುವ ಆಂಕರ್ ಅನುಶ್ರೀ ಅವರು ಸಹ ನಟ ಪುನೀತ್ ರಾಜ್ ಕುಮಾರ್ ಅವರನ್ನ ಸ್ಮರಿಸದ ದಿನಗಳಿಲ್ಲ.

ಕರಾವಳಿ ಚೆಲುವೆ ಸ್ಯಾಂಡಲ್‌ವುಡ್ ಖ್ಯಾತ ನಿರೂಪಕಿ ಅನುಶ್ರೀ ಅವರು ಪುನೀತ್ ರಾಜ್‌ಕುಮಾರ್ ಬರ್ತ್ ಡೇ ಸಮಯದಲ್ಲೇ ಒಂದು ಗುಡ್ ನ್ಯೂಸ್ ಕೊಡುವುದಾಗಿ ಈ ಹಿಂದೆ ಸುಳಿವು ನೀಡಿದ್ದರು. ಆ ಗುಡ್ ನ್ಯೂಸ್ ಏನು ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಉತ್ತರ ಸಿಗಲಿದೆ. ಅನುಶ್ರೀ ಮದುವೆ ಕುರಿತು ಶೀಘ್ರದಲ್ಲೇ ಸಂತಸದ ಸುದ್ದಿಯೊಂದು ಸಿಗಬಹುದು ಎಂಬ ಅಭಿಮಾನಿಗಳು ನಿರೀಕ್ಷೆಯಿಂದ ಕಾದುಕುಳಿತ್ತಿದ್ದವರಿಗೆ ಇಂದು ಉತ್ತರ ಸಿಗಲಿದೆ. . ಕರಾವಳಿ ಚೆಲುವೆ ಸ್ಯಾಂಡಲ್‌ವುಡ್ ಖ್ಯಾತ ನಿರೂಪಕಿ, ಮಾತುಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ಚೆಲುವೆ ಅನುಶ್ರೀ ಅವರನ್ನ ಮದುವೆ ಆಗುವ ಹುಡುಗ ಯಾರು? ಮದುವೆ ಯಾವಾಗ ಎಂಬ ಬಗ್ಗೆ ಇಂದು ರಿವೀಲ್ ಆಗಲಿದೆ.
ಕರಾವಳಿ ಚೆಲುವೆ ಹಾಗೂ ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಆಗಾಗ ಅನೇಕ ಗಾಸಿಪ್‌ಗಳು ಹರಿದಾಡುತ್ತಲೇ ಇರುತ್ತವೆ. ಆಂಕರ್ ಅನುಶ್ರೀ ಫ್ಯಾನ್ಸ್ ಕೂಡ ಅವರ ಮದುವೆ ನೋಡಲು ಕಾದು ಕುಳಿತಿದ್ದಾರೆ. ಅನುಶ್ರೀ ಎಲ್ಲೇ ಹೋದರು ಮದುವೆ ಯಾವಾಗ? ಯಾವಾಗ ಹೊಳಿಗೆ ಊಟ ಹಾಕಿಸುತ್ತಿರಾ ಎಂದು ಹಲವು ಬಗೆಯಲ್ಲಿ ಅನುಶ್ರೀ ಅವರಿಗೆ ಪ್ರಶ್ನಿಸುತ್ತಿದ್ದರು. ಇದಕ್ಕೆ ಈಗ ಉತ್ತರ ಸಿಗುವ ಸಮಯ ಹತ್ತಿರ ಬಂದಾಗಿದೆ. ಈ ಹಿಂದೆ ಅನುಶ್ರೀ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ಅಲ್ಲದೇ ನಿರೂಪಕಿ ಅನುಶ್ರೀ ಮದುವೆ ಡೇಟ್ ರಿವೀಲ್ ಮಾಡುವ ಬಗ್ಗೆಯೂ ಹೇಳಿದ್ದರು.
ಇನ್ನೂ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನ, ಸೂರಜ್, ಜಗ್ಗ ಹಾಗೂ ಗಿಲ್ಲಿ ಜೊತೆ ಅನುಶ್ರೀ ಚಾಟ್ ಶೋಗೆ ಬಂದಿದ್ದರು. ಈ ವೇಳೆ ಅನುಶ್ರೀ ಮದುವೆ ಆದವರು ಒಂದೆಡೆ, ಮದುವೆ ಆಗದವರು ಒಂದು ಕಡೆ ಚೆನ್ನಾಗಿ ಕುಳಿತಿದ್ದಾರೆ ಎಂದಾಗ ಗಿಲ್ಲಿ ಅನು ಅಕ್ಕ ಮಧ್ಯದಲ್ಲಿ ಕುಳಿತ ನೀವೂ ಆಲ್ ರೆಡಿ ಫಿಕ್ಸ್ ಆಗಿದ್ದೀರಾ ಎಂದು ಹೇಳುವ ಮೂಲಕ ಸುಳಿವು ಬಿಟ್ಟುಕೊಟ್ಟಿದ್ದರು. ಆ ಸಂದರ್ಭದಲ್ಲಿ ಮುಂದಿನ ಫೆಬ್ರವರಿಯಲ್ಲಿ ಅಂದರೆ 2025ರಲ್ಲಿ ಮದುವೆ ನಡೆಯಬಹುದಾ ಎಂದು ಸೂರಜ್ ಕೇಳುತ್ತಾರೆ. ಆಗ ಆಂಕರ್ ಅನುಶ್ರೀ ಇಲ್ಲ ಕಣ್ರೋ ನಾನು ಅಪ್ಪು ಫ್ಯಾನ್. ಹೀಗಾಗಿ ಮಾರ್ಚ್ ನಲ್ಲಿ ಮದುವೆ ಆಗಬಹುದು ಎಂದು ಹೇಳಿದ್ದರು.
ಅಪ್ಪು ಬರ್ತಡೆ ದಿನ ಶುಭ ಸುದ್ದಿ ರಿವೀಲ್ ಮಾಡುವುದಾಗಿ ಹೇಳಿದ ಅನುಶ್ರೀ ಅವರು ಈ ಮೂಲಕ ಶೀಘ್ರವೇ ಹಸೆಮಣೆ ಏರಲಿರುವ ಸುಳಿವನ್ನು ಅನುಶ್ರೀ ಆಗಲೇ ನೀಡಿದ್ದರು. ಇದೀಗ ಇಂದು (ಮಾರ್ಚ್ 17) ಪುನೀತ್ ರಾಜ್‌ಕುಮಾರ್ ಜನ್ಮದಿನ ಬಂದೇ ಬಿಟ್ಟಿದೆ. ಅನುಶ್ರೀ ಮದುವೆ ಬಗ್ಗೆ ಯಾವ ಅಪ್‌ಡೇಟ್ ಕೊಡ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇಂದು ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಅನುಶ್ರೀ ಮದುವೆ ಡೇಟ್ ಹೇಳುತ್ತಾರಾ ಅಥವಾ ಮದುವೆ ಆಗುವ ಹುಡುಗನನ್ನು ಪರಿಚಯ ಮಾಡಿ ಕೊಡ್ತಾರಾ ಎಂಬ ಅನೇಕ ಪ್ರಶ್ನೆಗಳು ಜನರ ಮನಸ್ಸಲ್ಲಿ ಓಡುತ್ತಿವೆ. ಎಲ್ಲದಕ್ಕೂ ಇದೇ (ಮಾರ್ಚ್ 17) ಉತ್ತರ ಸಿಗಲಿದೆ.












Click it and Unblock the Notifications