ಆಂಕರ್ ಅನುಶ್ರೀ ಕಾರಣಕ್ಕೆ ಅರ್ಜುನ್ ಜನ್ಯ ಬಾಳಲ್ಲಿ ಬಿರುಗಾಳಿ ಅಂತಾ... Anchor Anushree

ಆಂಕರ್ ಅನುಶ್ರೀ ಮದುವೆ ಯಾವಾಗ.. ಆಂಕರ್ ಅನುಶ್ರೀ ಮದುವೆ ಆಗೋದು ಯಾವಾಗ... ಹೀಗೆ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಪ್ರತಿದಿನ ಬೆಳಗಾದರೂ ಅವರ ಅಭಿಮಾನಿಗಳು ಚರ್ಚೆ ಮಾಡುತ್ತಾರೆ. ಹಾಗೇ ಕನ್ನಡದ ನಂಬರ್ 1 ಆಂಕರ್ ಆಗಿರುವ ಅನುಶ್ರೀ ಅವರ ಮದುವೆ ಬಗ್ಗೆ ಭಾರಿ ದೊಡ್ಡ ಕುತೂಹಲ ಕೂಡ ಮೂಡಿದೆ. ಹೀಗಿದ್ದಾಗಲೇ, ಅರ್ಜುನ್ ಜನ್ಯ ಅವರ ಜೊತೆಗೆ ಆಂಕರ್ ಅನುಶ್ರೀ ಮದುವೆ ಅಂತಾ...

ಆಂಕರ್ ಅನುಶ್ರೀ ಅವರು ಸಾಕಷ್ಟು ಕಷ್ಟಗಳನ್ನು ಜೀವನದಲ್ಲಿ ಎದುರಿಸಿ ನಿಂತು ಇಂದು ಈ ಹಂತಕ್ಕೆ ಬೆಳೆದು ನಿಂತಿದ್ದಾರೆ. ಜೀವನದಲ್ಲಿ ಇಷ್ಟೆಲ್ಲಾ ನೋವು & ನಲಿವು ಕಂಡಿರುವ ಆಂಕರ್ ಅನುಶ್ರೀ ಅವರು ಮದುವೆ ಆಗೋದು ಯಾವಾಗ? ಅನ್ನೋ ಚರ್ಚೆ ಕೂಡ ಜೋರಾಗಿ ಇತ್ತು. ಇಷ್ಟೆಲ್ಲದರ ನಡುವೆ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ನಡುವೆ ಪ್ರೀತಿ ಇದೆ. ಇಬ್ಬರೂ ಲವ್ ಮಾಡುತ್ತಿದ್ದು, ಮದುವೆ ಆಗುತ್ತಾರೆ ಅನ್ನೋ ಸುದ್ದಿ ಕೂಡ ಕಾಡ್ಗಿಚ್ಚಿನ ರೀತಿ ಎಲ್ಲೆಡೆ ಹಬ್ಬಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಕಾರಣಕ್ಕೆ ಅರ್ಜುನ್ ಜನ್ಯ ಬಾಳಲ್ಲಿ ಬಿರುಗಾಳಿ ಅಂತಾ...

Anchor Anushree And Arjun Janya Friendship Is Creating Trend

ಆಂಕರ್ ಅನುಶ್ರೀ ಕಾರಣಕ್ಕೆ ಅರ್ಜುನ್ ಜನ್ಯ...

ಅರ್ಜುನ್ ಜನ್ಯ & ಆಂಕರ್ ಅನುಶ್ರೀ ನಡುವೆ ಲವ್ ಸ್ಟೋರಿ ಇದೆ, ಇಬ್ಬರೂ ಮದುವೆ ಕೂಡ ಆಗಲಿದ್ದಾರೆ ಅನ್ನೋ ಸುದ್ದಿ ಹಲವು ವರ್ಷಗಳಿಂದ ಕೂಡ ಹರಿದಾಡುತ್ತಿದೆ. ಜೀ ಕನ್ನಡದಲ್ಲಿ ಬರುವ ರಿಯಾಲಿಟಿ ಶೋಗಳಲ್ಲಿ ಅರ್ಜುನ್ ಜನ್ಯ & ಆಂಕರ್ ಅನುಶ್ರೀ ಅವರ ತುಂಟಾಟ ಪದೇ ಪದೇ ವೈರಲ್ ಕೂಡ ಆಗುತ್ತಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಕಾರಣಕ್ಕೆ ಅರ್ಜುನ್ ಜನ್ಯ ಬಾಳಲ್ಲಿ ಬಿರುಗಾಳಿ ಅಂತಾ...

ಆಂಕರ್ ಅನುಶ್ರೀ ಅವರು ಅರ್ಜುನ್ ಜನ್ಯ ಜೊತೆಗೆ ಸದಾ ತುಂಟಾಟ ಮಾಡುತ್ತಲೇ ಇರ್ತಾರೆ. ಹೌದು, ಅರ್ಜುನ್ ಜನ್ಯ & ಆಂಕರ್ ಅನುಶ್ರೀ ಸರಿಗಮಪ ವೇದಿಕೆ ಮೇಲೆ ಸಖತ್ ಸ್ಟೆಪ್ ಹಾಕಿ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಅಲ್ಲದೆ ಇದೇ ವಿಡಿಯೋ ಕಾರಣಕ್ಕಾಗಿ ಇದೀಗ ಅರ್ಜುನ್ ಜನ್ಯ ಅವರ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಆಂಕರ್ ಅನುಶ್ರೀ ಕಾರಣಕ್ಕೆ ಅರ್ಜುನ್ ಜನ್ಯ ಬಾಳಲ್ಲಿ ದೊಡ್ಡ ಬಿರುಗಾಳಿ ಅಂತಾ ಟ್ರೋಲ್ ಮಾಡಲಾಗುತ್ತಿದೆ. ಅಲ್ಲದೆ ಅರ್ಜುನ್ ಜನ್ಯ ಅವರು ತಮ್ಮ ಕುಟಂಬದ ಬಗ್ಗೆ ಮಾತನಾಡಿರುವ ವಿಡಿಯೋ ಹಾಕಿ ಎಡಿಟ್ ಮಾಡಲಾಗಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿರುವ ಈ ಸುದ್ದಿಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ!

ಅರ್ಜುನ್ ಜನ್ಯ & ಆಂಕರ್ ಅನುಶ್ರೀ ಮದುವೆ?

ಒಟ್ನಲ್ಲಿ ಅರ್ಜುನ್ ಜನ್ಯ & ಆಂಕರ್ ಅನುಶ್ರೀ ಮದುವೆ ಆಗುತ್ತಾರೆ.. ಮದುವೆ ಆಗುತ್ತಾರೆ... ಅನ್ನೋ ಸುದ್ದಿ ಕಿಚ್ಚು ಹೊತ್ತಿಸುತ್ತಲೇ ಇದೆ. ಹಲವಾರು ವರ್ಷಗಳಿಂದಲೂ ಈ ಸುದ್ದಿ ಹೀಗೆ ಹಬ್ಬಿದ್ದರೂ ಇಬ್ಬರು ಮದುವೆ ಆಗಿಲ್ಲ. ಅಲ್ಲದೆ ಹೀಗೆ ಅರ್ಜುನ್ ಜನ್ಯ & ಆಂಕರ್ ಅನುಶ್ರೀ ಅವರು ಮಾಡುವ ತುಂಟಾಟ ಕೇವಲ ರಿಯಾಲಿಟಿ ಶೋಗಳಿಗೆ ಮೀಸಲು. ಇಬ್ಬರೂ ನಿಜವಾಗೂ ಪ್ರೀತಿ ಮಾಡುತ್ತಿಲ್ಲ ಎಂಬ ಮಾತು ಕೂಡ ಇದೆ. ಹೀಗಾಗಿ, ಮುಂದೆ ಈ ವಿಚಾರ ಹೇಗೆಲ್ಲಾ ತಿರುವು ಪಡೆಯಬಹುದು? ಅನ್ನೋದನ್ನ ಕಾದು ನೋಡಬೇಕಿದೆ.

ಅನುಶ್ರೀ ಮದುವೆ ಯಾವಾಗ ಅಂದ್ರೆ...

ಆಂಕರ್ ಅನುಶ್ರೀ ಅವರಿಗೆ 36 ವರ್ಷ ವಯಸ್ಸು ಕಳೆದರೂ ಯಾಕೆ ಮದುವೆ ಆಗಿಲ್ಲ? ಅನ್ನೋ ಪ್ರಶ್ನೆ ಅಭಿಮಾನಿಗಳು ಕೇಳ್ತಾನೆ ಇದ್ದರು. ಯಾಕಂದ್ರೆ ಕನ್ನಡ ನಾಡಿನ ಜನರು ಆಂಕರ್ ಅನುಶ್ರೀ ಅವರ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ & ಗೌರವ ಇಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ಪದೇ ಪದೇ ಆಂಕರ್ ಅನುಶ್ರೀ ಅವರ ಮದುವೆಗಾಗಿ ಕಾಯುತ್ತಿದ್ದಾರೆ ಜನಗಳು. 1988ರ ಜನವರಿ 25 ರಂದು ಜನಿಸಿದ್ದ ಆಂಕರ್ ಅನುಶ್ರೀ ಅವರು, ಕಡುಬಡ ಕುಟುಂಬದಿಂದ ಬೆಳೆದು ಬಂದು ದೊಡ್ಡ ಸಾಧನೆ ಮಾಡಿ ಮನೆ ಮನೆಯಲ್ಲೂ ಮಾತಾಗಿದ್ದಾರೆ. ಹೀಗಿದ್ದಾಗ ಶೀಘ್ರದಲ್ಲೇ ಅವರ ಮದುವೆ ಅನ್ನೋ ಮಾತು ಓಡಾಡುತ್ತಿವೆ.

ಆಂಕರ್ ಅನುಶ್ರೀ ಅಂದ್ರೆ ಮಾಸ್.. ಆಂಕರ್ ಅನುಶ್ರೀ ಅಂದ್ರೆ ಕ್ಲಾಸ್.. ಆಂಕರ್ ಅನುಶ್ರೀ ಅಂದ್ರೆ ಕನ್ನಡ ಕಿರುತೆರೆಯ ಸೂಪರ್ ಸ್ಟಾರ್ ಅಂತಾ ಕಣ್ಣುಮುಚ್ಚಿಕೊಂಡು ಹೇಳಬಹುದು. ಆಂಕರ್ ಅನುಶ್ರೀ ಹೆಸರು ಕೇಳಿದ್ರೆ ಸಾಕು ಟಿಆರ್‌ಪಿ ತಾನಾಗಿ ತಾನೇ ಓಡೋಡಿ ಬಂದು ಬಿಡುತ್ತೆ ಅನ್ನೋ ಕಾಮಿಡಿ ಟಿವಿ ಚಾನೆಲ್‌ಗಳ ಆಫಿಸ್‌ನಲ್ಲಿ ಕಾಮನ್. ಯಾಕಂದ್ರೆ ಆಂಕರ್ ಅನುಶ್ರೀ ಒಂದು ಬಾರಿ ಸ್ಟೇಜ್ ಹತ್ತಿ ಆಂಕರಿಂಗ್ ಮಾಡಲು ನಿಂತರೆ, ಆಡ್ ಬಂದರೂ ಜನ ಚಾನಲ್ ಚೇಂಜ್ ಮಾಡದೇ ಆಂಕರ್ ಅನುಶ್ರೀ ಅವರ ಮಾತಿಗಾಗಿ ಕಾಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+