200 ದಿನದಲ್ಲಿ ಬರ್ತಿದ್ದಾರೆ ಅಲ್ಲು ಅರ್ಜುನ್: ‘ಪುಷ್ಪ-2’ ಸಿನಿಮಾ ಹವಾ ಬಲು ಜೋರು!
ನಟ ಅಲ್ಲು ಅರ್ಜುನ್ ಭರ್ಜರಿಯಾಗಿ ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್ ಮೇಲೆ ಖದರ್ ತೋರಿಸಲು ಸಜ್ಜಾಗಿದ್ದಾರೆ. 'ಪುಷ್ಪ-1' ಭರ್ಜರಿ ಸಕ್ಸಸ್ ಬಳಿಕ ಇದೀಗ 'ಪುಷ್ಪ-2' ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. 'ಪುಷ್ಪ-2' ಇನ್ನೇನು ಕೇವಲ 200 ದಿನದಲ್ಲಿ ಭರ್ಜರಿಯಾಗಿ ರಿಲೀಸ್ ಆಗಲಿದೆ. ಈ ಮೂಲಕ ನಟ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಪ್ರತಿದಿನ ವಿಶೇಷ ಸುದ್ದಿ ಸಿಗೋದು ಪಕ್ಕಾ ಆಗಿದೆ. ಹಾಗಾದರೆ ಯಾವಾಗ ರಿಲೀಸ್ ಆಗುತ್ತೆ ಅಲ್ಲು ಸಿನಿಮಾ?
2024ರ ಆಗಸ್ಟ್ 15ಕ್ಕೆ 'ಪುಷ್ಪ-2' ತೆರೆಗೆ ಅಪ್ಪಳಿಸಲಿದ್ದು ಈ ಬಾರಿಯು ಸಖತ್ ಸದ್ದು ಮಾಡುವ ನಿರೀಕ್ಷೆ ಹುಟ್ಟುಹಾಕಿದೆ. 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ಪುಷ್ಪ-1 ಚಿತ್ರ 350 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಪುಷ್ಪ ಯಶಸ್ಸಿನ ಬಳಿಕ ಪುಷ್ಪ-2 ನೋಡೋಕೆ ಅಲ್ಲು ಅರ್ಜುನ್ ಅಭಿಮಾನಿಗಳು ಕಾಯುತ್ತಿದ್ದರು. ಹೀಗಾಗಿಯೇ, 'ಪುಷ್ಪ-2' ರಿಲೀಸ್ ಡೇಟ್ ಘೋಷಣೆ ಮಾಡಲಾಗಿತ್ತು. ಇದೀಗ ಸಿನಿಮಾ ರಿಲೀಸ್‌ಗೆ ಸರಿಯಾಗಿ 200 ಮಾತ್ರ ಬಾಕಿ ಇದ್ದು ಭರ್ಜರಿ ಸರ್ಪ್ರೈಸ್ ಕೊಡಲು ಸಜ್ಜಾಗಿದೆ ಸಿನಿಮಾ ಟೀಂ!

ರಶ್ಮಿಕಾ & ಅಲ್ಲು ಜೋಡಿ ಮೋಡಿ
ರಶ್ಮಿಕಾ ಮಂದಣ್ಣ & ಅಲ್ಲು ಅರ್ಜುನ್ ಜೋಡಿಯ, ಬಹು ನಿರೀಕ್ಷಿತ ಸಿನಿಮಾಗೆ ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ. 'ಪುಷ್ಪ-1' ಮೂಲಕ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿದ್ದು, ಹತ್ತಾರು ದಾಖಲೆ ಬರೆದಿದ್ದ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಮತ್ತೆ ಬೆಳ್ಳಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. 'ಪುಷ್ಪ-2' ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಅದ್ಧೂರಿಯಾಗಿ ಶೂಟಿಂಗ್ ನಡೆಯುತ್ತಿದೆ. ಹೀಗಿದ್ದಾಗ ಸ್ಟೈಲಿಶ್ ಸ್ಟಾರ್ & ಐಕಾನ್ ಸ್ಟಾರ್ ಬಿರುದಾಂಕಿತ ಅಲ್ಲು ಅರ್ಜುನ್ ಫ್ಯಾನ್ಸ್‌ಗಳಿಗೆ, ಭರ್ಜರಿ ಸುದ್ದಿ ನೀಡಿದ್ದಾರೆ.
ಪ್ಯಾನ್ ವರ್ಲ್ಡ್ ಸಿನಿಮಾ 'ಪುಷ್ಪ-2'?
ಭಾರತವು ಸೇರಿದಂತೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಲ್ಲು ಅರ್ಜುನ್‌ಗೆ ಫ್ಯಾನ್ಸ್ ಇದ್ದಾರೆ. ಇವರೆಲ್ಲಾ ಪುಷ್ಪ-2 ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಕೊಂಡಿದ್ದಾರೆ. ಹತ್ತಿರ ಹತ್ತಿರ 2 ವರ್ಷದಿಂದ ಪುಷ್ಪ-2 ಸಿನಿಮಾಗೆ ಕಾಯುತ್ತಿದ್ದಾರೆ. ಹೀಗಾಗಿ ಅವರಿಗೆ ಸಿಹಿಸುದ್ದಿ ನೀಡಲು ಅಲ್ಲು ಅರ್ಜುನ್ ಹಗಲು, ರಾತ್ರಿ ಲೆಕ್ಕಿಸದೆ ಶೂಟಿಂಗ್ ನಡೆಸುತ್ತಿದ್ದಾರೆ. ಪುಷ್ಪ-2 ರಿಲೀಸ್ ಡೇಟ್ ಕೂಡ ಫೈನಲ್ ಆಗಿದ್ದು ಫ್ಯಾನ್ಸ್ ಬೆಳ್ಳಿತೆರೆ ಮೇಲೆ ಸಿನಿಮಾ ಕಣ್ತುಂಬಿಕೊಳ್ಳಬಹುದು. ಆದರೆ ಅದಕ್ಕಾಗಿ ಕೇವಲ 200 ದಿನಗಳ ಕಾಲ ಕಾಯಬೇಕಿದೆ ಅಷ್ಟೇ.

ಬಾಕ್ಸ್ ಆಫಿಸ್ ಉಡೀಸ್ ಪಕ್ಕಾ?
ಟಾಲಿವುಡ್ ಡೈರೆಕ್ಟರ್ ಸುಕುಮಾರ್ ಸೇರಿದಂತೆ ಅಲ್ಲು ಅರ್ಜುನ್ ಮತ್ತೆ ಬಾಕ್ಸಾಫೀಸ್ ಉಡೀಸ್ ಮಾಡಲು ಸಜ್ಜಾಗಿದ್ದಾರೆ. ಅಲ್ಲು ಅಭಿನಯದ ಬಹುನಿರೀಕ್ಷಿತ ಪುಷ್ಪ-2 ಶೂಟ್ ಭರ್ಜರಿಯಾಗಿ ನಡೆಯುತ್ತಿದೆ ಪುಷ್ಪ-1 ಮೂಲಕ ಫ್ಯಾನ್ಸ್ ಎದೆಯಲ್ಲಿ ಹಲ್‌ಚಲ್ ಎಬ್ಬಿಸಿದ್ದ ಪುಷ್ಪರಾಜ್‌ಗಾಗಿ ಕೋಟ್ಯಂತರ ಫ್ಯಾನ್ಸ್ ಕಾಯುತ್ತಿದ್ದಾರೆ. ಅದರಲ್ಲೂ ಸಾವಿರಾರು ಥಿಯೇಟರ್‌ನಲ್ಲಿ ಪುಷ್ಪ-2ಗೆ ರೆಡ್ ಕಾರ್ಪೆಟ್ ಹಾಸಲಾಗಿದೆ. ಇದೇ ಕಾರಣಕ್ಕೆ 'ಪುಷ್ಪ-2' ಸಿನಿಮಾ ಪ್ಯಾನ್ ವರ್ಲ್ಡ್‌ನಲ್ಲಿ ರಿಲೀಸ್ ಆಗುವ ನಿರೀಕ್ಷೆ ದಟ್ಟವಾಗಿದೆ. ಭಾರತೀಯ ಭಾಷೆಗಳ ಜೊತೆಗೆ, ವಿದೇಶಿ ಭಾಷೆಗೂ ಡಬ್ ಆಗುವ ಸಾಧ್ಯತೆ ದಟ್ಟವಾಗಿದೆ.
ಹೊಸ ವರ್ಷಕ್ಕೆ ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್‌ನ ಕೊಡುತ್ತಿದ್ದಾರೆ. ಹೀಗಿದ್ದಾಗ ಅವರ ಬಹುನಿರೀಕ್ಷಿತ 'ಪುಷ್ಪ-2' ಸಿನಿಮಾ ರಿಲೀಸ್ ಆಗೋಕೆ ಕೇವಲ 200 ಉಳಿದಿದೆ. ಈ ಮೂಲಕ ಈ ಬಾರಿ ಅಲ್ಲು ಅರ್ಜುನ್ ಬಾಕ್ಸ್ ಆಫಿಸ್ ಅಖಾಡ ತಮ್ಮದಾಗಿಸಿಕೊಳ್ಳಲು ಕಾಯುತ್ತಿದ್ದಾರೆ. ಈ ಸಿನಿಮಾ 1000 ಕೋಟಿ ರೂಪಾಯಿ ಗಳಿಸುವ, ಹೊಸ ಇತಿಹಾಸ ನಿರ್ಮಿಸುವ ಎಲ್ಲಾ ನಿರೀಕ್ಷೆಗಳೂ ಇವೆ. ಹೀಗಾಗಿ ಇದಕ್ಕೆಲ್ಲಾ ಉತ್ತರವನ್ನು ಪಡೆಯಲು ಇನ್ನೂ 199 ದಿನಗಳ ಕಾಲ ಕಾಯಬೇಕಿದೆ. ಆ ನಂತರವೇ ಇದಕ್ಕೆಲ್ಲಾ ಉತ್ತರ ಸಿಗಲಿದೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications