Ajith Car Accident: ರೇಸಿಂಗ್ ವೇಳೆ ಎರಡನೇ ಬಾರಿ ನಟ ಅಜಿತ್ ಕಾರು ಅಪಘಾತ, ಮುಂದೇನಾಯ್ತು?

ಬೆಂಗಳೂರು, ಫೆಬ್ರವರಿ 23: ತಮಿಳಿನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿ ರಂಜಿಸಿರುವ ಸೂಪರ್ ಸ್ಟಾರ್ ನಟ ಅಜಿತ್ (Ajith Kumar Car Racing) ಅವರಿಗೆ ಕಾರು ರೇಸಿಂಗ್ ನಲ್ಲಿ ಇನ್ನಿಲ್ಲದ ಆಸಕ್ತಿ. ಆಗಾಗ ಅವರು ಕಾರು ರೇಸಿಂಗ್‌ನಲ್ಲಿ ಪಾಲ್ಗೊಳ್ಳಲು ವಿದೇಶಗಳಿಗೂ ಹೋಗಿ ಬರುತ್ತಾರೆ. ಹೀಗೆ ರೇಸಿಂಗ್ ವೇಳೆ ಎರಡು ವಾರದ ಹಿಂದೆ ನಟ ಅಜಿತ್ ಅವರ ಕಾರು ಪಲ್ಟಿಯಾಗಿತ್ತು. ಇದೀಗ ಮತ್ತೆ ಎರಡನೇ ಸಾರಿ ಅಜಿತ್ ಕಾರು ಆಕ್ಸಿಟೆಂಡ್ ಆಗಿದೆ.

ಹೌದು, ನಟ ಅಜಿತ್ ಅವರ ಮ್ಯಾನೇಜರ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ವಿಡಿಯೋ ಹಂಚಿಕೊಂಡಿದ್ದಾರೆ. ಸ್ಪೇನ್ ದೇಶದಲ್ಲಿ ನಡೆಯುತ್ತಿದ್ದ ವ್ಯಾಲೆನ್ಸಿಯಾ ರೇಸಿಂಗ್ ಸ್ಪರ್ಧೆಯಲ್ಲಿ ಅಜಿತ್ ಅವರು ಎಂದಿನಂತೆ ಪಾಲ್ಗೊಂಡಿದ್ದರು. ರೇಸಿಂಗ್ ಶುರುವಾಗಿತ್ತು. ಅವರು 14ನೇ ಸ್ಥಾನದಲ್ಲಿದ್ದರು ಎಂದು ಹೇಳಲಾಗುತ್ತಿದೆ.

Ajith Kumar Car Racing Again Accident updates in Kannada

ಅಜಿತ್ ಕುಮಾರ್ ಸುರಕ್ಷಿತ: ಫ್ಯಾನ್ಸ್ ಖುಷ್

ಹೀಗೆ ರೇಸಿಂಗ್ ಮಾಡುತ್ತಿರುವಾಗ 6ನೇ ರೌಂಡ್‌ನಲ್ಲಿ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಆದರೆ ಅಜಿತ್ ಅವರಿಗೆ ಯಾವುದೇ ತೊಂದರೆ ಆಗಿಲ್ಲ. ಅದೃಷ್ಟವಶಾತ್ ಏನು ಆಗಿಲ್ಲ ಸುರಕ್ಷಿತವಾಗಿದ್ದಾರೆ. ಈ ಬಗ್ಗೆ ಅವರ ಮ್ಯಾನೇಜರ್ ಹಂಚಿಕೊಂಡಿರುವ ವಿಡಿಯೋ ಮಾಹಿತಿ ನೀಡಿದೆ. ಈ ಹಿಂದೆ ನಡೆದಿದ್ದ ಅಪಘಾತದಲ್ಲಿ ಅಜಿತ್ ಅವರ ಫ್ಯಾನ್ಸ್ ಸಿಕ್ಕಾಪಟ್ಟೆ ಆತಂಕಕ್ಕೆ ಒಳಗಾಗಿದ್ದರು. ಆಗಲೂ ಅವರು ಸುರಕ್ಷಿತವಾಗಿ ಕಾರಿನಿಂದ ಹೊರ ಬಂದಿದ್ದರು.

ಮೊದಲ ಬಾರಿಗೆ ಕಾರು ನಿಯಂತ್ರಣ ತಪ್ಪಿತ್ತು. ಆದರೆ ಎರಡನೇ ಬಾರಿ ಅವರ ಕಾರು ನಿಯಂತ್ರಣ ತಪ್ಪಿತಲ್ಲದೇ ಪಲ್ಟಿ ಹೊಡೆದಿದೆ. ರನ್ ಮಾಡುವಾಗಲೇ ಅವರ ಕಾರು ಮುಂದಿನ ಕಾರನ್ನು ಸಮೀಪಿ ನಂತರ ಪಲ್ಟಿ ಆಗಿದೆ. ಇದರ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿನಿಗೆ ಏನು ಆಗದಿರಲಿದೆ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಪೂರ್ಚುಗಲ್‌ನಲ್ಲಿ ನಡೆದ ರೇಸಿಂಗ್ ವೇಳೆ ಟ್ರ್ಯಾಕ್‌ನಲ್ಲಿ ಪರೀಕ್ಷೆ ಸಂದರ್ಭದಲ್ಲಿ ಅವರ ಕಾರು ಅಪಘಾತಕ್ಕೆ ಈಡಾಗಿತ್ತು. ಕಾರು ಹಾನಿಗೀಡಾಯಿತು. ಅವರು ಸುರಕ್ಷಿತವಾಗಿ ಕಾರಿನಿಂದ ಹೊರ ಬಂದಿದ್ದರು.

ಕೆಜಿಎಫ್‌ 3 ನಲ್ಲಿ ನಟ ಅಜಿತ್?

ಇದೇ ಫೆಬ್ರವರಿ ಮೊದಲ ವಾರ ಅಜಿತ್ ಕುಮಾರ್ ಅವರ ನಟನೆಯ 'ವಿದಾಮುಯಾರ್ಚಿ' ಸಿನಿಮಾ ತೆರೆ ಕಂಡಿತ್ತು. ಪ್ರೇಕಕ್ಷರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಈ ಸಿನಿಮಾ ಸೇರಿದಂತೆ ತಮಿಳಿನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ಮೂಲಗಳ ಪ್ರಕಾರ, ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಅವರು KFG 3 ಸಿನಿಮಾದಲ್ಲೂ ಅಜಿತ್ ಅವರು ನಟಿಸಲಿದ್ದಾರೆ ಎಂಬ ವದಂತಿ ಹರಿಡಿದೆ. ಈ ಬಗ್ಗೆ ಪ್ರಶಾಂತ್ ನೀಲ್ ಅವರಾಗಲಿ, ಅಜಿತ್ ಅವರಾಗಲಿ ತುಟಿ ಬಿಚ್ಚಿಲ್ಲ. ಮುಂದಿನ ದಿನಗಳಲ್ಲಿ ಬಗ್ಗೆ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+