ಬಿಗ್‌ಬಾಸ್‌ ಬೆನ್ನಲ್ಲೇ ದೊಡ್ಡ ಸರ್‌ಪ್ರೈಸ್‌ ಕೊಟ್ಟ ಐಶ್ವರ್ಯ ಸಿಂಧೋಗಿ, ಏನದು?

ಬಿಗ್‌ಬಾಸ್‌ ಕನ್ನಡ ಸೀಸನ್‌-11ರ ಸ್ವರ್ಧಿಯಾಗಿ ಕನ್ನಡದ ಮನೆಮಾತಾಗಿದ್ದ ಐಶ್ವರ್ಯ ಸಿಂಧೋಗಿ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಬಿಗ್‌ಬಾಸ್‌ ಬಳಿಕ ಐಶ್ವರ್ಯಾ ಮುಂದಿನ ನಡೆ ಏನು ಎಂದು ಹಲವರು ನಿರೀಕ್ಷೆಯಲ್ಲಿದ್ದರು. ಇತ್ತೀಚೆಗಷ್ಟೇ ದುಬಾರಿ ಕಾರು ಖರೀದಿಸಿ ಫುಲ್‌ ಜಾಲಿ ಮೂಡ್‌ನಲ್ಲಿದ್ದರು. ಇದೀಗ ಇದ್ದಕ್ಕಿದ್ದಂತೆ ಐಶ್ವರ್ಯ ತನ್ನ ಅಭಿಮಾನಿಗಳಿಗೆ ಸರ್‌ಪ್ರೈಸ್‌ವೊಂದನ್ನು ನೀಡಿದ್ದಾರೆ. ಈ ವಿಚಾರ ಕೇಳಿದ್ರೆ ಅವರ ಅಭಿಮಾನಿಗಳಿಗೆ ಫುಲ್‌ ಖುಷ್‌ ಆಗುವುದು ಗ್ಯಾರಂಟಿ. ಏನದು ಸರ್‌ಪ್ರೈಸ್‌ ಗೊತ್ತಾ?

ಧಾರಾವಾಹಿ ಮೂಲಕ ತಮ್ಮ ಬೋಲ್ಡ್‌ ಲುಕ್‌ನಿಂದಲೇ ಎಲ್ಲರ ಗಮನ ಸೆಳೆದಿದ್ದ ಐಶ್ವರ್ಯ, ತಮ್ಮ ವೈಯಕ್ತಿಕ ಜೀವನದ ಕುರಿತು ಬಿಗ್‌ ಬಾಸ್‌ ಶೋನಲ್ಲಿ ಹೇಳಿಕೊಂಡಿದ್ದರು. ಪೋಷಕರನ್ನು ಕಳೆದುಕೊಂಡು ಅನಾಥೆಯಾಗಿ ಬೆಳೆದಿದ್ದರ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದರು. ಇತ್ತೀಚೆಗೆ ಹೊಸ ಕಾರು ಖರೀದಿಸಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಶಿಶಿರ್‌ ಕೂಡ ಐಶು ಜೊತೆಗಿದ್ದರು. ನಾಗಿಣಿ ಸೀರಿಯಲ್‌ನಲ್ಲಿ ಖಡಕ್‌ ವಿಲನ್‌ ಪಾತ್ರದಿಂದಲೇ ಐಶ್ವರ್ಯ ಜನಪ್ರಿಯತೆ ಪಡೆದಿದ್ದರು. ಆದರೆ ಬಿಗ್‌ಬಾಸ್‌ ನಂತರ ಅವರು ಸೀರಿಯಲ್‌ಗಳಿಂದ ದೂರವಿದ್ದರು.

aishwarya-sindhogi-returns-to-tv-with-new-serial-after-bigg-boss

ಇದೀಗ ಅವರು ಮತ್ತೆ ತಮ್ಮ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಬಿಗ್‌ ಬಾಸ್‌ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದ್ದು, ಇದೀಗ ಮತ್ತೊಂದು ಹೊಸ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮತ್ತೊಂದು ಖುಷಿಯ ವಿಚಾರ ಅಂದರೆ ಈ ಧಾರಾವಾಹಿಯಲ್ಲೂ ಐಶ್ವರ್ಯ ವಿಲನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಐಶ್ವರ್ಯ ನಟಿಸುತ್ತಿರುವ ಧಾರಾವಾಹಿ ಯಾವುದು, ಅವರ ಪಾತ್ರವಾದರೂ ಎಂಥದ್ದು? ಎಂಬುವುದರ ಮಾಹಿತಿ ಇಲ್ಲಿದೆ. "ನಿನ್ನ ಜೊತೆ ನನ್ನ ಕಥೆ" ಧಾರಾವಾಹಿ ಮೂಲಕ ಮತ್ತೆ ಕಿರುತೆರೆಯಲ್ಲಿ ಐಶ್ವರ್ಯ ಮಿಂಚಲಿದ್ದಾರೆ. ಆದರೆ ಈ ಧಾರವಾಹಿಯಲ್ಲಿ ಸಿಂಧೋಗಿ ನಾಯಕಿಯೋ ಅಥವಾ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಾರಾ? ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆಮಾಡಿದೆ.

ಪ್ರೋಮೊದಲ್ಲಿ ಏನಿದೆ?

ರಿಲೀಸ್‌ ಆಗಿರುವ ಪ್ರೋಮೋದಲ್ಲಿ ಐಶ್ವರ್ಯಾ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೆಸರು ಮಾತ್ರ ಸಾಕ್ಷಿ, ಆದರೆ ಮನಸಾಕ್ಷಿ ಇಲ್ಲ. ಮಹಾಭಾರತದಲ್ಲಿ ಮೆರೆಯೋ ದುರಹಂಕಾರಿ ದುರ್ಯೋಧನ ನನಗೆ ಇಷ್ಟ ಎಂಬ ಡೈಲಾಗ್‌ ಪ್ರೋಮೊದಲ್ಲಿದೆ. ಈ ಹಿನ್ನೆಲೆ ಇವರು ವಿಲನ್‌ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. ನಿನ್ನ ಜೊತೆ ನನ್ನ ಕಥೆಯಲ್ಲಿ ಸಿಂಧೋಗಿ ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿಂಧೋಗಿ ಈ ಹಿಂದೆ ʻನಾಗಿಣಿ 2', ʻಮಂಗಳ ಗೌರಿ ಮದುವೆʼ ಹಾಗೂ ʻನಮ್ಮ ಲಚ್ಚಿʼ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಐಶ್ವರ್ಯ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ʻಬಿಗ್‌ಬಾಸ್‌ʼ. ಸೀರಿಯಲ್‌ಗಳ ಜೊತೆಗೆ ಸಿಂಹಾದ್ರಿ, ʻಡಾರ್ಕ್‌ʼ ʻಸಂಯುಕ್ತ 2' ಮತ್ತು ʻಸೈತಾನ್‌ʼ ಸೇರಿದಂತೆ ಹಲವು ಸಿನಿಮಾಗಳಲ್ಲಿಯೂ ಐಶ್ವರ್ಯ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಶಿಶಿರ್‌ ಜೊತೆ ಫುಲ್‌ ಕ್ಲೋಸ್‌!

ಬಿಗ್‌ಬಾಸ್‌ ಬಳಿಕ ಇನ್‌ಸ್ಟಾಗ್ರಾಮ್‌ ರೀಲ್‌ಗಳಲ್ಲಿ ಹೆಚ್ಚು ಆಕ್ಟೀವ್‌ ಆಗಿರುವ ಸಿಂಧೋಗಿ, ಶಿಶಿರ್‌ ಅವರೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಅವರಿಬ್ಬರ ರೀಲ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸಿಂಧೋಗಿ ಶಿಶಿರ್‌ ಒಬ್ಬ ಒಳ್ಳೆಯ ಸ್ನೇಹಿತ, ಬಿಸಿನೆಸ್‌ ಪಾರ್ಟ್‌ನರ್‌ ಕೂಡ ಹೌದು ಎಂದು ಹೇಳಿಕೊಂಡಿದ್ದರು. ಆದರೆ ಇವರಿಬ್ಬರು ಇತ್ತೀಚೆಗೆ ಜತೆಯಾಗಿ ಸುತ್ತಾಡುತ್ತಿದ್ದಾರೆ. ರೊಮ್ಯಾಂಟಿಕ್‌ ಹಾಡಿಗೆ ರೀಲ್ಸ್ ಕೂಡ ಮಾಡಿದ್ದರು. ಇವರಿಬ್ಬರ ಮಧ್ಯೆ ಲವ್‌ ಗಾಸಿಪ್‌ ಕೂಡ ಇದೆ. ಆದರೆ ಈ ಬಗ್ಗೆ ಅವರಿಬ್ಬರೂ ಯಾವುದೇ ಹೇಳಿಕೆಗಳನ್ನ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+