Actress: ರಶ್ಮಿಕಾ, ಆಶಿಕಾ, ಶ್ರೀಲೀಲಾ ಬೆನ್ನಲ್ಲೆ ಕನ್ನಡದ ಸಿಕ್ಸ್ ಪ್ಯಾಕ್ ಸುಂದರಿ ಟಾಲಿವುಡ್‌ಗೆ ಎಂಟ್ರಿ
ಬೆಂಗಳೂರು, ಜೂನ್ 25: ಕನ್ನಡದಲ್ಲಿ ನಟಿಮಣಿಯರಿಗೆ ಅವಕಾಶ ಸಿಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ಅವರೇ ಸ್ಪಷ್ಟಪಡಿಸಬೇಕು. ಮೊದಲು ಕನ್ನಡಕ್ಕೆ ಬೇರೆ ಭಾಷೆ ನಟಿಮಣಿಯರನ್ನು ಕರೆತರುತ್ತಿದ್ದರು. ಇದೀಗ ಕಾಲ ಬದಲಾಗಿದೆ. ನಮ್ಮ ಕನ್ನಡದ ನಟಿ ಮಣಿಯರೇ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ, ಅದು ಬೇರೆ ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇದಕ್ಕೆ ಕನ್ನಡದ ನಟಿ ರಶ್ಮಿಕಾ, ನಟಿ ಶ್ರೀಲೀಲಾ ಸಾಕ್ಷಿಯಾಗಿದ್ದಾರೆ. ನಟಿ ಆಶಿಕಾ ರಂಗನಾಥ್ ಸಹ ತೆಲುಗು ಪ್ರವೇಶಿಸಿದ್ದು, ಈ ಎಲ್ಲ ನಟಿಮಣಿಯರ ಬೆನ್ನಲ್ಲೆ ಕನ್ನಡದ ಸಿಕ್ಸ್ ಪ್ಯಾಕ್ಸ್ ಸುಂದರಿ ತೆಲುಗಿಗೆ ಎಂಟ್ರಿ ಕೊಟ್ಟಿದ್ದಾರೆ.
ಮಲ್ಲಿಡಿ ವಶಿಷ್ಟ ನಿರ್ದೇಶಿಸುತ್ತಿರುವ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರು ನಟಿಸುತ್ತಿರುವ 'ವಿಶ್ವಂಭರ' (Vishwambhara) ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಆಸ್ಕರ್ ಪ್ರಶಸ್ತಿ ವಿಜೇತ ಎಂ.ಕೀರವಾಣಿ ಸಂಗೀತ ನೀಡಲಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ನಟಿ ತ್ರಿಶಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿರಂಜೀವಿಗೆ ಎರಡನೇ ನಾಯಕಿಯಾಗಿ ಕನ್ನಡದ ನಟಿ ಆಶಿಕಾ ರಂಗನಾಥ್ ಅವರು ಆಯ್ಕೆ ಆಗಿದ್ದಾರೆ.

ಇದರ ಬೆನ್ನಲ್ಲೆ ಮತ್ತೋರ್ವ ಕನ್ನಡ ನಟಿ 'ವಿಶ್ವಂಭರ' ಸಿನಿಮಾ ತಂಡ ಸೇರಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕನ್ನಡದ ಸಿಕ್ಸ್ ಪ್ಯಾಕ್ ಸುಂದರಿ ಅಂತಲೇ ಕರೆಸಿಕೊಳ್ಳುವ ನಟಿ ನಿಶ್ವಿಕಾ ನಾಯ್ಡು (Nishvika Naidu) ಅವರು ಅಧಿಕೃತವಾಗಿ ಟಾಲಿವುಡ್ ಪ್ರವೇಶಿಸಿದಂತಾಗಿದೆ. ರಶ್ಮಿಕಾ, ಶ್ರೀಲೀಲಾ ಮತ್ತು ಆಶಿಕಾ ಬೆನ್ನಲ್ಲೆ, ಬೇರೆ ಚಿತ್ರರಂಗದಲ್ಲಿ ನಿಶ್ವಿಕಾ ತಮ್ಮ ಅದೃಷ್ಟ ಪರೀಕ್ಷೆ ಇಳಿಯಲಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಈ ''ವಿಶ್ವಂಭರ'' ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಅವರು ನಾಯಕ ನಟಿ ಆಗಿರದೇ, ಐಟಂ ಸಾಂಗ್‌ಗೆ ಮೆಗಾಸ್ಟಾರ್ ಜೊತೆಗೆ ಭರ್ಜರಿ ಸ್ಟೆಪ್ಸ್ ಹಾಕಲಿದ್ದಾರೆ. ಕನ್ನಡದ 'ಕರಟಕ ದಮನಕ' ಸಿನಿಮಾದಲ್ಲಿ ನಟ ಪ್ರಭುದೇವ್ ಜೊತೆಗೆ 'ಹಿತ್ತಲಕ್ಕ ಕರಿಬ್ಯಾಡ ಮಾವ..' ಎಂಬ ಹಾಡಿನಲ್ಲಿ ಕುಣಿದು ಬೇಷ್ ಅನ್ನಿಸಿಕೊಂಡಿದ್ದ ನಟಿ ನಿಶ್ವಿಕಾ ಅವರ ಡಾನ್ಸ್ ನೋಡಿಯೋ 'ವಿಶ್ವಂಭರ'ದಲ್ಲಿ ಅವಕಾಶ ಸಿಕ್ಕಿದೆ ಎನ್ನಲಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಗಳು ಮುಂದಿನ ದಿನಗಳಲ್ಲಿ ಸಿಗಲಿವೆ.
ಕನ್ನಡ ಸಿಕ್ಸ್ ಪ್ಯಾಕ್ ನಟಿ
ಹೌದು, ಸ್ಟಾರ್ ನಟರುಗಳೇ ಸಿಕ್ಸ್ ಪ್ಯಾಕ್ ದೇಹ ಹೊಂದಲು ಪರದಾಡುತ್ತಾರೆ. ಸೆಲೆಬ್ರೆಟಿಗಳಿಗೆ ದೈಹಿಕವಾಗಿ ಚೆಂದ ಕಾಣುವುದು ಮುಖ್ಯವಾಗಿರುತ್ತದೆ. ಅದಕ್ಕಾಗಿ ಜಿಮ್ ಹೋಗುತ್ತಾರೆ, ಯೋಗ ಇನ್ನಿತರ ವ್ಯಾಯಾಮ, ಡಯಟ್ ಮಾಡುತ್ತಾರೆ. ಆದರೆ ಸಿಕ್ಸ್ ಪ್ಯಾಕ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅಂಥಹರದಲ್ಲಿ ನಟಿ ನಿಶ್ವಿಕಾ ನಾಯ್ಡು ಅವರು ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಆರೋಗ್ಯ ಮತ್ತು ಸೌಂದರ್ಯಕ್ಕೆ, ಫಿಟ್ ಆಗಿರಲು ಅವರು ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರನ್ನು ಸ್ಯಾಂಡಲ್‌ವುಡ್ ಸಿಕ್ಸ್ ಪ್ಯಾಕ್ಸ್ ಸುಂದರಿ ಅಂತಲೇ ಕರೆಯುತ್ತಾರೆ.
-
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications