Aditya Dhar: ರಣವೀರ್ ಸಿಂಗ್ ಹಿಂದಿಕ್ಕಿ IMDb ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ 'ಧುರಂಧರ್ 2' ನಿರ್ದೇಶಕ ಆದಿತ್ಯ ಧರ್
ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ 'ಧುರಂಧರ್ 2' (Dhurandhar: The Revenge) ಚಿತ್ರದ ಕ್ರೇಜ್ ಈಗ ಡಿಜಿಟಲ್ ಲೋಕದಲ್ಲೂ ದಾಖಲೆ ಬರೆಯುತ್ತಿದೆ. ಪ್ರಖ್ಯಾತ ಸಿನಿಮಾ ಡೇಟಾಬೇಸ್ ಸಂಸ್ಥೆ IMDb ಬಿಡುಗಡೆ ಮಾಡಿರುವ 'ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿ'ಯಲ್ಲಿ ಈ ಚಿತ್ರದ ತಾರಾಗಣ ಹಾಗೂ ತಾಂತ್ರಿಕ ವರ್ಗದವರು ಪಾರುಪತ್ಯ ಸಾಧಿಸಿದ್ದಾರೆ.
ನಟ ಅಲ್ಲ, ನಿರ್ದೇಶಕನಿಗೆ ಸ್ಥಾನ
ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿರುವ 'ಧುರಂಧರ್ 2' ಚಿತ್ರದ ಯಶಸ್ಸು ಈಗ ಕೇವಲ ಕಲೆಕ್ಷನ್‌ಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ಐಎಂಡಿಬಿ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಈ ಚಿತ್ರದ ತಂಡವೇ ರಾರಾಜಿಸುತ್ತಿದೆ. ವಿಶೇಷವೆಂದರೆ, ಚಿತ್ರದ ನಾಯಕ ರಣವೀರ್ ಸಿಂಗ್ ಅವರನ್ನು ಹಿಂದಿಕ್ಕಿ ನಿರ್ದೇಶಕ ಆದಿತ್ಯ ಧರ್ ನಂಬರ್ 1 ಸ್ಥಾನಕ್ಕೇರಿ ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ನಟ-ನಟಿಯರು ಅಗ್ರಸ್ಥಾನದಲ್ಲಿರುವುದು ವಾಡಿಕೆ. ಆದರೆ 'ಧುರಂಧರ್ 2' ನಿರ್ದೇಶಕ ಆದಿತ್ಯ ಧರ್ ಅವರು ತಮ್ಮ ಅದ್ಭುತ ಮೇಕಿಂಗ್ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದು, ಈ ವಾರದ ಐಎಂಡಿಬಿ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ಇದು ಇತ್ತೀಚಿನ ದಿನಗಳಲ್ಲಿ ನಿರ್ದೇಶಕರಿಗೂ ಚಿತ್ರದ ಯಶಸ್ಸಿನಲ್ಲಿ ಸಮಾನ ಮನ್ನಣೆ ಸಿಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಐಎಂಡಿಬಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಚಿತ್ರದ ಬಹುತೇಕ ತಾರಾಗಣ ಕಾಣಿಸಿಕೊಂಡಿದೆ. ಆದಿತ್ಯ ಧರ್ ನಂಬರ್ 1 ಸ್ಥಾನ, ಸಾರಾ ಅರ್ಜುನ್ ಎರಡನೇ ಸ್ಥಾನ, ರಣವೀರ್ ಸಿಂಗ್ ಮೂರನೇ ಸ್ಥಾನ, ಉದಯ್‌ಬೀರ್ ಸಂಧು 7ನೇ ಸ್ಥಾನ, ಅರ್ಜುನ್ ರಾಂಪಾಲ್ 9ನೇ ಸ್ಥಾನ, ಸೌಮ್ಯಾ ಟಂಡನ್ 10ನೇ ಸ್ಥಾನದಲ್ಲಿದ್ದಾರೆ. ಕೇವಲ ಟಾಪ್ 10 ಮಾತ್ರವಲ್ಲದೆ, ಪಟ್ಟಿಯುದ್ದಕ್ಕೂ ಧುರಂಧರ್ ಚಿತ್ರದ ನಟರೇ ತುಂಬಿದ್ದಾರೆ. ಗೌರವ್ ಗೇರಾ (12), ಡ್ಯಾನಿಶ್ ಇಕ್ಬಾಲ್ (13), ಅಕ್ಷಯ್ ಖನ್ನಾ (16) ಮತ್ತು ಹಿರಿಯ ನಟ ರಾಕೇಶ್ ಬೇಡಿ (20) ಅವರು ಕೂಡ ಟಾಪ್ 20ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಐಎಂಡಿಬಿ ರೇಟಿಂಗ್ ಅಂದ್ರೆ ಏನು?
ವಿಶ್ವದಾದ್ಯಂತ ತಿಂಗಳಿಗೆ 20 ಕೋಟಿಗೂ ಅಧಿಕ ಮಂದಿ ಭೇಟಿ ನೀಡುವ ಐಎಂಡಿಬಿ ಜಾಲತಾಣವು, ಸಿನಿಮಾ ಪ್ರೇಕ್ಷಕರು ಅತಿ ಹೆಚ್ಚು ಸರ್ಚ್ ಮಾಡುವ ಮತ್ತು ಆಸಕ್ತಿ ತೋರುವ ಸೆಲೆಬ್ರಿಟಿಗಳ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸುತ್ತದೆ. 'ಧುರಂಧರ್ 2' ಚಿತ್ರದ ಮೇಲೆ ಪ್ರೇಕ್ಷಕರಿಗೆ ಎಷ್ಟು ಕುತೂಹಲವಿದೆ ಎಂಬುದನ್ನು ಈ ಪಟ್ಟಿ ಸ್ಪಷ್ಟಪಡಿಸುತ್ತದೆ. ರಣವೀರ್ ಸಿಂಗ್ ಅವರ ಅಬ್ಬರದ ನಟನೆ ಮತ್ತು ಆದಿತ್ಯ ಧರ್ ಅವರ ದೃಶ್ಯ ವೈಭವಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ.

ಬಾಲಿವುಡ್‌ನಲ್ಲಿ ಇಂದು ಆದಿತ್ಯ ಧರ್ ಎನ್ನುವ ಹೆಸರು ದೊಡ್ಡ ಮಟ್ಟದ ಸಂಚಲನ ಮೂಡಿಸುತ್ತಿದೆ. ಕೇವಲ ನಿರ್ದೇಶಕನಾಗಿ ಮಾತ್ರವಲ್ಲದೆ, ಚಿತ್ರಕಥೆಗಾರ ಮತ್ತು ಗೀತರಚನಾಕಾರನಾಗಿಯೂ ಗುರುತಿಸಿಕೊಂಡಿರುವ ಇವರು, ತಮ್ಮ ವಿಭಿನ್ನ ಮೇಕಿಂಗ್ ಶೈಲಿಯಿಂದ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದಾರೆ. ಸದ್ಯ 'ಧುರಂಧರ್ 2' ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ IMDb ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿರುವುದು ಇವರ ಜನಪ್ರಿಯತೆಗೆ ಸಾಕ್ಷಿ. ಆದಿತ್ಯ ಧರ್ ಅವರು ಖ್ಯಾತ ನಟಿ ಯಾಮಿ ಗೌತಮ್ ಅವರ ಪತಿ. 'ಉರಿ' ಚಿತ್ರದ ಸಮಯದಲ್ಲಿ ಬೆಳೆದ ಇವರ ಸ್ನೇಹ ನಂತರ ಮದುವೆಯಾಗಿ ಸುಖಿ ಸಂಸಾರ ನಡೆಸುತ್ತಿದ್ದಾರೆ.












Click it and Unblock the Notifications