ಅದಿತಿ ಪ್ರಭುದೇವ ಮೈಸೂರಿಗೆ ಹೋದಾಗ ಮಿಸ್ ಮಾಡದೇ ಹೋಗುವ ಜಾಗ ಇದು
ಕಳೆದ ವಾರವಷ್ಟೇ ಅದಿತಿ ಪ್ರಭುದೇವ ಹಾಗೂ ಪತಿ ಯಶಸ್ ಅವರು ಮಗಳ ಜೊತೆಗೆ ಮೈಸೂರು ಪ್ರವಾಸಕ್ಕೆ ತೆರಳಿದ್ದರು. ಈ ವಿಚಾರ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಮೊದಲ ಬಾರಿಗೆ ಮಗಳೊಂದಿಗೆ ಮೈಸೂರು ಪ್ರವಾಸ ತೆರಳಿದ್ದ ಅದಿತಿ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮೈಸೂರಿನ ಕೆಲವೊಂದಿಷ್ಟು ಸ್ಥಳಗಳಿಗೆ ಅದಿತಿ ಭೇಟಿ ನೀಡಿದ್ದಾರೆ.
ಹೌದು ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ಮದುವೆಯಾದ ಬಳಿಕ ಕೆಲವೊಂದಿಷ್ಟು ಸ್ಥಳಗಳಿಗೆ ಸುತ್ತಾಡಿದ್ದು ಬಿಟ್ಟರೆ ಮಗುವಾದ ನಂತರ ಇದೇ ಮೊದಲ ಬಾರಿಗೆ ಮೈಸೂರು ಪ್ರವಾಸಕ್ಕೆ ತೆರಳಿದ್ದರು. ಕಳೆದ ವಾರ ಬಿಡುವು ಮಾಡಿಕೊಂಡು ಪತಿ ಯಶಸ್ ಹಾಗೂ ಮಗಳು ನೇಸರಳೊಂದಿಗೆ ಅದಿತಿ ಮೈಸೂರು ಸುತ್ತಾಡಿದ್ದಾರೆ.

ಅದಿತಿ ಹಂಚಿಕೊಂಡ ಮೊದಲ ವಿಡಿಯೋದಲ್ಲಿ ಮೈಸೂರು ರೈಲ್ ಮ್ಯೂಸಿಯಂ ಹಾಗೂ ಲೋಕರಂಜನ್ ಅಕ್ವಾ ವರ್ಲ್ಡ್‌ಗೆ ಅವರು ಭೇಟಿ ನೀಡಿದ್ದರು. ಅದನ್ನು ಅವರು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮತ್ತೆರೆಡು ಸ್ಥಳಕ್ಕೆ ಅದಿತಿ ಭೇಟಿ ನೀಡಿ ಮಗಳೊಂದಿಗೆ ಎಂಜಾಯ್ ಮಾಡಿದ್ದಾರೆ.
ಅದಿತಿ ಹಾಗೂ ಯಶಸ್ ತಮ್ಮ ಮಗಳು ನೇಸರಳೊಂದಿಗೆ ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿ ಖುಷಿ ಪಟ್ಟಿದ್ದಾರೆ. ಬಗೆ ಬಗೆಯ ಪ್ರಾಣಿ ಪಕ್ಷಿಗಳನ್ನು ಕಣ್ತುಂಬಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬೆಳೆಗ್ಗೆ ಬೇಗ ಮೈಸೂರು ಝೂಗೆ ಹೋಗಿದ್ದರಿಂದ ಜನರ ಸಂಖ್ಯೆ ಕೂಡ ಕಡಿಮೆ ಇತ್ತು. ಹೀಗಾಗಿ ಈ ಜೋಡಿ ಮಗಳೊಂದಿಗೆ ತುಂಬಾ ಫ್ರೀಯಾಗಿ ಓಡಾಡಿದ್ದು ಕಂಡು ಬಂದಿದೆ.

ಇದೇ ವೇಳೆ ಅದಿತಿ ಅಲ್ಲಿನ ಪ್ರಾಣಿ ಪಕ್ಷಗಳ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪ್ರಾಣಿಗಳಿಗೆ ನೀರು ಮಣ್ಣು ಅಂದರೆ ತುಂಬಾ ಇಷ್ಟ ಅವುಗಳಿಗೆ ಎಷ್ಟೇ ಕ್ಲೀನ್ ಆಗಿ ಸ್ನಾನ ಮಾಡಿಸಿದರೂ ಕೂಡ ಅವು ಮರಳಲ್ಲಿ ಬಿದ್ದು ಒದ್ದಾಡುತ್ತವೆ ಎಂದು ಅಲ್ಲಿನ ಸಿಬ್ಬಂದಿ ಅದಿತಿ ಯಶಸ್ ಅವರಿಗೆ ವಿವರಿಸುವುದನ್ನು ವಿಡಿಯೋದಲ್ಲಿ ಕೇಳಬಹುದು. ಇದೇ ವೇಳೆ ನೇಸರ ತುಂಬಾ ಹತ್ತಿರದಿಂದ ಆನೆಯನ್ನು ನೋಡಿ ನಮಸ್ತೆ ಮಾಡಿದ್ದಾಳೆ. ಈ ದೃಶ್ಯ ನಿಜಕ್ಕೂ ತುಂಬಾ ಕ್ಯೂಟ್ ಆಗಿದೆ. ಅಲ್ಲದೆ ವಿಡಿಯೋದಲ್ಲಿ ಅದಿತಿ ಮೃಗಾಯಲದ ಬಗ್ಗೆ ಕೆಲ ಪ್ರಮುಖ ವಿಚಾರಗಳನ್ನು ಹೇಳಿಕೊಂಡಿರುವುದನ್ನೂ ಕೇಳಬಹುದು.
ಇದೇ ವೇಳೆ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್‌ನ ಸಾಕಷ್ಟು ಅಧಿಕಾರಿಗಳು ಅದಿತಿ ಪ್ರಭುದೇವ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿರುವುದು ಕಂಡು ಬಂತು. ಇದೆಲ್ಲಾ ಆದ ಬಳಿಕ ಅದಿತಿ ಪ್ರಭುದೇವ ಹಾಗೂ ಯಶಸ್ ಹೊರಟಿದ್ದು ಮೈಸೂರಿನ ಪ್ರಸಿದ್ಧ ಹಾಗೂ ಶಕ್ತಿ ದೇವತೆಯಾದ ಚಾಮುಂಡಿ ಬೆಟ್ಟಕ್ಕೆ.
ಹೌದು ಅದಿತಿ ಪ್ರತೀ ಬಾರಿ ಮೈಸೂರು ಶೂಟಿಂಗ್ ಹೋದಾಗ ಮಿಸ್ ಮಾಡದೇ ಹೋಗುವ ಸ್ಥಳ ಅಂದರೆ ಅದು ಚಾಮುಂಡಿ ಬೆಟ್ಟವಂತೆ. ಎಷ್ಟೇ ಬ್ಯೂಸಿ ಇದ್ದರೂ ಕೂಡ ಅದಿತಿ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಾರೆ. ಈ ಬಾರಿಯೂ ಕೂಡ ಅವರು ಪ್ರವಾಸಕ್ಕೆ ತೆರಳಿದಾಗ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು. ಚಾಂಮುಡೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯನ್ನು ಮಾಡಿ ಮಗಳಿಗೆ ದೇವರ ದರ್ಶನ್ ಮಾಡಿಸಿ ತಮ್ಮ ಪ್ರವಾಸವನ್ನು ಕೊನೆಗೊಳಿಸಿದ್ದಾರೆ.
ಹೀಗೆ ಎರಡು ದಿನ ಪತಿ ಯಶಸ್ ಹಾಗೂ ಮಗಳೊಂದಿಗೆ ಅದಿತಿ ಮೈಸೂರು ಪ್ರವಾಸವನ್ನು ಎಂಜಾಯ್ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದು ಇದು ಮಗಳು ನೇಸರಳ ಮೊದಲ ಪ್ರವಾಸ ಎಂದು ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಮಗುವಾದ ಬಳಿಕ ಶೂಟಿಂಗ್‌ಗೆ ಕೊಂಚ ಬ್ರೇಕ್ ಹಾಕಿದ ಅದಿತಿ ಆಗಾಗ ಸಣ್ಣ ಟ್ರಿಪ್ ಮಾಡಿ ವಿಡಿಯೋ ಹಂಚಿಕೊಳ್ಳುತ್ತಿರುವುದನ್ನು ಕಂಡು ಅವರ ಫ್ಯಾನ್ಸ ಸಂತೋಷಗೊಂಡಿದ್ದಾರೆ. ಅದಿತಿ ಮಗಳು ನೇಸರಳನ್ನು ನೋಡಿ ಫ್ಯಾನ್ಸ್ ಕ್ಯೂಟ್ ಕಾಮೆಂಟ್ ಮಾಡಿದ್ದಾರೆ.












Click it and Unblock the Notifications