Varalaxmi Wedding: ಪ್ರಧಾನಿ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ ಶರತ್‌ಕುಮಾರ್
ನವದೆಹಲಿ, ಜೂನ್. 30: ದಕ್ಷಿಣ ಭಾರತದ ಹೆಸರಾಂತ ನಟ ಶರತ್ ಕುಮಾರ್ ಮತ್ತು ರಾಧಿಕಾ ದಂಪತಿಯ ಮುದ್ದಿನ ಮಗಳು ನಟಿ ವರಲಕ್ಷ್ಮಿ ಶರತ್‌ಕುಮಾರ್ ಮದುವೆಗೆ ಸಿದ್ಧರಾಗುತ್ತಿದ್ದಾರೆ. ಮುಂಬೈ ಮೂಲದ ಗ್ಯಾಲರಿಸ್ಟ್ ನಿಕೊಲಾಯ್ ಸಚ್‌ದೇವ್ ಅವರನ್ನು ವರಿಸಲಿದ್ದಾರೆ. ಇತ್ತೀಚೆಗೆ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.
ಗ್ಯಾಲರಿಸ್ಟ್ ನಿಕೊಲಾಯ್ ಸಚ್‌ದೇವ್ ಮತ್ತು ನಟಿ ವರಲಕ್ಷ್ಮಿ ಶರತ್ ಕುಮಾರ್ ದಕ್ಷಿಣ ಭಾರತದ ದೊಡ್ಡ ದೊಡ್ಡ ಸ್ಟಾರ್ ನಟರು, ಮ್ಯೂಸಿಕ್ ಡೈರೆಕ್ಟರ್, ನಿರ್ದೇಶಕರು, ಸೆಲೆಬ್ರಿಟಿಗಳು, ನಿರ್ಮಾಪಕರಿಗೆ ತಮ್ಮ ಮದುವೆಗೆ ಆಮಂತ್ರಣ ನೀಡಿದ್ದಾರೆ. ಈಗ ತನ್ನ ತಂದೆ ತಾಯಿ, ಮದುವೆಯಾಗುವ ಹುಡುಗನ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಮಂತ್ರಣ ಕೊಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮದುವೆ ಆಮಂತ್ರಣ ನೀಡಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನಟಿ ವರಲಕ್ಷ್ಮಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. "ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು ಭೇಟಿ ಮಾಡಿ ನಮ್ಮ ರಿಷಪ್ಷನ್‌ಗೆ ಅವರನ್ನು ಆಹ್ವಾನಿಸಿದ್ದು ಎಂತಹ ಸೌಭಾಗ್ಯ... ಧನ್ಯವಾದಗಳು ತುಂಬಾ ಆತ್ಮೀಯ ಮತ್ತು ಸ್ವಾಗತಾರ್ಹ... ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ನಿಮ್ಮ ಅಮೂಲ್ಯ ಸಮಯವನ್ನು ನಮ್ಮೊಂದಿಗೆ ಕಳೆಯುತ್ತಿದ್ದಿರಿ.... ನಿಜವಾಗಿಯೂ ನಿಮ್ಮ ಬಗ್ಗೆ ಹೆಚ್ಚು ಗೌರವವಿದೆ. ಇಂತಹ ಕ್ಷಣ ಸಾಧ್ಯ ಮಾಡಿದ ಅಪ್ಪ ಶರತ್ ಕುಮಾರ್ ಮತ್ತು ಅಮ್ಮ ರಾಧಿಕಾ ಶರತ್ ಕುಮಾರ್‌ಗೆ ಧನ್ಯವಾದಗಳು" ಎಂದಿದ್ದಾರೆ.
ವರಲಕ್ಷ್ಮಿ ಶರತ್ ಕುಮಾರ್ ತನ್ನ ಮದುವೆಯ ಕಾರ್ಯಕ್ರಮಕ್ಕೆ ಆಹ್ವಾನಿಸಲು ದೇಶಾದ್ಯಂತ ಹಲವಾರು ವಿಐಪಿಗಳನ್ನು ವೈಯಕ್ತಿಕವಾಗಿ ಭೇಟಿಯಾಗುತ್ತಿದ್ದಾರೆ. ಮೊದಲ ಪತ್ರಿಕೆಯನ್ನು ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿ, ಅವರನ್ನು ಮತ್ತು ಅವರ ಕುಟುಂಬವನ್ನು ಮದುವೆಗೆ ಆಹ್ವಾನಿಸಿದರು.

ಬಳಿಕ ಅವರು ನಟ ನಂದಮೂರಿ ಬಾಲಕೃಷ್ಣ, ಕಮಲ್ ಹಾಸನ್, ಅಲ್ಲು ಅರ್ಜುನ್, ನಯನತಾರಾ, ವಿಘ್ನೇಶ್ ಶಿವನ್, ಸಿದ್ಧಾರ್ಥ್, ಸಮಂತಾ, ನಿರ್ದೇಶಕರಾದ ಎಆರ್ ಮುರುಗದಾಸ್, ಬಾಲಾ, ಮುರಳಿ ಶರ್ಮಾ, ರವಿತೇಜ ಮತ್ತು ಅನೇಕರನ್ನು ಭೇಟಿಯಾಗಿದ್ದಾರೆ. ಸ್ಟಾರ್ ನಟ, ನಟಿಯರನ್ನು ಮದುವೆಯ ರಿಷಪ್ಷನ್‌ಗೆ ಆಹ್ವಾನಿಸಿದ್ದಾರೆ.
ನಟಿ ವರಲಕ್ಷ್ಮಿ ಶರತ್ ಕುಮಾರ್ ಮತ್ತು ಗ್ಯಾಲರಿಸ್ಟ್ ನಿಕೊಲಾಯ್ ಸಚ್‌ದೇವ್ ತಮ್ಮ ಮದುವೆ ಬಗ್ಗೆ ನಿಖರವಾದ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೂ, ಕೂಡ ನಟಿ ವರಲಕ್ಷ್ಮಿ ಇತ್ತೀಚೆಗೆ ಮದುವೆಯ ಶಾಪಿಂಗ್‌ಗಾಗಿ ತನ್ನ ನಿಶ್ಚಿತ ವರನೊಂದಿಗೆ ದುಬೈಗೆ ಹಾರಿದ್ದರು. ಮದುವೆಯು ಕೇವಲ ಆತ್ಮೀಯಎ ಸಮ್ಮುಖದಲ್ಲಿ ನಡೆದರೂ ಕೂಡ, ಆರತಕ್ಷತೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ ಎಂದು ವರದಿಗಳು ಸೂಚಿಸಿವೆ.












Click it and Unblock the Notifications