Vaishnavi Gowda: ಆ ಇಬ್ಬರು ಹುಡುಗಿಯರಿಂದ ವೈಷ್ಣವಿ ಗೌಡ ಜೀವನ ಸರಿ ಹೋಯ್ತು: ವೈಷ್ಣವಿ ಗೌಡ ತಾಯಿ
Vaishnavi Gowda: ಕಿರುತೆರೆ ನಟಿ ಹಾಗೂ ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿಗಳಲ್ಲಿ ನಾಯಕಿಯಾಗಿ ಮತ್ತು ಬಿಗ್‌ಬಾಸ್‌ನ ಮೂಲಕವೂ ಖ್ಯಾತಿ ಗಳಿಸಿರುವ ವೈಷ್ಣವಿ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಈ ಸಂದರ್ಭದಲ್ಲಿ ವೈಷ್ಣವಿ ಗೌಡ, ಅವರ ತಾಯಿ ಹಾಗೂ ತಂದೆ ಸಹ ಮಾಧ್ಯಮಗಳೊಂದಿಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದು. ಕೆಲವೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಈ ಹಿಂದೆ ವೈಷ್ಣವಿ ಗೌಡ ಅವರ ಎಂಗೇಜ್‌ಮೆಂಟ್ ಮುರಿದು ಬಿದ್ದಿರುವುದು ಹಾಗೂ ಇಬ್ಬರು ಹುಡುಗಿಯರಿಂದ ವೈಷ್ಣವಿ ಅವರ ಲೈಫ್ ಹೇಗೆ ಸರಿ ಹೋಯ್ತು ಎನ್ನುವುದರ ಬಗ್ಗೆ ಅವರ ತಾಯಿ ಭಾನು ರವಿಕುಮಾರ್ ಅವರು ಮಾತನಾಡಿದ್ದಾರೆ.
ವೈಷ್ಣವಿ ಗೌಡ ಅವರು ಕಿರುತೆರೆಯಿಂದ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಸೀತಾರಾಮ ಸೀರಿಯಲ್‌ನಲ್ಲಿ ವಿಭಿನ್ನ ಪಾತ್ರದ ಮೂಲಕ ಫೇಮಸ್ ಆಗಿದ್ದಾರೆ. ಸೀತಾರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಯಾವುದೇ ಸೀರಿಯಲ್‌ನಲ್ಲಿ ಬರದೆ ಇರುವ ಭಿನ್ನವಾದ ಪಾತ್ರ ವೈಷ್ಣವಿ ಅವರದ್ದು. ಸೀರಿಯಲ್ ಮುಖ್ಯಘಟ್ಟದಲ್ಲಿ ಇರುವಾಗಲೇ ಅವರು ವೈಯಕ್ತಿಕ ಜೀವನದಲ್ಲೂ ಮಹತ್ವದ ಬೆಳವಣಿಗೆ ನಡೆದಿದೆ. ಏರ್‌ಫೋರ್ಸ್‌ನಲ್ಲಿರುವ ಅನುಕೂಲ್ ಮಿಶ್ರಾ ಎಂಬುವವರೊಂದಿಗೆ ವೈಷ್ಣವಿ ಅವರು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಈ ಸಂದರ್ಭದಲ್ಲಿ ವೈಷ್ಣವಿ ಅವರ ಕುಟುಂಬದವರು ಈ ವಿವಾಹ ಹಾಗೂ ಈ ಹಿಂದಿನ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.

ನನ್ನ ಮಗಳ ಜೀವನ ಸರಿ ಹೋಗುವುದಕ್ಕೆ ಆ ಇಬ್ಬರು ಹುಡುಗಿಯರೇ ಕಾರಣ. ಆ ಹುಡುಗಿಯರು ಮುಂದೆ ಬಂದು ನಿಜವಾದ ಪರಿಸ್ಥಿತಿ (ಸತ್ಯ) ಹೇಳಿದ್ದರು. ಅವರಿಗೆ ತುಂಬಾ ಧನ್ಯವಾದ ಹೇಳುತ್ತೇನೆ ಅಂತ ವೈಷ್ಣವಿ ಗೌಡ ಅವರ ತಾಯಿ ಭಾನು ರವಿಕುಮಾರ್ ಹೇಳಿದ್ದಾರೆ. ಈ ಬಗ್ಗೆ ಅವರು "Public tv" ಸಂದರ್ಶನದಲ್ಲಿ ಮಾತನಾಡಿದ್ದಾರೆ.
ವೈಷ್ಣವಿ ಅವರಿಗೆ ಈ ಹಿಂದೆ ಮದುವೆ ನಿಶ್ಚಯವಾಗಿ ಮುರಿದು ಬಿದ್ದಿತ್ತು. ಇದೀಗ ಅನುಕೂಲ್ ಮಿಶ್ರಾ ಅವರೊಂದಿಗೆ ಎಂಗೇಜ್ಮೆಂಟ್ ಆದ ಮೇಲೆ ಈ ವಿಷಯವೂ ಚರ್ಚೆಯಾಗುತ್ತಿದ್ದು ಇದರ ಬಗ್ಗೆ ಅವರ ತಾಯಿ ಮಾತನಾಡಿದ್ದಾರೆ. ವೈಷ್ಣವಿ ತನ್ನದಲ್ಲದ ತಪ್ಪಿಗೆ ನೋವು ಅನುಭವಿಸುವಂತೆ ಆಗಿತ್ತು. ಆ ಹುಡುಗನ ಬಗ್ಗೆ ಆಗ ಮಾತನಾಡಿ, ಆ ಇಬ್ಬರು ಹುಡುಗಿಯರು ಸಹಾಯ ಮಾಡಿದರು. ಅವರಿಬ್ಬರಿಗೂ ಧನ್ಯವಾದ ಹೇಳುತ್ತೇನೆ. ಏನು ಎನ್ನುವುದನ್ನ ಅವರು ತಿಳಿಸಿದರು. ಆದರೆ ಅವರು ಯಾರು ಅಂತ ಗೊತ್ತಿಲ್ಲ. ಆದರೆ ಅವರಿಂದ ನಮಗೆ ತುಂಬಾನೇ ಉಪಕಾರವಾಗಿದೆ ಅಂತ ಹೇಳಿದ್ದಾರೆ.
Vaishnavi Gowda: ವೈಷ್ಣವಿ ಗೌಡ ಟ್ರೋಲ್ ಬಗ್ಗೆ ಬೇಸರ!
ಇನ್ನು ವೈಷ್ಣವಿ ಗೌಡ ಅವರ ಬಗ್ಗೆ ಟ್ರೋಲ್ ಮಾಡುತ್ತಿರುವುದಕ್ಕೆ ಅವರ ತಂದೆ ಹಾಗೂ ತಾಯಿ ಇಬ್ಬರೂ ಬೇಸರ ವ್ಯಕ್ತಪಡಿಸಿದ್ದಾರೆ. ಮಿಲಿಟರಿಯಲ್ಲಿ ಕೆಲಸ ಮಾಡುವ ಹುಡುಗ ಬೇಕು ಎನ್ನುವುದು ನಮ್ಮ ಮನೆಯವರ ಆಸೆಯಾಗಿತ್ತು. ನಮ್ಮ ಫ್ಯಾಮಿಲಿಯಲ್ಲಿ ಹಿಂದೆ ಯಾರೂ ಇರಲಿಲ್ಲ. ಈಗ ದೇಶಸೇವೆ ಮಾಡುವವರು ಸಿಕ್ಕಿದ್ದಾರೆ ಎನ್ನುವ ಖುಷಿ ಇದೆ. ಕೆಲವರು ಮಗಳ ಬಗ್ಗೆ ಏನೇನೋ ಮಾತಾಡ್ತಿದ್ದಾರೆ, ಟ್ರೋಲ್ ಮಾಡ್ತಿದ್ದಾರೆ ನಿಜ ಏನು ಅಂತ ಸರಿಯಾಗಿ ತಿಳಿದುಕೊಳ್ಳಬೇಕು ಅಂತ ಅವರ ತಾಯಿ ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿರುವ ವೈಷ್ಣವಿ ಗೌಡ ಅವರ ತಂದೆ, ಇಬ್ಬರೂ ಸರಿಸಮನಾಗಿದ್ದಾರೆ. ಗಂಡು ಮತ್ತು ಹೆಣ್ಣಿಗೆ ಎಷ್ಟು ವಯಸ್ಸು ಇರಬೇಕೋ ಅದೇ ಇದೆ. ಮಿಲಿಟರಿ ಎಂದ ಮೇಲೆ ಹೈಟ್, ವೆಯಿಟ್ ಹಾಗೂ ಕಲರ್ ಎಲ್ಲವೂ ಸರಿ ಇದೆ. ಎಲ್ಲವೂ ಮ್ಯಾಚ್ ಆಗಿದೆ. ಸುಮ್ನೆ ಏನೇನೋ ಟ್ರೋಲ್ ಮಾಡ್ಬೇಡಿ ಅಂತ ರಿಕ್ವೆಸ್ಟ್ ಮಾಡಿದ್ದಾರೆ.
-
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
Kiara Advani: ವಿಜಯ್ ದೇವರಕೊಂಡ ಮೇಲೆ ಕಿಯಾರಾ ಅಡ್ವಾಣಿಗೆ ಕ್ರಶ್: ರಾಣಾ ಶೋನಲ್ಲಿ ಬಹಿರಂಗವಾದ ಹಳೆಯ ರಹಸ್ಯ, ವೈರಲ್ -
Nepal: ಇರಾನ್ ಯುದ್ಧದ ನಡುವೆ ದೊಡ್ಡ ಸುದ್ದಿಯಾಗದ ನೇಪಾಳದ ಹೊಸ ಜೆನ್ ಜೀ ಸರ್ಕಾರ: ಗೋಪಾಲಕೃಷ್ಣ ಕುಂಟಿನಿ ಬರಹ -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
Property: ಆಸ್ತಿದಾರರಿಗೆ 2026 ವರ್ಷ ಅದೃಷ್ಟ: ರಿಯಲ್ ಎಸ್ಟೇಟ್ನಲ್ಲಿ ಹೊಸ ಸಂಚಲನ, ಮನೆ ಮಾರಾಟ ಭರ್ಜರಿ ಹೆಚ್ಚಳ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications