Vaishnavi Gowda Marriage: 'ಸೀತಾರಾಮ'ನಂತೆ ಮದುವೆಯಲ್ಲಿ ಮಿಂಚಿದ ವೈಷ್ಣವಿ ಗೌಡ ಜೋಡಿ, ಇಲ್ಲಿದೆ ಫೋಟೋಸ್
ಖ್ಯಾತ ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಸಿಂಗಲ್ ಲೈಫ್‌ಗೆ ಗುಡ್‌ಬೈ ಹೇಳಿದ್ದಾರೆ. ಇತ್ತೀಚೆಗಷ್ಟೇ ಸೀತಾರಾಮ ಸೀರಿಯಲ್ ಮುಗಿಸಿದ್ದ ವೈಷ್ಣವಿ ಅವರ ಮದುವೆ ಅದ್ಧೂರಿಯಾಗಿ ನೆರವೇರಿದ್ದು, ಸ್ಪೆಷಲ್ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅಧಿಕೃತವಾಗಿ ಇಂದಿನಿಂದ ನಾವು ಮಿಸ್ಟರ್ ಆಂಡ್ ಮಿಸ್ಸಸ್ ಎಂದು ವೈಷ್ಣವಿ ಬರೆದುಕೊಂಡಿದ್ದಾರೆ. ಖ್ಯಾತ ಕಿರುತೆರೆ, ಹಿರಿತೆರೆ ನಟ ನಟಿಯರು ವೈಷ್ಣವಿ ಮದುವೆಗೆ ಆಗಮಿಸಿ ಜೋಡಿಗೆ ಶುಭಹಾರೈಸಿದ್ದಾರೆ. ಮದುವೆಗೆ ಯಾರೆಲ್ಲ ಬಂದಿದ್ದರು ಎನ್ನುವ ವಿವರ ಇಲ್ಲಿದೆ..
ಕನ್ನಡ ಕಿರುತೆರೆಯ ಖ್ಯಾತ ನಟಿ ಹಾಗೂ ಗುಳಿಕೆನ್ನೆಯ ಚೆಲುವೆ ಎಂದೇ ಖ್ಯಾತಿ ಪಡೆದಿರುವ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಾಸ್ತ್ರೋಕ್ತವಾಗಿ ಇವರ ಮದುವೆ ನೆರವೇರಿದ್ದು, ಇತ್ತೀಚೆಗೆ ಚಪ್ಪರ ಶಾಸ್ತ್ರ, ಆರತಕ್ಷತೆ ಫೋಟೋಗಳನ್ನ ಕೂಡ ಹಂಚಿಕೊಂಡಿದ್ರು. ಇದೀಗ ಅವರು ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇತ್ತೀಚೆಗಷ್ಟೇ ವೈಷ್ಣವಿ ಅವರು ಅಭಿನಯಿಸುತ್ತಿದ್ದ ಸೀತಾರಾಮ ಸೀರಿಯಲ್ ಪೂರ್ಣಗೊಂಡ ತಕ್ಷಣವೇ ಅವರ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿದ್ದವು. ಈ ಖುಷಿ ವಿಚಾರವನ್ನು ವೈಷ್ಣವಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮನೆಯಲ್ಲಿ ನಡೆಯುತ್ತಿರುವ ಮದುವೆ ಶಾಸ್ತ್ರಗಳ ಫೋಟೋಗಳನ್ನು ಕೂಡ ಶೇರ್ ಮಾಡಿದ್ದರು.
ವೈಷ್ಣವಿ ಗೌಡ ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡು ತಮ್ಮ ಭಾವಿ ಪತಿಯನ್ನು ಪರಿಚಯಿಸಿದ್ದರು. ಇಂಡಿಯನ್ ಏರ್‌ಫೋರ್ಸ್ ಅಲ್ಲಿ ಕೆಲಸ ಮಾಡುತ್ತಿರುವ ಛತ್ತಿಸ್‌ಗಢ ಮೂಲದ ಅನುಕೂಲ್ ಮಿಶ್ರಾ ಅವರೊಂದಿಗೆ ವೈಷ್ಣವಿ ಹಸೆಮಣೆ ಏರಿದ್ದಾರೆ. ಅವರಿಗೆ ಕನ್ನಡ ಅಷ್ಟಾಗಿ ಮಾತನಾಡಲು ಬರುವುದಿಲ್ಲ ಎಂಬ ವಿಚಾರವಾಗಿಯೂ ವೈಷ್ಣವಿ ಟೀಕೆಗೆ ಗುರಿಯಾಗಿದ್ದರು. ಅನುಕೂಲ್ ಇಂಡಿಯನ್ ಏರ್‌ಫೋರ್ಸ್‌ನಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದು, ಇದು ಪಕ್ಕಾ ಅರೇಂಜ್ ಮ್ಯಾರೇಜ್ ಎಂದು ಹೇಳಿದ್ದರು. ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಇಬ್ಬರ ಮದುವೆ ಅದ್ಧೂರಿಯಾಗಿ ನೆರವೇರಿದೆ. ಮದುವೆ ಆದ ಬಳಿಕವೂ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತೇನೆ ಎಂದು ವೈಷ್ಣವಿ ಹೇಳಿಕೊಂಡಿದ್ದಾರೆ.

ಆರ್‌ಸಿಬಿ ಕಪ್ ಗೆದ್ದ ದಿನವೇ ವೈಷ್ಣವಿ ಗೌಡ ಅವರ ಮದುವೆ ನಿಮಿತ್ತ ಸಂಗೀತ ಕಾರ್ಯಕ್ರಮ ನಡೆದಿತ್ತು. ವೈಷ್ಣವಿ ಗೌಡ ಕೂಡ ಆರ್ಸಿಬಿಯ ದೊಡ್ಡ ಅಭಿಮಾನಿ ಆಗಿರುವುದರಿಂದ ಸಂಗೀತ ಕಾರ್ಯಕ್ರಮದಲ್ಲಿ ದೊಡ್ಡದಾಗಿ ಸ್ಕ್ರೀನ್‌ನಲ್ಲಿ ಆರ್‌ಸಿಬಿ ಪಂದ್ಯವನ್ನು ಹಾಕಲಾಗಿತ್ತು. ಮ್ಯಾಚ್ ಗೆದ್ದಿದ್ದಕ್ಕೆ ವೈಷ್ಣವಿ ಕುಣಿದು ಕುಪ್ಪಳಿಸಿದ್ದರು. ವೈಷ್ಣವಿ ಗೌಡ ಮದುವೆಗೆ ನಟಿ ಅಮೂಲ್ಯಾ, ನಿವೇದಿತಾ ಗೌಡ, ಇಶಿತಾ, ನೇಹಾ ಗೌಡ, ವಿಜಯ್ ಸೂರ್ಯ ದಂಪತಿ ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿ ನವದಂಪತಿಗಳಿಗೆ ಶುಭ ಹಾರೈಸಿದರು ಸೀತಾರಾಮ ಸೀರಿಯಲ್ ತಂಡ ಸೇರಿದಂತೆ ಕಿರುತೆರೆ ನಟ, ನಟಿಯರು ಬಂದು ಶುಭ ಹಾರೈಸಿದ್ದಾರೆ.












Click it and Unblock the Notifications