ಭಾವನಾ ಕಷ್ಟ ಗೊತ್ತಿತ್ತು, ನನಗೂ ಐವಿಎಫ್‌ನಿಂದಲೇ ಮಗು ಆಗಿದ್ದು: ನಟಿ ತಾರಾ
ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ಅವರು ಮದುವೆಯೇ ಆಗದೆ, ಎಐಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳಿಗೆ ಗರ್ಭ ಧರಿಸಿದ್ದರು. ಆದರೆ, ಹೆರಿಗೆ ವೇಳೆ ಒಂದು ಮಗು ಸಾವನ್ನಪ್ಪಿತ್ತು. ಸದ್ಯ ಒಂದು ಮಗುವನ್ನ ಕಳೆದುಕೊಂಡ ನೋವಿನಲ್ಲಿ ಭಾವನಾ ಇದ್ದಾರೆ. ಒಂದು ಮಗು ನಿಧನವಾದ ವಿಚಾರದಿಂದ ಎಲ್ಲರ ಮನಸ್ಸಿಗೂ ನೋವಾಗಿತ್ತು. ಈ ಬಗ್ಗೆ ಬೇಸರ ಹೊರಹಾಕಿರುವ ನಟಿ ತಾರಾ ಅನುರಾಧ ಅವರು ಭಾವನಾ ಅವರ ಪರಿಸ್ಥಿತಿಗೆ ಮಿಡಿದಿದ್ದಾರೆ. ಅಲ್ಲದೆ ನನಗೂ ಐವಿಎಫ್ ಚಿಕಿತ್ಸೆ ಮೂಲಕವೇ ಮಗು ಆಗಿದ್ದು, ಭಾವನಾ ಪಟ್ಟ ಸಂಕಟ ಏನೆಂದು ಗೊತ್ತಿದೆ ಎಂದಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಟಿ ತಾರಾ, 'ಭಾವನಾ ವಿಚಾರ ಕೇಳಿ ನನಗೂ ನೋವಾಯಿತು. ಒಂದು ಮಗುವನ್ನು ಕಳೆದುಕೊಂಡಾದ ಎಷ್ಟು ನೋವಾಗುತ್ತೆ ಅನ್ನೋದು ನನಗೆ ಗೊತ್ತಿದೆ. ಒಂದು ತಾಯಿಯಾಗಿ ಆ ನೋವು ನಾನೂ ಪಟ್ಟಿದ್ದೀನಿ. ಮಗುವನ್ನು ಹೆರೋದು ಸುಲಭದ ಮಾತಲ್ಲ. ಭಾವನಾ ರೀತಿ ನನಗೂ ಐವಿಎಫ್ ಚಿಕಿತ್ಸೆಯಿಂದಲೇ ಮಗು ಆಗಿದ್ದು. ಆ ಇಂಜೆಕ್ಷನ್ ತೆಗೆದುಕೊಂಡಾಗ, ದೇಹದಲ್ಲಿ ಆಗುವ ಬದಲಾವಣೆಗಳು, ಹಾರ್ಮೋನ್ ಏರಿಳಿತ, ಮೂಡ್‌ಸ್ವಿಂಗ್ಸ್ ಈ ಎಲ್ಲ ಕಷ್ಟಗಳು ಏನೆಂದು ನನಗೆ ಚೆನ್ನಾಗಿ ಗೊತ್ತು' ಎಂದು ತಾರಾ ಹೇಳಿದ್ದಾರೆ.

'ಭಾವನಾ ಜೊತೆ ಮಾತಾಡೋಕೆ ಹೆದರಿದೆ'
'ಐವಿಎಫ್ ಪ್ರಕ್ರಿಯೆ ಅನ್ನೋದು ತುಂಬಾ ಕಷ್ಟಕರವಾದದ್ದು. ಅದರಲ್ಲಿ ತುಂಬಾ ನೋವಿದೆ. ಇಂಜೆಕ್ಷನ್ ತಗೋತಾ ಇರಬೇಕು. ನಾವು ಎಲ್ಲೇ ಇದ್ದರೂ ಸಮಯಕ್ಕೆ ಸರಿಯಾಗಿ ಇಂಜೆಕ್ಷನ್ ತೆಗೆದುಕೊಳ್ಳಬೇಕು. ಆ ಇಂಜೆಕ್ಷನ್‌ನಿಂದ ಪಿಂಪಲ್ಸ್ ಬರುತ್ತೆ, ದಪ್ಪ ಆಗ್ತಾರೆ, ಅದು ನಿಜಕ್ಕೂ ಒಂದು ರೀತಿ ನಮಗೆ ಸವಾಲೊಡ್ಡುತ್ತೆ. ಹಾಗಾಗಿ ಅದರ ಅನುಭವ ನನಗೆ ಚೆನ್ನಾಗಿ ಗೊತ್ತಿದೆ. ಐವಿಎಫ್ ಹೆರಿಗೆ ವೇಳೆ ಒಂದು ಮಗು ಸಾವನ್ನಪ್ಪಿದ ವಿಚಾರ ಕೇಳಿ ತುಂಬಾ ಸಂಕಟವಾಯ್ತು. ಭಾವನಾಗೆ ಫೋನ್ ಮಾಡಿ ಹೇಗಿದ್ದೀಯಾ ಅಂತ ಕೇಳೋಕೂ ಒಂದು ರೀತಿ ಹೆದರಿಕೆ. ಅದಕ್ಕೇ ನಾನು ಫೋನ್ ಮಾಡಲಿಲ್ಲ. ಭಾವನಾ ತಾಯ್ತನದ ಎಲ್ಲ ಸುಂದರ ಕ್ಷಣಗಳನ್ನ ಅನುಭವಿಸಲಿ ಎಂದು ಹಾರೈಸುತ್ತೇನೆ' ಎಂದಿದ್ದಾರೆ.
'ಭಾವನಾ ಕೂಡ ಐವಿಎ ಚಿಕಿತ್ಸೆಗೆ ಒಳಗಾಗಿದ್ದ ವಿಚಾರ ಗೊತ್ತಾದ ತಕ್ಷಣ, ಆಕೆ ಏನೆಲ್ಲ ನೋವು ಅನುಭವಿಸಿರಬಹುದು ಅಂತ ಅಂದುಕೊಂಡೆ. ಆಗಾಗಲೇ ಭಾವನಾ ತುಂಬು ಗರ್ಭಿಣಿ ಆಗಿದ್ದರು. ಅವಳ ಸೀಮಂತಕ್ಕೆ ನನ್ನನ್ನೂ ಕರೆದಿದ್ದಳು. ಈ ಚಿಕಿತ್ಸೆ ಬಗ್ಗೆ ನಾನು ಮೊದಲೇ ಭಾವನಾಗೆ ಏನೂ ಹೇಳಲು ಹೋಗಲಿಲ್ಲ. ಈ ಸಮಯದಲ್ಲಿ ಖುಷಿಯಾಗಿರು ಅಂತ ಎಷ್ಟು ಬೇಕೋ ಅಷ್ಟನ್ನು ಹೇಳಿದೆ' ಎಂದು ತಾರಾ ವಿವರಿಸಿದ್ದಾರೆ.
ನಟಿ ಭಾವನಾ ರಾಮಣ್ಣ ಅವರು ಮದುವೆ ಆಗಿರಲಿಲ್ಲ. ಆದರೂ ಮಗು ಹೆರಬೇಕು ಎಂಬ ಆಸೆಯಿಂದ ಎವಿಎಫ್ ಚಿಕಿತ್ಸೆಯ ಮೊರೆಹೋಗಿದ್ದರು. ಆರು ತಿಂಗಳ ಗರ್ಭಿಣಿಯಾಗಿದ್ದಾಗ ಭಾವನಾ ಅವರು ಈ ವಿಚಾರ ರಿವೀಲ್ ಮಾಡಿದ್ದರು. ಬಳಿಕ ಅವರ ಸೀಮಂತ ಶಾಸ್ತ್ರ ಕೂಡ ನೆರವೇರಿತ್ತು. ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದ ಭಾವನಾ ಅವರಿಗೆ ದುರಾದೃಷ್ಟವಶಾತ್ ಒಂದು ಮಗು ಹೆರಿಗೆ ವೇಳೆ ಸಾವನ್ನಪ್ಪಿತ್ತು. ಸದ್ಯ ಒಂದು ಮಗುವಿನೊಂದಿಗೆ ಭಾವನಾ ಅವರು ತಾಯ್ತನದ ಆಸೆ ಈಡೇರಿಸಿಕೊಂಡಿದ್ದಾರೆ. ಆ ಮಗುವಿಗೆ ತಮ್ಮ ಅಜ್ಜಿ ಹೆಸರನ್ನಿಟ್ಟಿದ್ದಾರೆ.
-
CinemaCon 2026: ಜಾಗತಿಕ ವೇದಿಕೆಯಲ್ಲಿ 'ರಾಮಾಯಣ' ಪ್ರಚಾರ ಶುರು; ಲಾಸ್ವೇಗಸ್ನಲ್ಲಿ ಬೀಡುಬಿಟ್ಟ ರಾಕಿಂಗ್ ಸ್ಟಾರ್ ಯಶ್ -
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ












Click it and Unblock the Notifications