Lakshmi Nivasa: ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಹೊರಬರಲು ಕಾರಣ ತಿಳಿಸಿದ ನಟಿ ಶ್ವೇತಾ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ "ಲಕ್ಷ್ಮೀ ನಿವಾಸ"ದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ನಟಿ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಲಕ್ಷ್ಮೀ ಪಾತ್ರ ನಿರ್ವಹಿಸುತ್ತಿದ್ದ ನಟಿ ಶ್ವೇತಾ ಅವರು ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ನಿರ್ಗಮಿಸಿದ್ದಾರೆ. ಇದರಿಂದ ಪ್ರೇಕ್ಷಕರಿಗೆ ಶಾಕ್ ಆಗಿದ್ದು, ದಿಢೀರನೆ ಸೀರಿಯಲ್‌ನಿಂದ ಹೊರನಡೆಯಲು ಕಾರಣವೇನು ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆ ನಟಿ ಶ್ವೇತಾ ಅವರು ಕಾರಣ ಕೂಡ ನೀಡಿದ್ದಾರೆ. ಮತ್ತೊಂದೆಡೆ ಲಕ್ಷ್ಮೀ ಪಾತ್ರವನ್ನು ಯಾರು ಮುಂದುವರಿಸಲಿದ್ದಾರೆ? ಎಂಬ ಚರ್ಚೆಗಳೂ ನಡೆಯುತ್ತಿವೆ.
ಲಕ್ಷ್ಮೀ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಶ್ವೇತಾ ಅವರು ಈ ಧಾರಾವಾಹಿಯ ಕೇಂದ್ರಬಿಂದು ಎನ್ನುವಂತೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಇವರ ನಟನೆಗೂ ಜನ ಫಿದಾ ಆಗಿದ್ದರು. ಸೀರಿಯಲ್ ಕೂಡ ಕನ್ನಡ ಪ್ರೇಕ್ಷಕರ ಮನಗೆದ್ದಿತ್ತು. ಹೀಗಿರುವಾದಲೇ ಶ್ವೇತಾ ಅವರು ದಿಢೀರನೆ ತಮ್ಮ ಪಾತ್ರಕ್ಕೆ ಗುಡ್‌ಬೈ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಮತ್ತೊಂದೆಡೆ ಲಕ್ಷ್ಮೀ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಶ್ವೇತಾ ಅವರ ಜಾಗಕ್ಕೆ ಬೇರೆ ಯಾರು ಬರಲಿದ್ದಾರೆ ಎಂಬ ಕುತೂಹಲವೂ ಹೆಚ್ಚಾಗಿದೆ. ಅಥವಾ ಈ ಪಾತ್ರವನ್ನು ಧಾರಾವಾಹಿ ತಂಡ ಮುಂದುವರಿಸುತ್ತಾ? ಇಲ್ಲ ನಿಲ್ಲಿಸಲಿದೆಯೇ? ಎಂಬ ಪ್ರಶ್ನೆಗಳನ್ನು ಕೂಡ ಕೇಳುತ್ತಿದ್ದಾರೆ.

ಸೀರಿಯಲ್‌ನಿಂದ ನಿರ್ಗಮಿಸಿದ್ದೇಕೆ?
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ಶ್ವೇತಾ ಅವರು ಸೀರಿಯಲ್‌ನಿಂದ ಹೊರಬರಲು ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ. ʼವೈಯಕ್ತಿಕ ಕಾರಣಗಳಿಂದ ಮತ್ತು ನನ್ನ ತಾಯಿಯ ಆರೋಗ್ಯ ಸಮಸ್ಯೆಯಿಂದಾಗಿ ಲಕ್ಷ್ಮಿ ನಿವಾಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆʼ ಎಂದಿದ್ದಾರೆ. ʼಕರ್ನಾಟಕವು ತುಂಬಾ ದಯೆಯಿಂದ ವರ್ತಿಸಿದ್ದಕ್ಕಾಗಿ ಮತ್ತು ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು. ಸೆಟ್‌ಗಳಲ್ಲಿ ಕೆಲವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನನ್ನನ್ನು ಮತ್ತೆ ಕನ್ನಡ ಪ್ರೇಕ್ಷಕರಿಗೆ ಪರಿಚಯಿಸಿದ್ದಕ್ಕಾಗಿ ಜೀ ಕನ್ನಡ ವಾಹಿನಿಗೆ ತುಂಬಾ ಧನ್ಯವಾದಗಳು, ನೀವು ನಿಜಕ್ಕೂ ಅದ್ಭುತ, ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇವೆʼ ಎಂದು ಶ್ವೇತಾ ಬರೆದುಕೊಂಡಿದ್ದಾರೆ.
ನಟಿ ಶ್ವೇತಾ ಅವರ ಮೂಲ ಹೆಸರು ವಿನೋದಿನಿ. ಮೂಲತಃ ತಮಿಳುನಾಡಿನವರಾದ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ ಅವರು ಶ್ವೇತಾ ಆಗಿ ಎಲ್ಲರ ಗಮನ ಸೆಳೆದಿದ್ದರು. ಬಳಿಕ ತಮಿಳು ಕಿರುತೆರೆಗೆ ಎಂಟ್ರಿ ನೀಡಿದ್ದ ಅವರು ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೂ ಕಾಲಿಟ್ಟಿದ್ದರು. ಹಲವು ವರ್ಷಗಳ ಬಳಿಕ ಹಿರಿತೆರೆಯಿಂದ ಅವರು ಕಿರುತೆರೆಯ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಪ್ರತ್ಯಕ್ಷರಾಗಿದ್ದರು. ಅವರ ನಟನೆ ಕೂಡ ಮೆಚ್ಚುಗೆ ಪಡೆದಿತ್ತು. ಸೀರಿಯಲ್ ಕೂಡ ಟಿಆರ್‌ಪಿಯಲ್ಲಿ ಸದ್ದು ಮಾಡುತ್ತಿರುವಾಗಲೇ ನಟಿ ಶ್ವೇತಾ ಅವರು ನಿರ್ಗಮಿಸಿರುವುದು ದೊಡ್ಡ ಹೊಡೆತ ಎಂದು ಹೇಳಲಾಗುತ್ತಿದೆ.
ಶ್ವೇತಾ ಪಾತ್ರಕ್ಕೆ ಇಬ್ಬರ ಹೆಸರು
ಶ್ವೇತಾ ಅವರು ವೈಯಕ್ತಿಕ ಕಾರಣದಿಂದ ಬ್ರೇಕ್ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇವೆ ಎಂದು ನಟಿ ಹೇಳಿರುವುದರಿಂದ ತಾತ್ಕಾಲಿಕವಾಗಿ ಅವರು ಸೀರಿಯಲ್‌ನಿಂದ ಹೊರಬಂದಿರಬಹುದು. ಮುಂದೆ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಮುಖ್ಯ ಪಾತ್ರ ಆಗಿರುವುದರಿಂದ ಅದನ್ನು ಮುಂದುವರಿಸಲೇಬೇಕಾಗಿದೆ. ಹೀಗಾಗಿ ಶ್ವೇತಾ ಅವರ ಪಾತ್ರಕ್ಕೆ ಪವರ್‌ಫುಲ್ ಕಲಾವಿದೆ ಬರಬಹುದು ಎಂದೂ ನಿರೀಕ್ಷಿಸುತ್ತಿದ್ದಾರೆ. ಹಿರಿಯ ನಟಿಯರಾ ಸುಧಾರಾಣಿ ಅಥವಾ ಸ್ಪರ್ಶ ರೇಖಾ ಅವರು ಈ ಪಾತ್ರಕ್ಕೆ ಸರಿಹೋಗುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಆದರೆ ಈ ಪಾತ್ರವನ್ನು ಯಾರು ತುಂಬಲಿದ್ದಾರೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.












Click it and Unblock the Notifications