ಶ್ರೀಲೀಲಾ ಮದುವೆ ಆಗುತ್ತಿರುವ ವಿಚಾರ ನಿಜವೇ? ಕೊನೆಗೂ ಉತ್ತರ ಕೊಟ್ಟ ನಟಿ
ಕನ್ನಡದ ʼಕಿಸ್ʼ ಬೆಡಗಿ, ಟಾಲಿವುಡ್ ಟಾಪ್ ನಟಿ ಶ್ರೀಲೀಲಾ ಬಗ್ಗೆ ಕಳೆದೆರಡು ದಿನಗಳಿಂದ ಸುದ್ದಿಯೊಂದು ಹರಿದಾಡುತ್ತಿದೆ. ಶ್ರೀಲೀಲಾ ಸದ್ದಿಲ್ಲದೆ ಮದುವೆ ಆಗುತ್ತಿದ್ದಾರೆ ಎಂಬ ವಿಚಾರ ಎಲ್ಲೆಡೆ ಸೌಂಡ್ ಮಾಡ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಶ್ರೀಲೀಲಾ ಮನೆಯಲ್ಲಿ ನಡೆದ ಶುಭ ಸಮಾರಂಭ ಹಾಗೂ ಅರಿಶಿಣ ಹಚ್ಚಿಕೊಳ್ಳುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಶ್ರೀಲೀಲಾ ಅವರ ಮನೆಯಲ್ಲೇ ಆಗಲೇ ಮದುವೆ ಶಾಸ್ತ್ರಗಳು ಶುರುವಾಗಿದ್ದು, ಯಾರಿಗೂ ಹೇಳದೆ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಕೆಲವರು ನಟಿಗೆ ಎಂಗೇಜ್‌ಮೆಂಟ್ ಆಗಿದೆ ಅಂದರೆ, ಹಲವರು ಆಗಲೇ ಹಳದಿ ಶಾಸ್ತ್ರ ನಡೆಯುತ್ತಿದೆ ಎಂದು ಹೇಳಿದ್ದರು. ಆದರೆ ಅಸಲಿ ವಿಚಾರ ಏನು ಎಂಬುದನ್ನು ಕೊನೆಗೂ ಶ್ರೀಲೀಲಾ ಅವರೇ ಬಹಿರಂಗಪಡಿಸಿದ್ದಾರೆ.
ಹೌದು ನಟಿ ಶ್ರೀಲೀಲಾ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದಕ್ಕೆ ಕಾರಣ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಕೆಲ ಫೋಟೋಗಳು. ಅದರಲ್ಲಿ ನಟಿ ಅರಿಶಿನ ಹಚ್ಚಿಸಿಕೊಂಡು, ಸಂಪ್ರದಾಯಬದ್ಧ ವಸ್ತ್ರದಲ್ಲಿ, ಎದುರುಗಡೆ ಕುಂಕುಮದ ಆರತಿ ತಟ್ಟೆಗಳೊಂದಿಗೆ ಕಾಣಿಸಿಕೊಂಡಿದ್ದರು. ಸಾಮಾನ್ಯವಾಗಿ ಈ ಶಾಸ್ತ್ರಗಳು ಮದುವೆ ಅಥವಾ ನಿಶ್ಚಿತಾರ್ಥದ ಶಾಸ್ತ್ರಗಳನ್ನೇ ಹೋಲುವಂತಿದೆ ಎಂದು ಅವರ ಅಭಿಮಾನಿಗಳು ಊಹಿಸಿದ್ದರು.

ಆದರೆ ಈ ವದಂತಿಗಳಿಗೆ ಶ್ರೀಲೀಲಾ ಸ್ಪಷ್ಟನೆ ನೀಡಿದ್ದಾರೆ. ಅಸಲಿಗೆ ಇದು ಮದುವೆ ಶಾಸ್ತ್ರಗಳಾ ಅಲ್ಲವಾ ಎಂಬುದರ ಬಗ್ಗೆ ಅವರು ಕ್ಲಾರಿಟಿ ನೀಡಿದ್ದಾರೆ. ಆ ಫೋಟೋಗಳು ತಮ್ಮ ಹುಟ್ಟುಹಬ್ಬದ ಪೂರ್ವಾಚರಣೆಗಳ ಭಾಗವಾಗಿದ್ದು, ಇದು ಯಾವುದೇ ಮದುವೆಯೊಂದಿಗೆ ಸಂಬಂಧಿಸಿದ್ದಲ್ಲ, ನಮ್ಮ ಕುಟುಂಬದಲ್ಲಿ ತಿಥಿ ಆಧಾರಿತವಾಗಿ, ಸಂಪ್ರದಾಯಬದ್ಧವಾಗಿ ಹುಟ್ಟುಹಬ್ಬವನ್ನು ಈ ರೀತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅರಿಶಿನ ಹಚ್ಚುವುದು ಕೂಡ ಒಂದು ಸಂಪ್ರದಾಯವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಿಂದಿನ ಕಾಲದಲ್ಲಿ ನಾವು ಮನೆಯಲ್ಲಿ ನಮ್ಮ ಹುಟ್ಟುಹಬ್ಬವನ್ನು ಹೀಗೆ ಆಚರಿಸುತ್ತಿದ್ದೆವು. ಇದರ ಕ್ರೆಡಿಟ್ ನನ್ನ ಅಮ್ಮನಿಗೆ ಸೇರಬೇಕು ಎಂದು ಶ್ರೀಲೀಲಾ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಶ್ರೀಲೀಲಾ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಸುಳ್ಳು ಎಂದು ತೆರೆ ಎಳೆದಿದ್ದಾರೆ. ಸದ್ಯಕ್ಕೆ ನಟಿ ತಮ್ಮ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದು, ಈಗ ಯಾವುದೇ ಮದುವೆ ಪ್ಲ್ಯಾನಿಂಗ್ ಇಲ್ಲ ಎಂದು ಸುಳಿವು ನೀಡಿದ್ದಾರೆ.
ಬಾಲಿವುಡ್‌ಗೆ ಶ್ರೀಲೀಲಾ ಎಂಟ್ರಿ
ಕನ್ನಡದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರೀಲೀಲಾ ಕಿಸ್, ಭರಾಟೆ ಸಿನಿಮಾಗಳಲ್ಲಿ ಮಿಂಚಿದರು. ಇನ್ನು ಅವರು ತೆಲುಗು ಭಾಷೆಯೊಂದಿಗೂ ನಂಟು ಹೊಂದಿದ್ದರಿಂದ ಟಾಲಿವುಡ್‌ನಲ್ಲೂ ಸ್ಟಾರ್ ನಟರೊಂದಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಇತ್ತೀಚೆಗೆ ಹಿಟ್ ಕಂಡ ಪುಷ್ಪ ಚಾಪ್ಟರ್ ಟು ಸಿನಿಮಾದಲ್ಲಿ ಕಿಸಿಕ್ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರೊಂದಿಗೆ ಸಿನಿಮಾ ಮಾಡುತ್ತಿದ್ದು, ಈ ಮೂಲಕ ಬಾಲಿವುಡ್‌ನಲ್ಲೂ ಶ್ರೀಲೀಲಾ ಮಿಂಚಲು ಸಜ್ಜಾಗಿದ್ದಾರೆ.












Click it and Unblock the Notifications