ಹೆಣ್ಣುಮಕ್ಕಳಿಗೆ ವಯಸ್ಸಾದ್ರೆ ಪೇಮೆಂಟ್‌ ಕಡಿಮೆ, ಈ ಇಂಡಸ್ಟ್ರಿಗೆ ಬರಬೇಕಾ: ಕಾಟೇರ ನಟಿ ಹೀಗಂದಿದ್ದೇಕೆ?

"ರಾಧಾರಮಣ" ಸೀರಿಯಲ್‌ ಮೂಲಕ ಕನ್ನಡ ಕಿರುತೆರೆಯಲ್ಲಿ ಸೌಂಡ್‌ ಮಾಡಿದ್ದ ನಟಿ ಶ್ವೇತಾ ಪ್ರಸಾದ್‌ (Shwetha Prasad) ಅವರು ಈಗ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ದರ್ಶನ್‌ ಅಭಿನಯದ ಕಾಟೇರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಶ್ವೇತಾ ಗಮನಸೆಳೆದಿದ್ದರು. ಇದಲ್ಲದೆ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್‌ ಕೂಡ ಹೌದು. ಇದೀಗ ಬಂದೂಕ್‌ ಸಿನಿಮಾದಲ್ಲಿಯೂ ಅವರು ಮಿಂಚುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮ ನಟನಾ ವೃತ್ತಿ ಬಗ್ಗೆ ಮಾತನಾಡಿರುವ ಅವರು ಕೆಲ ಅಚ್ಚರಿ ವಿಚಾರಗಳನ್ನು ಯುಟ್ಯೂಬ್‌ ಸಂದರ್ಶನವೊಂದರಲ್ಲಿ ರಿವೀಲ್‌ ಮಾಡಿದ್ದಾರೆ. ಹೆಣ್ಣುಮಕ್ಕಳಿಗೆ ಸಂಭಾವನೆ ವಿಚಾರದಲ್ಲಿ ಆಗುವ ತಾರತಮ್ಯದ ಬಗ್ಗೆಯೂ ಧ್ವನಿ ಎತ್ತಿದ್ದಾರೆ.

'ನನಗೆ ಇಂಡಸ್ಟ್ರಿಯಲ್ಲಿ ನಟಿಸುವ ಅವಕಾಶ ಸಿಕ್ಕರೂ, ಎರಡನೇ ಆಯ್ಕೆಯಾಗಿ ಆರ್ಕಿಟೆಕ್ಟ್‌ ವೃತ್ತಿ ಯಾವತ್ತೂ ಇರುತ್ತೆ. ಯಾವಾಗ ನಟನೆಯಲ್ಲಿ ಅವಕಾಶಗಳು ಕಡಿಮೆಯಾಗುತ್ತೋ ಆವತ್ತು ಆರ್ಕಿಟೆಕ್ಟ್‌ ಕಡೆಗೆ ಹೋಗೋಣ ಎಂದುಕೊಂಡಿದ್ದೆ. ಆದರೆ ದೇವರ ದಯೆಯಿಂದ ಆ ಕಡೆಗೆ ಹೋಗುವ ಪರಿಸ್ಥಿತಿ ಇನ್ನೂ ಬಂದಿಲ್ಲ. ಈಗೆಲ್ಲ ಹೊಸಬರು ಬರುತ್ತಿದ್ದಾರೆ. ಅವರ ಪಾತ್ರಗಳಿಗೆ ನನ್ನನ್ನೇ ಮೊದಲ ಆಯ್ಕೆ ಮಾಡಿಕೊಂಡಾಗ ತುಂಬಾ ಖುಷಿಯಾಗುತ್ತೆ. ಹಾಗಾಗಿ ಇಲ್ಲಿ ಅವಕಾಶಗಳು ಸಿಗೋವರೆಗೂ ಇಲ್ಲೇ ಇರ್ತೀನಿ' ಎಂದಿದ್ದಾರೆ.

actress-shweta-prasad-slams-industry-bias-against-aging-women

'ಯಾವುದೇ ಒಂದು ವೃತ್ತಿಯಲ್ಲಿ ಸಾಮಾನ್ಯವಾಗಿ ಅನುಭವ ಹಾಗೂ ವಯಸ್ಸು ಹೆಚ್ಚಾದಂತೆ ಸಂಬಳ ಕೂಡ ಜಾಸ್ತಿಯಾಗುತ್ತೆ. ಹೆಚ್ಚು ಹಣ ಸಿಗುತ್ತೆ. ಆದರೆ ಈ ಇಂಡಸ್ಟ್ರಿಯಲ್ಲಿ ಹುಡುಗಿಯರಿಗೆ ಮಾತ್ರ ವಯಸ್ಸಾದಂತೆ ಪಾತ್ರಗಳು ಕೂಡ ಬದಲಾಗುತ್ತವೆ. ಅವರಿಗೆ ಅಮ್ಮ, ಅತ್ತೆ ರೋಲ್‌ ಸಿಗುತ್ತೆ. ಆದರೆ ಪೇಮೆಂಟ್‌ ಕಡಿಮೆಯಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅಷ್ಟೆಲ್ಲ ಓದಿ, ಕೆರಿಯರ್‌ಗಾಗಿ ಅಷ್ಟೆಲ್ಲ ಬಂಡವಾಳ ಹಾಕಿ ಕಷ್ಟ ಪಟ್ಟು ಅದನ್ನು ಬಿಟ್ಟು ಈ ಇಂಡಸ್ಟ್ರಿಗೆ ಬರಬೇಕಾ? ಎಂಬ ಅನುಮಾನ ಇತ್ತು' ಎಂದಿದ್ದಾರೆ.

ಬ್ರ್ಯಾಂಡ್‌ ಪ್ರಮೋಷನ್‌ಗಳಿಂದ ಉಳಿಯುತ್ತಿದ್ದೇವೆ

'ನಮ್ಮ ಕೆಲಸದ ಬಗ್ಗೆ ಶ್ರದ್ಧೆ ಇರಬೇಕು. ಸಿನಿಮಾದಲ್ಲಿರುವಾಗ ಸಾವಿರಾರು ಜನ ಇರ್ತಾರೆ. ಹಾಗಾಗಿ ಚೆನ್ನಾಗಿ ಕಾಣಿಸಿಕೊಳ್ಳಬೇಕು. ಇದೇ ಇಲ್ಲಿ ಬಂಡವಾಳ. ಪ್ರತಿಯೊಬ್ಬರಿಗೂ ವಯಸ್ಸಾಗುತ್ತೆ. ಆದರೆ ವಯಸ್ಸಿಗೆ ತಕ್ಕಂತೆ ಗ್ರೂಮಿಂಗ್‌ ಮುಖ್ಯ. ನನಗೂ ಕೂಡ ಅಷ್ಟೊಂದು ವಯಸ್ಸಾಗಿಲ್ಲ. ಸಿನಿಮಾಗಳನ್ನೇ ನಂಬಿಕೊಂಡಿರುವ ನಟಿಯರಿಗೆ ಆರ್ಥಿಕವಾಗಿ ತುಂಬಾ ಕಷ್ಟ. ಆರ್ಥಿಕ ಮಟ್ಟ ಸ್ಥಿರವಾಗಿರಲ್ಲ. ಆದರೆ ಈಗೆಲ್ಲ ಸೋಷಿಯಲ್‌ ಮೀಡಿಯಾಗಳಲ್ಲಿ ಕ್ಯಾಂಪೇನ್‌, ಬ್ರ್ಯಾಂಡ್‌ ಪ್ರಮೋಷನ್‌ ಮಾಡಬಹುದು. ಅದರಿಂದ ನಿಜಕ್ಕೂ ಉಳಿದುಕೊಂಡಿದ್ದೇವೆ. ಸಿನಿಮಾ ಶೂಟಿಂಗ್‌ ಮುಗಿದು, ಫ್ರೀ ಟೈಮಲ್ಲಿ ವರ್ಕೌಟ್‌ ಮಾಡಬೇಕು. ಅದರಿಂದಲೂ ನಮಗೆ ಮುಂದೆ ಚಾನ್ಸ್‌ಗಳು ಸಿಗುತ್ತವೆ' ಎಂದು ಸಲಹೆ ನೀಡಿದ್ದಾರೆ.

'ಕ್ರೈಂ ಸಿನಿಮಾಗಳನ್ನು ಜನ ಹೆಚ್ಚಾಗಿ ಗಮನ ಕೊಟ್ಟು ನೋಡ್ತಾರೆ. ಈಗ ಬಂದೂಕ್‌ ಕೂಡ ಅದೇ ರೀತಿಯ ಸಿನಿಮಾ. ನಾನು ಸೀರಿಯಲ್‌ಗಳಲ್ಲಿ ತುಂಬಾ ಸಾಫ್ಟ್‌ ರೋಲ್‌ಗಳನ್ನ ಮಾಡಿದ್ದೇನೆ. ಅದೇ ಹುಡುಗಿಗೆ ಸ್ಟ್ರಾಂಗ್‌ ಪಾತ್ರಗಳನ್ನು ಕೊಟ್ಟಾಗ ತುಂಬಾ ಖುಷಿಯಾಗುತ್ತೆ. ಈ ಸಿನಿಮಾಗೆ ನಟ ವಿಜಯ್‌ ದೇವರಕೊಂಡ ಅವರು ಕೂಡ ಪ್ರಮೋಟ್‌ ಮಾಡುತ್ತಿರುವುದು ತುಂಬಾ ಬಲ ನೀಡುತ್ತಿದೆ. ಅವರ ಅಭಿಮಾನಿಗಳು ಕೂಡ ನಮ್ಮ ಸಿನಿಮಾ ನೋಡ್ತಾರೆ' ಎಂದು ಸಂತಸ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+