ಗೆಳತಿಗೆ ಲಿಪ್ ಕಿಸ್ ಕೊಟ್ಟ ಕಿರಿಕ್ ಬೆಡಗಿಗೆ "ನೀವು ಅದಾ?" ಎಂದ ನೆಟ್ಟಿಗರು
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಗಮನ ಸೆಳೆದಿರುವ ನಟಿ ಸಂಯುಕ್ತಾ ಹೆಗ್ಡೆ ಸದ್ಯ ಕಿರಿಕ್ ಬೆಡಗಿ ಎಂದೇ ಹೆಸರು ಪಡೆದುಕೊಂಡಿದ್ದಾರೆ. ಅದಾ ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಸಂಯುಕ್ತಾ ಅವರು ಟ್ರೋಲ್ ಕೂಡ ಆಗುತ್ತಿರುತ್ತಾರೆ. ಇತ್ತೀಚೆಗೆ ಅವರು ಒಂದು ಶೇರ್ ಮಾಡಿದ್ದ ಫೋಟೋ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ತನ್ನ ಆಪ್ತ ಗೆಳತಿಗೆ ಲಿಪ್ ಟು ಲಿಪ್ ಕಿಸ್ ಕೊಡುತ್ತಿರುವ ಫೋಟೋ ಶೇರ್ ಮಾಡಿಕೊಂಡು ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಈ ಫೋಟೋ ಶರವೇಗದಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ಇನ್ನು ಕಾಮೆಂಟ್ ಮಾಡೋರು ಕೂಡ ತಮ್ಮ ಚಾಳಿ ಮುಂದುವರಿಸಿದ್ದಾರೆ. ಹಲವರು ನಟಿಯ ಈ ಬೋಲ್ಡ್ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವರು ಸಂಯುಕ್ತಾ ಅವರಿಗೆ ಹೊಸ ಪಟ್ಟ ನೀಡಿ, ತಮ್ಮ ಕೀಳುಮಟ್ಟದ ಅಭಿರುಚಿ ಪ್ರದರ್ಶಿಸಿದ್ದಾರೆ.
ನಟಿ ಸಂಯುಕ್ತಾ ಹೆಗ್ಡೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಗೆಳತಿ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಯುಕ್ತಾ ಹೆಗ್ಡೆ ತಮ್ಮ ಗೆಳತಿಗೆ ಲಿಪ್-ಲಾಕ್ (liplock) ಮಾಡಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಕಾಮೆಂಟ್ ಆಫ್ ಮಾಡಿದ ನಟಿ
ಕೆಲವರು ಇದನ್ನು ಸಾಮಾನ್ಯ ಎಂದು ಪರಿಗಣಿಸಿದರೆ, ಇನ್ನೂ ಕೆಲವರು "ಗೆಳತಿಗೆ ಲಿಪ್-ಲಾಕ್ ಕೊಡೋದು ಸರಿಯೇ?" ಎಂದು ಪ್ರಶ್ನಿಸಿದ್ದಾರೆ. ಇದು ಸಂಯುಕ್ತಾ ಹೆಗ್ಡೆ ಅವರ ವಿರುದ್ಧ ಟ್ರೋಲ್‌ಗಳಿಗೆ ಕಾರಣವಾಗಿದ್ದು, ಚಿತ್ರರಂಗದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದು ಚರ್ಚೆಗೆ ಗ್ರಾಸವಾಗಿದೆ. ಈ ಫೋಟೋಗೆ ಮನಬಂದಂತೆ ಕಾಮೆಂಟ್ ಮಾಡುತ್ತಿದ್ದು, ನಟಿಯ ಮಾಡಿರುವುದು ಸರಿಯಲ್ಲ ಎಂದು ಹಲವರು ವಾದಿಸಿದ್ದಾರೆ.
"ಸಾಮಾನ್ಯವಾಗಿ ಗಂಡು-ಹೆಣ್ಣು ಲಿಪ್‌ಲಾಕ್ ಮಾಡಿಕೊಳ್ಳುತ್ತಾರೆ. ಒಬ್ಬ ಹುಡುಗಿಯಾಗಿ ನೀವು ಮತ್ತೊಬ್ಬ ಹುಡುಗಿಗೆ ಲಿಪ್‌ಲಾಕ್ ಮಾಡುವುದು ಸರಿಯೇ?" ಎಂದು ಪ್ರಶ್ನಿಸಿದ್ದಾರೆ. "ಸಂಯುಕ್ತಾ ಅವರ ವರ್ತನೆ ನೋಡಿದರೆ ಅವರು ಸಲಿಂಗಿಯೇ ಎಂಬ ಅನುಮಾನ ಬರ್ತಿದೆ" ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಮೊದಲಿಗೆ ಈ ಫೋಟೋಗೆ ನಟಿ ಕಾಮೆಂಟ್ ಮಾಡಲು ಅವಕಾಶ ನೀಡಿದ್ದರು. ಆದರೆ ಟ್ರೋಲಿಗರ ಕಾಮೆಂಟ್ ಹಾವಳಿಯಿಂದ ಕಾಮೆಂಟ್ ಆಫ್ ಮಾಡಿದ್ದಾರೆ ಎನ್ನಲಾಗಿದೆ.
ಸಂಯುಕ್ತಾ ಹೆಗ್ಡೆ ತನ್ನ ಸ್ನೇಹಿತೆಗೆ ಲಿಪ್-ಟು-ಲಿಪ್ ಕಿಸ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ನಟಿ "ಗೇ ಇರಬೇಕು" ಎಂದು ಅನುಮಾನಿಸುತ್ತಿದ್ದಾರೆ. ಒಂದು ಹಾಗಲ್ಲದಿದ್ದರೆ ಯಾರಾದರೂ ಸ್ನೇಹಿತರಿಗೆ ಲಿಪ್ ಲಾಕ್ ಕೊಡುತ್ತಾರಾ? ಎಂದು ಕೇಳುತ್ತಿದ್ದಾರೆ. ಇನ್ನೂ ಕೆಲವರು ಇದು ಸಿನಿಮಾ ಮಂದಿಗೆ ಸಾಮಾನ್ಯ ಬಿಡಿ ಎಂದೂ ಹೇಳುತ್ತಿದ್ದಾರೆ.
ಸಂಯುಕ್ತಾ ಹೆಗ್ಡೆ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಅವರು 2016ರಲ್ಲಿ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.ತಮ್ಮ ಬೋಲ್ಡ್ ಸ್ವಭಾವದಿಂದಲೂ ಪ್ರಸಿದ್ಧಿ ಪಡೆದಿದ್ದಾರೆ. ಟಿವಿ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದರು. ಕನ್ನಡದ ಕಾಲೇಜ್ ಕುಮಾರ್ (2017), ತೆಲುಗು ಕಿರ್ರಾಕ್ ಪಾರ್ಟಿ (2018), ತಮಿಳಿನ ವಾಚ್‌ಮನ್, ಕೋಮಲಿ, ಪಪ್ಪಿ ಹಾಗೂ ಕ್ರೀಮ್ ಚಿತ್ರದಲ್ಲೂ ಸಂಯುಕ್ತಾ ನಟಿಸಿದ್ದರು. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಆಗಾಗ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ.












Click it and Unblock the Notifications