Samantha: '2025ರಲ್ಲಿ ಲೈಫ್ ಪಾರ್ಟ್‌ನರ್, ಗರ್ಭಿಣಿ' ಪೋಸ್ಟ್‌ನಲ್ಲಿ ನಟಿ ಸಮಂತಾ ಕೊಟ್ಟ ಸುಳಿವೇನು?
ನಟಿ ಸಮಂತಾ ರುತ್ ಪ್ರಭು ಅವರು ಹೊಸ ವರ್ಷಾಚರಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಪಿತೃವಿಯೋಗವಾಗಿತ್ತು. ಆದರೂ ಎದೆಗುಂದದೆ ಅವರು ಸಹಜ ಸ್ಥಿತಿಯತ್ತ ಮರಳಿದ್ದಾರೆ. ಅಲ್ಲದೆ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾತರರಾಗಿದ್ದು, ತಮ್ಮ ರಾಶಿಯವರಿಗೆ 2025ರ ವರ್ಷ ಭವಿಷ್ಯ ಹೇಗಿರಲಿದೆ ಎಂದು ತಾವೇ ಹೇಳಿಕೊಂಡಿದ್ದಾರೆ.
ಅವರೇ ಹೇಳಿಕೊಂಡಿರುವಂತೆ ತಮ್ಮದು ವೃಷಭ ರಾಶಿ, ಕನ್ಯಾರಾಶಿ ಹಾಗೂ ಮಕರ ರಾಶಿಯವರ ಜೀವನದಲ್ಲಿ 2025ರಲ್ಲಿ ಏನೆಲ್ಲ ಆಗಲಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಕುತೂಹಲಕಾರಿ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ. ಇದರಲ್ಲಿ ತಮ್ಮ ವರ್ಷದ ಭವಿಷ್ಯದ ಪ್ರಕಾರ ಇವುಗಳನ್ನು ನಿರೀಕ್ಷಿಸಬಹುದು ಎಂದು ಸಮಂತಾ ಹೇಳಿಕೊಂಡಿದ್ದಾರೆ.

2025ರಲ್ಲಿ ಅತ್ಯಂತ ಬಿಡುವಿಲ್ಲದ ವರ್ಷವಾಗಿರುವುದು, ಹೆಚ್ಚು ಪ್ರಗತಿ ಕಾಣಬೇಕು ಹಾಗೂ ಹೆಚ್ಚಿನ ಹಣವನ್ನು ಗಳಿಸುವುದು, ನಿಮಗೆ ಮತ್ತು ನಿಮಗೆ ಆರ್ಥಿಕ ಸ್ಥಿರತೆ ಇರುವುದು, ನೀವು ಹೊಂದಿದ್ದ ದೊಡ್ಡ ಗುರಿಗಳನ್ನು ಪೂರ್ಣಗೊಳಿಸುವುದು, ಆದಾಯಕ್ಕೆ ಹಲವು ಮಾರ್ಗಗಳು, ಸ್ಥಳಾಂತರಗೊಳ್ಳಲು ಒಂದು ಅವಕಾಶ, ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯ, ಫಲವತ್ತತೆ, ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ, ಅದು ಅದ್ಭುತವಾಗಿದೆ. ಇಲ್ಲದಿದ್ದರೆ, ಜಾಗರೂಕರಾಗಿರಿ..ಎಂದು ಸಮಂತಾ ಹಾಕಿರುವ ಪೋಸ್ಟ್‌ನಲ್ಲಿದೆ.
ಇದೇ ಪಟ್ಟಿಯಲ್ಲಿ ಸಮಂತಾ ಅವರು ಅತ್ಯಂತ ನಿಷ್ಠಾವಂತ ಮತ್ತು ಪ್ರೀತಿಯ ಸಂಗಾತಿ (a very loyal and loving partner) ಎಂದು ಪೋಸ್ಟ್ ಮಾಡಿರುವುದು ಪ್ರಶ್ನೆಗಳನ್ನು ಮುಂದಿಟ್ಟಿದೆ. ಅಲ್ಲದೆ ಸಮಂತಾ ಅವರು ಮುಂದಿನ ವರ್ಷದಲ್ಲಿ ತಮ್ಮ ಹೊಸ ಸಂಗಾತಿ ಹಾಗೂ ಗರ್ಭಿಣಿಯಾಗುವ ಬಗ್ಗೆಯೂ ಈ ರೀತಿ ಸುಳಿವು ನೀಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಪೋಸ್ಟ್‌ನ ಪ್ರಕಾರ ಸಮಂತಾ ಅವರು 2025ರಲ್ಲಿ ಅತ್ಯಂತ ನಿಷ್ಠಾವಂತ ಮತ್ತು ಪ್ರೀತಿಯ ಸಂಗಾತಿಯನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸಮಂತಾ ಅವರು ಹಾಕಿರುವ ಒಂದು ಪೋಸ್ಟ್ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಇದು ಅವರ ಅಭಿಮಾನಿಗಳಲ್ಲಿ ಭರವಸೆಯ ಅಲೆಯನ್ನೂ ಹುಟ್ಟುಹಾಕಿದೆ.

ಈ ಹಿಂದೆ ಸಮಂತಾ ಅವರು ತೆಲುಗು ನಟ ನಾಗಚೈತನ್ಯಾ ಅವರನ್ನು ಲವ್ ಮಾಡಿ ಮದುವೆಯಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಸಮಂತಾ ಹಾಗೂ ನಾಗಚೈತನ್ಯ ಅವರು ಡಿವೋರ್ಸ್ ಘೋಷಿಸಿದ್ದರು. ಬಳಿಕ ಇತ್ತೀಚೆಗಷ್ಟೇ ನಾಗಚೈತನ್ಯಾ ಅವರು ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.
ಇದರ ಬೆನ್ನಲ್ಲೇ ಸಮಂತಾ ಕೂಡ ಹೊಸ ಜೀವನದತ್ತ ಸಾಗುತ್ತಿದ್ದಾರೆ. ನೀವು ಕೂಡ ಒಂದೊಳ್ಳೆ ಪಾರ್ಟ್‌ನರ್ ಆರಿಸಿಕೊಳ್ಳಿ. ನಿಮ್ಮ ಬದುಕಿನಲ್ಲಾದ ದುರಂತಗಳೆಲ್ಲವೂ ಮಾಸಿ ಹೋಗಲಿ ಎಂದು ಸ್ಯಾಮ್ ಅಭಿಮಾನಿಗಳು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಎಲ್ಲವೂ ನಿಮ್ಮ ನಿರೀಕ್ಷೆಯಂತೆ, ನೀವು ಬಯಸಿದಂತೆಯೇ ಅತ್ಯಂತ ನಿಷ್ಠಾವಂತ ಮತ್ತು ಪ್ರೀತಿಯ ಸಂಗಾತಿ ನಿಮಗೆ ದೇವರು ಕರುಣಿಸಲಿ..ಆದಷ್ಟು ಬೇಗ ಅವರನ್ನು ನಮಗೂ ಪರಿಚಯಿಸಿರಿ ಎಂದು ಸಮಂತಾ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಸಮಂತಾ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಿವಿಧ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.












Click it and Unblock the Notifications