Pushpa 2: ಅಲ್ಲು ಅರ್ಜುನ್ ಜೊತೆ ಮತ್ತೆ ಮಿಂಚಲಿರುವ ರಶ್ಮಿಕಾ!
ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಪುಷ್ಪ-2' ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಅದರಲ್ಲೂ 'ಪುಷ್ಪ-1' ಮೂಲಕ ಹಲ್‌ಚಲ್ ಎಬ್ಬಿಸಿರುವ ಪುಷ್ಪರಾಜ್‌ಗಾಗಿ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ಹೊತ್ತಲ್ಲಿ ಅಲ್ಲು ಅರ್ಜುನ್ ಫ್ಯಾನ್ಸ್ ಖುಷಿಪಡುವ ಸುದ್ದಿಯೊಂದು ಸಿಕ್ಕಿದ್ದು, ಅದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಸುಮಾರು 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ 'ಪುಷ್ಪ-1' 350 ಕೋಟಿ ರೂಪಾಯಿಗು ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿತ್ತು. ಹೀಗೆ ಪುಷ್ಪ-1 ಯಶಸ್ಸಿನ ಬಳಿಕ ಇದೀಗ ಪುಷ್ಪ-2 ಕಣ್ತುಂಬಿಕೊಳ್ಳಲು ಅಲ್ಲು ಅರ್ಜುನ್ ಫ್ಯಾನ್ಸ್ ಕಾಯುತ್ತಿದ್ದಾರೆ. ಜೊತೆಗೆ ರಶ್ಮಿಕಾ ಎಂಟ್ರಿಗೂ ಅಭಿಮಾನಿಗಳು ಕಾಯುತ್ತಿದ್ದರು. ಹೀಗೆ ಕಾಯುತ್ತಿದ್ದ ಫ್ಯಾನ್ಸ್ ನಿರೀಕ್ಷೆ ಸುಳ್ಳಾಗಿಲ್ಲ ಇಂದು ಅಲ್ಲು ಅರ್ಜುನ್ ಅಭಿಮಾನಿಗಳ ಆಸೆ ಈಡೇರುತ್ತಿದೆ. ಕರುನಾಡ ಕ್ರಷ್ ಎಂಬ ಬಿರುದು ಪಡೆದಿದ್ದ ರಶ್ಮಿಕಾ ಅಧಿಕೃತವಾಗಿ ಪುಷ್ಪ-2 ತಂಡಕ್ಕೆ ಸಾಥ್ ನೀಡಲಿದ್ದಾರೆ.

ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ಸರ್ಪ್ರೈಸ್!
ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ್ದ ಕನ್ನಡ ನಾಡಿನ ನಟಿ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್. ಹೀಗೆ ತಮ್ಮ ಸಿನಿಮಾ ಬದುಕಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ನಿರ್ದೇಶಕರು ಮತ್ತು ನಿರ್ಮಾಪಕರ ಕೈಗೆ ಸಿಗೋದೇ ಇಲ್ಲ ಅನ್ನೋ ಮಾತಿದೆ. ಅದರಲ್ಲೂ ಬಾಲಿವುಡ್ ಸಿನಿಮಾ ಒಂದರಲ್ಲಿ ರಶ್ಮಿಕಾ ಸಖತ್ ಬ್ಯುಸಿಯಾಗಿದ್ದರು. ಇದೀಗ ಬಾಲಿವುಡ್ ಸಿನಿಮಾ ಶೂಟ್ ಮುಗಿಸಿ ಇಂದಿನಿಂದ ನಟಿ ರಶ್ಮಿಕಾ ಅಧಿಕೃತವಾಗಿ 'ಪುಷ್ಪ-2' ತಂಡವನ್ನು ಕೂಡಿಕೊಳ್ಳುತ್ತಿದ್ದಾರೆ. ಈ ಮೂಲಕ ಪುಷ್ಪ ಅಲಿಯಾಸ್ ಅಲ್ಲು ಅರ್ಜುನ್ ಅವರಿಗೆ ಜೋಡಿಯಾಗಿ ಮಿಂಚಲು ಸಜ್ಜಾಗಿದ್ದಾರೆ.
ಅಲ್ಲು & ರಶ್ಮಿಕಾ ಜೋಡಿಗೆ ಫುಲ್ ಮಾರ್ಕ್ಸ್
ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಅಂದ್ರೆ ಪ್ಯಾನ್ ಇಂಡಿಯಾ ಲೆವೆಲ್ ಕ್ರೇಜ್. ಅದ್ರಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ಇಲ್ಲದೆ ಇರುವ ಕಾಲದಲ್ಲಿಯೂ ಈ ನಟ ದೇಶದಲ್ಲಿ ಸಖತ್ ಸದ್ದು ಮಾಡಿದ್ದರು. ಈಗ ಪ್ಯಾನ್ ಇಂಡಿಯಾ ಜಮಾನ ಶುರುವಾಗಿದ್ದು, ಭಾರತದ ಮೂಲೆ ಮೂಲೆಯಲ್ಲೂ ಅಲ್ಲು ಅರ್ಜುನ್‌ಗೆ ಫ್ಯಾನ್ಸ್ ಇದ್ದಾರೆ. ಇವರೆಲ್ಲ 'ಪುಷ್ಪ-2' ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹತ್ತಿರ ಹತ್ತಿರ 2 ವರ್ಷದಿಂದ ಪುಷ್ಪ-2 ಸಿನಿಮಾಗೆ ಕಾಯುತ್ತಿದ್ದಾರೆ. ಹೀಗಾಗಿ ಅವರಿಗೆ ಸಿಹಿಸುದ್ದಿ ನೀಡಲು ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಹಗಲು-ರಾತ್ರಿ ಲೆಕ್ಕಿಸದೆ ಶೂಟಿಂಗ್ ನಡೆಸುತ್ತಿದ್ದಾರೆ. ಇದೀಗ ರಶ್ಮಿಕಾ ಕೂಡ ಪುಷ್ಪರಾಜ್‌ಗೆ ಜೋಡಿಯಾಗಿ ಸಾಥ್ ನೀಡುತ್ತಿದ್ದಾರೆ.

ಎಷ್ಟುದಿನ ರಶ್ಮಿಕಾ ಶೂಟಿಂಗ್?
ನಟಿ ರಶ್ಮಿಕಾ ಇಂದಿನಿಂದ ಅಂದ್ರೆ ಆಗಸ್ಟ್ 10ರಂದು ಪುಷ್ಪ-2 ಶೂಟಿಂಗ್ ಶುರು ಮಾಡ್ತಿದ್ದಾರೆ. ಹೀಗಾಗಿ ಕುತೂಹಲ ದುಪ್ಪಟ್ಟಾಗಿದೆ. ರಶ್ಮಿಕಾ ನಟಿಸಲಿರುವ ರೊಮ್ಯಾಂಟಿಕ್ ಸೀನ್, ಸಾಂಗ್ ಶೂಟಿಂಗ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ರಶ್ಮಿಕಾ ಒಂದೇ ಶೆಡ್ಯೂಲ್ ಮೂಲಕ ತಮ್ಮ ಪಾಲಿನ ಶೂಟಿಂಗ್ ಮುಗಿಸುತ್ತಾರಾ ಅಥವಾ ಮತ್ತೊಂದು ಶೆಡ್ಯೂಲ್ ಫಿಕ್ಸ್ ಆಗಿದೆಯಾ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹೀಗಾಗಿ ಇಂದು ಶೂಟಿಂಗ್ ಶುರುವಾದ ನಂತರ ಗೊಂದಲ ಮತ್ತು ಕುತೂಹಲಕ್ಕೆ ತೆರೆ ಬೀಳಲಿದೆ.
ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಸಿಗ್ತಿದೆ!
ಈಗ ರಶ್ಮಿಕಾ ಎಂಟ್ರಿ ಜೊತೆಗೆ ಇತ್ತೀಚೆಗಷ್ಟೆ ಪುಷ್ಪ-2 ಬಗ್ಗೆ ಚಿತ್ರತಂಡ ಸರ್ಪ್ರೈಸ್ ಒಂದನ್ನ ನೀಡಿತ್ತು. 'ಪುಷ್ಪ-2' ಖಳನಾಯಕ ಮಲಯಾಳಂ ನಟ ಫಹಾದ್ ಫಾಸಿಲ್ ಅವರ ಖಡಕ್ ಲುಕ್ ರಿಲೀಸ್ ಮಾಡಲಾಗಿತ್ತು. ನಟ ಫಹಾದ್ ಫಾಸಿಲ್ ಬರ್ತ್ ಡೇ ಹಿನ್ನೆಲೆಯಲ್ಲಿ ಇಂತಹ ಸರ್ಪ್ರೈಸ್ ನೀಡಲಾಗಿತ್ತು. ನಟ ಫಹಾದ್ ಫಾಸಿಲ್ ಅವರಿಗೆ ಪುಷ್ಪ 2 ತಂಡದಿಂದ ಜನ್ಮದಿನದ ಶುಭಾಶಯಗಳು. ಬನ್ವರ್ ಸಿಂಗ್ ಶೆಖಾವತ್ ಸರ್ ಅವರು ಸೇಡಿನೊಂದಿಗೆ ಮತ್ತೆ ದೊಡ್ಡ ಪರದೆ ಮೇಲೆ ಬರಲಿದ್ದಾರೆ ಎಂದು ಬರೆದುಕೊಂಡು ಚಿತ್ರತಂಡ ಪೋಸ್ಟರ್ ಒಂದನ್ನ ಹಾಕಿತ್ತು. ಈ ಗಿಫ್ಟ್ ನಂತರ ಈಗ ಮತ್ತೊಂದು ಸರ್ಪ್ರೈಸ್ ಸಿಗುತ್ತಿದ್ದು, ನಟಿ ರಶ್ಮಿಕಾ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ.












Click it and Unblock the Notifications