Rashmika Mandanna: ಬಣ್ಣದ ಲೋಕಕ್ಕೆ ನಿವೃತ್ತಿ ಘೋಷಣೆ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ: ಅಭಿಮಾನಿಗಳು ಶಾಕ್
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸತತ ಸೂಪರ್ ಹಿಟ್ ಚಿತ್ರಗಳ ಮೂಲಕ ಭಾರತದ ನಂ.1 ನಟಿಯಾಗಿ ಮಿಂಚಿದ್ದಾರೆ. ಸದ್ಯ ಕೆಲ ಪ್ರಮುಖ ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುವ ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳಿಗೆ ಬಿಗ್ ಶಾಂಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಅನಿಮಲ್, ಪುಷ್ಪ 2 ಯಶಸ್ಸಿನ ಬಳಿಕ 'ಛಾವಾ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿದ್ರು. ಛಾವಾ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದುವ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಅವರು ಮಾತನಾಡಿದ್ದಾರೆ. ಟಾಪ್ ನಟಿ ಹ್ಯಾಪಿ ಟು ರಿಟೈರ್ ಎಂದಿರೋದು ಸಹಜವಾಗಿ ಅಭಿಮಾನಿಗಳಿಗೆ ಶಾಕ್ ಆಗಿದೆ.

ವಿಕ್ಕಿ ಕೌಶಲ್ ಜೊತೆ 'ಛಾವಾ' ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಮರಾಠ ದೊರೆ ಛತ್ರಪತಿ ಶಿವಾಜಿ ಪುತ್ರ ಸಾಂಭಾಜಿ ಮಹರಾಜನ ಪಾತ್ರದಲ್ಲಿ ವಿಕ್ಕಿ ನಟಿಸಿದ್ದಾರೆ. ನಟಿ ರಶ್ಮಿಕಾ ಅವರು ಸಾಂಭಾಜಿ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಈ ಪಾತ್ರ ಮಾಡಿ ತೃಪ್ತಿ ಆಗಿದೆ. ಅದೊಂದು ಗೌರವ. ದಕ್ಷಿಣದಿಂದ ಬಂದು ಮಹಾರಾಣಿ ಯೇಸುಬಾಯಿ ಪಾತ್ರವನ್ನು ಮಾಡಿದ್ದೇನೆ. ಇದು ನನ್ನ ಜೀವಿತಾವಧಿಯಲ್ಲಿ ಮಾಡಿದ ವಿಶೇಷ ಕೆಲಸ. ಈ ಸಿನಿಮಾ ಬಳಿಕ ನಿವೃತ್ತಿ ಹೊಂದಲು ನನಗೆ ಖುಷಿ ಇದೆ ಎಂದು ರಶ್ಮಿಕಾ ಅವರು ನಿರ್ದೇಶಕ ಲಕ್ಷ್ಮಣ್ ಅವರಿಗೆ ಹೇಳಿದ್ದೇನೆ ಎಂದಿದ್ದಾರೆ.
ನಾನು ಅಳುತ್ತಾ ಕೂರುವ ವ್ಯಕ್ತಿ ಅಲ್ಲ. ಆದರೆ, ಈ ಟ್ರೇಲರ್ನ ನನ್ನನ್ನು ಪ್ರಚೋದಿಸಿತು. ವಿಕ್ಕಿ ಕೌಶಲ್ ದೇವರ ರೀತಿ ಕಾಣುತ್ತಿದ್ದಾರೆ. ಅವರು ಛಾವಾ' ಎಂದು ರಶ್ಮಿಕಾ ಮಂದಣ್ಣ ಅವರು ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ಹೇಳಿದ್ದಾರೆ. ವಿಕ್ಕಿ ಕೌಶಾಲ್ ನಾಯಕನ ನಟನಾಗಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿದ್ದಾರೆ. ಛಾವಾ ಚಿತ್ರದ ಪೋಸ್ಟ್ ಬಿಡುಗಡೆ ಬೆನ್ನಲ್ಲೇ ಇದೀಗ ಟ್ರೈಲರ್ ಲಾಂಚ್ ಆಗಿದೆ. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಭಾವುಕರಾಗಿದ್ದಾರೆ.
ದಕ್ಷಿಣ ಭಾರತದದಿಂದ ಬಂದ ನನಗೆ ಮರಾಠಾ ಸಾಮ್ರಾಜ್ಯದ ಮಹಾರಾಣಿ ಪಾತ್ರ ಮಾಡಲು ಸಿಕ್ಕಿರುವುದು ನನ್ನ ಹೆಮ್ಮೆ ಹಾಗೂ ಭಾಗ್ಯ ಎಂದು ಭಾವಿಸುತ್ತೇನೆ. ಮಹಾರಾಣಿ ಯೇಸುಬಾಯಿ ಭೋನ್ಸಾಲೆ ಪಾತ್ರ ಮಾಡುತ್ತಿರುವುದು ನನ್ನ ಜೀವಮಾನದ ಅತ್ಯಂತ ಶ್ರೇಷ್ಠ ಎಂದು ಭಾವಿಸುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಈ ಛಾವಾ ಚಿತ್ರದ ಬಳಿಕ ನಾನು ಚಿತ್ರರಂಗದಿಂದ ನಿವೃತ್ತಿಯಾಗಲು ನನಗೆ ಬೇಸರವಿಲ್ಲ. ಈ ಪಾತ್ರದಿಂದ ನನ್ನಲ್ಲಿ ಸಾರ್ಥಕ ಭಾವವಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ನಾನು ಯಾವುದೇ ಸಂದರ್ಭದಲ್ಲೂ ಅಳುವುದಿಲ್ಲ. ಆದರೆ ಛಾವಾ ಟ್ರೈಲರ್ ನನ್ನನ್ನು ಭಾವುಕಳನ್ನಾಗಿ ಮಾಡಿದೆ. ವಿಕ್ಕಿ ಈ ಚಿತ್ರದ ಛಾವ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಹಲವು ಭಾರಿ ನನಗೆ ಅಚ್ಚರಿಯಾಗುತ್ತದೆ. ಕಾರಣ ಮಹಾರಾಣಿ ಪಾತ್ರಕ್ಕೆ ನನ್ನನ್ನು ಏಕೆ ಆಯ್ಕೆ ಮಾಡಿದರೂ, ನನಗೆ ಈ ಮಹತ್ತರ ಜವಾಬ್ದಾರಿ ಯಾಕೆ ಕೊಟ್ಟರು ಅನ್ನೋದು ಹಲವು ಬಾರಿ ನನ್ನನ್ನು ಕಾಡಿದೆ ಎಂದು ರಶ್ಮಿಕಾ ಅವರು ಹೇಳಿದ್ದು, ನಾನು ನಿರ್ದೇಶಕರಿಗೆ ಸಂಪೂರ್ಣ ಶರಣಾಗಿದ್ದೇನೆ. ಪಾತ್ರಕ್ಕೆ ನ್ಯಾಯಕೊಡಿಸಲು ಪ್ರಯತ್ನ ಮಾಡಿದ್ದೇನೆ ಎಂದು ರಶ್ಮಿಕಾ ಮಂದಣ್ಣ ಅವರು ತಿಳಿಸಿದ್ದಾರೆ.
ಈ ಚಿತ್ರಕ್ಕೆ ನಾನು ನಿರ್ದೇಶಕರು ಹೇಳಿದ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹಲವು ಬಾರಿ ಅಭ್ಯಾಸ ಮಾಡಿದ್ದೇನೆ. ನಟನೆ, ಶೈಲಿ, ಭಾಷೆ ಎಲ್ಲವನ್ನೂ ಸತತವಾಗಿ ಅಭ್ಯಾಸ ಮಾಡುತ್ತಿದ್ದೇನೆ. ನಿರ್ದೇಶಕರು ಈ ವಿಚಾರದಲ್ಲಿ ಬಹಳ ಶಿಸ್ತಿನಿಂದ ಚಿತ್ರ ಮಾಡುತ್ತಿದ್ದಾರೆ. ಇಡೀ ತಂಡದ ಮೇಲೆ ಮಹತ್ತರ ಜವಾಬ್ದಾರಿ ಇದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಅವರು ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ಅವರಿಗೆ ಇನ್ನೂ 28 ವರ್ಷ ವಯಸ್ಸು. ಅವರು ಇಷ್ಟು ಬೇಗ ನಿವೃತ್ತಿ ಪಡೆಯೋದು ಅನುಮಾನವೇ. ಅವರು ವಿವಾಹದ ಬಳಿಕ ಈ ಬಗ್ಗೆ ಆಲೋಚಿಸಬಹುದು ಎಂದು ಹೇಳಲಾಗಿದೆ.












Click it and Unblock the Notifications