Rashmika Mandanna: ಮತ್ತೆ ವಿವಾದದಲ್ಲಿ ರಶ್ಮಿಕಾ;‌ "ಕೊಡವ ಸಮುದಾಯದಿಂದ ಸಿನಿಮಾಗೆ ಬಂದ ಮೊದಲ ಮಹಿಳೆ ನಾನೇ"

ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದಾಗಿನಿಂದ ಯಶಸ್ಸಿನ ಪ್ರಯಾಣದಲ್ಲೇ ಇರುವ ನಟಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿಕೊಳ್ಳುತ್ತಿರುತ್ತಾರೆ. ನಟಿ ರಶ್ಮಿಕಾ ಮಂದಣ್ಣ ಈ ಹಿಂದೆ ಕನ್ನಡಿಗರನ್ನು ಕೆಣಕಿ ಹಲವು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದೀಗ ರಶ್ಮಿಕ ಮಂದಣ್ಣ ಮತ್ತೊಂದು ಹೇಳಿಕೆ ನೀಡಿದ್ದು, ಕೊಡವ ಸಮುದಾಯದಿಂದ ಫಿಲಂ ಇಂಡಸ್ಟ್ರಿಗೆ ಯಾರು ಬಂದಿಲ್ಲ. ಕೊಡವ ಸಮುದಾಯದ ಮೊದಲ ನಟಿ ನಾನು ಎಂದು ಸಂದರ್ಶನ ಒಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಹೀಗೆ ಹೇಳಿ ಮತ್ತೊಂದು ವಿವಾದ ಸೃಷ್ಟಿ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಸ್ವಲ್ಪ ಸಮಯದಿಂದ ವಿವಾದಗಳಿಂದ ದೂರವಿದ್ದರು, ಇದೀಗ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಬರ್ಖಾ ದತ್‌ ಅವರ ಸಂದರ್ಶನದಲ್ಲಿ ತಾನು ಕೊಡವ ಸಮುದಾಯದಿಂದ ಸಿನಿಮಾ ಇಂಡಸ್ಟ್ರಿಗೆ ಪ್ರವೇಶಿಸಿದ ಮೊದಲ ಮಹಿಳೆ ಎಂದು ಹೇಳಿಕೆ ನೀಡಿದ್ದಾರೆ. ಕೊಡವ ಸಮುದಾಯದಿಂದ ಇದುವರೆಗೂ ಇಂಡಸ್ಟ್ರಿಗೆ ಯಾರು ಬಂದಿಲ್ಲ. ಕೊಡುವ ಸಮುದಾಯದ ಮೊದಲ ನಟಿ ನಾನೇ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿಕೆ ಭಾರೀ ವೈರಲ್‌ ಆಗುತ್ತಿದೆ.

Actress Rashmika Mandanna Said She Is First Woman To Enter Film Industry From Kodava Community

ಬರ್ಖದತ್ ಸಂದರ್ಶನದಳ್ಳಿ ನಿಮಗೆ ಗೊತ್ತಾ ಕೂರ್ಗ ಸಮುದಾಯದಿಂದ ಇದುವರೆಗೂ ಯಾರೂ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿಲ್ಲ ನನ್ನ ಯೋಚನೆ ಪ್ರಕಾರ ನಾನೇ ಮೊದಲ ಬಾರಿಗೆ ಇಡೀ ಸಮುದಾಯದಿಂದಲೇ ಫಿಲಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು ಎಂದು ಹೇಳಿಕೆ ನೀಡಿದ್ದಾರೆ. ಈಗಾಗಲೇ ಇಂಡಸ್ಟ್ರಿಯಲ್ಲಿ ಕೊಡವ ಸಮುದಾಯದ ಹಲವಾರು ನಟಿಯರು ಇದ್ದಾರೆ. ನಟಿ ಪ್ರೇಮಾ, ನಿಧಿ ಸುಭಯ್ಯ, ಹರ್ಷಿಕಾ ಪೂಣಚ್ಚ, ಶುಭ್ರಾ ಅಯ್ಯಪ್ಪ ಸೇರಿದಂತೆ ಹಲವು ನಟಿಯರು ಈಗಾಗಲೇ ಕನ್ನಡ ಇಂಡಸ್ಟ್ರಿಯಲ್ಲಿ ಇದ್ದಾರೆ. ಕನ್ನಡ ಮಾತ್ರವಲ್ಲದೇ ನಟಿ ಪ್ರೇಮಾ ಹಲವು ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರಿಗೆ ತಮ್ಮದೇ ಸಮುದಾಯದ ಇತಿಹಾಸದ ಬಗ್ಗೆ ತಿಳಿದಿಲ್ಲವೇನು? ಎಂಬ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ನಟಿ ನಿಧಿ ಸುಬ್ಬಯ್ಯ ಮಾತನಾಡಿ, ಇಂತಹ ಸ್ಟೇಟ್‌ಮೆಂಟ್‌ಗೆಲ್ಲ ನಾನು ರಿಯಾಕ್ಟ್‌ ಮಾಡೋದಿಲ್ಲ. ಇದು ಜಸ್ಟ್‌ ಜೋಕ್.‌ ಅವರು ಏನು ಯೋಚನೆ ಮಾಡಿಕೊಂಡು ಹಾಗೆ ಹೇಳಿದ್ರೋ ಗೊತ್ತಿಲ್ಲ. ಆದರೆ ಅವರು ಹೇಳಿದ್ರು ಅನ್ನೋ ಕಾರಣಕ್ಕೆ ಅದು ನಿಜಾ ಆಗೋದಿಲ್ಲ. ಪ್ರೇಮಾ ಅವರು ದೊಡ್ಡ ಲೆಜೆಂಡ್.‌ ನಾನು ಅವರ ದೊಡ್ಡ ಅಭಿಮಾನಿ. ರೀಷ್ಮಾ ನಾಣಯ್ಯ ಹಾಗೂ ನಾನು ಕೂಡ ಕೊಡಗಿನಿಂದ ಬಂದವರು. ಕೊಡಗು ಸಮುದಾಯದಿಂದ ಬಂದ ಮೊದಲ ಸೂಪರ್‌ ಸ್ಟಾರ್‌ ಪ್ರೇಮಾ ಅವರು ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿಕೆಗೆ ನಿಧಿ ಸುಬ್ಬಯ್ಯ ಟಾಂಗ್‌ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಹೇಳಿಕೆಗೆ ತನಿಷಾ ಕುಪ್ಪಂಡ ಅವರು ಪ್ರತಿಕ್ರಿಯಿಸಿದ್ದು, ಕೆಲವೊಮ್ಮೆ ಕೆಲವೊಂದು ಸ್ಟೇಟ್‌ಮೆಂಟ್‌ಗಳಿಗೆ ನಗಬೇಕೋ ಅಥವಾ ಅಳಬೇಕೋ ಗೊತ್ತಾಗುವುದಿಲ್ಲ. ನಮ್ಮ ಕೊಡವ ಕಮ್ಯೂನಿಟಿಯಲ್ಲಿ ಅಲ್ಲಿಂದ ಬಂದು ರಶ್ಮಿಕಾ ಹೆಸರು ಮಾಡಿದ್ದಾರೆ ಅಂದ್ರೆ ಹೌದು ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಒಳ್ಳೊಳ್ಳೆ ಸಿನಿಮಾಗಳನ್ನು ಮಾಡ್ತಿದ್ದಾರೆ ಅನ್ನೋದಕ್ಕೆ ಒಬ್ಬ ನಟಿಯಾಗಿ ನನಗೆ ಖುಷಿ ಇದೆ. ಆದರೆ ರಶ್ಮಿಕಾ ಮಂದಣ್ಣ ಅವರೇ ಮೊದಲ ವ್ಯಕ್ತಿ ಆಗಿದ್ರು ಅಂದ್ರೆ ಅವರಿಗೆ ಒಂದು 200 ವರ್ಷ ಆಗಿರಬೇಕು ಏನೋ ಈಗ. ನಮ್ಮಲ್ಲಿ ಬಹಳಷ್ಟು ಹೆಸರು ಮಾಡಿದ ನಟಿ ಪ್ರೇಮಾ ಅವರು ಇದ್ದಾರೆ. ಡೈಸಿ ಬೋಪಣ್ಣ, ಹರ್ಷಿಕಾ ಪೂಣಚ್ಚ, ರೀಷ್ಮಾ ನಾಣಯ್ಯ ಸೇರಿದಂತೆ ಹಲವು ನಟಿಯರು ನಮ್ಮ ಸಮುದಾಯದಿಂದ ಬಂದವರು ಇದ್ದಾರೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+