Rashmika Mandanna Marriage: 'ಪುಷ್ಪಾ 2' ವೇದಿಕೆಯಲ್ಲೇ ಪ್ರೀತಿ-ಹುಡುಗ-ಮದುವೆ ಅಪ್ಡೇಟ್ ಕೊಟ್ಟ ಶ್ರೀವಲ್ಲಿ

ಬೆಂಗಳೂರು, ನವೆಂಬರ್ 25: ಬಾಲಿವುಡ್, ಟಾಲಿವುಡ್ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಬ್ಯೂಸಿ ಇರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಾ ಅವರು ಕೊನೆಗೆ ತಮ್ಮ ಪ್ರೀತಿ, ಮದುವೆ ಬಗ್ಗೆ ಮೌನ ಮುರಿದಿದ್ದಾರೆ. 'ಪುಷ್ಪಾ-2' ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಬ್ಯೂಸಿ ಇರುವ ನಟಿ ರಶ್ಮಿಕಾ ಅವರು ಹಾಡು ಬಿಡುಗಡೆ ಇವೆಂಟ್‌ನಲ್ಲಿ ವೇದಿಕೆಯಲ್ಲಿಯೇ ಮೊದಲ ಬಾರಿಗೆ ತಮ್ಮ ಹುಡುಗನ ಬಗ್ಗೆ ಮಾತನಾಡಿದ್ದಾರೆ.

ಹಲವು ಸಿನಿಮಾಗಳಲ್ಲಿ ಬ್ಯೂಸಿ ಇರುವ ನಟಿ ರಶ್ಮಿಕಾ 'ಪುಷ್ಪಾ-2' ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಸೀರೆಯಲ್ಲಿ ಬಂದ ನಟಿ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಲವ್, ಮದುವೆ ಅಪ್ಡೇಟ್ ಕೊಡುವ ಮೂಲಕ ರಶ್ಮಿಕಾ ತಮ್ಮ ಫ್ಯಾನ್ಸ್‌ಗೆ ಖುಷಿ ಸುದ್ದಿ ನೀಡಿದ್ದಾರೆ.

Actress Rashmika Mandanna Revealed Her Love Relationship on Pushpa 2 Event Video

ಭಾನುವಾರ ನಡೆದ ಪುಷ್ಪಾ 2 ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸಿನಿಮಾ ಬಗ್ಗೆ ಮಾತನಾಡಿದ ನಟಿ ರಶ್ಮಿಕಾ ಅವರಿಗೆ ತಮ್ಮನ್ನು ಪ್ರೀತಿಸುವ ಹುಡುಗ, ಮದುವೆ ವಿಚಾರವಾಗಿ ನಿರೂಪಕರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ನಟಿ ನನ್ನ ಹುಡುಗನ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಸದ್ಯ ಪುಷ್ಪಾ ಸಿನಿಮಾ ಬರುತ್ತಿದೆ. ನನ್ನ ರಿಲೇಷನ್‌ ಶಿಪ್ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ನಟಿ ಶ್ರೀಲೀಲಾ, ನಟ ಅಲ್ಲು ಅರ್ಜುನ್ ಸೇರಿದಂತೆ ಫ್ಯಾನ್ಸ್ ಕೇಕೆ ಹಾಕಿ ಚಪ್ಪಾಳೆ ತಟ್ಟಿದ ವಿಡಿಯೋ ವೈರಲ್ ಆಗಿದೆ.

ನಟ ವಿಜಯ್ ದೇವರಕೊಂಡ ಜೊತೆಗೆ ರಿಲೇಷನ್‌ಶಿಪ್, ಮುಂದಿನ ದಿನಗಳಲ್ಲಿ ಮದುವೆ ಆಗುವ ಬಗ್ಗೆ ನಟ ಹೆಸರು ಹೇಳದೆಯೇ ಕೇಳಿದ ಪ್ರಶ್ನೆಗಳಿಗೆ ನಟಿ ಶ್ರೀವಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ. ಮದುವೆ ಆದ ಮೇಲೆ ನೀವು ಗಂಡನ ಮನೆಗೆ ಹೋಗುತ್ತೀರಾ, ಅವರೇ ಮನೆಗೆ ಬರುತ್ತಾರೆ. ಅಥವಾ ಎರಡು ಕಡೆಗೆ ಸ್ವಲ್ಪ ಸ್ವಲ್ಪ ಇರುತ್ತೀರಾ ಎಂದು ನಿರೂಪಕರು ಕೇಳಿದ ಪ್ರಶ್ನೆಗೆ, ರಶ್ಮಿಕಾ ನೀವು ಹೇಳಿದಂತೆಯೇ ಎಂದು ನಗಾಡಿ ಉತ್ತರಿಸಿದ್ದಾರೆ.

ನಟಿ ರಶ್ಮಿಕಾ, ನಟ ವಿಜಯ್ ದೇವರಕೊಂಡು ಗೌಪ್ತವಾಗಿ ಸುತ್ತಾಡುತ್ತಿದ್ದಾರೆ. ಡೇಟಿಂಗ್, ರೆಸ್ಟೋರೆಂಟ್‌ನಲ್ಲಿ ಭೇಟಿ, ಮಾಲ್ಡಿವ್ಸ್ ಟ್ರಿಪ್ ಹೀಗೆ ಎಲ್ಲದರ ಬಗ್ಗೆ ಟಾಕ್ ಹಿಂದಿನಿಂದ ಇತ್ತು. ಆದರೆ ಇಬ್ಬರು ತಾವು ಒಳ್ಳೆಯ ಸ್ನೇಹಿತರ ಎಂದಷ್ಟೇ ಹೇಳುತ್ತಿದ್ದರು.

Actress Rashmika Mandanna Revealed Her Love Relationship on Pushpa 2 Event Video

ವಿಜಯ್, ರಶ್ಮಿಕಾ ಡೇಟಿಂಗ್ ಫೋಟೋ ವೈರಲ್

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ವಿಜಯ್ ದೇವರಕೊಂಡ ನೀವು ಸಿಂಗಲ್ ಎಂದು ಕೇಳಿ ಪ್ರಶ್ನೆಗೆ 'ಇಲ್ಲಾ ನಾನು ಸಿಂಗಲ್ ಅಲ್ಲ. ನನಗೆ 30 ವರ್ಷ ದಾಟಿದೆ, ಇನ್ನೂ ನಾನು ಸಿಂಗಲ್ ಆಗಿರಲು ಹೇಗೆ ಸಾಧ್ಯ'' ಎನ್ನುವ ಮೂಲಕ ತಾವು ರಿಲೇಷನ್‌ಶಿಪ್‌ನಲ್ಲಿರುವುದಾಗಿ ತಿಳಿಸಿದ್ದರು. ಅದರ ಬೆನ್ನಲ್ಲೆ, ನೀಲಿ ಬಣ್ಣದ ಉಡುಗೆಯಲ್ಲಿ ನಟಿ ರಶ್ಮಿಕಾ ಹಾಗೂ ನಟ ವಿಜಯ್ ದೇವರಕೊಂಡ ಅವರಿಬ್ಬರು ಹೋಟೆಲ್‌ ನಲ್ಲಿ ಊಟ ಮಾಡುವ, ಡೇಟಿಂಗ್ ಫೊಟೋ ವೈರಲ್ ಆಯಿತು.

ಇದರ ಬೆನ್ನಲ್ಲೆ ನಟಿ ರಶ್ಮಿಕಾ ಸಹ ಬಹಿರಂಗವಾಗಿ ಮಾತನಾಡುವ ಮೂಲಕ ಇಬ್ಬರು ರಿಲೇಷನ್‌ಶಿಪ್‌ನಲ್ಲಿರುವುದು ಖಚಿತವಾಗಿದ್ದು, ಅವರ ಫ್ಯಾನ್ಸ್ ಫೋಟೋ ಶೇರ್ ಮಾಡಿಕೊಂಡು ಖಷಿ ಪಡುತ್ತಿದ್ದಾರೆ.

ಡಿಸೆಂಬರ್ ಬಳಿಕ ಮದುವೆ ಅಪ್ಡೇಟ್ಸ್

ಸದ್ಯ ನಟಿ ರಶ್ಮಿಕಾ ಅವರ ಪುಷ್ಪಾ 2, ಛಾವಾ ಸಿನಿಮಾ ಡಿಸೆಂಬರ್‌ಗೆ ತೆರೆಗೆ ಬರಲು ಸಜ್ಜಾಗಿವೆ. 'ಕುಬೇರ' ಸಿನಿಮಾ ಚಿತ್ರೀಕರಣದ ಹಂತದಲ್ಲಿದ್ದು, ಸಲ್ಮಾನ್ ಜೊತೆಗಿನ ನಟಿ ರಶ್ಮಿಕಾ ಅವರ 'ಸಿಕಂದರ್' ಸಿನಿಮಾ ಈಗಾಗಲೇ ಶೂಟಿಂಗ್ ಆರಂಭಿಸಿದೆ. ಸಾಲು ಸಾಲು ಸಿನಿಮಾಗಳಲ್ಲಿ ಶ್ರೀವಲ್ಲಿ ಬ್ಯೂಸಿ ಇದ್ದಾರೆ. ಡಿಸೆಂಬರ್ ನಲ್ಲಿ ಸಿನಿಮಾ ಬಿಡುಗಡೆ ನಂತರ ಮದುವೆ ಅಪ್ಡೇಟ್ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+