Rashmika Mandanna: ನಟಿ ರಶ್ಮಿಕಾ ಮಂದಣ್ಣ ಮನೆಯಲ್ಲಿ ಸೂತಕದ ಛಾಯೆ

ಬೆಂಗಳೂರು, ಜುಲೈ 18: ನ್ಯಾಷನಲ್‌ ಕ್ರಶ್‌ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ರಶ್ಮಿಕಾ ಮಂದಣ್ಣಗೆ ಆಪ್ತಳಾಗಿದ್ದ, ಕುಟುಂಬಸ್ಥರಲ್ಲಿ ಒಬ್ಬಳಂತಿದ್ದ ಬೋಯ್ ಮ್ಯಾಕ್ಸಿ( ಶ್ವಾನ ) ಸಾವನ್ನಪ್ಪಿದೆ. ಮನೆಯ ಮುದ್ದಿನ ಪೆಟ್‌ಅನ್ನು ಕಳೆದುಕೊಂಡ ರಶ್ಮಿಕಾ ಮಂದಣ್ಣ ಹಾಗೂ ಅವರ ಕುಟುಂಬಸ್ಥರು ಅತೀವ ನೋವಿನಲ್ಲಿದ್ದಾರೆ.

ಮ್ಯಾಕ್ಸಿಯನ್ನು ಕಳೆದುಕೊಂಡ ನೋವನ್ನು ಸ್ವತಃ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಮ್ಯಾಕ್ಸಿ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಭಾವನಾತ್ಮಕ ಬರಹವೊಂದನ್ನು ಶೇರ್‌ ಮಾಡಿರುವ ರಶ್ಮಿಕಾ, ಮೈತುಂಬಾ ಕೂದಲು ತುಂಬಿಕೊಂಡು ನೀನು ತಂದುಕೊಡುವ ಚೆಂಡಿಗಾಗಿ ಕಾಯುತ್ತಿದ್ದ ನಾನು. ಇನ್ನು ನಿನ್ನನ್ನು ಬಿಟ್ಟಿರಬೇಕಾದ ದಿನ ಬಂದಿದೆ. ನೀನು ಯಾವಾಗಲೂ ತಂದು ಕೊಡುತ್ತಿದ್ದ ಚೆಂಡು ನನ್ನೊಂದಿಗೆ ಸದಾ ಇರುತ್ತದೆ ಎಂದು ತಮ್ಮ ದುಃಖವನ್ನು ಹೊರ ಹಾಕಿದ್ದಾರೆ.

Actress Rashmika Mandanna Mourns The Demise Of Her Pet Dog Maxi

ಇನ್ನು ಬೋಯ್ ಮ್ಯಾಕ್ಸಿ ಜೊತೆಗಿನ ಫೋಟೋದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಮ್ಯಾಕ್ಸಿ ನಡುವಿನ ಆತ್ಮೀಯತೆಯನ್ನು ಕಾಣಬಹುದಾಗಿದೆ. ತನ್ನ ಮೈಮೇಲೆ ಮಲಗಿಸಿಕೊಂಡು ಮುದ್ದಿಸುವುದು, ಸ್ನಾನ ಮಾಡಿಸುವುದು, ಆಟವಾಡುವುದು ಹೀಗೆ ಇಬ್ಬರ ನಡುವೆ ಅತಿಯಾದ ಆತ್ಮೀಯತೆ ಇದ್ದು, ಇದೀಗ ಮಾಕ್ಸಿಯನ್ನು ಕಳೆದುಕೊಂಡ ನಟಿ ರಶ್ಮಿಕಾ ಮಂದಣ್ಣ ನೋವಿನಲ್ಲಿದ್ದಾರೆ.

ಇನ್ನು ಇತ್ತೀಚೆಗೆ ರಾಷ್ಟ್ರೀಯ ಸಾಕು ಪ್ರಾಣಿಗಳ ದಿನದಂದು ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ತಮ್ಮ ಮನೆಯಲ್ಲಿರುವ ಎಲ್ಲಾ ನಾಯಿ, ಬೆಕ್ಕುಗಳೊಂದಿಗೆ ಆತ್ಮೀಕವಾಗಿರುವ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮಗಿರುವ ಪ್ರಾಣಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರಾಣಿ ಪ್ರಿಯೆ ಆಗಿರುವ ರಶ್ಮಿಕಾ ಮಂದಣ್ಣ ಆಗಾಗ ತಮ್ಮ ಮುದ್ದಿನ ಪೆಟ್‌ಗಳ ಜೊತೆ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+