Rashmika Mandanna: ವಿದೇಶಿ ಕಂಪನಿ 'ನಥಿಂಗ್' ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿ ರಶ್ಮಿಕಾ
ಬೆಂಗಳೂರು, ಜುಲೈ 04: ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಜೀವನ ಆರಂಭಿಸಿ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯೂಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರ 'ಪುಷ್ಪಾ-2' ಸಿನಿಮಾ ಸಾಕ್ಷಷ್ಟು ಕ್ರೇಜ್ ಸೃಷ್ಟಿಸಿದೆ. ಅವರು ಏನೇ ಮಾಡಿದರೂ ಸುದ್ದಿಯಾಗುತ್ತಾರೆ. ಇದೀಗ ವಿದೇಶಿ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಲಂಡನ್ ಮೂಲದ ತಂತ್ರಜ್ಞಾನ ಕಂಪನಿ 'ನಥಿಂಗ್'ನ ಉಪ-ಬ್ರಾಂಡ್ CMF ಉತ್ಪನ್ನಗಳಗಳಿಗೆ ರಾಯಭಾರಿ ಆಗಿದ್ದಾರೆ. ಭಾರತೀಯ ಜನಪ್ರಿಯ ಮತ್ತು ಪ್ಯಾನ್ ಇಂಡಿಯಾ ನಟಿ ಜೊತೆಗೆ ಸಿಎಂಎಫ್ ಪಾಲುದಾರಿಕೆ ಘೋಷಿಸಿದೆ.

ನಟಿ ರಶ್ಮಿಕಾ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗುತ್ತಿದ್ದ ಉತ್ಪನ್ನಗಳ ಪ್ರಸಾರದಲ್ಲಿ ಬ್ಯೂಸಿ ಆಗಲಿದ್ದಾರೆ. ಡಿಜಿಟಲ್, ಪ್ರಿಂಟ್ ಮತ್ತು TVC ಪ್ರಚಾರಗಳಲ್ಲಿ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲಿದ್ದಾರೆ. ಸಿಎಂಎಫ್ ಉತ್ಪನ್ನಗಳ ನವೀನ ವಿನ್ಯಾಸ, ವಿಶೇಷಗಳನ್ನು ಸಾರವನ್ನು ಪ್ರತಿನಿಧಿಸುತ್ತಾರೆ.
ನಥಿಂಗ್ ಸ್ಮಾರ್ಟ್‌ಫೋನ್ ಹಿಡಿದು ರಶ್ಮಿಕಾ ಪೋಸ್
ರಶ್ಮಿಕಾ ಬ್ರ್ಯಾಂಡ್ ಅಂಬಾಸಿಡರ್ ಆಗುತ್ತಿದ್ದಂತೆ, ನಥೀಂಗ್ ಅವರ ಸ್ಮಾರ್ಟ್‌ಫೋನ್ ಹಿಡಿದು ವಿಶಿಷ್ಟ ಬಗೆಯ ಡ್ರೆಸ್‌ನಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಅವರ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಅವರನ್ನು CMF ಕುಟುಂಬಕ್ಕೆ ಸ್ವಾಗತಿಸುತ್ತಿರುವುದು ಸಂತೋಷದ ಸಂಗತಿ ಎಂದು 'ನಥಿಂಗ್' ಇಂಡಿಯಾ ಕಂಪನಿ ಅಧ್ಯಕ್ಷ ವಿಶಾಲ್ ಭೋಲಾ ಹೇಳಿದರು. ನಥಿಂಗ್ ಕಂಪನಿಯ ಉಪ ಬ್ರ್ಯಾಂಡ್ ಸಿಎಂಎಎಫ್ ಗ್ರಾಹರಕ ದೈನಂದಿನ ಅನುಭವವನ್ನು ಸುಂದರಗೊಳಿಸುವ ಕ್ರಿಯಾತ್ಮಕ, ಅತ್ಯಾಕರ್ಷಕ ವಿನ್ಯಾಸದ ಸಾಧನಗಳನ್ನು ಉತ್ಪಾದಿಸುತ್ತದೆ.

ನಥಿಂಗ್ ಅವರು ತಂತ್ರಜ್ಞಾನವು ಕೇವಲ ನವೀನ ಮಾದರಿಯದ್ದು ಮಾತ್ರವಾಗಿರದೇ ಸಂತೋಷ ಮತ್ತು ಸ್ವಯಂ ಅಭಿವ್ಯಕ್ತಿಯ ಮೂಲವಾಗಿರರಲಿದೆ. ಈ ಬಗ್ಗೆ ಕಂಪನಿಗೆ ಹೆಚ್ಚಿನ ವಿಶ್ವಾಸವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಶ್ಮಿಕಾ ಬಗ್ಗೆ ಕಂಪನಿ ಶ್ಲಾಘನೆ
ರಶ್ಮಿಕಾ ಮಂದಣ್ಣ ಅವರು ಸಮರ್ಪಣಾ ಭಾವ, ಕ್ರಿಯಾಶೀಲತೆ, ವ್ಯಕ್ತಿತ್ವ, ಆಕರ್ಷಕ್ ನಗು ಇವೆಲ್ಲವು ನಥಿಂಗ್ ಕಂಪನಿಯ CMF ಉತ್ಪನ್ನಗಳ ರಾಯಭಾರಿಯಾಗಲು ಸೂಕ್ತ ಎನಿಸಿವೆ. ಹೀಗಾಗಿ ಅವರನ್ನು ನಮ್ಮ ಕಂಪನಿಯ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದೇವೆ. ಜೊತೆಗೆ ನಮ್ಮ ಬ್ರ್ಯಾಂಡ್ ಉತ್ಪನ್ನಗಳನ್ನು ಪ್ರತಿನಿಧಿಸಲು ರಶ್ಮಿಕಾ ಅವರೇ ಸೂಕ್ತ ಎಂಬುದೇ ಕಂಪನಿಯ ಅಭಿಪ್ರಾಯವಾಗಿದೆ ಎಂದರು.
ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು?
ಇನ್ನೂ ನಥಿಂಗ್ ಜೊತೆಗಿನ ಈ ಪಾಲುದಾರಿಕೆ ಬಗ್ಗೆ ಮಾತನಾಡಿರುವ ನಟಿ ರಶ್ಮಿಕಾ ಮಂದಣ್ಣ ಅವರು, CMF ಉತ್ಪನ್ನಗಳ ರಾಯಭಾರಿ ಆಗಿರುವುದು ನನಗೆ ಹೆಚ್ಚು ಖುಷಿ ನೀಡಿದೆ. ಇದು ನವೀನ ತಂತ್ರಜ್ಞಾನ ಸಂಸ್ಕೃತಿಯ ನಿಜವಾಗಿಯೂ ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.
CMF ಉತ್ಪನ್ನಗಳು ಆಕರ್ಷಕ ಬಣ್ಣ, ಅನನ್ಯ ವಿನ್ಯಾಸ ಹೊಂದಿವೆ. ಗ್ರಾಹಕರನ್ನು ತನ್ನ ಸೆಳೆಯುವ ಸಾಮರ್ಥ್ಯ ಹೊಂದಿದೆ. ಸಿಎಂಎಫ್ ಇದೊಂದು ಅಸಾಧಾರಣ ಉತ್ಪನ್ನವಾಗಿದೆ ಎಂಬುದು ನನ್ನ ಭಾವನೆ. ಈ ಸ್ಮಾರ್ಟ್‌ಫೋನ್ ಬಳಕೆಯು ಸಾರ್ವಜನಿಕರಿಗೆ ಇಷ್ಟವಾಗುವಂತಿದೆ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರಶ್ಮಿಕಾ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದ್ದರಲ್ಲಿ ವಿಷಯವೇನಿದೆ? ಎಂದು ಕೆಲವರು ಪ್ರಶ್ನಿಸಬಹುದು. ಕಾರ್ಲ್ ಪಿ ಕೇವಲ ರಶ್ಮಿಕಾ ಮಂದಣ್ಣ ಅವರನ್ನು ಜಾಹೀರಾತಿನಲ್ಲಿ ಬಳಸಿಕೊಂಡಿಲ್ಲ. ಕಾರ್ಲ್ ಪಿ ತನ್ನ CMF ಬ್ರ್ಯಾಂಡ್‌ನ ಹೊಸ ರಾಯಭಾರಿಯಾಗಿ ರಶ್ಮಿಕಾ ಮಂದಣ್ಣ ಅವರನ್ನು ಪರಿಚಯಿಸಿದೆ ಎಂದು ಕಂಪನಿ ತಿಳಿಸಿದೆ.
ಸದ್ಯ ನಟಿ ರಶ್ಮಿಕಾ ಹಿಂದಿಯ 'ಸಿಕಂದರ್' ಸಿನಿಮಾ ಮತ್ತು 'ಕುಬೇರ', 'ದಿ ಗರ್ಲಲ್ ಫ್ರೆಂಡ್' ಸೇರಿದಂತೆ ಹಲವು ಸಿನಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನೂ ಹೆಸರಿಡ ಸಿನಿಮಾಗಳಿಗೆ ಅವರು ಆಯ್ಕೆ ಆಗಿದ್ದಾರೆ. ಈ ಮಧ್ಯೆ ಅವರ ನಟನೆಯ 'ಪುಷ್ಪ-2' ಆಗಸ್ಟ್ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಗೆ ಡಿಸೆಂಬರ್ ನಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾದಲ್ಲಿ ಮಾತ್ರವಲ್ಲದೇ ನಟಿ ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಬ್ಯೂಸಿಯಾಗಿರುತ್ತಾರೆ. ನಿತ್ಯ ವರ್ಕೌಟ್, ಹೊಸ ಹೊಸ ಫೋಟೋಗಳುನ್ನು ಹಂಚಿಕೊಳ್ಳುತ್ತಾರೆ. ಲಕ್ಷಾಂತರ ಲೈಕ್ಸ್, ಸಾವಿರಾರು ಕಾಮೆಂಟ್ಸ್‌ಗಳು ಬರುತ್ತಿವೆ. ಅದೇ ರೀತಿ ನಂಥಿಂಗ್ ಕಂಪನಿಯ ಉತ್ಪನ್ನದ ಮಾಹಿತಿ ನೀಡಿದ ವಿಡಿಯೋ ಸಹ ಶೇರ್ ಮಾಡಿಕೊಂಡಿದ್ದಾರೆ.












Click it and Unblock the Notifications