Rashmika Mandanna Dating: ರಶ್ಮಿಕಾ, ವಿಜಯ್ ದೇವಕೊಂಡ ಡೇಟಿಂಗ್ ಬೆಂಕಿಗೆ ತುಪ್ಪ ಸುರಿದ ಫೋಟೋ! ಮದ್ವೆ ಯಾವಾಗ?

Actress Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವಕೊಂಡ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತಿದೆ ಎಂದರೆ ಸಾಕು ಅಭಿಮಾನಿಗಳು ಹಬ್ಬವೇ ಸರಿ. ಈ ಜೋಡಿ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿ ಗುಡ್ ಪೇರ್ ಎನ್ನಿಸಿಕೊಂಡಿದೆ. ಇವರಿಬ್ಬರ ಮಧ್ಯ ಲವ್, ಡೇಟಿಂಗ್ ನಡೆಯುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಹೀಗಿರುವ ಇಬ್ಬರು ಜೊತೆಗೆ ಇರುವ ಹೊಸ ಫೋಟೋವೊಂದು ವೈರಲ್ ಆಗಿದೆ.

ಹೌದು, ಟಾಲಿವುಡ್‌ನಲ್ಲಿ ಸ್ಟಾರ್ ಜೋಡಿಗಳು ಎನ್ನಿಸಿಕೊಂಡಿರುವ ನಟಿ ರಶ್ಮಿಕಾ ಹಾಗೂ ವಿಜಯ್ ದೇವಕೊಂಡ ಒಂದೇ ಸ್ಥಳದಲ್ಲಿರುವ, ವಿಜಯ್ ಮನೆಯಲ್ಲಿ ನಟಿ ರಶ್ಮಿಕಾ ಇರುವ ಸಾಕಷ್ಟು ಫೋಟೋಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಲೇ ಇದ್ದಾರೆ. ಇದೀಗ ಏರ್‌ಪೋರ್ಟ್‌ನಲ್ಲಿ ನಟಿ ರಶ್ಮಿಕಾ ಹಾಗೂ ವಿಜಯ್ ದೇವಕೊಂಡ ಜೊತೆಗೆ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫ್ಯಾನ್ಸ್ ಆಫ್‌ಲೈನ್ ಕೆಮಿಸ್ಟ್ರಿ ಸೂಪರ್ ಎಂದು ಹೇಳುತ್ತಿದ್ದಾರೆ.

Actress Rashmika Mandanna and Vijay Devarakonda Spotted in Same Place Photo Viral

ಫೋಟೋದಲ್ಲಿ ಏನಿದೆ?

ತಾವಿಬ್ಬರು ಉತ್ತಮ ಸ್ನೇಹಿತರು ಎನ್ನುವ, ನಟ ಮತ್ತು ನಟಿ ತಮ್ಮ ಸಂಬಂಧದ ಕುರಿತು, ಡೇಟಿಂಗ್, ಪ್ರೀತಿ ಕುರಿತು ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ಹೀಗಾಗಿ ಇವರ ಸುತ್ತ ವದಂತಿಗಳು ಹಬ್ಬುತ್ತಲೇ ಇವೆ. ಇದೀಗ ಏರ್‌ಪೊರ್ಟ್ ಒಂದರಲ್ಲಿ 'ಕಿಂಗ್‌ಡಮ್' ಹಿರೋ ನಟ ವಿಜಯ್ ಬೋರ್ಡಿಂಗ್‌ಗಾಗಿ ನಿಂತಿದ್ದಾರೆ. ಅವರ ಹಿಂದೆಯೇ ನಟಿ ರಶ್ಮಿಕಾ ಮಂದಣ್ಣ ಮೊಬೈಲ್ ಫೋನ್‌ನಲ್ಲಿ ಮಗ್ನರಾಗಿರುವುದು ಕಾಣಿಸುತ್ತದೆ. ಇಬ್ಬರು ಸಹ ಮುಖಗವಸು ಹಾಕಿಕೊಂಡಿದ್ದನ್ನು ಫೋಟೋದಲ್ಲಿ ಕಾಣಬಹುದು.

ರಶ್ಮಿಕಾ-ವಿಜಯ್ ಮದುವೆ ಯಾವಾಗ?

ಇತ್ತೀಚೆಗೆ ವಿದೇಶದಲ್ಲಿ ನಟಿ ರಶ್ಮಿಕಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆಗಲೂ ಅವರು ಹಂಚಿಕೊಂಡ ಬೀಚ್ ಫೋಟೋಗಳಲ್ಲಿ ಕಾಣುವ ಸ್ಥಳ ಹಾಗೂ ವಿಜಯ್ ಹಂಚಿಕೊಂಡಿದ್ದ ಫೋಟೋದಲ್ಲಿ ಬೀಚ್ ಸ್ಥಳ ಒಂದೇಯಾಗಿತ್ತು. ಈ ಬಗ್ಗೆ ಅಭಿಮಾನಿಗಳು ಮಾತನಾಡಿಕೊಂಡಿದ್ದರು. ನಟಿ ರಶ್ಮಿಕಾ ಅವರು ವಿಜಯ್ ಮೆನೆಯಲ್ಲಿ ಹಬ್ಬಗಳನ್ನು ಆಚರಿಸಿದ್ದ ಸುದ್ದಿ ವೈರಲ್ ಆಗಿತ್ತು. ಇದೀಗ ಇಬ್ಬರು ಏರ್‌ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಮದುವೆ ಯಾವಾಗ? ಎಂದು ಪ್ರಶ್ನಿಸಿದ್ದಾರೆ. ಇವರಿಬ್ಬರು ಡೇಟಿಂಗ್ ಬಗ್ಗೆ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಾಗಿದೆ. ಯಾವಾಗ ಅಧಿಕೃತ ಮಾಹಿತಿ ಹೊರ ಬಿಳುತ್ತೋ ಎಂದು ಕಾಯುತ್ತಿದ್ದಾರೆ. ಈ ಜೋಡಿಯ ಮೇಲೆ ಫ್ಯಾನ್ಸ್ ಕಣ್ಣಿಟ್ಟಿದ್ದಾರೆ.

ಈ ಜೋಡಿ ಒಟ್ಟಿಗೆ ಆಗಾಗ ವಿದೇಶಿ ಪ್ರಯಾಣ ಮಾಡುತ್ತಾರೆ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಭೇಟಿ ಮಾಡುತ್ತಾರೆ ಎಂದು ಫ್ಯಾನ್ಸ್ ಫೋಟೋ ಹಂಚಿಕೊಳ್ಳುತ್ತಿದ್ದರು. ಇದೀಗ ಒಟ್ಟಿಗೆ ಏರ್‌ಪೋರ್ಟ್‌ನಲ್ಲಿ ಬೋರ್ಡಿಂಗ್‌ಗಾಗಿ ಸರತಿ ಸಾಲಿನಲ್ಲಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೊಸ ಸಿನಿಮಾಗಳಲ್ಲಿ ರಶ್ಮಿಕಾ ಬ್ಯೂಸಿ

ವಿಜಯ್ ದೇವಕೊಂಡ ನಟನೆಯ 'ಕಿಂಗ್‌ಡಮ್' ಸಿನಿಮಾ ಇದೇ ಮೇ 30ರಂದು ಬಿಡುಗಡೆ ಆಗುತ್ತಿದೆ. ಇದರಲ್ಲಿ ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ಅವರು ನಟಿಸಿದ್ದಾರೆ. ಇತ್ತ ಪುಷ್ಪ, ಛಾವಾ, ಸಿಕಂದರ್ ಸಿನಿಮಾಗಳ ಹಿಟ್ ಬೆನ್ನಲ್ಲೆ, ನಟಿ ರಶ್ಮಿಕಾ ಅವರು, ಆಯುಷ್ಮಾನ್ ಖುರಾನಾ ಜೊತೆ ತಮ್ಮ ಮುಂಬರುವ ಚಿತ್ರ 'ಥಾಮಾ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ತಮಿಳಿನ ಧನುಷ್ ಜೊತೆಗೆ 'ಕುಬೇರ' ಸಿನಿಮಾದಲ್ಲಿ ರಶ್ಮಿಕಾ ಬಣ್ಣ ಹಚ್ಚಿಸಿದ್ದಾರೆ. ಅದು ತೆರೆಗೆ ಬರಲು ಸಿದ್ಧವಾಗಿದೆ.

ರಶ್ಮಿಕಾ ಜೊತೆ ಸಿನಿಮಾ ಮಾಡಬೇಕು: ವಿಜಯ್

ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಸರಣಿ ಸಿನಿಮಾಗಳಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಮಿಂಚಿಸಿರುವ ನಟಿ ರಶ್ಮಿಕಾ 'ಪುಷ್ಪ-3'ನಲ್ಲಿ ಕಮಾಲ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ನಟ ವಿಜಯ್ ದೇವಕೊಂಡ ಅವರು ತಾವು ನಟಿ ರಶ್ಮಿಕಾ ಜೊತೆಗೆ ನಟಿಸುವ ಬಯಕೆ ಹೊರ ಹಾಕಿದ್ದಾರೆ. ನಟಿಯ ಡೆಡಿಕೇಷನ್, ಶ್ರಮ, ಕಾಳಜಿ ಹಾಗೂ ಸೌಂದರ್ಯವನ್ನು ಹೊಗಳಿದ್ದರು. ಅನೇಕ ಸಂದರ್ಶನಗಳಲ್ಲಿ ರಶ್ಮಿಕಾ ಸಹ ವಿಜಯ್ ತನ್ನ ನೆಚ್ಚಿನ ಸ್ನೇಹಿತ ಎಂದು ಹೇಳಿಕೊಂಡಿದ್ದಾರೆ. ಇವರಿಬ್ಬರು ಮದುವೆ ಆಗಲಿದ್ದಾರೆ ಎಂಬ ವದಂತಿಗಳು ಆಗಾಗ್ಗೆ ಹರಡುತ್ತಲೇ ಇವೆ. ಅಧಿಕೃತ ಮಾಹಿತಿಗೆ ಫ್ಯಾನ್ಸ್ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+