Ramya: 'ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳಲು ತುಂಬಾ ಕಷ್ಟ': ಹಿಂದಿನ ಕಹಿ ನೆನಪುಗಳನ್ನ ಬಿಚ್ಚಿಟ್ಟ ರಮ್ಯಾ

ಸ್ಯಾಂಡಲ್ವುಡ್ ಸ್ಟಾರ್ ನಟಿ ರಮ್ಯಾ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆರಂಭದಲ್ಲಿ ಇಂಡಸ್ಟ್ರಿಗೆ ಬಂದ ದಿನಗಳಲ್ಲಿ ಎದುರಿಸಿರುವ ಕಷ್ಟಗಳ ಬಗ್ಗೆ ನಟಿ ಮೋಹಕ ತಾರೆ ರಮ್ಯಾ ಮತ್ತು ಐಶ್ವರ್ಯ ಡಿಕೆಶಿ 'ಬೆಂಚ್ ಚರ್ಚೆ'ಯಲ್ಲಿ ಮಹಿಳೆಯರು ವೃತ್ತಿ ಬದುಕಿನಲ್ಲಿ ಎದುರಿಸುವ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ರಮ್ಯಾ ಅವರು ಲೇಡಿ ಸೂಪರ್ ಸ್ಟಾರ್ ಆಗಲು ಏನೆಲ್ಲಾ ಕಷ್ಟಪಟ್ಟರು ಎಂಬುದನ್ನು ಹಂಚಿಕೊಂಡಿದ್ದಾರೆ. ಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಇತ್ತೀಚಿಗೆ ಎಲ್ಲೋ ಬೆಂಚ್ ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಬೆಂಚ್ ಚರ್ಚೆ ಕಾರ್ಯಕ್ರಮದಲ್ಲಿ ವೃತ್ತಿ ಬದುಕಿನಲ್ಲಿ ಮಹಿಳೆಯರು ಎದುರಿಸುವ ಚಾಲೆಂಜ್‌ಗಳ ಬಗ್ಗೆ ಚರ್ಚಿಸಿದರು. ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳುವುದು ಎಷ್ಟು ಕಷ್ಟ, ಲೇಡಿ ಸೂಪರ್ ಸ್ಟಾರ್ ಆಗಿರಲು ರಮ್ಯಾ ಏನೆಲ್ಲಾ ಮಾಡಿದರು ಅಂತ ಹಂಚಿಕೊಂಡಿದ್ದಾರೆ. ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳಲು ತುಂಬಾ ಕಷ್ಟ ಇದೆ ಆದರೆ ನಿಮಗೆ ಅದು ಕಾಣಿಸದೇ ಇರಬಹುದು. ಕೆಲವೊಂದು ಘಟನೆಗಳು ಕೂಡ ಗೊತ್ತಿರುತ್ತದೆ ಎಂದು ನಟಿ ರಮ್ಯಾ ಅವರು ಹೇಳಿದ್ದಾರೆ.

Actress Ramya talks about the hardships she faced in the film industry

ಜೀವನ ಎಂಬ ಜರ್ನಿ ಅಷ್ಟು ಸುಲಭವಾಗಿ ಇರಲಿಲ್ಲ. ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳಲು ತುಂಬಾ ಕಷ್ಟ ಇದೆ. ಮಹಿಳೆಯರಾಗಿ ನಮ್ಮ ಭವಿಷ್ಯಕ್ಕೆ ಸಾಕಷ್ಟು ತ್ಯಾಗಗಳನ್ನು ಮಾಡಬೇಕು. ನನ್ನ ಮೊದಲ ಸಿನಿಮಾದಲ್ಲಿ ನನಗೆ ಸ್ಕ್ರಿಪ್ಟ್‌ ಇರಲಿಲ್ಲಅದಕ್ಕೆ ಅವಾರ್ಡ್ ಕೊಡಬೇಕು. ಸೆಟ್‌ಗೆ ಹೋದಾಗ ನಿರ್ದೇಶಕರು ಇಲ್ಲಿಂದ ಅಲ್ಲಿಗೆ ಓಡಬೇಕು ಅಂತ ಹೇಳಿದಾಗ ಯಾವ ಮೂಡ್‌ನಲ್ಲಿ ಓಡಬೇಕು ಏನ್ ಮಾಡ್ತಿದ್ದೀನಿ ಅಂತಾನೇ ಗೊತ್ತಿರಲಿಲ್ಲ.ಹೀರೋಗೆ ಕಥೆ ಹೇಳಿದ ಮೇಲೆ ಹೀಯೋಯಿನ್‌ಗೆ ಯಾಕೆ ಕಥೆ ಹೇಳಬೇಕು ಅಂತ ಮಾತುಗಳು ಕೇಳಿ ಬರುತ್ತಿತ್ತು.

ಇನ್ನೂ ನನಗೆ ಕ್ಯಾರವಾನ್ ಕೊಡುತ್ತಿರಲಿಲ್ಲ ಆದರೆ ಅಪ್ಪು (ಪುನೀತ್‌ ರಾಜ್‌ಕುಮಾರ್‌) ಅವರು ತುಂಬಾ ಒಳ್ಳೆಯವರು, ಅವರ ವ್ಯಾನ್‌ನ ನನಗೆ ಬಳಸಿಕೊಳ್ಳಲು ಕೊಡುತ್ತಿದ್ದರು. ನನ್ನ ಮೊದಲ ಸಿನಿಮಾದಿಂದ ತುಂಬಾ ಕಲಿತಿದ್ದೀನಿ ಅದಕ್ಕೆ ಕಾರಣ ಅಪ್ಪು ನನ್ನ ಕೋ-ಸ್ಟಾರ್ ಹಾಗೂ ಅದು ಡಾ.ರಾಜ್‌ಕುಮಾರ್ ನಿರ್ಮಾಣ ಸಂಸ್ಥೆ ಆಗಿತ್ತು ಎಂದು ಸ್ಯಾಂಡಲ್ವುಡ್ ಸ್ಟಾರ್ ನಟಿ ರಮ್ಯಾ ಹಿಂದಿನ ಕಷ್ಟದ ದಿನಗಳನ್ನ ಬಿಚ್ಚಿಟ್ಟಿದ್ದಾರೆ.

ನನಗೆ ಸರಿಯಾಗಿ ಕ್ಯಾರವಾನ್ ಕೊಡುತ್ತಿರಲಿಲ್ಲ, ಒಪ್ಪಿಕೊಂಡ ಪೇಮೆಂಟ್‌ನ ಕೊನೆಯಲ್ಲಿ ಕೊಡುತ್ತಲೇ ಇರಲಿಲ್ಲ. ತುಂಬಾ ಬುದ್ಧಿವಂತಿಕೆಯಿಂದ ನಾನು ಹಣ ತೆಗೆದುಕೊಳ್ಳುವುದಿಲ್ಲ ಬರೀ ಚೆಕ್ ಅಂತ ಹೇಳಿದೆ. ಆದರೆ, ಕೊನೆಯಲ್ಲಿ ಚೆಕ್‌ ಬೌನ್ಸ್ ಆಗುತ್ತಿತ್ತು. ಅದಾದ ಮೇಲೆ ಬರೀ ಆರ್‌ಟಿಜಿಎಸ್‌ ಮಾಡಿ ಎಂದು ಹೇಳಲು ಶುರು ಮಾಡಿದೆ ಎಂದು ನಟಿ ರಮ್ಯಾ ಅವರು ಹೇಳಿದರು.

ಇನ್ನೂ ಪ್ರತಿ ಹಂತದಲ್ಲೂ ನನ್ನನ್ನು ಕಾಪಾಡಿಕೊಳ್ಳಲು ದಾರಿ ಹುಡುಕುತ್ತಿದ್ದೆ, ನಾನು ಇಂಡಸ್ಟ್ರಿಯಲ್ಲಿ ಸಕ್ಸಸ್‌ಫುಲ್ ಆಗಿದ್ದ ಕಾರಣ ಅವರಿಗೆ ಆಯ್ಕೆನೇ ಇರಲಿಲ್ಲ ನನ್ನನ್ನು ಸಿನಿಮಾದಲ್ಲಿ ಹಾಕೊಂಡು ಮಾಡಬೇಕಿತ್ತು ಎಂದು ಮೋಹಕತಾರೆ ನಟಿ ರಮ್ಯಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+