Pooja Hegde: ಕರಾವಳಿ ಬೆಡಗಿ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದಿಂದ ಬ್ಯಾನ್‌?

ನಟಿ ಪೂಜಾ ಹೆಗ್ಡೆ ಅವರ ಮೂಲ ಕರ್ನಾಟಕವೇ ಆದರೂ ಮಿಂಚಿದ್ದು ಟಾಲಿವುಡ್‌ನಲ್ಲಿ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಕರಾವಳಿ ಬೆಡಗಿ ತೆಲುಗು ಚಿತ್ರರಂಗದ ಟಾಪ್‌ ನಟಿಯರ ಸಾಲಿಗೆ ಸೇರಿಕೊಂಡರು. ಬಳಿಕ ತಮಿಳು ಹಾಗೂ ಬಾಲಿವುಡ್‌ನಲ್ಲೂ ಪೂಜಾ ಅದೃಷ್ಟಪರೀಕ್ಷೆ ಮಾಡಿದ್ದಾರೆ. ಇತ್ತೀಚೆಗೆ ಅವರ ಸಿನಿಮಾಗಳು ಅಷ್ಟೇನೂ ಸಕ್ಸಸ್‌ ಕಾಣುತ್ತಿಲ್ಲ. ಇದರ ನಡುವೆ ಪೂಜಾ ತಮ್ಮ ಮಾತಿನಿಂದ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇಷ್ಟಕ್ಕೂ ಪೂಜಾ ಭಾಷಾ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಇದೇ ವಿಚಾರವಾಗಿ ಪೂಜಾ ಸಖತ್‌ ಟ್ರೋಲ್‌ ಕೂಡ ಆಗುತ್ತಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಪೂಜಾ ಹೆಗ್ಡೆ ತಾವು ನಟಿಸಿದ್ದ ತೆಲುಗು ಸಿನಿಮಾವನ್ನು ಬಾಯಿತಪ್ಪಿ ತಮಿಳು ಸಿನಿಮಾ ಎಂದಿದ್ದಾರೆ. ಈ ವಿಡಿಯೋ ವೈರಲ್‌ ಆಗಿ ತೆಲುಗು, ತಮಿಳು ಭಾಷೆಗೂ ವ್ಯತ್ಯಾಸ ತಿಳಿಯದಷ್ಟು ಮುಗ್ಧರೇ ಪೂಜಾ ಎಂದು ಎಲ್ಲರೂ ಟ್ರೋಲ್‌ ಮಾಡುತ್ತಿದ್ದಾರೆ.

Actress Pooja Hegde Trolled For Calling Her Telugu Movie A Tamil Film

ಪೂಜಾ ಹೆಗ್ಡೆ ಅವರು ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಅವರೊಂದಿಗೆ ನಟಿಸಿದ್ದ "ಅಲಾ ವೈಕುಂಟಪುರಂಲೋ" ಸಿನಿಮಾ ಬಗ್ಗೆ ಮಾತನಾಡಿದ್ದಾರೆ. "ಅಲಾ ವೈಕುಂಠಪುರಮುಲೋ" ವಾಸ್ತವವಾಗಿ ತಮಿಳು ಚಿತ್ರ, ಇದು ಪ್ಯಾನ್-ಇಂಡಿಯಾ ಚಿತ್ರವಾಗಿರಲಿಲ್ಲ. ಆದರೆ, ಜನರು ಅದನ್ನು ಹಿಂದಿಯಲ್ಲಿ ವೀಕ್ಷಿಸಿ ಮೆಚ್ಚಿಕೊಂಡರು. ಹಾಗಾಗಿ ಕೆಲಸ ಚೆನ್ನಾಗಿದ್ದರೆ ಜನರಿಗೆ ಯಾವ ಸಿನಿಮಾ ಕೂಡ ತಲುಪುತ್ತದೆ" ಎಂದು ಹೇಳಿದ್ದರು.

ಅಸಲಿಗೆ ಅಲಾ ವೈಕುಂಠಪುರಮುಲೋ ತೆಲುಗು ಭಾಷೆಯಲ್ಲಿ ತೆರೆಕಂಡಿದ್ದ ಸಿನಿಮಾ. ಪೂಜಾ ಅವರು ತಮಿಳು ಹಾಗೂ ತೆಲುಗು ಭಾಷೆಯ ವ್ಯತ್ಯಾಸವೇ ಗೊತ್ತಿಲ್ಲದೆ ಈ ಸಿನಿಮಾದಲ್ಲಿ ನಟಿಸಿದ್ದಾರಾ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಲಾ ವೈಕುಂಟಪುರಂಲೋ ಪೂಜಾ ಹೆಗ್ಡೆ ಅವರ ಸಿನಿ ಕೆರಿಯರ್‌ಗೆ ಹೊಸ ತಿರುವು ಕೊಟ್ಟ ಸಿನಿಮಾ, ಹೀಗಿರುವಾಗ ಇದೇನಾ ನೀವು ಆ ಸಿನಿಮಾಗೆ ಕೊಡುವ ಗೌರವ? ಎಂದು ತರಾಟೆಗೂ ತೆಗೆದುಕೊಂಡಿದ್ದಾರೆ.

ಪೂಜಾ ಹೆಗ್ಡೆ ಅವರು ಮಾತನಾಡಿರುವ ಈ ವಿಡಿಯೋ ವೈರಲ್‌ ಆಗಿದೆ. ಮತ್ತೊಂದೆಡೆ ಅಲ್ಲು ಅರ್ಜುನ್‌ ಅಭಿಮಾನಿಗಳು ಗರಂ ಆಗಿದ್ದಾರೆ. ಏನ್‌ ಪೂಜಾ ಅವರೇ, ಈ ರೀತಿ ಹೇಳಲು ನಿಮಗೆ ನಾಚಿಕೆ ಆಗೋದಿಲ್ವಾ? ಎಂದು ಬನ್ನಿ ಫ್ಯಾನ್ಸ್‌ ಕೋಪಗೊಂಡಿದ್ದಾರೆ.

Actress Pooja Hegde Trolled For Calling Her Telugu Movie A Tamil Film

ಅಲವೈಕುಂಠಪುರಮುಲೋ ತೆಲುಗು ಚಿತ್ರದಲ್ಲಿ ನೀವು ಪ್ರಮುಖ ನಾಯಕಿಯೂ ಆಗಿದ್ದುಕೊಂಡು ಅದನ್ನು ತಮಿಳು ಚಿತ್ರ ಎಂದು ಹೇಳುತ್ತಿದ್ದೀರಲ್ಲ? ನಿಮ್ಮ ತಲೆಯಲ್ಲಿ ಏನು ತುಂಬಿದೆ? ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇಷ್ಟಕ್ಕೂ ಅಲವೈಕುಂಠಪುರಂಲೋ ತಮಿಳು ಚಿತ್ರ ಯಾವಾಗ ಆಯಿತು? ನಾವಂತೂ ನೋಡಲಿಲ್ಲ. ನೀವು ಕೆಲಸ ಮಾಡಿದ ಸಿನಿಮಾದ ಭಾಷೆ ಯಾವುದೆಂದೇ ನಿಮಗೆ ನೆನಪಿಲ್ಲವೇ? ಎಂದು ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ.

ಪೂಜಾ ಹೆಗ್ಡೆ ನಿಜಕ್ಕೂ ತಮ್ಮ ಮಾತಿನಿಂದ ಹಾರ್ಟ್‌ ಬ್ರೇಕ್‌ ಮಾಡಿದ್ದಾರೆ. ದಕ್ಷಿಣ ಚಿತ್ರರಂಗದ ನಿರ್ಮಾಪಕರು ಹಾಗೂ ನಿರ್ದೇಶಕರು ಈ ರೀತಿ ತಾವೇ ನಟಿಸಿದ ಚಿತ್ರದ ಭಾಷೆಯ ಬಗ್ಗೆ ಗೊತ್ತಿಲ್ಲದ ನಟಿಯರನ್ನು ಏಕೆ ಸಿನಿಮಾಗೆ ಹಾಕಿಕೊಳ್ತಾರೆ? ಇಂತವರಿಗೆ ಕೋಟ್ಯಂತರ ರೂಪಾಯಿ ಹಣ ಏಕೆ ಖರ್ಚು ಮಾಡ್ತಾರೆ? ಇವರನ್ನು ಮೊದಲು ಟಾಲಿವುಡ್‌ನಲ್ಲಿ ಬ್ಯಾನ್‌ ಮಾಡಬೇಕು ಎಂದೂ ಬೇಸರ ಹಂಚಿಕೊಳ್ಳುತ್ತಿದ್ದಾರೆ. ಪೂಜಾರ ಒಂದು ಮಾತಿನಿಂದ ಸದ್ಯ ತೆಲುಗು ಮಂದಿ ಸಿಡಿಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+