ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ನಾನು ಸಲಿಂಗಕಾಮಿ ಎಂದು ಸುಳ್ಳು ಹೇಳಿದ್ದೇಕೆ?
ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿಯೊಬ್ಬರು ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಎಲ್ಲರೂ ತಮ್ಮ ಬಗ್ಗೆ ಕೆಲವು ವಿಚಾರಗಳನ್ನು ಹೇಳಿಕೊಂಡು ಹೆಮ್ಮೆಪಟ್ಟುಕೊಂಡರೆ, ನಟಿ ನೈರಾ ಬ್ಯಾನರ್ಜಿ (Nyra Banerjee) ಅವರು ತಮ್ಮ ಬಗ್ಗೆ ತಾವೇ ಹೇಳಿಕೊಂಡಿರುವ ವಿಚಾರವೊಂದು ಸಂಚಲನ ಸೃಷ್ಟಿಸಿದೆ.
ನೈರಾ ಬ್ಯಾನರ್ಜಿ ಅವರು ತಾವು ಸಲಿಂಗಕಾಮಿ ಎಂದು ಹೇಳಿಕೊಂಡಿದ್ದಾಗಿ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಇವರು ಹಲವರಿಗೆ ನಾನು ಸಲಿಂಗಕಾಮಿ ಎಂದೇ ಹೇಳಿದ್ದರಂತೆ. ಆದರೆ ಇವರು ನಿಜಕ್ಕೂ ಸಲಿಂಗಕಾಮಿ ಆಗಿರಲಿಲ್ಲ ಎಂಬುದನ್ನೂ ಅವರೇ ಸ್ಪಷ್ಟಪಡಿಸಿದ್ದಾರೆ. ಇನ್ನು ತಾನು ಸಲಿಂಗಕಾಮಿ ಎಂದು ಸುಳ್ಳು ಹೇಳಲು ಬಲವಾದ ಕಾರಣವನ್ನೂ ಅವರು ಬಿಚ್ಚಿಟ್ಟಿದ್ದಾರೆ.

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ (casting couch) ಅನಿಷ್ಠದ ಬಗ್ಗೆ ಆಗಾಗ ಆರೋಪಗಳು ಕೇಳಿಬರುತ್ತಲೇ ಇವೆ. ಈ ಮಾರಿ ನಟಿ ನೈರಾ ಬ್ಯಾನರ್ಜಿ ಅವರನ್ನು ಕಾಡಿತ್ತು ಎಂಬ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡುತ್ತಾ ಅವರು ಇದರಿಂದ ತಪ್ಪಿಸಿಕೊಳ್ಳಲು ನಾನು ಲೆಸ್ಬಿಯನ್ (ಸಲಿಂಗಕಾಮಿ) ಎಂದು ಸುಳ್ಳು ಹೇಳಿಕೊಂಡು ಬಚಾವ್ ಆಗಿದ್ದೆ ಎಂದು ಹೇಳಿದ್ದಾರೆ.
ನಾನು ನನ್ನ ವೃತ್ತಿಜೀವನದ ಆರಂಭದಲ್ಲೇ ಲೈಂಗಿಕ ಕಿರುಕುಳವನ್ನು ಎದುರಿಸಿ ಬಂದಿದ್ದೇನೆ. ನಾನು ನನ್ನ ಹುಷಾರಲ್ಲೇ ಇರುತ್ತಿದ್ದೆ. ಹಾಗಾಗಿ ನಾನು ಯಾರನ್ನಾದರೂ ಪರಿಚಯ ಮಾಡಿಕೊಳ್ಳುವಾಗ ಮೊದಲು ನಾನು ವಕೀಲೆ ಎಂದು ಹೇಳಿಕೊಳ್ಳುತ್ತಿದ್ದೆ. ಅದನ್ನೂ ನಂಬದಿದ್ದರೆ ನಾನು ಸಲಿಂಗಕಾಮಿ ಎಂದು ನೇರವಾಗಿ ಸುಳ್ಳು ಕೂಡ ಹೇಳಿದ್ದೆ ಎಂದು ನೈರಾ ಬ್ಯಾನರ್ಜಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಕೆಲವರು ನನ್ನನ್ನು ರಾಜಿ ಮಾಡಿಕೊಳ್ಳಲು ಕೇಳುತ್ತಿದ್ದರು, ನಾನು ಅದಕ್ಕೆ ಒಪ್ಪುತ್ತಿರಲಿಲ್ಲ. ಬಳಿಕ ನಾನು ಮೊದಲೇ ಭೇಟಿಯಾಗುವಾದ ನಾನು ವಕೀಲೆ ಎಂದು ಹೇಳಿಕೊಳ್ಳುತ್ತಿದ್ದೆ. ಆಗ ನಾನು ಕೆಲವರು ನನ್ನೊಂದಿಗೆ ಮಾತನಾಡಲು ಹಿಂದು ಮುಂದು ನೋಡುತ್ತಿದ್ದರು. ಇನ್ನು ಕೆಲವರು ನಾನು ವಕೀಲೆ ಎಂದರೆ ನಂಬುತ್ತಿರಲಿಲ್ಲ. ಆಗ ನಾನು ಧೈರ್ಯವಾಗಿ ಲೆಸ್ಬಿಯನ್ ಎಂದೇ ಹೇಳಿಬಿಡುತ್ತಿದ್ದೆ ಎಂದಿದ್ದಾರೆ.
ನಾನು ಸೌತ್ ಸಿನಿಮಾರಂಗದಲ್ಲಿ ಕೆಲಸ ಮಾಡುವಾಗ ಈ ಕಾಸ್ಟಿಂಗ್ ಕೌಚ್‌ನಿಂದ ತಪ್ಪಿಸಿಕೊಳ್ಳಲು ಸಲಿಂಗಕಾಮಿ ಎನ್ನುವ ಸುಳ್ಳನ್ನು ಎಲ್ಲೆಡೆ ಹಬ್ಬಿಸಿದ್ದೆ. ಇದು ದೊಡ್ಡ ವದಂತಿಯೂ ಆಗಿತ್ತು. ನನ್ನ ಹೇಳಿಕೆ ಎಲ್ಲೆಡೆ ಸದ್ದು ಮಾಡಿದ್ದರಿಂದ ಜನ ಕೂಡ ನನ್ನನ್ನು ಸಲಿಂಗಕಾಮಿ ಎಂದೇ ನಂಬಿಬಿಟ್ಟಿದ್ದರು. ಆದರೆ, ಅದು ಸುಳ್ಳು ಎಂದು ನಟಿ ನೈರಾ ಸ್ಪಷ್ಟವಾಗಿ ಹೇಳಿದ್ದಾರೆ.

ನೈರಾ ಬ್ಯಾನರ್ಜಿ ಅವರು ಮೂಲತಃ ಮುಂಬೈನವರು. ಇವರು ಹಿಂದಿ ಸೀರಿಯಲ್‌ಗಳಲ್ಲಿಯೂ ಮಿಂಚಿದ್ದಾರೆ. ಅಲ್ಲದೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದ ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅಲೌಕಿಕ ನಾಟಕ ಸರಣಿಯ ಪ್ರಮುಖ ಪಾತ್ರಕ್ಕಾಗಿ ನೈರಾ ಫೇಮಸ್ ಆಗಿದ್ದರು. ಹಲವು ರಿಯಾಲಿಟಿ ಶೋಗಳಲ್ಲಿಯೂ ನೈರಾ ಕಾಣಿಸಿಕೊಂಡಿದ್ದರು. ಬಿಗ್ ಬಾಸ್-18ರಲ್ಲಿಯೂ ನೈರಾ ಸ್ಪರ್ಧಿಯಾಗಿದ್ದರು. ಕನ್ನಡದ ಟೈಗರ್, ಸುಪಾರಿ ಸೂರ್ಯ, ಸವಾರಿ-2 ಸಿನಿಮಾಗಳಲ್ಲಿ ನೈರಾ ನಟಿಸಿದ್ದಾರೆ.












Click it and Unblock the Notifications