700 ರೂಪಾಯಿಗೆ ನಟನೆ ಆರಂಭಿಸಿದ್ರಂತೆ ಈ ನಟಿ: ಯಾರು ಗೊತ್ತೇ?

ನಾನು ಶಾಲಾ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ಭಾಗಿಯಾಗುತ್ತಿದೆ. ಆದರೆ ಡಾನ್ಸ್‌ ನನಗೆ ತುಂಬಾ ಇಷ್ಟ ಇತ್ತು. ಯಾವಾಗ ಲಕ್ಷ್ಮಿ ಬಾರಮ್ಮ ಧಾರಾವಾಹಿ ಶುರುವಾಗಿ ಜನ ನನಗೆ ಪ್ರೀತಿ ತೋರಿಸಲು ಶುರು ಮಾಡಿದರೂ ಅವತ್ತಿನಿಂದ ಈ ನಟನೆಯನ್ನುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಅಂತಾ ನಿರ್ಧರಿಸಿದೆ ಎಂದು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಗೊಂಬೆ ಪಾತ್ರಧಾರಿ ನೇಹಾ ಗೌಡ ನಟನೆ ಬಗ್ಗೆ ತಮಗೆ ಆಸಕ್ತಿ ಬಂದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅವರು, ನನ್ನ ಮೊದಲ ಧಾರಾವಾಹಿ ಅನುವಾದ. ಅದು ಒಂದು ವರ್ಷ ಓಡಿತು. ಆ ಒಂದು ವರ್ಷದಲ್ಲಿ ಪ್ರತಿ ಸೋಮವಾರ ಮಂಗಳವಾರ ಶೂಟಿಂಗ್‌ ಇರುತ್ತಿತ್ತು. ತುಂಬಾ ಪ್ಲ್ಯಾನ್‌ ಆಗಿ ಶೂಟಿಂಗ್‌ ಮಾಡಿದರು. ಚೆನ್ನಾಗಿ ನಡೆಯಿತು ಆ ಧಾರಾವಾಹಿ ಎಂದು ಹೇಳಿದರು.

Actress Neha Gowda Talks About Her First Payment In Serial industry

ಇನ್ನು ತಮ್ಮ ಮೊದಲ ಸಂಭಾವನೆ ಬಗ್ಗೆ ಮಾತನಾಡಿದ ನೇಹಾ ಗೌಡ, ನಿಜ ಹೇಳಬೇಕು ಅಂದರೆ ಧಾರಾವಾಹಿಗೆ ಪೇಮೆಂಟ್‌ ಕೊಡುತ್ತಾರೆ ಅಂತಾ ಗೊತ್ತಿರಲಿಲ್ಲ. ನಮ್ಮ ತಂದೆ ಅಷ್ಟು ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದಾರೆ. ಅವರು ನಮಗೆ ಇವತ್ತಿಗೂ ನಾವು ಪೇಮೆಂಟ್‌ ಡಿಮ್ಯಾಂಡ್‌ ಮಾಡಿದರೆ, ಅವರು ಎಷ್ಟು ಕೊಡುತ್ತಾರೆ ಅಷ್ಟಕ್ಕೆ ಹೋಗು ಅಂತಾರೆ. ನಾವೇ ಅವರಿಗೆ ಯಾವ ಕಾಲದಲ್ಲಿ ಇದ್ದೀರಾ ನೀವಿನ್ನೂ ಅಂತಾ ಕೇಳುತ್ತೇವೆ. ಇವತ್ತಿಗೂ ನಮ್ಮಪ್ಪ ಅವರ ಪೇಮೆಂಟ್‌ ಬಗ್ಗೆ ನಮ್ಮ ಜೊತೆ ಹೇಳಲ್ಲ, ಅವರು ಎಷ್ಟು ಕೊಡುತ್ತಾರೋ ಅಷ್ಟು ತಗೋಳ್ತೀನಿ ಅಂತಾರೆ.

ಅವರು ಎಂದೂ ಹಣದ ಹಿಂದೆ ಹೋದವರಲ್ಲ, ನನಗೂ ಹಾಗೇ ಹೇಳಿ ಹೇಳಿ ನನಗೂ ಅದೇ ಮನಸ್ಥಿತಿ ಇತ್ತು. ಅವರೇ ನನ್ನ ಮ್ಯಾನೇಜರ್‌ ಕೂಡ. ನಾನೇ ಎಲ್ಲಾ ನಿರ್ವಹಿಸುತ್ತೇನೆ ಎನ್ನುವ ತನಕ ಅವರೇ ನನಗೆ ಮ್ಯಾನೇಜರ್‌ ಆಗಿದ್ದರು. ಹೀಗಾಗಿ ನನ್ನ ಫಸ್ಟ್‌ ಪೇಮೆಂಟ್‌ 500. ಆದರೆ ಧಾರಾವಾಹಿಯಲ್ಲಿ 700. ಮೊದಲು ಧಾರಾವಾಹಿ ಅವರು ಒಂದು ಸಾವಿರಕ್ಕೆ ಒಪ್ಪಿಕೊಂಡಿದ್ದರು. ಆಮೇಲೆ ನಾನೇ ಪೇಮೆಂಟ್‌ ಬೇಡ ಅಂತಾ ಹೇಳಿದ್ದಕ್ಕೆ ಅವರೇ ಕೊಡ್ತೀವಿ ಅಂತಾ ಸಾವಿರಕ್ಕೆ ಒಪ್ಪಿಕೊಂಡಿದ್ದರು. ಅದೇನಾಯ್ತೋ ಗೊತ್ತಿಲ್ಲ ಕೊನೆಗೆ 700 ಕೊಟ್ಟರು. ಆದರೆ ಡಾನ್ಸ್ ಶೋಗಳಲ್ಲಿ ಮೊದಲು ಮಾಡುತ್ತಿದ್ದೇನೆಲ್ಲಾ ಅದರಲ್ಲಿ ನನಗೆ ಮೊದಲ ಪೇಮೆಂಟ್‌ 500 ಎಂದು ನೇಹಾ ಗೌಡ ತಮ್ಮ ಮೊದಲ ಸಂಪಾದನೆ ಪಡೆದ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+