Meghana Raj: 2ನೇ ಮದುವೆ ವಿಜಯ ರಾಘವೇಂದ್ರ ಜೊತೆ ಆಗಿ ಅನೋ ಕಾಮೆಂಟ್ಸ್ ಗೆ ಮೇಘನಾ ನೇರ ಉತ್ತರ
ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರು ಗರ್ಭಿಣಿಯಿದ್ದಾಗಲೇ ದೈಹಿಕವಾಗಿ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡರು. ಹತ್ತು ವರ್ಷಗಳ ಪ್ರೀತಿಸಿ, ಅದ್ದೂರಿಯಾಗಿ ಮದುವೆಯಾಗಿದ್ದ ಈ ಜೋಡಿ ಖುಷಿಯಿಂದ ಬದುಕುತ್ತಿತ್ತು. ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ ಚಿರಂಜೀವಿ ಸರ್ಜಾ ಅವರು ಎಲ್ಲಾರನ್ನ ಅಗಲಿದರು. ಮೇಘನಾ ರಾಜ್ ಮುದ್ದಾದ ಮಗನಿಗೆ ತಾಯಿ, ತಂದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಗನ ಆರೈಕೆ ಹಾಗೂ ಶೂಟಿಂಗ್ ನಲ್ಲಿ ಮೇಘನಾ ರಾಜ್ ಬ್ಯುಸಿಯಾಗಿದ್ದಾರೆ. ಆದರೆ, ಆಗಾಗ ಅವರಿಗೆ ಎರಡನೇ ಮದುವೆ ಆಗ್ತಿದೆ, ಆ ನಟನ ಜೊತೆ ಮದುವೆ ಆಗುವುದು ಎಂಬ ಮಾತು ಕೇಳಿ ಬರುತ್ತದೆ.
ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರು ಎರಡನೇ ಮದುವೆಯಾಗುತ್ತಾರಾ? ಸದ್ಯ ನಟಿ ಮೇಘನಾ ರಾಜ್ ಅವರ ಎರಡನೇ ಮದುವೆ ಬಗ್ಗೆ ಸಾಕಷ್ಟು ಸುದ್ದಿ ಕೇಳಿ ಬಂದಿದೆ. ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ರಾಯನ್ ಜೊತೆಗೆ ಮೇಘನಾ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ನಟಿ ಮೇಘನಾ ರಾಜ್ ಬಗ್ಗೆ ಒಂದು ಗಾಸಿಪ್ ಬರುತ್ತಲೇ ಇರುತ್ತದೆ. ವಿಜಯ ರಾಘವೇಂದ್ರ ಜೊತೆಗೆ ಮದುವೆ ಎನ್ನುವ ವದಂತಿ ಬರುತ್ತಲೇ ಇರುತ್ತೆದೆ.

ಈ ಹಿಂದೆ ನಟಿ ಮೇಘನಾ ರಾಜ್ ಅವರು ಒಂದು ಸಂದರ್ಶನದಲ್ಲಿ ಮಾತನಾಡಿ, ನನ್ನ ರಾಯನ್‌ಗೆ ಅಪ್ಪ ಇದ್ದಾರೆ, ರಾಯನ್‌ಗೆ ಚಿರಂಜೀವಿ ಸರ್ಜಾನೇ ಅಪ್ಪ. ನನಗೆ ಎರಡನೇ ಮದುವೆ ಬಗ್ಗೆ ಯೋಚನೆ ಬಂದಿಲ್ಲ ಅಂತ ಹೇಳಿದ್ದರೆ ಅದು ಸುಳ್ಳು ಆಗುವುದು. ನನ್ನ ಮಗನನ್ನು ನೋಡಿದಾಗ, ಅವನು ಪ್ರತೀ ದಿನವೂ ಅಪ್ಪನ ಬಗ್ಗೆ ಮಾತನಾಡುತ್ತಾನೆ. ಅಪ್ಪ ಅಂದ್ರೆ ಚಿರು ಅಂತ ಅವನಿಗೆ ಗೊತ್ತಿದೆ. ಚಿರು ಹಾಡುಗಳನ್ನು ನೋಡುತ್ತಾನೆ. ಆದರೆ ಫಿಸಿಕಲ್ ಆಗಿ ಚಿರಂಜೀವಿ ಸರ್ಜಾರನ್ನು, ಮಗ ನೋಡಿಲ್ಲ. ಆದ್ರೆ ಅಪ್ಪ ಎನ್ನೋರು ಇದ್ದಾರೆ ಅನ್ನೋದು ಅವನಿಗೆ ಗೊತ್ತಿದೆ. ಆದರೆ ರಾಯನ್‌ಗೆ ಫಿಸಿಕಲ್ ಆಗಿ ತಂದೆ ಫಿಗರ್ ಇದ್ದರೆ ಚೆನ್ನ ಅಂತ ಕೆಲ ಬಾರಿ ಅನಿಸುತ್ತದೆ ಎಂದು ಮೇಘನಾ ರಾಜ್ ಹೇಳಿದ್ದರು.
ಇದೀಗ ವಿಜಯ ರಾಘವೇಂದ್ರ ಜೊತೆ ಎರಡನೇ ಮದುವೆ ಎನ್ನುವ ಬಗ್ಗೆ ಬರುತ್ತಿರುವ ಕಾಮೆಂಟ್ಸ್ ಗಳ ಬಗ್ಗೆ ಮೇಘನಾ ರಾಜ್ ಮಾತನಾಡಿ, ನಾನು ನನ್ನ ಜೀವನದಲ್ಲಿ ಎರಡನೇ ಮದುವೆ ಆಗುವ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದೆ. ಅದು ಎಲ್ಲರಿಗೂ ಅರ್ಥ ಆಗಿಲ್ಲ. ಹೀಗಿದ್ದರೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಅರ್ಥವಾಗದೆ ಜನರು ಮಾತನಾಡಿದ್ದಾರೆ. ಹೀಗಾಗಿ ಮತ್ತೆ ನಾನು ಈ ಬಗ್ಗೆ ಮಾತಾಡಿ, ಅವರು ಇನ್ನೊಂದಿಷ್ಟು ಮಾತನಾಡೋಕೆ ಆಹಾರ ಕೊಡೋದಿಲ್ಲ. ಬೇರೆ ನಟರ ಜೊತೆ ನನ್ನ ಮದುವೆ ಆಗತ್ತೆ ಎನ್ನೋದು ಕೇಳಿದೆ. ಎಷ್ಟು ಖುಷಿಯಾಗತ್ತೋ ಅಷ್ಟು ಮಾತನಾಡಲಿ ಎಂದು ನೇರವಾಗಿ ಮೇಘನಾ ರಾಜ್ ಉತ್ತರಿಸಿದ್ದಾರೆ.












Click it and Unblock the Notifications